
ನವದೆಹಲಿ: ಯು-ಡೈಸ್ ಪ್ಲಸ್ (U-DISE+) ವರದಿಯ ಪ್ರಕಾರ, 2025-26 ರ ಸಾಲಿನಲ್ಲಿ ದೇಶದಲ್ಲಿ ಒಟ್ಟು 4 ಸಾವಿರದ 791 ಶಾಲೆಗಳು ಮುಚ್ಚಲ್ಪಟ್ಟಿವೆ. ಅಂದರೆ ಪ್ರತಿದಿನ ಸರಾಸರಿ 13 ಶಾಲೆಗಳು ಮುಚ್ಚುತ್ತಿವೆ ಎಂದರ್ಥ. ಇವುಗಳಲ್ಲಿ 2 ಸಾವಿರದ 426 ಶಾಲೆಗಳು ಕೇವಲ ಮಧ್ಯಪ್ರದೇಶದಲ್ಲೇ ಮುಚ್ಚಲ್ಪಟ್ಟಿದ್ದು, ಅದರ ನಂತರದ ಸ್ಥಾನದಲ್ಲಿ ತೆಲಂಗಾಣ ಇದೆ. ತೆಲಂಗಾಣದಲ್ಲಿ 1 ಸಾವಿರದ 392 ಶಾಲೆಗಳು ಮುಚ್ಚಿವೆ. ಆ ನಂತರದ ಸ್ಥಾನಗಳಲ್ಲಿ ಬಂಗಾಳದಲ್ಲಿ 568 ಶಾಲೆಗಳು, ಆಂಧ್ರಪ್ರದೇಶದಲ್ಲಿ 474, ತಮಿಳುನಾಡಿನಲ್ಲಿ 369, ಕರ್ನಾಟಕದಲ್ಲಿ 281 ಮತ್ತು ಹಿಮಾಚಲ ಪ್ರದೇಶದಲ್ಲಿ 266 ಶಾಲೆಗಳು ಮುಚ್ಚಿವೆ.
UDISE+ Report: India is seeing an average of 13 schools shut down every day.
A matter of shame for the Government. It must examine whether this is due to flaws in the education system or other underlying causes and place the facts before the public.#Academics #EducationSystem… pic.twitter.com/XWFb1swHdC
— Sanatan Prabhat (@SanatanPrabhat) July 11, 2026
5 ಸಾವಿರದ 663 ಶಾಲೆಗಳಲ್ಲಿ ವಿದ್ಯಾರ್ಥಿಗಳೇ ಇಲ್ಲ; ಆದರೆ 20 ಸಾವಿರದ 667 ಶಿಕ್ಷಕರಿದ್ದಾರೆ!
ದೇಶದಲ್ಲಿ ಶೂನ್ಯ ದಾಖಲಾತಿ ಹೊಂದಿರುವ, ಅಂದರೆ ವಿದ್ಯಾರ್ಥಿಗಳೇ ಇಲ್ಲದ ಶಾಲೆಗಳ ಸಂಖ್ಯೆಯಲ್ಲಿ ಇದೇ ಮೊದಲ ಬಾರಿಗೆ ಕುಸಿತ ದಾಖಲಾಗಿದೆ. ಶೂನ್ಯ ದಾಖಲಾತಿ ಹೊಂದಿರುವ ಶಾಲೆಗಳ ಸಂಖ್ಯೆ ಕಳೆದ ಒಂದು ವರ್ಷದಲ್ಲಿ 7 ಸಾವಿರದ 993 ರಿಂದ 5 ಸಾವಿರದ 663 ಕ್ಕೆ ಇಳಿಕೆಯಾಗಿದೆ. ಆದರೆ ಈ ಶಾಲೆಗಳಲ್ಲಿ 20 ಸಾವಿರದ 667 ಶಿಕ್ಷಕರು ಇನ್ನೂ ಕಾರ್ಯನಿರ್ವಹಿಸುತ್ತಿದ್ದಾರೆ. ಬಂಗಾಳದಲ್ಲಿ ಕಳೆದ ವರ್ಷ ಶೂನ್ಯ ದಾಖಲಾತಿ ಹೊಂದಿರುವ ಶಾಲೆಗಳ ಸಂಖ್ಯೆಯಲ್ಲಿ 321 ಶಾಲೆಗಳ ಹೆಚ್ಚಳ ದಾಖಲಾಗಿದೆ. ಈ ಶಾಲೆಗಳಲ್ಲಿ 1 ಸಾವಿರದ 573 ಶಿಕ್ಷಕರೂ ಇದ್ದರು. ಆದರೆ ಈ ಶಿಕ್ಷಕರ ಮುಂದೆ ಕಲಿಯಲು ವಿದ್ಯಾರ್ಥಿಗಳೇ ಇರಲಿಲ್ಲ. ಬಂಗಾಳದ 4 ಸಾವಿರದ 133 ಶಾಲೆಗಳಲ್ಲಿ 19 ಸಾವಿರದ 502 ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದು, ಅವರ ಮುಂದೆ ಪಾಠ ಕೇಳಲು ಒಬ್ಬನೇ ಒಬ್ಬ ವಿದ್ಯಾರ್ಥಿಯೂ ಇಲ್ಲ.
ಹೆಣ್ಣುಮಕ್ಕಳ ದಾಖಲಾತಿಯಲ್ಲಿ ಶೇಕಡಾ 42.2 ರಷ್ಟು ಹೆಚ್ಚಳ!
ಅಖಿಲ ಭಾರತ ಉನ್ನತ ಶಿಕ್ಷಣ ಸಮೀಕ್ಷೆ ವರದಿಯ ಪ್ರಕಾರ, ಉನ್ನತ ಶಿಕ್ಷಣದಲ್ಲಿ ಹೆಣ್ಣುಮಕ್ಕಳ ಭಾಗವಹಿಸುವಿಕೆ ಹೆಚ್ಚುತ್ತಿದೆ. ಕಳೆದ 10 ವರ್ಷಗಳಲ್ಲಿ ಹೆಣ್ಣುಮಕ್ಕಳ ದಾಖಲಾತಿಯಲ್ಲಿ ಶೇಕಡಾ 42.2 ರಷ್ಟು ಹೆಚ್ಚಳವಾಗಿದ್ದು, ಉನ್ನತ ಶಿಕ್ಷಣದಲ್ಲಿ ಹೆಣ್ಣುಮಕ್ಕಳ ಪ್ರಮಾಣವು ಈಗ ಗಂಡುಮಕ್ಕಳಿಗಿಂತ ಹೆಚ್ಚಾಗಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
ಸಮಾಜವಾದಿ ಪಕ್ಷದ ಅಧಿಕಾರಾವಧಿಯಲ್ಲಿ ‘ವಕ್ಫ್ ಮಂಡಳಿ’ಯ ಶತಕೋಟಿ ರೂಪಾಯಿಗಳ ಹಗರಣ! – ಮೌಲಾನಾ ಶಹಾಬುದ್ದೀನ ರಿಜ್ವಿ ಬರೇಲವಿ
“ನಾನು ಛತ್ರಪತಿ ಶಿವಾಜಿ ಮಹಾರಾಜರ ಅನುಯಾಯಿಯಾಗಿದ್ದು ರಣರಂಗ ಬಿಟ್ಟು ಓಡಿಹೋಗುವವನಲ್ಲ!”
ಭೋಜಶಾಲೆಯ ಪ್ರಕರಣದಲ್ಲಿ ಮಧ್ಯಪ್ರದೇಶ ಉಚ್ಚ ನ್ಯಾಯಾಲಯದ ತೀರ್ಪಿಗೆ ತಡೆ ನೀಡಲು ಸರ್ವೋಚ್ಚ ನ್ಯಾಯಾಲಯದ ನಿರಾಕರಣೆ
ಮೇವು ಹಗರಣ ಪ್ರಕರಣದಲ್ಲಿ ಲಾಲು ಪ್ರಸಾದ್ ಯಾದವ್ ಅವರಿಗೆ ಮಂಜೂರಾದ ಜಾಮೀನು ರದ್ದುಗೊಳಿಸಲು ಸುಪ್ರೀಂ ಕೋರ್ಟ್ ನ ನಿರಾಕರಣೆ
ಭಗವಾನ್ ಜಗನ್ನಾಥರ ರಥಯಾತ್ರೆಗೂ ಮುನ್ನ ಗುಜರಾತ್ನಲ್ಲಿ ೫ ಭಯೋತ್ಪಾದಕರ ಬಂಧನ
ನ್ಯಾಯಾಧೀಶರ ಕುರ್ಚಿಯ ಮೇಲೆ ಮಾಟಮಂತ್ರ ಮಾಡಿದ ಆರೋಪದಡಿ ಮಹಿಳೆಯ ಬಂಧನ