
‘ಕಾಗವಾಡದ ಪಟವರ್ಧನ ಸರಕಾರ ಕುಟುಂಬದ ಜಾಗೃತ ಉಪಾಸ್ಯದೇವತೆ ‘ಶ್ರೀ ಮಾಂದಾರ ಗಣೇಶ’ನ ಮೂರ್ತಿಯನ್ನು ಶಕೆ ೧೯೭೭ (ಕ್ರಿ.ಶ. ೧೮೫೫)ರಲ್ಲಿ ಸ್ಥಾಪಿಸಲಾಯಿತು. ೨೦೧೫ ರಲ್ಲಿ ದೇವಸ್ಥಾನದ ಜೀರ್ಣೋದ್ಧಾರವಾಯಿತು. ಹಳೆಯ ಮೂರ್ತಿಯು ಭಗ್ನವಾದ ಕಾರಣ ಅದರ ಜಾಗದಲ್ಲಿ ಹೊಸ ಮೂರ್ತಿಯ ಪ್ರಾಣಪ್ರತಿಷ್ಠಾಪನೆ ಮಾಡಿ ದೇವಸ್ಥಾನದ ಮೇಲೆ ಕಳಶಾರೋಹಣ ಮಾಡುವ ಸಮಾರಂಭವು ೧೯ ರಿಂದ ೨೨ ಫೆಬ್ರವರಿ ೨೦೨೫ ರ ಕಾಲಾವಧಿಯಲ್ಲಿ ನೆರವೇರಿತು. ಶ್ರೀ ಗುರುಗಳ ಆಜ್ಞೆಯಿಂದ ರಾಮನಾಥಿ, ಗೋವಾದಲ್ಲಿನ ಸನಾತನದ ಆಶ್ರಮದಲ್ಲಿ ಸನಾತನದ ಸೂಕ್ಷ್ಮ ಜ್ಞಾನಪ್ರಾಪ್ತಕರ್ತರಾದ ಸಾಧಕಿ ಸುಶ್ರೀ ಮಧುರಾ ಭೋಸಲೆ ಇವರು ಈ ಧಾರ್ಮಿಕ ವಿಧಿಗಳ ಬಗ್ಗೆ ಮಾಡಿದ ಸೂಕ್ಷ್ಮ ಪರೀಕ್ಷಣೆಯನ್ನು ಇಲ್ಲಿ ಲೇಖನರೂಪದಲ್ಲಿ ನೀಡಿದ್ದಾರೆ. ಶ್ರೀ ಮಾಂದಾರ ಗಣೇಶನ ಭಗ್ನವಾದ ಮೂರ್ತಿ ಮತ್ತು ಶ್ರೀ ಮಾಂದಾರ ಗಣೇಶನ ನೂತನ ಮೂರ್ತಿಯ ಛಾಯಾಚಿತ್ರಗಳನ್ನು ನೋಡಿ ಈ ಸೂಕ್ಷ್ಮ ಪರೀಕ್ಷಣೆಯನ್ನು ಮಾಡಲಾಯಿತು. ಆಗ ಅವರಿಗೆ ಬಂದ ವಿವಿಧ ಅನುಭೂತಿಗಳನ್ನೂ ಸೂಕ್ಷ್ಮ ಪರೀಕ್ಷಣೆಯ ಪ್ರತಿಯೊಂದು ಅಂಶದ ಕೆಳಗೆ ಬರೆದಿದ್ದಾರೆ.
೧. ದೇವರ ಕೋಣೆಯಲ್ಲಿ ಮತ್ತು ದೇವಸ್ಥಾನದಲ್ಲಿ ಮೂರ್ತಿಯನ್ನು ಸ್ಥಾಪಿಸುವುದರ ಮಹತ್ವ
ಮನುಷ್ಯನಿಗೆ ಪೃಥ್ವಿಯಲ್ಲಿದ್ದು ದೇವಲೋಕದಲ್ಲಿನ ದೇವತೆಗಳ ಉಪಾಸನೆಯು ಸುಲಭವಾಗಬೇಕೆಂದು ಪೃಥ್ವಿಯಲ್ಲಿ ಆಯಾ ದೇವತೆಗಳ ರೂಪಕ್ಕೆ ಹೋಲುವ ಮೂರ್ತಿಗಳನ್ನು ನಿರ್ಮಿಸಲಾಯಿತು. ಮೂರ್ತಿ ಚಿಕ್ಕದಾಗಿದ್ದರೆ ಅದನ್ನು ಮನೆಯ ದೇವರಕೋಣೆಯಲ್ಲಿ ಮತ್ತು ದೊಡ್ಡದಾಗಿದ್ದರೆ ದೇವಸ್ಥಾನದಲ್ಲಿ ಸ್ಥಾಪಿಸುವ ಪದ್ಧತಿ ರೂಢಿಯಾಗಿದೆ. ಆದ್ದರಿಂದ ವ್ಯಷ್ಟಿ ಸ್ತರದಲ್ಲಿ ದೇವರ ಕೋಣೆಯಲ್ಲಿ ಮತ್ತು ಸಮಷ್ಟಿ ಸ್ತರದಲ್ಲಿ ದೇವಸ್ಥಾನದಲ್ಲಿನ ದೇವತೆಯ ಮೂರ್ತಿಯ ಉಪಾಸನೆಯ ಪರಂಪರೆಯು ಸತ್ಯಯುಗದಿಂದ ಪ್ರಾರಂಭವಾಯಿತು. ಆದ್ದರಿಂದ ಭಕ್ತರಿಗೆ ಸಂಬಂಧಿತ ದೇವತೆಗಳ ಉಪಾಸನೆಯು ಒಳ್ಳೆಯ ರೀತಿಯಲ್ಲಿ ಮಾಡಲು ಸಾಧ್ಯವಾಗಿ ಅವರಿಗೆ ಐಹಿಕ (ಮಾಯೆಗೆ ಸಂಬಂಧಿಸಿದ ಮತ್ತು ಸಕಾಮ) ಮತ್ತು ಪಾರಮಾರ್ಥಿಕ (ಆಧ್ಯಾತ್ಮಿಕ ಸ್ವರೂಪದ ಮತ್ತು ನಿಷ್ಕಾಮ) ಸ್ತರದಲ್ಲಿನ ಅನುಭೂತಿಗಳು ಬರತೊಡಗಿದವು. ಆದ್ದರಿಂದ ಭಕ್ತರು ಒಂದೇ ಸಮನೆ ಅನೇಕ ವರ್ಷಗಳ ವರೆಗೆ ದೇವತೆಗಳ ಉಪಾಸನೆ ಮಾಡಿದ್ದರಿಂದ ಅವರಿಗೆ ‘ಸಲೋಕ, ಸಾಮೀಪ್ಯ, ಸ್ವರೂಪ, ಸಾರ್ಷ್ಟಿ ಮತ್ತು ಸಾಯುಜ್ಯ’ (ಟಿಪ್ಪಣಿ ೧) ಇಂತಹ ವಿವಿಧ ರೀತಿಯ ಮುಕ್ತಿ ದೊರಕಿ ಅವರ ಮಾರ್ಗಕ್ರಮಣವು ಮೋಕ್ಷಪ್ರಾಪ್ತಿಯ ದಿಶೆಯಿಂದ ಪ್ರಾರಂಭವಾಯಿತು.
(ಟಿಪ್ಪಣಿ ೧ – ‘ಸಲೋಕ, ಸಾಮೀಪ್ಯ ಸ್ವರೂಪ, ಸಾರ್ಷ್ಟಿ ಮತ್ತು ಸಾಯುಜ್ಯ’ ಮುಕ್ತಿ


ಶ್ರೀ ಮಾಂದಾರ ಗಣೇಶನ ನೂತನ ಮೂರ್ತಿ
೧. ಸಲೋಕ ಮುಕ್ತಿ : ಬ್ರಹ್ಮಾಂಡದಲ್ಲಿ ಉಪಾಸನೆ ಮಾಡುವವರ ದೇವರು ಯಾವ ಸೂಕ್ಷ್ಮ ಲೋಕದಲ್ಲಿ ವಾಸಿಸುತ್ತಾರೆಯೋ, ಆ ಲೋಕದಲ್ಲಿ ಅವನಿಗೆ ವಾಸಿಸಲು ಸಿಗುತ್ತದೆ.
೨. ಉಪಾಸಕನಿಗೆ ಉಪಾಸ್ಯದೇವತೆಯ ಲೋಕದಲ್ಲಿ ಹತ್ತಿರವಿರಲು ಅವಕಾಶ ಸಿಗುತ್ತದೆ. ಇದಕ್ಕೆ ‘ಸಾಮೀಪ್ಯ ಮುಕ್ತಿ’ ಎನ್ನುತ್ತಾರೆ.
೩. ಉಪಾಸಕನಿಗೆ ತನ್ನ ಉಪಾಸ್ಯ ದೇವರಂತೆ ರೂಪ ದೊರಕುತ್ತದೆ. ಇದಕ್ಕೆ ‘ಸ್ವರೂಪ ಮುಕ್ತಿ’ ಎಂದು ಹೇಳುತ್ತಾರೆ.
೪. ಉಪಾಸಕನಿಗೆ ಉಪಾಸ್ಯದೇವತೆಯ ಗುಣ ಮತ್ತು ಆಧ್ಯಾತ್ಮಿಕ ಐಶ್ವರ್ಯ ದೊರಕುತ್ತದೆ. ಆದ್ದರಿಂದ ಅವನಿಗೆ ‘ಸಾರ್ಷ್ಟಿ ಮುಕ್ತಿ’ ಎಂದು ಕರೆಯುತ್ತಾರೆ.
೫. ಉಪಾಸಕನು ತನ್ನ ಉಪಾಸ್ಯದೇವತೆಯ ಸಗುಣ ರೂಪದಲ್ಲಿ ಏಕರೂಪನಾಗುತ್ತಾನೆ. ಇದಕ್ಕೆ ‘ಸಾಯುಜ್ಯ ಮುಕ್ತಿ’ ಎಂದು ಕರೆಯುತ್ತಾರೆ.
೧ ಅ. ಮೇಲಿನ ಅಂಶವನ್ನು ಬೆರಳಚ್ಚು ಮಾಡುವಾಗ ಸಾಧಕಿಗೆ ಬಂದ ಅನುಭೂತಿ : ‘ಭಾವಿಕರು ಶ್ರೀ ಗಣೇಶನ ದೇವಸ್ಥಾನದಲ್ಲಿನ ಶ್ರೀ ಗಣೇಶನ ಮೂರ್ತಿಯ ದರ್ಶನವನ್ನು ಯಾವಾಗ ಭಾವಪೂರ್ಣ ವಾಗಿ ಪಡೆಯುತ್ತಾರೆಯೋ, ಆಗ ಮೂರ್ತಿಯಿಂದ ಪ್ರಕ್ಷೇಪಿಸುವ ದೇವತೆಯ ತತ್ತ್ವವು ಭಕ್ತÀರ ದಿಶೆಯಲ್ಲಿ ಆಕರ್ಷಿತಗೊಂಡು ಅದು ಅವನ ಹೃದಯದಲ್ಲಿ ಹೋಗುತ್ತದೆ’, ಎಂದು ನನಗೆ ಅರಿವಾಯಿತು.
೨. ದೇವತೆಯ ಮೂರ್ತಿಯು ಅಖಂಡವಾಗಿರುವುದರ ಮಹತ್ವ
ಯಾವುದೇ ದೇವತೆಯ ಮೂರ್ತಿಯನ್ನು ಸಿದ್ಧಪಡಿಸುವಾಗ ಆ ದೇವತೆಯ ರೂಪಕ್ಕನುಗುಣವಾಗಿ ಹೋಲಿಕೆಯಾಗುವ ಅಖಂಡ ಮೂರ್ತಿಯನ್ನು ನಿರ್ಮಿಸುವುದು ಆವಶ್ಯಕವಾಗಿರುತ್ತದೆ. ಆಗ ಮಾತ್ರ ಸಂಬಂಧಿತ ದೇವತೆಯ ಸೂಕ್ಷ್ಮ ಲೋಕದಲ್ಲಿ ಕಾರ್ಯನಿತರವಾಗಿರುವ ದೇವತೆಯ ತತ್ತ್ವವು ಅವನ ಸ್ವರೂಪಕ್ಕೆ ಹೋಲುವ ಪೃಥ್ವಿಯಲ್ಲಿರುವ ದೇವತೆಯ ಮೂರ್ತಿಯಲ್ಲಿ ಬರುವುದು. ಆದ್ದರಿಂದ ಇಂತಹ ದೇವತೆಗಳ ಮೂರ್ತಿಗಳನ್ನು ಸ್ಥಾಪಿಸಿದ ನಂತರ ಉಪಾಸಕನಿಗೆ ಅದರಿಂದ ಹೆಚ್ಚೆಚ್ಚು ಲಾಭವಾಗುತ್ತದೆ.
೨ ಅ. ಮೇಲಿನ ಅಂಶವನ್ನು ಬೆರಳಚ್ಚು ಮಾಡುವಾಗ ಸಾಧಕಿಗೆ ಬಂದ ಅನುಭೂತಿ : ಶ್ರೀ ಗಣೇಶನ ಪೂರ್ಣಾಕೃತಿ ಮೂರ್ತಿಯ ಕಡೆಗೆ ಶ್ರೀ ಗಣೇಶಲೋಕದಿಂದ ಪ್ರಕ್ಷೇಪಿಸುವ ಶ್ರೀ ಗಣೇಶನ ತತ್ತ್ವವು ಹೆಚ್ಚೆಚ್ಚು ಪ್ರಮಾಣದಲ್ಲಿ ಆಕರ್ಷಿಸಲ್ಪಟ್ಟು ಅದು ಶ್ರೀ ಗಣೇಶನ ಮೂರ್ತಿಯಲ್ಲಿ ಕಾರ್ಯನಿರತವಾಯಿತು. ಆದ್ದರಿಂದ ಮೂರ್ತಿಯು ತೇಜೋಪುಂಜವಾಗಿ ಕಾಣಿಸತೊಡಗಿತು.
೩. ದೇವತೆಯ ಮೂರ್ತಿಯು ಭಗ್ನವಾಗಿರುವುದರಿಂದ ಸೂಕ್ಷ್ಮಸ್ತರದಲ್ಲಿ ಆಗುವ ಪರಿಣಾಮ ಮತ್ತು ಭಗ್ನವಾಗಿರುವ ದೇವತೆಯ ಮೂರ್ತಿಯ ಜಾಗದಲ್ಲಿ ನೂತನ ಮೂರ್ತಿಯನ್ನು ಸ್ಥಾಪಿಸುವುದರ ಮಹತ್ವ ಯಾವಾಗ ದೇವತೆಯ ಮೂರ್ತಿಯು ಅಖಂಡವಾಗಿರು ತ್ತದೆಯೋ, ಆಗ ಅದು ಸಾತ್ತ್ವಿಕ ಮತ್ತು ಪರಿಪೂರ್ಣವಾಗಿರುತ್ತದೆ. ಆದ್ದರಿಂದ ಇಂತಹ ಅಖಂಡವಾಗಿರುವ ದೇವತೆಯ ಮೂರ್ತಿ ಯಲ್ಲಿ ದೇವತೆಯ ತತ್ತ್ವವು ಹೆಚ್ಚೆಚ್ಚು ಪ್ರಮಾಣದಲ್ಲಿ ಬಂದು ಅದು ವಾಯುಮಂಡಲದಲ್ಲಿ ಬಹಳಷ್ಟು ಪ್ರಮಾಣದಲ್ಲಿ ಪ್ರಕ್ಷೇಪಿಸಿ ಸ್ಥಾನ, ಕ್ಷೇತ್ರ ಮತ್ತು ಪೃಥ್ವಿಯ ವಾಯುಮಂಡಲದ ಶುದ್ಧೀಕರಣದ ಪ್ರಕ್ರಿಯೆ ಸತತವಾಗಿ ನಡೆಯುತ್ತದೆ. ಯಾವಾಗ ಯಾವುದಾದರೊಂದು ದೇವತೆಯ ಮೂರ್ತಿಯು ಭಗ್ನವಾಗುತ್ತದೆಯೋ, ಆಗ ಅದರ ಅಖಂಡತ್ವವು ಮುಗಿಯುತ್ತದೆ. ಆದ್ದರಿಂದ ಇಂತಹ ಮೂರ್ತಿಯ ಆಕೃತಿಯು ಹಾಳಾಗಿ ಅದು ವಿಕೃತಿಯಲ್ಲಿ ರೂಪಾಂತರವಾಗುತ್ತದೆ. ಎಲ್ಲಿ ವಿಕೃತ ಆಕೃತಿ ಇರುವಲ್ಲಿಂದ ಒಳ್ಳೆಯ ಸ್ಪಂದನಗಳು ಬರದೇ ತೊಂದರೆದಾಯಕ ಸ್ಪಂದನಗಳು ಬರತೊಡಗುತ್ತವೆ. ಆದ್ದರಿಂದ ಹಿಂದೂ ಧರ್ಮಶಾಸ್ತ್ರದಲ್ಲಿ, ‘ದೇವತೆಯ ಮೂರ್ತಿಯು ಭಗ್ನವಾಗಿದ್ದರೆ, ಅದನ್ನು ನೀರಿನಲ್ಲಿ ವಿಸರ್ಜಿಸಬೇಕು ಮತ್ತು ಅದರ ಜಾಗದಲ್ಲಿ ನೂತನ ಅಖಂಡ ಮೂರ್ತಿಯನ್ನು ವಿಧಿಪೂರ್ವಕವಾಗಿ ಸ್ಥಾಪಿಸಬೇಕು’ ಎಂದು ಹೇಳಲಾಗಿದೆ. ಇದರಿಂದ ಹಿಂದಿನ ಕಾಲದಲ್ಲಿ ಭಗ್ನವಾಗಿರುವ ಮೂರ್ತಿಯನ್ನು ನೀರಿನಲ್ಲಿ ವಿಸರ್ಜಿಸಿ ಆ ಜಾಗದಲ್ಲಿ ದೇವತೆಯ ಹೊಸ ಮೂರ್ತಿಯನ್ನು ಸ್ಥಾಪಿಸುತ್ತಿದ್ದರು, ಇದರಿಂದ ಇದರ ಮಹತ್ವವು ಗಮನಕ್ಕೆ ಬರುತ್ತದೆ.
೩ ಅ. ಮೇಲಿನ ಅಂಶವನ್ನು ಬೆರಳಚ್ಚು ಮಾಡುವಾಗ ಸಾಧಕಿಗೆ ಬಂದ ಅನುಭೂತಿ : ಭಗ್ನವಾದ ಮೂರ್ತಿಯತ್ತ ನೋಡಿದಾಗ ಶ್ರೀ ಗಣೇಶನ ದರ್ಶನದಲ್ಲಿನ ಅಪೂರ್ಣತ್ವದ ಅರಿವಾಗಿ ‘ಮೂರ್ತಿಯ ಕಡೆಗೆ ನೋಡಬಾರದು’, ಎಂದೆನಿಸಿತು, ಹಾಗೆಯೇ ಅದರ ಜಾಗದಲ್ಲಿ ಸ್ಥಾಪಿಸುವ ಹೊಸ ಮೂರ್ತಿಯ ಕಡೆಗೆ ನೋಡಿದಾಗ ‘ಅದರ ಕಡೆಗೆ ನೋಡುತ್ತಲೇ ಇರಬೇಕು’, ಎಂದೆನಿಸಿತು.
೪. ಹಳೆಯ ಮೂರ್ತಿಯಿಂದ ಹೊಸ ಮೂರ್ತಿಯಲ್ಲಿ ದೇವತೆಯ ಪ್ರಾಣ ಸಂಕ್ರಮಣವಾಗುವ ಪ್ರಕ್ರಿಯೆ ಮತ್ತು ಮಹತ್ವ
ಹಿಂದೂ ಧರ್ಮಶಾಸ್ತ್ರದಲ್ಲಿ, ದೇವತೆಯ ಹಳೆಯ ಮೂರ್ತಿಯು ಭಗ್ನವಾಗಿದ್ದರೆ, ಅದರಲ್ಲಿನ ಪ್ರಾಣವು ‘ಸಂಪಾತ’ ಎಂಬ ಹೆಸರಿನ ಕಲಶದಲ್ಲಿನ (‘ಸಂಪಾತ’ ಕಲಶವೆಂದರೆ ನೀರಿನಿಂದ ತುಂಬಿದ ಮತ್ತು ಯಜ್ಞಕುಂಡದ ಬಳಿ ಇಟ್ಟಿರುವ ಒಂದು ಸಂಸ್ಕರಿತ ಕಲಶ) ನೀರನ್ನು ತೆಗೆದುಕೊಳ್ಳಬೇಕು ಮತ್ತು ನಂತರ ಈ ಕಲಶದಲ್ಲಿನ ಪ್ರಾಣವನ್ನು ದರ್ಭೆಯ ಗೊಂಚಲಿನಿಂದ ಕಲಶದಿಂದ ಹೊಸ ಮೂರ್ತಿಗೆ ಜಲದ ಸ್ಪರ್ಶವನ್ನು ಮಾಡಿ ಅದರಲ್ಲಿ ಸಂಕ್ರಮಿಸಬೇಕು. ಇದನ್ನು ‘ತತ್ತ್ವಧಾರಣ’ ಎನ್ನುತ್ತಾರೆ. ಈ ಪ್ರಕ್ರಿಯೆಯಲ್ಲಿ ಪ್ರಾಣಪ್ರತಿಷ್ಠಾಪನೆಗೆ ಸಂಬಂಧಿಸಿದ
ಸಂಕಲ್ಪವು ಮಹತ್ವದ್ದಾಗಿರುತ್ತದೆ. ಇದರಿಂದ ಒಂದು ಮೂರ್ತಿ ಯಲ್ಲಿನ ಪ್ರಾಣವು ಇನ್ನೊಂದು ಮೂರ್ತಿಯಲ್ಲಿ ಸಂಕ್ರಮಣವಾಗುವ ಪ್ರಕ್ರಿಯೆ ಪ್ರಾರಂಭವಾಗುತ್ತದೆ. ಈ ಮುಖ್ಯ ಸಂಕಲ್ಪಕ್ಕೆ ಈ ಧಾರ್ಮಿಕ ವಿಧಿಗೆ ಸಂಬಂಧಿಸಿದ ಮಂತ್ರ ಆಕಾಶತತ್ತ್ವದ ಸ್ತರದಲ್ಲಿ, ಇತರ ಧಾರ್ಮಿಕ ಉಪವಿಧಿಗಳು ಪೃಥ್ವಿ ಮತ್ತು ಆಪ ಸ್ತರಗಳಲ್ಲಿ, ಸಂಬಂಧಿತ ದೇವತೆಯ ಯಜ್ಞವು ತೇಜತತ್ತ್ವದ ಸ್ತರದಲ್ಲಿ ಸಹಾಯಕವಾಗಿರುತ್ತವೆ.
೪ ಅ. ಮೇಲಿನ ಅಂಶವನ್ನು ಬೆರಳಚ್ಚು ಮಾಡುವಾಗ ಸಾಧಕಿಗೆ ಬಂದ ಅನುಭೂತಿ : ಭಗ್ನವಾಗಿರುವ ಹಳೆಯ ಮೂರ್ತಿಯ ಹೃದಯ ಸ್ಥಳದಲ್ಲಿರುವ ತಿಳಿಕೆಂಪು ಕೇಸರಿ ಬಣ್ಣದ ಪ್ರಾಣಜ್ಯೋತಿಯು ಅದರಿಂದ ಹೊರಟು ಹೊಸ ಮೂರ್ತಿಯ ಹೃದಯದಲ್ಲಿ ಸ್ಥಿರವಾಗುವಾಗುವಾಗಿನ ಸೂಕ್ಷ್ಮ ದೃಶ್ಯ ಕಾಣಿಸಿತು.
೫. ದೇವಸ್ಥಾನದಲ್ಲಿ ಪ್ರಾಣಪ್ರತಿಷ್ಠಾಪನೆ ಮಾಡಿದ ಹೊಸ ಮೂರ್ತಿಯನ್ನು ಸ್ಥಾಪಿಸುವ ಮಹತ್ವ
ದೇವತೆಯ ಮೂರ್ತಿಯಲ್ಲಿ ಪ್ರಾಣವು ಚೈತನ್ಯದ ಸ್ತರದಲ್ಲಿ ಕಾರ್ಯನಿರತವಾಗಿರುತ್ತದೆ. ಈ ಚೈತನ್ಯವು ನೀರಿನಿಂದ ಆಪತತ್ತ್ವದ ಸ್ತರದಲ್ಲಿ ತತ್ತ್ವಲಹರಿಗಳ ಸ್ವರೂಪದಲ್ಲಿ ಮೂರ್ತಿಯಲ್ಲಿ ಪ್ರವೇಶಿಸು ತ್ತದೆ. ಅನಂತರ ದೇವತೆಯ ಮೂರ್ತಿಯಲ್ಲಿ ತೇಜತತ್ತ್ವದ ಸ್ತರದಲ್ಲಿ ದಿವ್ಯ ಜ್ಯೋತಿಯು ಪ್ರಜ್ವಲಿಸುತ್ತದೆ ಮತ್ತು ಅನಂತರ ಮೂರ್ತಿ ಯಲ್ಲಿ ಯಾವಾಗ ವಾಯುತತ್ತ್ವದ ಸ್ತರದಲ್ಲಿನ ಪ್ರಾಣವು ಪ್ರವೇಶಿಸಿ ಕಾರ್ಯನಿರತವಾಗುತ್ತದೆಯೋ, ಆಗ ದೇವತೆಯ ಮೂರ್ತಿಯ ಪ್ರಾಣಪ್ರತಿಷ್ಠಾಪನೆಯ ಸೂಕ್ಷ್ಮದಲ್ಲಿನ ಪ್ರಕ್ರಿಯೆ ಪೂರ್ಣಗೊಳ್ಳುತ್ತದೆ.
೫ ಅ. ಮೇಲಿನ ಅಂಶವನ್ನು ಬೆರಳಚ್ಚು ಮಾಡುವಾಗ ಸಾಧಕಿಗೆ ಬಂದ ಅನುಭೂತಿ : ಪ್ರಾಣಪ್ರತಿಷ್ಠಾಪನೆ ಮಾಡಿದ ಹೊಸ ಮೂರ್ತಿಯ ಚಿತ್ರದ ಕಡೆಗೆ ನೋಡಿದಾಗ ಅದರಲ್ಲಿ ಸಾಕ್ಷಾತ್ ಶ್ರೀ ಮಾಂದಾರ ಗಣೇಶನ ದರ್ಶನವಾಗಿ ನನ್ನ ಭಾವಜಾಗೃತವಾಯಿತು.
೬. ದೇವಸ್ಥಾನದ ಮೇಲೆ ಕಳಶವನ್ನು ಸ್ಥಾಪಿಸುವುದರ ಮಹತ್ವ !
ದೇವಸ್ಥಾನದ ಗರ್ಭಗುಡಿಯಲ್ಲಿ ಸ್ಥಾಪಿಸಿದ ದೇವತೆಯ ಮೂರ್ತಿಯಲ್ಲಿ ಕೇವಲ ಪ್ರಾಣದ ಜೊತೆಗೆ ಅದಕ್ಕೆ ಸಂಬಂಧಿತ ದೇವತೆಯ ಸೂಕ್ಷ್ಮಲೋಕದಿಂದ ಆ ದೇವತೆಯ ಚೈತನ್ಯದಾಯಕ ಲಹರಿಗಳ ನಿರಂತರ ಪ್ರವಹಿಸುವುದು ಆವಶ್ಯಕ ವಾಗಿರುತ್ತದೆ. ಅದಕ್ಕಾಗಿ ದೇವಸ್ಥಾನದ ಗರ್ಭಗುಡಿಯಲ್ಲಿ ದೇವತೆಯ ಮೂರ್ತಿಯ ಪ್ರಾಣಪ್ರತಿಷ್ಠಾಪನೆ ಮಾಡಿದ ನಂತರ ಆ ದೇವಸ್ಥಾನದ ಶಿಖರದ ಮೇಲೆ ಧಾತುವಿನ ಕಳಶವನ್ನು ಸ್ಥಾಪಿಸುವುದು ಆವಶ್ಯಕವಾಗಿರುತ್ತದೆ. ಉಚ್ಚ ಲೋಕದಲ್ಲಿ ಕಾರ್ಯ ನಿರತವಾಗಿರುವ ಸಂಬಂಧಿತ ದೇವತೆಯ ತತ್ತ್ವಲಹರಿಗಳು ಈ ಅಭಿಮಂತ್ರಿತ ಕಳಶದ ಕಡೆಗೆ ಆಕರ್ಷಿತಗೊಂಡು ಆ ದೇವಲೋಕದಿಂದ ಪೃಥ್ವಿಯ ಮೇಲಿನ ಸಂಬಂಧಿತ ದೇವತೆಯ ದೇವಸ್ಥಾನದ ಶಿಖರದ ಕಡೆಗೆ ಬರತೊಡಗುತ್ತವೆ. ಅನಂತರ ಆ ಕಳಶದಲ್ಲಿ ಪ್ರವೇಶಿಸಿ ಕಳಶದ ನೇರವಾಗಿ ಕೆಳಗಿರುವ ಗರ್ಭದಲ್ಲಿನ ವಿಗ್ರಹದಲ್ಲಿ ಆಕರ್ಷಿತವಾಗಿ ಆ ವಿಗ್ರಹದಲ್ಲಿ ಘನೀಕೃತವಾಗಿ ಕಾರ್ಯನಿರತವಾಗುತ್ತವೆ. ಆದ್ದರಿಂದ ದೇವಸ್ಥಾನದ ವಿಗ್ರಹದ ಕಡೆಗೆ ಚೈತನ್ಯದ ಪ್ರವಾಹವು ಸತತವಾಗಿ ಬರುತ್ತಿದ್ದು ದೇವತೆಯ ವಿಗ್ರಹದಲ್ಲಿ ಸಂಬಂಧಿಸಿದ ದೇವತೆಯ ತತ್ತ್ವವು ಸತತವಾಗಿ ಕಾರ್ಯನಿರತವಾಗಿರುತ್ತದೆ. ಈ ರೀತಿ ದೇವತೆಯ ಮೂರ್ತಿಯ ಪ್ರಾಣಪ್ರತಿಷ್ಠಾಪನೆ ಮಾಡಿದ ನಂತರ ಆ ದೇವಸ್ಥಾನದ ಮೇಲೆ ಕಳಶವನ್ನು ಸ್ಥಾಪಿಸಿದ್ದರಿಂದ ಆ ದೇವಸ್ಥಾನದಲ್ಲಿನ ದೇವತೆಯ ಮೂರ್ತಿಯು ನಿರಂತರ ಜಾಗೃತವಾಗಿರುತ್ತದೆ. ‘ಇದನ್ನೇ ದೇವತೆ ಜಾಗೃತವಾಗಿರುವುದು’, ಎಂದು ಹೇಳುತ್ತಾರೆ.
೬ ಅ. ಮೇಲಿನ ಅಂಶದ ಬಗ್ಗೆ ಬೆರಳಚ್ಚು ಮಾಡುವಾಗ ಸಾಧಕಿಗೆ ಬಂದ ಅನುಭೂತಿ : ಮೂರ್ತಿಯ ಪ್ರಾಣಪ್ರತಿಷ್ಠಾಪನೆ ಮಾಡಿದ ನಂತರ ಅದರಲ್ಲಿ ಶ್ರೀ ಗಣೇಶನ ಸಗುಣ ತತ್ತ್ವವು ಕಾರ್ಯ ನಿರತವಾಗಿತ್ತು. ಯಾವಾಗ ಶ್ರೀ ಗಣೇಶನ ದೇವಸ್ಥಾನದ ಮೇಲೆ ಕಳಶವನ್ನು ಸ್ಥಾಪಿಸಲಾಯಿತೋ, ಆಗ ಶ್ರೀ ಗಣೇಶ ಲೋಕದಿಂದ ಪ್ರಕ್ಷೇಪಿಸುವ ನಿರ್ಗುಣ-ಸಗುಣ ಸ್ತರದಲ್ಲಿನ ಶ್ರೀ ಗಣೇಶನ ಲಹರಿಗಳು ಮೂರ್ತಿಯ ಕಡೆಗೆ ಹೆಚ್ಚು ಪ್ರಮಾಣದಲ್ಲಿ ಆಕರ್ಷಿತವಾಗಿರುವುದರಿಂದ ಶ್ರೀ ಮಾಂದಾರ ಗಣೇಶನ ನೂತನ ಮೂರ್ತಿಯು ಸಜೀವವಾಗಿ ಅದು ದಿವ್ಯ ತೇಜದಿಂದ ಹೊಳೆಯುತ್ತಿರುವುದು ಅರಿವಾಯಿತು. ಆಗ ‘ಶ್ರೀ ಮಾಂದಾರ ಗಣೇಶನು ಪ್ರಸನ್ನನಾಗಿ ನಗುತ್ತ ನನಗೆ ಆಶೀರ್ವಾದ ಮಾಡುತ್ತಿದ್ದಾನೆ’, ಎಂದು ಅನಿಸಿತು.’
ಹೊಸ ಮೂರ್ತಿಯ ಪ್ರತಿಷ್ಠಾಪನೆಯಲ್ಲಿ ವಿವಿಧ ಧಾರ್ಮಿಕ ವಿಧಿಗಳೊಂದಿಗೆ ದೇವತೆಯ ವಿಗ್ರಹವನ್ನು ಊರಲ್ಲಿ ಮೆರವಣಿಗೆ ಮಾಡುವುದರಿಂದ ದೇವತೆಯ ತತ್ತ್ವವು ಸಮಷ್ಟಿ ಸ್ತರದಲ್ಲಿ ಕಾರ್ಯನಿರತವಾಗುವುದು
ಯಾವಾಗ ಒಬ್ಬ ಭಕ್ತನಿಗೆ ದೇವತೆಯ ಮೂರ್ತಿಯ ಸಂಪರ್ಕವಾಗುತ್ತದೆಯೋ, ಆಗ ದೇವತೆಯ ತತ್ತ್ವವು ವ್ಯಷ್ಟಿ ಸ್ತರದಲ್ಲಿ ಕಾರ್ಯನಿರತವಾಗುತ್ತದೆ. ಯಾವಾಗ ಊರಲ್ಲಿ ದೇವತೆಯ ವಿಗ್ರಹದ ಮೆರವಣಿಗೆ ತೆಗೆಯಲಾಗು ತ್ತದೆಯೋ, ಆಗ ಅನೇಕ ಭಕ್ತರಿಗೆ ದೇವತೆಯ ದರ್ಶನವಾಗಿ ದೇವತೆಯ ತತ್ತ್ವವು ಸಮಷ್ಟಿ ಸ್ತರದಲ್ಲಿ ಕಾರ್ಯನಿರತವಾಗುತ್ತದೆ.
ಅ. ಮೇಲಿನ ಅಂಶದ ಬಗ್ಗೆ ಬೆರಳಚ್ಚು ಮಾಡುವಾಗ ಸಾಧಕಿಗೆ ಬಂದ ಅನುಭೂತಿ : ಊರಲ್ಲಿನ ಭಕ್ತರು ಶ್ರೀ ಗಣೇಶನ ಮನೋಹರ (ಸುಂದರ) ಮೂರ್ತಿಯ ದರ್ಶನವನ್ನು ಪಡೆದಿರುವುದರಿಂದ ಎಲ್ಲರ ಮನಸ್ಸಿನಲ್ಲಿ ಊರಲ್ಲಿ ಶ್ರೀ ಮಾಂದಾರ ಗಣೇಶನ ನೂತನ ಮೂರ್ತಿಯ ಪ್ರಾಣಪ್ರತಿಷ್ಠಾಪನೆಯಾಗಿ ಅದನ್ನು ಆದಷ್ಟು ಬೇಗ ಸ್ಥಾಪಿಸುವ ಒಂದೇ ವಿಚಾರವು ಪ್ರಬಲವಾಯಿತು. ಭಕ್ತರ ಮನಸ್ಸಿನಲ್ಲಿ ಶ್ರೀ ಗಣೇಶನ ಬಗ್ಗೆ ಭಾವಜಾಗೃತವಾಯಿತು. ಭಕ್ತರ ಈ ಸಮಷ್ಟಿ ಭಾವವನ್ನು ನೋಡಿ ಶ್ರೀ ಗಣೇಶನು ಭಕ್ತರ ಮೇಲೆ ಪ್ರಸನ್ನನಾದನು. ಆದ್ದರಿಂದ ಶ್ರೀ ಮಾಂದಾರ ಗಣೇಶನ ಮೂರ್ತಿಯಲ್ಲಿ ಪ್ರಾಣಪ್ರತಿಷ್ಠಾಪನೆ ಆಗುವ ಮೊದಲೇ ಶೇ. ೫ ರಷ್ಟು ಗಣೇಶತತ್ತ್ವ ಆಕರ್ಷಿತಗೊಂಡು ಕಾರ್ಯನಿರತವಾಯಿತು. ಇದರಿಂದ ‘ದೇವರ ಬಗ್ಗೆ ಭಕ್ತರ ಒಟ್ಟುಗೂಡಿದ ಭಾವವು ಯಾವಾಗ ಸಮಷ್ಟಿ ಭಾವದಲ್ಲಿ ರೂಪಾಂತರವಾಗುತ್ತದೆಯೋ, ಆಗ ದೇವತೆಯ ತತ್ತ್ವವು ಹೇಗೆ ಕಾರ್ಯನಿರತವಾಗುತ್ತದೆ !’, ಎಂದು ಅನುಭವಿಸಲು ಸಿಕ್ಕಿತು.
– ಸುಶ್ರೀ ಮಧುರಾ ಭೋಸಲೆ (ಆಧ್ಯಾತ್ಮಿಕ ಮಟ್ಟ ಶೇ. ೬೫), ಸನಾತನ ಆಶ್ರಮ, ರಾಮನಾಥಿ, ಗೋವಾ.
ರಾಜಮಾತಂಗಿ ಯಜ್ಞದಿಂದ ಗೋವಾದ ರಾಮನಾಥಿಯ ಸನಾತನದ ಆಶ್ರಮ ಪರಿಸರದಲ್ಲಿ ಅನುಭವವಾದ ಅಂಶಗಳು
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಹಣೆಯಲ್ಲಿ ಮೂಡಿದ ಕಮಲವು ಸ್ಪಷ್ಟವಾಗಿ ಕಾಣುವುದರ ಕಾರಣವೇನು !
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ‘ಇದಂ ನ ಮಮ |’ ಈ ಬರಹದ ಅಧ್ಯಾತ್ಮಶಾಸ್ತ್ರೀಯ ವಿಶ್ಲೇಷಣೆ !