|

ಪ್ರಯಾಗರಾಜ್ (ಉತ್ತರ ಪ್ರದೇಶ) – ಹಿಂದೂ ವಿವಾಹದ ಸಿಂಧುತ್ವಕ್ಕೆ ಧಾರ್ಮಿಕ ವಿಧಿಗಳು ಆಧಾರವೇ ಹೊರತು ವಿವಾಹ ಪ್ರಮಾಣಪತ್ರವಲ್ಲ. ಆದ್ದರಿಂದ, ನೋಂದಣಿ ಪ್ರಮಾಣಪತ್ರವಿಲ್ಲದಿದ್ದರೂ ಹಿಂದೂ ವಿವಾಹವನ್ನು ಕಾನೂನುಬಾಹಿರವೆಂದು ಘೋಷಿಸಲಾಗುವುದಿಲ್ಲ ಎಂದು ಅಲಹಾಬಾದ್ ಉಚ್ಚ ನ್ಯಾಯಾಲಯ ಪ್ರಮುಖ ತೀರ್ಪಿನಲ್ಲಿ ಹೇಳಿದೆ. ಈ ಟಿಪ್ಪಣಿಯೊಂದಿಗೆ, ನ್ಯಾಯಮೂರ್ತಿ ಮನೀಶ್ ಕುಮಾರ ನಿಗಮ ಅವರ ನ್ಯಾಯಾಲಯವು ಅಜಂಗಢದ ಕುಟುಂಬ ನ್ಯಾಯಾಲಯದ ತೀರ್ಪನ್ನು ರದ್ದುಗೊಳಿಸಿತು, ಅಲ್ಲಿ ವಿವಾಹ ಪ್ರಮಾಣಪತ್ರವಿಲ್ಲದ ಕಾರಣ ವಿವಾಹದ ಸಿಂಧುತ್ವವನ್ನು ಒಪ್ಪಿಕೊಳ್ಳಲು ನಿರಾಕರಿಸಲಾಗಿತ್ತು.
⚖️ Allahabad HC ruling:
✅ Validity of a Hindu marriage depends on rituals, not certificate.
📜 Even without registration, a Hindu marriage can’t be termed invalid.HC set aside Family Court’s dismissal of a divorce plea, stressing:
🔹 Rules serve justice, not hurdles— Sanatan Prabhat (@SanatanPrabhat) August 30, 2025
ಅರ್ಜಿಯ ಘಟನಾವಳಿಗಳು ಹೀಗಿವೆ!
೧. ಈ ಪ್ರಕರಣವು ಅಜಂಗಢದ ಕುಟುಂಬ ನ್ಯಾಯಾಲಯಕ್ಕೆ ಸಂಬಂಧಿಸಿದೆ. ಅಲ್ಲಿ ದಂಪತಿಗಳು ಪರಸ್ಪರ ಸಮ್ಮತಿಯ ಮೇರೆಗೆ ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸಿದ್ದರು.
೨. ಕುಟುಂಬ ನ್ಯಾಯಾಲಯವು ವಿವಾಹ ನೋಂದಣಿ ಪ್ರಮಾಣಪತ್ರವನ್ನು ಸಲ್ಲಿಸುವಂತೆ ಅವರನ್ನು ಕೇಳಿತ್ತು. ಆದರೆ ಅರ್ಜಿದಾರರು, ತಮ್ಮ ವಿವಾಹವು ೨೦೧೦ರಲ್ಲಿ ಹಿಂದೂ ಸಂಪ್ರದಾಯದ ಪ್ರಕಾರ ನಡೆದಿದೆ, ಆದರೆ ನೋಂದಣಿಯಾಗಿಲ್ಲ ಎಂದು ವಾದಿಸಿದರು. ಈ ಕಾರಣಕ್ಕೆ ಕುಟುಂಬ ನ್ಯಾಯಾಲಯವು ಅವರ ಅರ್ಜಿಯನ್ನು ತಿರಸ್ಕರಿಸಿತು.
೩. ಪ್ರಕರಣವು ಅಲಹಾಬಾದ್ ಉಚ್ಚ ನ್ಯಾಯಾಲಯ ತಲುಪಿದಾಗ, ನ್ಯಾಯಾಲಯವು ಅರ್ಜಿಯನ್ನು ಸ್ವೀಕರಿಸಿತು.
೪. ಉಚ್ಚ ನ್ಯಾಯಾಲಯ, ಕಾರ್ಯವಿಧಾನದ ನಿಯಮಗಳು ನ್ಯಾಯ ಒದಗಿಸುವ ಸಾಧನಗಳೇ ಹೊರತು ಅಡೆತಡೆಗಳಲ್ಲ ಎಂದು ಹೇಳಿತು. ತಾಂತ್ರಿಕ ಆಧಾರದ ಮೇಲೆ ಮಾನ್ಯ ವಿವಾಹದ ಸಿಂಧುತ್ವವನ್ನು ಪ್ರಶ್ನಿಸಲಾಗುವುದಿಲ್ಲ. ಆದ್ದರಿಂದ, ಕೌಟುಂಬಿಕ ನ್ಯಾಯಾಲಯವು ವಿಚ್ಛೇದನ ಅರ್ಜಿಯನ್ನು ಅರ್ಹತೆಯ ಆಧಾರದ ಮೇಲೆ ಶೀಘ್ರವಾಗಿ ಇತ್ಯರ್ಥಪಡಿಸಬೇಕು ಎಂದು ಸೂಚಿಸಿತು.
೫. ನ್ಯಾಯಾಲಯವು, ‘ಹಿಂದೂ ವಿವಾಹ ಕಾಯಿದೆ, ೧೯೫೫’ರ ಅಡಿಯಲ್ಲಿ ಪರಸ್ಪರ ಸಮ್ಮತಿಯ ವಿಚ್ಛೇದನ ಪ್ರಕ್ರಿಯೆಗಾಗಿ ವಿವಾಹ ನೋಂದಣಿ ಪ್ರಮಾಣಪತ್ರವನ್ನು ಸಲ್ಲಿಸುವುದು ಕಡ್ಡಾಯವಲ್ಲ ಎಂದು ಹೇಳಿತು. ವಿವಾಹ ನೋಂದಣಿಯು ಕೇವಲ ಪುರಾವೆಯ ಸಾಧನವಾಗಿದೆಯೇ ಹೊರತು ವಿವಾಹದ ಸಿಂಧುತ್ವಕ್ಕೆ ಆಧಾರವಲ್ಲ. ವಿವಾಹ ನೋಂದಣಿಯನ್ನು ಕಡ್ಡಾಯಗೊಳಿಸಲಾಗಿದೆ ನಿಜ, ಆದರೆ ಇದರರ್ಥ ವಿವಾಹಗಳು ಕಾನೂನುಬಾಹಿರವೆಂದು ಪರಿಗಣಿಸಲಾಗುವುದಿಲ್ಲ ಎಂದು ಹೇಳಿತು.
ಕೇರಳಮ್ದಲ್ಲಿ ‘ಇಸ್ಲಾಂ ಫ್ರೆಂಡ್ಲಿ’ ಜಿಮ್ ಕುರಿತು ವಿವಾದ
ಪುಣೆ ನಗರದಲ್ಲಿ ಮತ್ತೆ ‘ಕಾರ್ಪೊರೇಟ್ ಜಿಹಾದ್’ ಪ್ರಕರಣ
‘ದಾರುಲ್ ಉಲೂಮ್ ದೇವಬಂದ್’ ಭಯೋತ್ಪಾದಕರ ಕೇಂದ್ರವಾಗಿರುವುದರಿಂದ ಅದನ್ನು ನೆಲಸಮ ಮಾಡಿ ! – ಹಿಂದೂ ರಕ್ಷಾ ದಳದ ಬೇಡಿಕೆ
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭಗವಾನ್ ಶಿವನ ರೂಪದಲ್ಲಿ ತೋರಿಸಿದ ‘ವಿಶ್ವವಾಣಿ’ ಪತ್ರಿಕೆ !
‘ಭಂಡಾರ ಎಂದರೆ ಶುದ್ಧ ಅರಿಶಿನ’ ಎಂದು ಘೋಷಿಸುವಂತೆ ಅನ್ನ ಮತ್ತು ಔಷಧ ಆಡಳಿತಕ್ಕೆ (FDA) ಆಗ್ರಹ!
ಪಾನ್ ಮಸಾಲಾ, ಗುಟ್ಕಾ ಮತ್ತು ಕಲಬೆರಕೆ ಆಹಾರ ಪದಾರ್ಥಗಳ ಒಂದೂವರೆ ಕೋಟಿಗೂ ಹೆಚ್ಚು ಮೌಲ್ಯದ ದಾಸ್ತಾನು ವಶ