ಹಿಂದೂ ದೇವತೆಗಳ ಬಗ್ಗೆ ದ್ವೇಷ, ಮುಸ್ಲಿಂ ಬಾನು ಮುಷ್ತಾಕ್ ಅವರ ಇತಿಹಾಸ

ಬೆಂಗಳೂರು – ಈ ವರ್ಷ ಬುಕರ್ ಪ್ರಶಸ್ತಿ ವಿಜೇತೆ ಮತ್ತು ಲೇಖಕಿ ಬಾನು ಮುಷ್ತಾಕ್ ಅವರ ಹಸ್ತದಿಂದ ವಿಶ್ವವಿಖ್ಯಾತ ಮೈಸೂರು ದಸರಾ ಉತ್ಸವವನ್ನು ಉದ್ಘಾಟಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಇತ್ತೀಚೆಗೆ ಘೋಷಿಸಿದರು. ಇದಕ್ಕೆ ರಾಜ್ಯಾದ್ಯಂತ ಹಿಂದೂ ನಾಯಕರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ.
ದೇವಿಯ ಪೂಜೆ ಮಾಡುವುದು ಬಾನು ಮುಷ್ತಾಕ್ ಅವರ ಧಾರ್ಮಿಕ ನಂಬಿಕೆಗಳಿಗೆ ವಿರುದ್ಧವಾಗಿದೆ! – ಶಾಸಕ ಬಸನಗೌಡ ಪಾಟೀಲ್ ಯತ್ನಾಳ್

ನಾನು ವೈಯಕ್ತಿಕವಾಗಿ ಲೇಖಕಿ ಮತ್ತು ಹೋರಾಟಗಾರ್ತಿ ಬಾನು ಮುಷ್ತಾಕ್ ಅವರನ್ನು ಗೌರವಿಸುತ್ತೇನೆ; ಆದರೆ ಚಾಮುಂಡೇಶ್ವರಿ ದೇವಿಗೆ ಪುಷ್ಪಾರ್ಚನೆ ಮಾಡಿ ಮತ್ತು ದೀಪ ಹಚ್ಚಿ ದಸರಾ ಹಬ್ಬವನ್ನು ಉದ್ಘಾಟಿಸುವುದು ಅವರ ಸ್ವಂತ ಧಾರ್ಮಿಕ ನಂಬಿಕೆಗಳಿಗೆ ವಿರುದ್ಧವಾಗಿದೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದರು.
ದಸರಾ ಜಾತ್ಯತೀತತೆಯ ಸಂಕೇತವಲ್ಲ, ಅದು ಒಂದು ಧಾರ್ಮಿಕ ವಿಧಿ! – ಭಾಜಪದ ಮಾಜಿ ಸಂಸದ ಪ್ರತಾಪ್ ಸಿಂಹ

ಬಾನು ಮುಷ್ತಾಕ್ ಅವರ ಸಾಹಿತ್ಯದ ಬಗ್ಗೆ ನನಗೆ ಗೌರವವಿದೆ; ಆದರೆ ದಸರಾ ಜಾತ್ಯತೀತತೆಯ ಸಂಕೇತವಲ್ಲ. ದಸರಾ 100% ಧಾರ್ಮಿಕ ವಿಧಿಯಾಗಿದೆ. ತಾಯಿ ಚಾಮುಂಡೇಶ್ವರಿಯ ಪೂಜೆಯೊಂದಿಗೆ ದಸರಾ ಪ್ರಾರಂಭವಾಗುತ್ತದೆ. ಬಾನು ಮುಷ್ತಾಕ್ ಅವರಿಗೆ ತಾಯಿ ಚಾಮುಂಡೇಶ್ವರಿಯ ಮೇಲೆ ನಂಬಿಕೆ ಇದೆಯೇ ಎಂದು ಅವರು ತಿಳಿಸಬೇಕು. ಧಾರ್ಮಿಕ ನಂಬಿಕೆಗಳನ್ನು ವಿರೋಧಿಸುವವರನ್ನು ಮುಖ್ಯಮಂತ್ರಿ ಏಕೆ ಕರೆಯುತ್ತಾರೆ? ಎಂದು ಸಿಂಹ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಾಪ ಅವರು ಮಾತು ಮುಂದುವರಿಸುತ್ತಾ, ಇಸ್ಲಾಂ ಮೂರ್ತಿಪೂಜೆಯನ್ನು ದ್ವೇಷಿಸುತ್ತದೆ ಮತ್ತು ಕೇವಲ ಒಬ್ಬ ದೇವರನ್ನು ಹಾಗೂ ಒಂದು ಗ್ರಂಥವನ್ನು ನಂಬುತ್ತದೆ. ಈ ನಂಬಿಕೆಯಲ್ಲಿ ಬಾನು ಮುಷ್ತಾಕ್ ಅವರು ಈಗಲೂ ಇದ್ದಾರೆಯೇ ಅಥವಾ ‘ಎಲ್ಲಾ ಮಾರ್ಗಗಳು ಕೊನೆಗೆ ಒಂದೇ ಮುಕ್ತಿಗೆ ದಾರಿ ಮಾಡಿಕೊಡುತ್ತವೆ’ ಎಂದು ಅವರು ಭಾವಿಸುತ್ತಾರೆಯೇ?
ಬಾನು ಮುಷ್ತಾಕ್ ಅವರ ಹಿಂದೂ ದ್ವೇಷ!2023 ರಲ್ಲಿ ನಡೆದ ‘ಜನ ಸಾಹಿತ್ಯ ಸಮ್ಮೇಳನ’ ಕಾರ್ಯಕ್ರಮದಲ್ಲಿ ಬಾನು ಮುಷ್ತಾಕ್ ಅವರ ಹಿಂದೂ ದ್ವೇಷವನ್ನು ನೋಡಲು ಸಿಕ್ಕಿತ್ತು. ಅವರು, “ನೀವು ಕನ್ನಡ ಭಾಷೆಯನ್ನು ‘ಕನ್ನಡ ಭುವನೇಶ್ವರಿ’ ಆಗಿ ಮಾಡಿಬಿಟ್ಟಿದ್ದೀರಿ. ಕೇಸರಿ ಮತ್ತು ಹಳದಿ, ಅರಿಶಿನ-ಕುಂಕುಮದ ಧ್ವಜ ಹಾಕಿ, ಅರಿಶಿನ-ಕುಂಕುಮ ಹಚ್ಚಿ ಭುವನೇಶ್ವರಿಯನ್ನು ಸಿಂಹಾಸನದ ಮೇಲೆ ಕೂರಿಸಿದ್ದೀರಿ. ನಾನು ಎಲ್ಲಿ ನಿಲ್ಲಬೇಕು? ನಾನು ಏನನ್ನು ನೋಡಬೇಕು? ನಾನು ಎಲ್ಲಿ ತೊಡಗಿಕೊಳ್ಳಬೇಕು? ನನ್ನನ್ನು ಹೊರಗಿಡುವ ಪ್ರಕ್ರಿಯೆ ಇಂದಿನಿಂದಲ್ಲ, ಅದು ಬಹಳ ಹಿಂದಿನಿಂದಲೇ ಪ್ರಾರಂಭವಾಗಿತ್ತು. ಅದು ಇಂದು ಪೂರ್ಣಗೊಂಡಿದೆ.” (ಇಂತಹ ಹಿಂದೂ ವಿರೋಧಿ ಮಹಿಳೆಯನ್ನು ದಸರಾ ಉತ್ಸವದ ಉದ್ಘಾಟನೆಗೆ ಆಹ್ವಾನಿಸುವುದು ಆಕ್ರೋಶದ ಸಂಗತಿಯಾಗಿದೆ. – ಸಂಪಾದಕರು) |

ಪ್ರಖರ ಹಿಂದುತ್ವನಿಷ್ಠ ನಾಯಕ ಚಕ್ರವರ್ತಿ ಸೂಲಿಬೆಲೆ ಅವರು ಆಕ್ರೋಶ ವ್ಯಕ್ತಪಡಿಸಿ, ‘ಕನ್ನಡ ಭುವನೇಶ್ವರಿಯನ್ನು ಸಹಿಸದವರು ಚಾಮುಂಡೇಶ್ವರಿ ತಾಯಿಯ ವೈಭವಕ್ಕೆ ತಲೆಬಾಗಲು ಸಿದ್ಧರಾಗುತ್ತಾರೆಯೇ?’ ಎಂದು ಪ್ರಶ್ನಿಸಿದರು.
ಸರಕಾರ ಹಿಂದೂಗಳ ಭಾವನೆಗಳಿಗೆ ಧಕ್ಕೆ ತರುತ್ತಿದೆ! – ಪ್ರಮೋದ್ ಮುತಾಲಿಕ್

ಮೈಸೂರು ದಸರಾ ಉತ್ಸವದ ಉದ್ಘಾಟನೆಗೆ ಬಾನು ಮುಷ್ತಾಕ್ ಅವರ ಆಯ್ಕೆಯು ರಾಜ್ಯ ಸರಕಾರದ ಓಲೈಕೆ ಮತ್ತು ಮತ ಬ್ಯಾಂಕ್ ರಾಜಕಾರಣವಾಗಿದೆ. ಇದನ್ನು ಶ್ರೀರಾಮ ಸೇನೆ ಖಂಡಿಸುತ್ತದೆ. ಚಾಮುಂಡೇಶ್ವರಿ ಹಿಂದೂಗಳ ಆರಾಧ್ಯ ದೇವತೆಯಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಮುಸ್ಲಿಂ ಮಹಿಳೆಯನ್ನು ಮೈಸೂರು ದಸರಾ ಉತ್ಸವದ ಉದ್ಘಾಟನೆಗೆ ಆಯ್ಕೆ ಮಾಡುವುದು ನಿಂದನೀಯವಾಗಿದೆ. ಕಾಂಗ್ರೆಸ್ ಸರಕಾರ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರಲು ಪ್ರಯತ್ನಿಸುತ್ತಿದೆ, ಎಂದು ಹೇಳಿದರು.
‘ಒಂದು ಧರ್ಮವನ್ನು ಬದಿಗಿಟ್ಟು ದಸರಾ ಆಚರಿಸಲು ಸಾಧ್ಯವೇ?’ – ಗೃಹ ಸಚಿವ ಜಿ. ಪರಮೇಶ್ವರ್

ಹಿಂದುತ್ವನಿಷ್ಠ ಸಂಘಟನೆಗಳ ವಿರೋಧಕ್ಕೆ ರಾಜ್ಯದ ಗೃಹ ಸಚಿವ ಜಿ. ಪರಮೇಶ್ವರ್ ಅವರು, “ದಸರಾ ಒಂದು ನಾಡಹಬ್ಬವಾಗಿದೆ. ಇದು ಯಾವುದೇ ಜಾತಿ ಅಥವಾ ಧರ್ಮಕ್ಕೆ ಸೀಮಿತವಾಗಿಲ್ಲ. ಒಂದು ಧರ್ಮವನ್ನು ಬದಿಗಿಟ್ಟು ದಸರಾ ಆಚರಿಸಲು ಸಾಧ್ಯವೇ? ಮಿರ್ಜಾ ಇಸ್ಮಾಯಿಲ್ ಅವರು ದಿವಾನರಾಗಿ ದಸರಾ ಆಚರಿಸಿಲ್ಲವೇ? ನಿಸ್ಸಾರ್ ಅಹ್ಮದ್ ಅವರು ದಸರಾ ಉದ್ಘಾಟಿಸಿಲ್ಲವೇ? ಇದಕ್ಕೆಲ್ಲ ಆಕ್ಷೇಪಿಸಬಾರದು.” (ಹಿಂದೆ ಯಾರೂ ಆಕ್ಷೇಪಿಸಿಲ್ಲವಾದ್ದರಿಂದ ಈಗಲೂ ಆಕ್ಷೇಪಿಸಬಾರದು ಎಂದು ಪರಮೇಶ್ವರ್ ಅವರು ಭಾವಿಸುತ್ತಾರೆಯೇ? – ಸಂಪಾದಕರು)
|
‘ಬಾನು ಮುಷ್ತಾಕ್ ಅವರನ್ನು ಆಹ್ವಾನಿಸಬಾರದು ಎಂದು ಸಂವಿಧಾನದಲ್ಲಿ ಎಲ್ಲಾದರೂ ಬರೆದಿದೆಯೇ?’ – ಕಾಂಗ್ರೆಸ್ ಸಚಿವ ಸಂತೋಷ್ ಲಾಡ್
ಬಾನು ಮುಷ್ತಾಕ್ ಅವರನ್ನು ಆಹ್ವಾನಿಸಬೇಕು ಎಂದು ಸಂವಿಧಾನದಲ್ಲಿ ಎಲ್ಲಾದರೂ ಇದೆಯೇ?

ಬಾನು ಮುಷ್ತಾಕ್ ಅವರನ್ನು ಆಹ್ವಾನಿಸಿದ್ದಕ್ಕೆ ವ್ಯಕ್ತವಾದ ವಿರೋಧವನ್ನು ಕಾಂಗ್ರೆಸ್ ಸಚಿವ ಸಂತೋಷ್ ಲಾಡ್ ವಿರೋಧಿಸಿದರು. ಅವರು, “ದಸರಾ ಉದ್ಘಾಟನೆಗೆ ಬಾನು ಮುಷ್ತಾಕ್ ಅವರನ್ನು ಆಹ್ವಾನಿಸಬಾರದು ಎಂದು ಸಂವಿಧಾನದಲ್ಲಿ ಎಲ್ಲಾದರೂ ಬರೆದಿದೆಯೇ? ಭಾಜಪ ಎಲ್ಲವನ್ನೂ ಧರ್ಮದ ದೃಷ್ಟಿಕೋನದಿಂದ ವಿರೋಧಿಸುತ್ತಿದೆ” ಎಂದು ಅವರು ಹೇಳಿದರು. (ಕಾಂಗ್ರೆಸ್ ಪಕ್ಷವು ಧರ್ಮದ ದೃಷ್ಟಿಕೋನದಿಂದ ಹಿಂದೂಗಳನ್ನು ಭಯೋತ್ಪಾದಕರೆಂದು ಮತ್ತು ಮುಸಲ್ಮಾನರನ್ನು ನಿರಪರಾಧಿಗಳೆಂದು ಬಿಂಬಿಸಲು ಇಲ್ಲಿಯವರೆಗೆ ಶಕ್ತಿಮೀರಿ ಪ್ರಯತ್ನಿಸಿದೆ ಎಂಬುದನ್ನು ಗಮನಿಸಿ! – ಸಂಪಾದಕರು)
ಲಾಡ್ ಮಾತು ಮುಂದುವರೆಸಿ, “ದೇಶದಲ್ಲಿ ಅತಿ ಹೆಚ್ಚು ದೇಣಿಗೆ ನೀಡಿದವರು ಯಾರು? ಅಜೀಂ ಪ್ರೇಮ್‌ಜಿ ಅವರು ಬಡವರ ಒಳಿತಿಗಾಗಿ ಲಕ್ಷಾಂತರ ಕೋಟಿ ರೂಪಾಯಿಗಳನ್ನು ನೀಡಿದ್ದಾರೆ. ಅವರ ದೇಣಿಗೆ ಪಡೆಯುವ ಮೊದಲು ನಾವು ಅವರ ಧರ್ಮವನ್ನು ಪ್ರಶ್ನಿಸುತ್ತೇವೆಯೇ?” ಎಂದು ಲಾಡ್ ಪ್ರಶ್ನಿಸುವ ಮೂಲಕ ಬುದ್ಧಿಭ್ರಮಣೆ ಮಾಡಲು ಪ್ರಯತ್ನಿಸಿದರು. (ದೇಶದಲ್ಲಿ ಅತಿ ಹೆಚ್ಚು ತೆರಿಗೆಯನ್ನು ಹಿಂದೂಗಳು ಪಾವತಿಸುತ್ತಾರೆ ಮತ್ತು ಹೆಚ್ಚು ಸರಕಾರಿ ಸೌಲಭ್ಯಗಳು ಮುಸಲ್ಮಾನರಿಗೆ ಸಿಗುತ್ತವೆ ಎಂಬುದೇ ವಾಸ್ತವ! – ಸಂಪಾದಕರು)
ಹಿಂದೂಗಳೇ, ಇಂತಹ ಸಚಿವರನ್ನು ನೆನಪಿನಲ್ಲಿಟ್ಟುಕೊಳ್ಳಿ ಮತ್ತು ಚುನಾವಣೆಯ ಸಮಯದಲ್ಲಿ ಅವರಿಗೆ ಅವರ ಸ್ಥಾನವನ್ನು ತೋರಿಸಿಕೊಡಿ!
ಸಂಪಾದಕೀಯ ನಿಲುವು
|
Muzaffarpur Hospital Fire : ಮುಜಫ್ಫರಪುರ (ಬಿಹಾರ)ದ ಖಾಸಗಿ ಆಸ್ಪತ್ರೆಯಲ್ಲಿ ಸಂಭವಿಸಿದ ಅಗ್ನಿ ದುರಂತದಲ್ಲಿ 4 ಸಾವು, 20ಕ್ಕೂ ಹೆಚ್ಚು ಜನರಿಗೆ ಗಾಯ
90 ವರ್ಷದ ವಯೋವೃದ್ಧ ಅತ್ತೆಯನ್ನು ತನ್ನ ತಲೆಯ ಮೇಲೆ ಹೊತ್ತುಕೊಂಡು ಸವಾರಿ ಮಾಡುತ್ತಾ 84 ಕೋಸು ಪ್ರದಕ್ಷಿಣೆ ಪೂರ್ಣಗೊಳಿಸುತ್ತಿರುವ ಸೊಸೆ!
ಮುಜಫರ್ನಗರದಲ್ಲಿ(ಉತ್ತರ ಪ್ರದೇಶ) ಆಘಾತಕಾರಿ ಘಟನೆ; ಬಾಕಿ ಹಣ ಸಿಗದಿದ್ದಕ್ಕೆ ಜೋಡಿಸಿದ ಮೂಳೆಯನ್ನು ಮುರಿದ ವೈದ್ಯ!
Vande Mataram : ಬಂಗಾಳದ ಮದರಸಾಗಳಲ್ಲಿ ‘ವಂದೇ ಮಾತರಂ’ ಕಡ್ಡಾಯಗೊಳಿಸುವುದಕ್ಕೆ ‘ಆಲ್ ಇಂಡಿಯಾ ಮುಸ್ಲಿಂ ಪರ್ಸನಲ್ ಲಾ ಬೋರ್ಡ್’ ಆಕ್ಷೇಪ
ಕೊಲಕಾತಾ: ಟಿಎಂಸಿ ವಿದ್ಯಾರ್ಥಿ ಸಂಘಟನೆಯ ಕಚೇರಿಯಲ್ಲಿ ಭಾರಿ ನಗದು ಪತ್ತೆ
ಕೊಲಕಾತಾ: ತೃಣಮೂಲ ಕಾಂಗ್ರೆಸ್ನ ಮೇಯರ್ ಫಿರ್ಹಾದ್ ಹಕೀಮ್ ಅವರ ರಾಜೀನಾಮೆ