ಮಹಾರಾಷ್ಟ್ರ ಮಾಲಿನ್ಯ ನಿಯಂತ್ರಣ ಮಂಡಳಿಯ ಹಿಂದೂ ವಿರೋಧಿ ಮತ್ತು ಪಕ್ಷಪಾತದ ವರ್ತನೆ

– ಶ್ರೀ ಪ್ರೀತಂ ನಾಚಣಕರ್, ಸನಾತನ ಪ್ರಭಾತ ಪ್ರತಿನಿಧಿ, ಮುಂಬಯಿ
ಮುಂಬಯಿ, ೨೭ ಆಗಸ್ಟ್ (ಸುದ್ದಿ) – ಮಹಾರಾಷ್ಟ್ರ ಮಾಲಿನ್ಯ ನಿಯಂತ್ರಣ ಮಂಡಳಿ ಇತ್ತೀಚೆಗೆ ನಡೆದ ವಿಧಾನಮಂಡಲದ ಮುಂಗಾರು ಅಧಿವೇಶನದಲ್ಲಿ ೨೦೨೩-೨೪ ರ ವಾರ್ಷಿಕ ವರದಿಯನ್ನು ಸಲ್ಲಿಸಿದೆ. ಮುಂಬಯಿನಲ್ಲಿ ಎಲ್ಲಿ ಮಾಲಿನ್ಯವಾಗಿದೆ ಎಂಬುದನ್ನೂ ಈ ವರದಿಯಲ್ಲಿ ನಮೂದಿಸಲಾಗಿದೆ. ಇದೇ ಅಧಿವೇಶನದಲ್ಲಿ ಮುಖ್ಯಮಂತ್ರಿ ದೇವೇಂದ್ರ ಫಡಣವಿಸ್ ಅವರು ಮುಂಬಯಿಯಲ್ಲಿ ಮಸೀದಿಗಳ ಮೇಲಿನ ೧ ಸಾವಿರದ ೧೪೯ ಅನಧಿಕೃತ ಧ್ವನಿವರ್ಧಕಗಳನ್ನು ತೆಗೆದುಹಾಕಲಾಗಿದೆ ಎಂದು ಮಾಹಿತಿ ನೀಡಿದ್ದಾರೆ. ಹಿಂದೂಗಳ ಹಬ್ಬಗಳಲ್ಲಿ ಸಂಭವಿಸುವ ಮಾಲಿನ್ಯದ ಬಗ್ಗೆ ವಾರ್ಷಿಕ ವರದಿಯಲ್ಲಿ ಪುಟಗಟ್ಟಲೆ ಖರ್ಚು ಮಾಡುವ ಮಾಲಿನ್ಯ ಮಂಡಳಿ, ಮುಂಬಯಿನಲ್ಲಿ ಇಷ್ಟು ದೊಡ್ಡ ಪ್ರಮಾಣದಲ್ಲಿರುವ ಧ್ವನಿವರ್ಧಕಗಳು ಮತ್ತು ಅವುಗಳಿಂದ ಉಂಟಾಗುವ ಮಾಲಿನ್ಯದ ಬಗ್ಗೆ ಸಣ್ಣ ಉಲ್ಲೇಖವನ್ನೂ ವರದಿಯಲ್ಲಿ ಮಾಡಿಲ್ಲ. ಇದು ಮಾಲಿನ್ಯ ನಿಯಂತ್ರಣ ಮಂಡಳಿಯ ಪಕ್ಷಪಾತವನ್ನು ತೋರಿಸುತ್ತದೆ.
🚨 Hinduphobia in Maharashtra!
The Pollution Control Board stays silent on mosque loudspeakers blaring year-round, but comes down heavily on Ganeshotsav & Diwali!
✔️ Monitoring festivals is fine; but why only target Hindus?
👉 The Board must act with integrity, not religious… pic.twitter.com/Z5oHL1MCZQ
— Sanatan Prabhat (@SanatanPrabhat) August 28, 2025
೧. ಮುಖ್ಯಮಂತ್ರಿ ದೇವೇಂದ್ರ ಫಡಣವಿಸ್ ಅವರು ವಿಧಾನಸಭೆ ಅಧಿವೇಶನದಲ್ಲಿ ಮುಂಬಯಿಯ ೧ ಸಾವಿರದ ೬೦೮ ಅನಧಿಕೃತ ಧ್ವನಿವರ್ಧಕಗಳಲ್ಲಿ ೧ ಸಾವಿರದ ೧೪೯ ಧ್ವನಿವರ್ಧಕಗಳು, ಅಂದರೆ ಒಟ್ಟು ಶೇಕಡ ೭೨.೬೯ ರಷ್ಟು ಮಸೀದಿಗಳ ಮೇಲಿವೆ ಇದು ಹೇಳಿದ್ದು ಗಂಭೀರ ವಿಷಯವಾಗಿದೆ.
೨. ವಿಶೇಷವೆಂದರೆ, ವರ್ಷಪೂರ್ತಿ ಬಳಸುವ ಧ್ವನಿವರ್ಧಕಗಳಿಂದ ಉಂಟಾಗುವ ಮಾಲಿನ್ಯದ ಬಗ್ಗೆ ಮಾಲಿನ್ಯ ನಿಯಂತ್ರಣ ಮಂಡಳಿ ವಾರ್ಷಿಕ ವರದಿಯಲ್ಲಿ ಮಾಹಿತಿ ನೀಡಿಲ್ಲ; ಆದರೆ ವರ್ಷಕ್ಕೆ ಒಮ್ಮೆ ಬರುವ ಗಣೇಶೋತ್ಸವ ಮತ್ತು ದೀಪಾವಳಿ ಉತ್ಸವಗಳಲ್ಲಿ ಮುಂಬಯಿಯಲ್ಲಿ ಎಲ್ಲಿ ಮಾಲಿನ್ಯವಾಗಿದೆ ಎಂಬುದನ್ನು ನಮೂದಿಸಿದೆ.
೩. ೨೦೨೩-೨೪ ರ ವರದಿಯಲ್ಲಿ ಮಾತ್ರವಲ್ಲ, ಕಳೆದ ಹಲವು ವರ್ಷಗಳಿಂದ ‘ಗಣೇಶೋತ್ಸವ ಮತ್ತು ದೀಪಾವಳಿ ಉತ್ಸವದಲ್ಲಿ ಎಷ್ಟು ಮಾಲಿನ್ಯವಾಗುತ್ತದೆ’ ಎಂಬುದರ ಅಂಕಿಅಂಶಗಳನ್ನು ಮಾಲಿನ್ಯ ನಿಯಂತ್ರಣ ಮಂಡಳಿ ತಪ್ಪದೆ ನೀಡುತ್ತಿದೆ.
೪. ೨೦೨೩-೨೪ ರ ವರದಿಯ ಅಂಕಿಅಂಶಗಳ ಪ್ರಕಾರ, ರಾಜ್ಯದ ೨೭ ಮಹಾನಗರ ಪಾಲಿಕೆಗಳ ಪ್ರದೇಶಗಳಲ್ಲಿ ಗಣೇಶೋತ್ಸವದಲ್ಲಿ ೧೩೨ ಸ್ಥಳಗಳಲ್ಲಿ, ಮತ್ತು ದೀಪಾವಳಿಯಲ್ಲಿ ೧೫೮ ಸ್ಥಳಗಳಲ್ಲಿ ಧ್ವನಿ ಸಮೀಕ್ಷೆ ಮಾಡಿ ಅದನ್ನು ವಾರ್ಷಿಕ ವರದಿಯಲ್ಲಿ ನಮೂದಿಸಲಾಗಿದೆ ಎಂದು ಹೇಳಲಾಗಿದೆ.
೫. ಗಣೇಶೋತ್ಸವದಲ್ಲಿ ಶ್ರೀ ಗಣೇಶ ಮೂರ್ತಿ ವಿಸರ್ಜನೆ ಮೆರವಣಿಗೆಯ ವಿಜ್ರಂಭಣೆಯಿಂದ, ಮತ್ತು ದೀಪಾವಳಿಯಲ್ಲಿ ಪಟಾಕಿಗಳಿಂದ ಧ್ವನಿ ಮಾಲಿನ್ಯವಾಗಿದೆ ಎಂಬುದನ್ನೂ ಈ ವರದಿಯಲ್ಲಿ ನಮೂದಿಸಲಾಗಿದೆ. ಮಾಲಿನ್ಯ ನಿಯಂತ್ರಣ ಮಂಡಳಿ ನೀಡಿರುವ ಈ ಅಂಕಿಅಂಶಗಳು ವಾಸ್ತವಿಕವಾಗಿವೆ.
ಈ ರೀತಿಯ ಕ್ರಮ ಕೈಗೊಳ್ಳುವುದು ಮಾಲಿನ್ಯ ನಿಯಂತ್ರಣ ಮಂಡಳಿಯ ಕರ್ತವ್ಯದ ಒಂದು ಭಾಗವಾಗಿದೆ; ಆದರೆ ಈ ವಸ್ತುನಿಷ್ಠತೆ ಮತ್ತು ಕರ್ತವ್ಯನಿಷ್ಠೆಯನ್ನು ವರ್ಷದ ೩೬೫ ದಿನಗಳು ನಡೆಯುವ ಮಸೀದಿಗಳ ಮೇಲಿನ ಧ್ವನಿವರ್ಧಕಗಳ ಬಗ್ಗೆ ತೋರಿಸದೆ, ಕೇವಲ ಹಿಂದೂಗಳ ಹಬ್ಬಗಳ ಸಮಯದಲ್ಲಿ ಮಾತ್ರ ತೋರಿಸಲಾಗುತ್ತಿದೆ. ಮಹಾರಾಷ್ಟ್ರ ಮಾಲಿನ್ಯ ನಿಯಂತ್ರಣ ಮಂಡಳಿಯ ಈ ಪಕ್ಷಪಾತದ ಕ್ರಮದ ಬಗ್ಗೆ ಸರಕಾರ ಗಂಭೀರವಾಗಿ ಗಮನಹರಿಸಬೇಕು ಎಂದು ಸಾರ್ವಜನಿಕರು ಹೇಳುತ್ತಿದ್ದಾರೆ.
ಸಂಪಾದಕೀಯ ನಿಲುವುಅಂತಹ ಪರೀಕ್ಷೆಗಳನ್ನು ಮಾಡಿ ಹಬ್ಬಗಳು ಮತ್ತು ಉತ್ಸವಗಳ ಹೆಸರಿನಲ್ಲಿ ನಡೆಯುವ ದುಷ್ಕೃತ್ಯಗಳನ್ನು ತಡೆಯಬೇಕು. ಆದರೆ ಕೇವಲ ಹಿಂದೂಗಳ ಹಬ್ಬಗಳನ್ನು ಗುರಿಯಾಗಿಸಿ, ವರ್ಷವಿಡೀ ನಡೆಯುವ ಮಸೀದಿಗಳ ಮೇಲಿನ ಧ್ವನಿವರ್ಧಕಗಳನ್ನು ಕಡೆಗಣಿಸುವುದು ಯಾವ ನೀತಿ? ಮಾಲಿನ್ಯ ನಿಯಂತ್ರಣ ಮಂಡಳಿ ಪ್ರಾಮಾಣಿಕವಾಗಿ ಕ್ರಮ ಕೈಗೊಳ್ಳಬೇಕು, ಧರ್ಮವನ್ನು ನೋಡಿ ಅಲ್ಲ! |
ಕೊಲಕಾತಾ: ಟಿಎಂಸಿ ವಿದ್ಯಾರ್ಥಿ ಸಂಘಟನೆಯ ಕಚೇರಿಯಲ್ಲಿ ಭಾರಿ ನಗದು ಪತ್ತೆ
ಕೊಲಕಾತಾ: ತೃಣಮೂಲ ಕಾಂಗ್ರೆಸ್ನ ಮೇಯರ್ ಫಿರ್ಹಾದ್ ಹಕೀಮ್ ಅವರ ರಾಜೀನಾಮೆ
ಪಂಚಕುಲಾ (ಹರಿಯಾಣ): ಮೇಯರ್ ಕಚೇರಿ ಸೇರಿದಂತೆ ಹರಿಯಾಣ ಮತ್ತು ದೆಹಲಿಯ ದೇವಸ್ಥಾನಗಳನ್ನು ಬಾಂಬ್ನಿಂದ ಸ್ಫೋಟಿಸುವುದಾಗಿ ಬೆದರಿಕೆ
ಕೇರಳಮ್ದಲ್ಲಿ ‘ಇಸ್ಲಾಂ ಫ್ರೆಂಡ್ಲಿ’ ಜಿಮ್ ಕುರಿತು ವಿವಾದ
ಪುಣೆ ನಗರದಲ್ಲಿ ಮತ್ತೆ ‘ಕಾರ್ಪೊರೇಟ್ ಜಿಹಾದ್’ ಪ್ರಕರಣ
‘ದಾರುಲ್ ಉಲೂಮ್ ದೇವಬಂದ್’ ಭಯೋತ್ಪಾದಕರ ಕೇಂದ್ರವಾಗಿರುವುದರಿಂದ ಅದನ್ನು ನೆಲಸಮ ಮಾಡಿ ! – ಹಿಂದೂ ರಕ್ಷಾ ದಳದ ಬೇಡಿಕೆ