
ಕಳೆದ ಕೆಲವು ವರ್ಷಗಳಲ್ಲಿ ಭಾರತದಲ್ಲಿ ಸ್ಮಾರ್ಟ್‌ಫೋನ್ ಮತ್ತು ಅಂತರ್ಜಾಲದ ಬಳಕೆ ಅಗಾಧ ವೇಗದಲ್ಲಿ ಹೆಚ್ಚಿದೆ. ಈ ಡಿಜಿಟಲ್ ಕ್ರಾಂತಿಯ ಜೊತೆಗೆ, ಆನ್‌ಲೈನ್ ಗೇಮಿಂಗ್, ವಿಶೇಷವಾಗಿ ‘ಫ್ಯಾಂಟಸಿ ಸ್ಪೋರ್ಟ್ಸ್’ ಮತ್ತು ‘ರಿಯಲ್ ಮನಿ ಗೇಮ್ಸ್’ನ ಜನಪ್ರಿಯತೆಯೂ ಹೆಚ್ಚಿದೆ. ೨೦೨೫ ರ ಹೊತ್ತಿಗೆ, ಭಾರತದಲ್ಲಿ ಸುಮಾರು ೬೦ ಕೋಟಿ ಜನರು ಮೊಬೈಲ್, ಕಂಪ್ಯೂಟರ್ ಅಥವಾ ‘ಕನ್ಸೋಲ್’ಗಳಲ್ಲಿ (ಉಪಕರಣಗಳ ಮೂಲಕ ಆಡುವ ಆಟ) ಗೇಮ್ಸಗಳನ್ನು ಆಡುತ್ತಿದ್ದಾರೆ. ಈ ಉದ್ಯಮದ ಮೌಲ್ಯ ಸುಮಾರು ೭೦ ಸಾವಿರ ಕೋಟಿ ರೂಪಾಯಿ ತಲುಪಿದೆ. ಇದು ಮನರಂಜನೆಯ ಸರಳ ಮಾರ್ಗವೆಂದು ಕಾಣಿಸುತ್ತಿದ್ದರೂ, ಆನ್‌ಲೈನ್ ಗೇಮಿಂಗ್‌ನ ಅತಿಯಾದ ಬಳಕೆಯು ಮಾನಸಿಕ, ದೈಹಿಕ, ಆರ್ಥಿಕ, ಸಾಮಾಜಿಕ ಮತ್ತು ಕಾನೂನು ಸಂಕಷ್ಟಗಳಿಗೆ ಆಹ್ವಾನ ನೀಡುತ್ತಿದೆ.

೧. ಮಾನಸಿಕ ಆರೋಗ್ಯದ ಮೇಲೆ ಗಂಭೀರ ಪರಿಣಾಮಗಳು
೨೦೧೮ ರಲ್ಲಿ ವಿಶ್ವ ಆರೋಗ್ಯ ಸಂಸ್ಥೆಯು ‘ಗೇಮಿಂಗ್ ಡಿಸಾರ್ಡರ್’, ಅಂದರೆ ಗೇಮಿಂಗ್ (ಆಟದ) ವ್ಯಸನವನ್ನು ಮಾನಸಿಕ ಕಾಯಿಲೆ ಎಂದು ಗುರುತಿಸಿದೆ. ಇದರರ್ಥ, ಕೆಲವರಿಗೆ ಗೇಮ್ಸಗಳ ಅಭ್ಯಾಸ ಎಷ್ಟು ಅತಿಯಾಗು ತ್ತದೆಯೆಂದರೆ ಅದು ಅವರ ವೈಯಕ್ತಿಕ, ಕೌಟುಂಬಿಕ ಮತ್ತು ವೃತ್ತಿಪರ ಜೀವನದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಭಾರತದ ‘ಏಮ್ಸ್’ (ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ) ಮತ್ತು ‘ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಮೆಂಟಲ್ ಹೆಲ್ತ್ ಎಂಡ್ ನ್ಯೂರೋ ಸೈನ್ಸ್’ ನಡೆಸಿದ ಅಧ್ಯಯನಗಳ ಪ್ರಕಾರ, ಶೇ. ೧೦ ರಿಂದ ೧೫ ರಷ್ಟು ಗೇಮರ್ಸಗಳು (ಆಟ ಆಡುವವರು) ಗಂಭೀರ ಸ್ವರೂಪದ ವ್ಯಸನಕ್ಕೆ ಬಲಿಯಾಗಿದ್ದಾರೆ. ೨೦೨೧ ರಿಂದ ೨೦೨೩ ರ ಅವಧಿಯಲ್ಲಿ, ಈ ರೀತಿಯ ವ್ಯಸನದಲ್ಲಿ ಶೇ. ೧೨೦ ರಷ್ಟು ಹೆಚ್ಚಳವಾಗಿದೆ. ಇದರಿಂದಾಗಿ ಚಿಂತೆ, ಖಿನ್ನತೆ, ಕಿರಿಕಿರಿ, ನಿದ್ರಾಹೀನತೆ, ಸಾಮಾಜಿಕ ಏಕಾಂಗಿತನದಂತಹ ಸಮಸ್ಯೆಗಳು ಹೆಚ್ಚುತ್ತವೆ ಮತ್ತು ಇದು ಅನೇಕ ಬಾರಿ ಆತ್ಮಹತ್ಯೆಯಂತಹ ತೀವ್ರ ನಿರ್ಧಾರಗಳಿಗೆ ಕಾರಣವಾಗಬಹುದು.
೨. ಹೆಚ್ಚುತ್ತಿರುವ ಸಾವು ಮತ್ತು ಆತ್ಮಹತ್ಯೆಗಳು
ಕಳೆದ ಮೂರು ವರ್ಷಗಳಲ್ಲಿ, ದೇಶಾದ್ಯಂತ ಆನ್‌ಲೈನ್ ಗೇಮಿಂಗ್ ಅಥವಾ ‘ಫ್ಯಾಂಟಸಿ ಸ್ಪೋರ್ಟ್ಸ್ ಬೆಟ್ಟಿಂಗ್’ (ಆನ್‌ಲೈನ್ ಆಟದ ಪ್ರಕಾರಗಳಲ್ಲಿ ಬೆಟ್ಟಿಂಗ್ ಒಂದು ಆಟ) ಕಾರಣದಿಂದ ನೇರವಾಗಿ ಅಥವಾ ಪರೋಕ್ಷವಾಗಿ ೩೦೦ ಕ್ಕೂ ಹೆಚ್ಚು ಆತ್ಮಹತ್ಯೆ ಪ್ರಕರಣಗಳು ನಡೆದಿವೆ. ಈ ಅನೇಕ ಪ್ರಕರಣಗಳಲ್ಲಿ, ದೊಡ್ಡ ಆರ್ಥಿಕ ನಷ್ಟ ಮತ್ತು ಕೌಟುಂಬಿಕ ಒತ್ತಡಗಳು ಪ್ರಮುಖ ಕಾರಣಗಳಾಗಿದ್ದವು.
೨ ಅ. ಕೆಲವು ಆಘಾತಕಾರಿ ಉದಾಹರಣೆಗಳು
೨ ಅ ೧. ಮಹಾರಾಷ್ಟ್ರ : ಮುಂಬಯಿನಲ್ಲಿರುವ ಬಿ.ಸಿ.ಸಿ.ಐ. ಕಚೇರಿಯ ಭದ್ರತಾ ಸಿಬ್ಬಂದಿಯೊಬ್ಬರು ‘ಆನ್‌ಲೈನ್ ಬೆಟ್ಟಿಂಗ್’ ವ್ಯಸನದಿಂದ ಸಾಲದಲ್ಲಿ ಮುಳುಗಿ ‘ಐ.ಪಿ.ಎಲ್’ ಜರ್ಸಿ ಕದ್ದಿದ್ದಾರೆ. ಮಹಾರಾಷ್ಟ್ರ ಸೈಬರ್ ಪೊಲೀಸರ ಪ್ರಕಾರ, ೨೦೨೪ ರಲ್ಲಿ ಇಂತಹ ಅನೇಕ ಆರ್ಥಿಕ ವಂಚನೆಯ ಪ್ರಕರಣಗಳು ದಾಖಲಾಗಿವೆ.
೨ ಅ ೨. ತೆಲಂಗಾಣಾ : ಒಂದು ತಿಂಗಳಿನಲ್ಲಿ ಸಂಭವಿಸಿದ ಏಳು ಸಾವುಗಳಲ್ಲಿ, ಆರು ಆತ್ಮಹತ್ಯೆ ಮತ್ತು ಒಂದು ಕೊಲೆ ಆನ್‌ಲೈನ್ ಬೆಟ್ಟಿಂಗ್‌ಕ್ಕೆ ಸಂಬಂಧಿಸಿವೆ ಎಂದು ದಾಖಲಿಸಲಾಗಿದೆ. ಭಾಗ್ಯನಗರ ದಲ್ಲಿ ‘ಎಂ.ಟೆಕ್.’ ಓದುತ್ತಿದ್ದ ವಿದ್ಯಾರ್ಥಿಯೊಬ್ಬ ‘ಐ.ಪಿ.ಎಲ್.’ ಸೀಜನ್‌ನಲ್ಲಿ ೨ ಕೋಟಿ ೬೫ ಲಕ್ಷ ರೂಪಾಯಿ ಕಳೆದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
೨ ಅ ೩. ರಾಜಸ್ಥಾನ : ಕೋಟಾದ ಒಬ್ಬ ದಂಪತಿ ‘ಫ್ಯಾಂಟಸಿ ಸ್ಪೋರ್ಟ್ಸ್’ನಲ್ಲಿ ಲಕ್ಷಾಂತರ ರೂಪಾಯಿ ಕಳೆದು ಆತ್ಮಹತ್ಯೆಗೈದಿದ್ದಾರೆ.
೨ ಅ ೪. ತಮಿಳುನಾಡು : ಕಳೆದ ಮೂರು ವರ್ಷಗಳಲ್ಲಿ, ‘ಆನ್‌ಲೈನ್ ಗೇಮಿಂಗ್’ ಮತ್ತು ‘ಫ್ಯಾಂಟಸಿ ಸ್ಪೋರ್ಟ್ಸ್’ ಕಾರಣದಿಂದ ೨೫ ಕ್ಕೂ ಹೆಚ್ಚು ಯುವಕರು ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ.
೩. ದೈಹಿಕ ಆರೋಗ್ಯದ ಮೇಲೆ ಪರಿಣಾಮ
ನಿರಂತರವಾಗಿ ಪರದೆಯ ಮುಂದೆ ಕುಳಿತು ಆಟ ಆಡುವುದರಿಂದ ಕಣ್ಣುಗಳು ಮತ್ತು ಮೆದುಳಿಗೆ ಮಾತ್ರವಲ್ಲ, ದೇಹಕ್ಕೂ ಗಂಭೀರ ತೊಂದರೆಗಳಾಗಿ ಮಂಜುಗಣ್ಣು, ಆಯಾಸ, ತಲೆನೋವು, ಬೆನ್ನುನೋವು ಮತ್ತು ನಿದ್ರೆಯ ಸಮಸ್ಯೆಗಳಾಗುತ್ತವೆ. ದೀರ್ಘಕಾಲ ಕುಳಿತುಕೊಳ್ಳುವುದರಿಂದ ಬೊಜ್ಜು ಹೆಚ್ಚುತ್ತದೆ, ಮಧುಮೇಹ ಮತ್ತು ಹೃದಯರೋಗಗಳ ಅಪಾಯ ಹೆಚ್ಚುತ್ತದೆ, ಇದು ೨೦೨೨ ರ ‘ಏಮ್ಸ್’ ವರದಿಯಿಂದ ಸ್ಪಷ್ಟವಾಗಿದೆ.
೪. ಶಿಕ್ಷಣ ಮತ್ತು ಸಾಮಾಜಿಕ ಜೀವನದ ಮೇಲೆ ಪರಿಣಾಮ
‘ಸೇವ್ ದಿ ಚಿಲ್ಡ್ರನ್’ನ ೨೦೨೪ ರ ವರದಿಯ ಪ್ರಕಾರ, ಶೇ. ೮೦ ರಷ್ಟು ವಿದ್ಯಾರ್ಥಿಗಳು ಗೇಮ್ಸ ಆಡುವ ದಿನದಂದು ಶಾಲೆಯ ಗೃಹಪಾಠ (ಹೋಮ್‌ವರ್ಕ್) ಅಥವಾ ಅಧ್ಯಯನವನ್ನು ತಪ್ಪಿಸುತ್ತಾರೆ. ಶೇ. ೬೫ ರಷ್ಟು ಪೋಷಕರು ಗೇಮಿಂಗ್‌ನಿಂದ ಮಕ್ಕಳ ನಡವಳಿಕೆ ಬದಲಾಗಿದೆ, ಸಂವಹನ ಕಡಿಮೆಯಾಗಿದೆ ಮತ್ತು ಸ್ನೇಹಿತರ ಅಭ್ಯಾಸಗಳು ಬದಲಾಗಿವೆ ಎಂದಿದ್ದಾರೆ. ಕೆಲವು ಯುವಕರು ವರ್ಚುವಲ್ (ಅಭಾಸ) ಜಗತ್ತಿನಲ್ಲಿ) ಎಷ್ಟು ಮುಳುಗುತ್ತಾರೆಂದರೆ, ಅವರ ನಿಜವಾದ ಸಾಮಾಜಿಕ ಸಂಬಂಧಗಳು ಕಡಿದುಹೋಗುತ್ತವೆ.
೫. ಆರ್ಥಿಕ ಸಂಕಷ್ಟ ಮತ್ತು ಅಪರಾಧಗಳು
ಸರಾಸರಿ ಭಾರತೀಯ ಯುವಜನತೆ ಪ್ರತಿ ತಿಂಗಳು ೫೦೦ ರಿಂದ ೫ ಸಾವಿರ ರೂಪಾಯಿಗಳನ್ನು ಆನ್‌ಲೈನ್ ಗೇಮಿಂಗಕ್ಕೆ ವ್ಯಯಿಸುತ್ತಾರೆ. ‘ಐ.ಪಿ.ಎಲ್.’ನ ಸಮಯದÀಲ್ಲಿ, ‘ಫ್ಯಾಂಟಸಿ ಸ್ಪೋರ್ಟ್ಸ್’ನಲ್ಲಿ ೩೭ ಕೋಟಿ ಜನರು ಭಾಗವಹಿಸುತ್ತಾರೆ, ಇದರಲ್ಲಾಗುವ ದೊಡ್ಡ ನಷ್ಟಗಳಿಂದ ಕೆಲವರು ಕಳ್ಳತನ, ವಂಚನೆ ಅಥವಾ ಹಿಂಸಾತ್ಮಕ ಅಪರಾಧಗಳತ್ತ ಹೊರಳುತ್ತಾರೆ. ಹೆಚ್ಚಿನ ರಾಜ್ಯಗಳಲ್ಲಿ ಸೈಬರ್ ಪೊಲೀಸರು ಇಂತಹ ಅನೇಕ ಅಪರಾಧಗಳನ್ನು ಪತ್ತೆಹಚ್ಚಿದ್ದಾರೆ.
೬. ಸರಕಾರದ ಅಡಚಣೆಗಳು ಮತ್ತು ೨೦೨೫ ರ ಹೊಸ ನಿಯಮಗಳು
ಈ ಆಟಗಳು ‘ಕೌಶಲ್ಯ’ ಆಧಾರಿತವೇ ಅಥವಾ ‘ಜೂಜಾಟ’ವೋ ಎಂಬುದು ಒಂದು ದೊಡ್ಡ ಪ್ರಶ್ನೆಯಾಗಿದೆ. ಜೂಜಾಟದ ಕಾನೂನುಗಳು ರಾಜ್ಯಗಳ ವ್ಯಾಪ್ತಿಯಲ್ಲಿರುವುದರಿಂದ, ಕೇಂದ್ರ ಸರಕಾರಕ್ಕೆ ದೇಶಾದ್ಯಂತ ಏಕರೂಪದ ನಿಷೇಧವನ್ನು ಜಾರಿ ಗೊಳಿಸುವುದು ಕಷ್ಟಕರವಾಗಿದೆ. ‘ಗೇಮಿಂಗ್ ಸರ್ವರ್‌ಗಳು’ (ಆಟದ ಮುಖ್ಯ ಗಣಕಯಂತ್ರ) ವಿದೇಶಗಳಲ್ಲಿರುವುದು, ‘ವಿ.ಪಿ.ಎನ್.’ ಬಳಕೆ ಮತ್ತು ಗೇಮಿಂಗ್ ಉದ್ಯಮದಿಂದ ಬರುವ ಆದಾಯ (ಶೇ. ೨೮ ಸರಕು ಮತ್ತು ಸೇವಾ ತೆರಿಗೆ, ಶೇ. ೩೦ ಆದಾಯ ತೆರಿಗೆ) ಇವು ಸರಕಾರಕ್ಕೆ ರಾಜಕೀಯ ಮತ್ತು ಆರ್ಥಿಕ ಅಡೆತಡೆಗಳಾಗಿವೆ. ಆದರೂ, ಮಾಹಿತಿ ತಂತ್ರಜ್ಞಾನ ಸಚಿವಾಲಯವು ಎಲ್ಲಾ ಗೇಮಿಂಗ್ ಕಂಪನಿಗಳನ್ನು ಗುರುತಿಸಿ ಅದನ್ನು ಪತ್ತೆ ಹಚ್ಚುವ ಪ್ರಕ್ರಿಯೆ, ಸ್ವಯಂನಿಯಂತ್ರಣ ಮಂಡಳಿಯ ನೋಂದಣಿ, ಠೇವಣಿ ಖಾತೆ ಮತ್ತು ವ್ಯಸನದ ಬಗ್ಗೆ ಎಚ್ಚರಿಕೆಗಳನ್ನು ಕಡ್ಡಾಯಗೊಳಿಸಿದೆ.
೭. ರಾಷ್ಟ್ರೀಯ ‘ಎ.ವಿ.ಜಿ.ಸಿ.-ಎಕ್ಸ್.ಆರ್.’ ನೀತಿಯ ಅಗತ್ಯತೆ ಮತ್ತು ಸರ್ವೋಚ್ಚ ನ್ಯಾಯಾಲಯದ ಪಾತ್ರ
‘ಆನ್‌ಲೈನ್ ಗೇಮಿಂಗ್’ ಮತ್ತು ‘ಫ್ಯಾಂಟಸಿ ಸ್ಪೋರ್ಟ್ಸ್’ಗಳನ್ನು ನಿಯಂತ್ರಿಸಲು ‘ರಾಷ್ಟ್ರೀಯ ಎ.ವಿ.ಜಿ.ಸಿ.-ಎಕ್ಸ್.ಆರ್.’ (ಎನಿಮೇಷನ್, ವಿಜುವಲ್ ಎಫೆಕ್ಟ್ಸ್, ಗೇಮಿಂಗ್ ಮತ್ತು ಕಾಮಿಕ್ಸ್ – ಎಕ್ಸಟೆಂಡೆಡ್ ರಿಯಾಲಿಟಿ) ನೀತಿ ಅತ್ಯಂತ ಮಹತ್ವದ್ದಾಗಿದೆ. ಈ ನೀತಿಯು ಉದ್ಯಮಕ್ಕೆ ಉತ್ತೇಜನ ನೀಡುವುದಕ್ಕೆ ಮಾತ್ರವಲ್ಲ, ಗೇಮಿಂಗ್‌ನ ಸ್ಪಷ್ಟ ವರ್ಗೀಕರಣ, ಅಪ್ರಾಪ್ತ ಮಕ್ಕಳ ರಕ್ಷಣೆ, ಜಾಹೀರಾತುಗಳ ನಿಯಂತ್ರಣ ಮತ್ತು ಕಂಪನಿಗಳ ಸಾಮಾಜಿಕ ಜವಾಬ್ದಾರಿಯನ್ನು ಖಚಿತಪಡಿಸಿಕೊಳ್ಳಲು ಅವಶ್ಯಕವಾಗಿದೆ. ರಾಜ್ಯಗಳ ಸೀಮಿತ ಕಾನೂನುಗಳಿಂದ ಉಂಟಾಗುವ ತೊಂದರೆಗಳನ್ನು ಗಮನದಲ್ಲಿಟ್ಟು ನ್ಯಾಯಾಲಯವು ಕೇಂದ್ರ ಸರಕಾರಕ್ಕೆ ವ್ಯಾಪಕ, ಕೇಂದ್ರೀಕೃತ ಮತ್ತು ಸುಸಂಗತ ನಿಯಮಾವಳಿಯನ್ನು ಸಿದ್ಧಪಡಿಸಲು ನಿರ್ದೇಶಿಸಿದೆ. ಆಗ ದೇಶಾದ್ಯಂತ ಏಕರೂಪದ ಕಾನೂನು ತರಲು ಸಾಧ್ಯವಾಗುತ್ತದೆ.
೮. ಫಲಿತಾಂಶ
‘ಆನ್‌ಲೈನ್ ಗೇಮಿಂಗ್’, ವಿಶೇಷವಾಗಿ ‘ಫ್ಯಾಂಟಸಿ ಸ್ಪೋರ್ಟ್ಸ್’É ಮನೋರಂಜನೆಯನ್ನು ನೀಡುತ್ತದೆ; ಆದರೆ ಅತಿರೇಕವು ಮಾನಸಿಕ, ದೈಹಿಕ, ಆರ್ಥಿಕ ಮತ್ತು ಸಾಮಾಜಿಕ ಬಿಕ್ಕಟ್ಟುಗಳನ್ನು ಸೃಷ್ಟಿಸುತ್ತದೆ. ಸಾವು, ಆತ್ಮಹತ್ಯೆ, ಕಳ್ಳತನ, ವಂಚನೆ, ಕೊಲೆಯಂತಹ ಅಪರಾಧ ಗಳು ಈಗ ಈ ವ್ಯಸನದ ವಾಸ್ತವವಾಗಿವೆ. ಆದಾಯ ಮತ್ತು ಉದ್ಯಮವು ಮುಖ್ಯವಾಗಿದ್ದರೂ, ಮಾನವ ಜೀವನ ಮತ್ತು ಸಾಮಾಜಿಕ ಆರೋಗ್ಯಕ್ಕಿಂತ ಹೆಚ್ಚು ಮುಖ್ಯವಾದದ್ದು ಇನ್ನೊಂದಿಲ್ಲ. ‘ಜೀವ ಉಳಿಸಿ, ಆದಾಯ ನಂತರವೂ ಸಿಗುತ್ತದೆ !’ ಈ ಸಂದೇಶ ಕೇವಲ ಸರಕಾರಕ್ಕೆ ಮಾತ್ರವಲ್ಲ, ಪ್ರತಿಯೊಬ್ಬ ಪೋಷಕರು, ಶಿಕ್ಷಕರು ಮತ್ತು ನಾಗರಿಕರಿಗೂ ಆಗಿದೆ. – ಶ್ರೀ. ಅಭಿಷೇಕ ಮುರಕಟೆ, ಸಂಯೋಜಕರು, ಸುರಾಜ್ಯ ಅಭಿಯಾನ. (೮.೮.೨೦೨೫)
‘ಆನ್ಲೈನ್ ಮನಿ ಗೇಮಿಂಗ್’ ನಿಯಂತ್ರಣ ವಿಧೇಯಕಕ್ಕೆ ಕೇಂದ್ರ ಸಚಿವ ಸಂಪುಟ ಸಮ್ಮತಿ !‘ಸುರಾಜ್ಯ ಅಭಿಯಾನ’ ದಿಂದ ವಿವಿಧ ರಾಜ್ಯದ ಮುಖ್ಯಮಂತ್ರಿಗಳಿಗೆ ಆಗ್ರಹ !ನವದೆಹಲಿ – ಆನ್ಲೈನ್ ಗೇಮಿಂಗ್ ಅನ್ನು ನಿಯಂತ್ರಿಸುವ ಒಂದು ವಿಧೇಯಕಕ್ಕೆ ಕೇಂದ್ರ ಸಚಿವ ಸಂಪುಟ ಅನುಮತಿ ನೀಡಿದೆ. ಆನ್ಲೈನ್ ಗೇಮಿಂಗ್ ವೇದಿಕೆಗಳನ್ನು ಕಾನೂನಿನ ಪರಿಧಿಗೆ ತರುವುದು ಮತ್ತು ‘ಡಿಜಿಟಲ್ ಆಪ್ಸ್’ ಮೂಲಕ ಜೂಜಾಡುವವರಿಗೆ ದಂಡ ವಿಧಿಸುವ ವ್ಯವಸ್ಥೆ ಮಾಡುವುದು ಈ ವಿಧೇಯಕದ ಉದ್ದೇಶವಾಗಿದೆ. ಪ್ರಸ್ತಾವಿತ ಕಾನೂನಿನಲ್ಲಿ ವಂಚನೆ ಮತ್ತು ರಾಜ್ಯದ ಕಾನೂನುಗಳÀ ವಿರೋಧಾಭಾಸದ ಬಗ್ಗೆ ಚಿಂತೆ ವ್ಯಕ್ತಪಡಿಸಲಾಗಿದ್ದು ದಂಡ ಮತ್ತು ಶಿಕ್ಷಾ ವ್ಯವಸ್ಥೆ ಮಾಡಲಾಗಿದೆ. ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಇವುಗಳಿಗೆ ಆನ್ಲೈನ್ ಗೇಮಿಂಗ್ ಗಾಗಿ ಕೇಂದ್ರ ನಿಯಂತ್ರಕರೆಂದು ನೇಮಿಸಬಹುದು. ಭಾರತೀಯ ನ್ಯಾಯ ಸಂಹಿತೆಯ ಪ್ರಕಾರ ಅನಧಿಕೃತ ಜೂಜಿಗಾಗಿ ದಂಡ ಮತ್ತು ೭ ವರ್ಷದ ಶಿಕ್ಷೆಯ ವ್ಯವಸ್ಥೆ ಇದೆ. ಹಿಂದೂ ಜನಜಾಗೃತಿ ಸಮಿತಿಯ ಉಪಕ್ರಮ ಆಗಿರುವ ‘ಸುರಾಜ್ಯ ಅಭಿಯಾನ’ ದಿಂದ ಕೇಂದ್ರ ಮತ್ತು ರಾಜ್ಯ ಸರಕಾರಕ್ಕೆ ಮನವಿ ನೀಡಿ ಈ ರೀತಿಯ ಕಾನೂನಿನ ವ್ಯವಸ್ಥೆಗೆ ಆಗ್ರಹಿಸಲಾಗಿತ್ತು. ಸುರಾಜ್ಯ ಅಭಿಯಾನದ ವತಿಯಿಂದ ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಈ ಸಂದರ್ಭದಲ್ಲಿ ಇದೇ ತಿಂಗಳಲ್ಲಿ ಮನವಿಗಳನ್ನು ಕೂಡ ನೀಡಲಾಗಿತ್ತು. |
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭಗವಾನ್ ಶಿವನ ರೂಪದಲ್ಲಿ ತೋರಿಸಿದ ‘ವಿಶ್ವವಾಣಿ’ ಪತ್ರಿಕೆ !
ನಾಗಪುರ: ಮಾನಸಿಕ ಒತ್ತಡದಿಂದಾಗಿ ‘ನೀಟ್’ ಪರೀಕ್ಷೆಯ ವಿದ್ಯಾರ್ಥಿನಿ ಆತ್ಮಹತ್ಯೆ
ಅಂಬರನಾಥದಲ್ಲಿ ಕಸದ ರಾಶಿಯಲ್ಲಿ ಗೋವಂಶದ ಅವಶೇಷಗಳು ಪತ್ತೆ!
|| ಶ್ರೀ ರಾಜಮಾತಂಗಿ ಮಹಾಯಾಗ ||
ಶ್ರೀ ಸೋಮನಾಥ ದೇವಸ್ಥಾನದ ಶಿಖರದ ಮೇಲೆ ಶ್ರೀಚಿತ್ಶಕ್ತಿ (ಸೌ.) ಅಂಜಲಿ ಗಾಡಗೀಳರವರು ಪೂಜಿಸಿದ ಧರ್ಮಧ್ವಜದ ಆರೋಹಣ !
ಮಹಾಕವಿ ಕಾಳಿದಾಸರು ಮಾಡಿರುವ ರಾಜಮಾತಂಗೀ ದೇವಿಯ ವರ್ಣನೆ