
ಮುಂಬಯಿ, ಆಗಸ್ಟ್ 29 (ಸುದ್ದಿ) – ಮುಂಬಯಿ ಉಚ್ಚ ನ್ಯಾಯಾಲಯವು 6 ಅಡಿ ಎತ್ತರದವರೆಗೆ ಶ್ರೀ ಗಣೇಶ ಮೂರ್ತಿಗಳನ್ನು ಕೃತಕ ಕೆರೆಯಲ್ಲಿ ವಿಸರ್ಜಿಸುವಂತೆ ನಿರ್ದೇಶನ ನೀಡಿದೆ. ಅದರಂತೆ, ರಾಜ್ಯ ಸರಕಾರವು ರಾಜ್ಯದ ಎಲ್ಲಾ ಸ್ಥಳೀಯ ಸ್ವ ಆಡಳಿತ ಸಂಸ್ಥೆಗಳಿಗೆ ಕೃತಕ ಕೆರೆಗಳನ್ನು ನಿರ್ಮಿಸಲು ಸೂಚಿಸಿತು; ಆದರೆ ಅನೇಕ ಸ್ಥಳಗಳಲ್ಲಿ ಕೃತಕ ಕೆರೆಯಲ್ಲಿ ವಿಸರ್ಜನೆ ಮಾಡುವಾಗ ಶ್ರೀ ಗಣೇಶ ಮೂರ್ತಿಯ ಪಾವಿತ್ರ್ಯವನ್ನು ಕಾಪಾಡದ ಪ್ರಕರಣಗಳು ಗಮನಕ್ಕೆ ಬಂದಿವೆ. ಠಾಣೆಯ ವಿಟಾವಾದಲ್ಲಿ ಕೃತಕ ಕೆರೆಯ ಸ್ಥಳಕ್ಕೆ ಶ್ರೀ ಗಣೇಶ ಮೂರ್ತಿ ವಿಸರ್ಜನೆಗೆ ಮದ್ಯಪಾನ ಮಾಡಿ ವ್ಯಕ್ತಿಯೊಬ್ಬ ಬಂದಿದ್ದನು. ಕೆಲವು ಕಡೆಗಳಲ್ಲಿ ಮೂರ್ತಿಗಳನ್ನು ಸಾಗಿಸಲು ಕಸದ ವಾಹನಗಳನ್ನು ಬಳಸಲಾಗಿತ್ತು. ಈ ರೀತಿ ರಾಜ್ಯದ ವಿವಿಧ ಸ್ಥಳಗಳಲ್ಲಿ ಕೃತಕ ಕೆರೆಯ ಹೆಸರಿನಲ್ಲಿ ಶ್ರೀ ಗಣೇಶ ಮೂರ್ತಿಯ ಪಾವಿತ್ರ್ಯಕ್ಕೆ ಧಕ್ಕೆಯಾಗುತ್ತಿರುವುದರಿಂದ ಭಕ್ತರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

1. ಭಾಂಡುಪ (ಪಶ್ಚಿಮ)ದಲ್ಲಿ ನಿರ್ಮಿಸಲಾದ ಕೃತಕ ಕೆರೆಯಲ್ಲಿ ವಿಸರ್ಜನೆ ಮಾಡಿದ ಶ್ರೀ ಗಣೇಶ ಮೂರ್ತಿಗಳನ್ನು ಹೊರತೆಗೆಯಲು ಹಾಳಾದ ಬಕೆಟ್‌ಗಳನ್ನು ಬಳಸಲಾಗುತ್ತಿದ್ದುದರಿಂದ, ಭಕ್ತರು ಕೃತಕ ಕೆರೆಯಲ್ಲಿ ಶ್ರೀ ಗಣೇಶ ಮೂರ್ತಿ ವಿಸರ್ಜನೆ ಮಾಡದಿರಲು ನಿರ್ಧರಿಸಿದರು.
2.. ಅಲ್ಲಿನ ಛತ್ರಪತಿ ಶಿವಾಜಿ ಮಹಾರಾಜ ಕೆರೆಯಲ್ಲಿ ಶ್ರೀ ಗಣೇಶ ಮೂರ್ತಿ ವಿಸರ್ಜನೆಗೆ ಅನುಮತಿ ನೀಡಬೇಕೆಂದು ಭಕ್ತರು ಒತ್ತಾಯಿಸಿದರು; ಆದರೆ ಪೊಲೀಸರು ಭಕ್ತರನ್ನು ತಡೆದರು.
3. ಈ ವೇಳೆ ಶಿವಸೇನೆಯ ಶಾಸಕ ಶ್ರೀ. ಅಶೋಕ ಪಾಟೀಲ್ ಅವರು ಭಕ್ತರ ಭಾವನೆಗಳನ್ನು ಪರಿಗಣಿಸಿ, ಶ್ರೀ ಗಣೇಶ ಮೂರ್ತಿಯನ್ನು ಕೆರೆಯಲ್ಲಿ ವಿಸರ್ಜಿಸಲು ಅನುಮತಿ ನೀಡುವಂತೆ ಪೊಲೀಸರಿಗೆ ಮನವಿ ಮಾಡಿದರು.
4. ಭಕ್ತರ ಆಕ್ರೋಶವನ್ನು ಗಮನಿಸಿ, ಸಂಜೆ ತಡವಾಗಿ ಪೊಲೀಸರು ಶ್ರೀ ಗಣೇಶ ಮೂರ್ತಿಯನ್ನು ಕೆರೆಯಲ್ಲಿ ವಿಸರ್ಜಿಸಲು ಮಾರ್ಗವನ್ನು ತೆರವು ಗೊಳಿಸಿದರು.
5. ಮುಂಬಯಿ, ಪುಣೆ, ಠಾಣೆ ಸೇರಿದಂತೆ ರಾಜ್ಯದಾದ್ಯಂತ ಹರಿಯುವ ನದಿ, ಕೆರೆಗಳಲ್ಲಿ ಶ್ರೀ ಗಣೇಶ ಮೂರ್ತಿ ವಿಸರ್ಜನೆಗೆ ಪೊಲೀಸರು ನಿರ್ಬಂಧಿಸಿದ್ದಾರೆ. ಭಕ್ತರು ಹರಿಯುವ ನದಿ-ಕೆರೆಗಳಲ್ಲಿ ಶ್ರೀ ಗಣೇಶ ಮೂರ್ತಿ ವಿಸರ್ಜನೆ ಮಾಡಬಾರದು ಎಂದು ದೊಡ್ಡ ಪ್ರಮಾಣದಲ್ಲಿ ಪೊಲೀಸ್ ಭದ್ರತೆಯನ್ನು ನಿಯೋಜಿಸಲಾಗಿತ್ತು.
ಕೃತಕ ಕೆರೆಯಲ್ಲಿನ ಮೂರ್ತಿಗಳನ್ನು ಏನು ಮಾಡುತ್ತಾರೆಂಬುದು ಸ್ಪಷ್ಟವಾಗಿಲ್ಲ!
ಕೃತಕ ಕೆರೆಯಲ್ಲಿ ವಿಸರ್ಜನೆ ಮಾಡಿದ ಮೂರ್ತಿಗಳನ್ನು ಹೊರತೆಗೆದ ನಂತರ ಅದರ ಮುಂದಿನ ಕ್ರಮವೇನು ಎಂಬ ಬಗ್ಗೆ ‘ಸನಾತನ ಪ್ರಭಾತ’ದ ಪ್ರತಿನಿಧಿಯು ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿಗಳನ್ನು ಸಂಪರ್ಕಿಸಿದಾಗ, ಈ ಬಗ್ಗೆ ನಗರಸಭೆ ಮತ್ತು ಮಹಾನಗರಪಾಲಿಕೆಗೆ ಮಾರ್ಗದರ್ಶನಗಳನ್ನು ತಿಳಿಸಲಾಗಿದೆ ಎಂದು ಹೇಳಿದರು. ‘ಮೂರ್ತಿಗಳ ಮುಂದಿನ ಕ್ರಮವನ್ನು ಸ್ಥಳೀಯ ಸ್ವ ಆಡಳಿತ ಸಂಸ್ಥೆಗಳು ಕೈಗೊಳ್ಳಲಿವೆ’ ಎಂದು ಹೇಳಿ, ಕೆರೆಯಲ್ಲಿ ವಿಸರ್ಜನೆ ಮಾಡಿದ ಮೂರ್ತಿಗಳನ್ನು ಮುಂದೆ ಏನು ಮಾಡುತ್ತಾರೆ ಎಂಬ ಮಾರ್ಗದರ್ಶನಗಳನ್ನು ತಿಳಿಸಲು ನಿರಾಕರಿಸಿದರು.
ಕೇರಳಮ್ದಲ್ಲಿ ‘ಇಸ್ಲಾಂ ಫ್ರೆಂಡ್ಲಿ’ ಜಿಮ್ ಕುರಿತು ವಿವಾದ
ಪುಣೆ ನಗರದಲ್ಲಿ ಮತ್ತೆ ‘ಕಾರ್ಪೊರೇಟ್ ಜಿಹಾದ್’ ಪ್ರಕರಣ
‘ದಾರುಲ್ ಉಲೂಮ್ ದೇವಬಂದ್’ ಭಯೋತ್ಪಾದಕರ ಕೇಂದ್ರವಾಗಿರುವುದರಿಂದ ಅದನ್ನು ನೆಲಸಮ ಮಾಡಿ ! – ಹಿಂದೂ ರಕ್ಷಾ ದಳದ ಬೇಡಿಕೆ
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭಗವಾನ್ ಶಿವನ ರೂಪದಲ್ಲಿ ತೋರಿಸಿದ ‘ವಿಶ್ವವಾಣಿ’ ಪತ್ರಿಕೆ !
‘ಭಂಡಾರ ಎಂದರೆ ಶುದ್ಧ ಅರಿಶಿನ’ ಎಂದು ಘೋಷಿಸುವಂತೆ ಅನ್ನ ಮತ್ತು ಔಷಧ ಆಡಳಿತಕ್ಕೆ (FDA) ಆಗ್ರಹ!
ಪಾನ್ ಮಸಾಲಾ, ಗುಟ್ಕಾ ಮತ್ತು ಕಲಬೆರಕೆ ಆಹಾರ ಪದಾರ್ಥಗಳ ಒಂದೂವರೆ ಕೋಟಿಗೂ ಹೆಚ್ಚು ಮೌಲ್ಯದ ದಾಸ್ತಾನು ವಶ