ಬಾಂಗ್ಲಾದೇಶದ ಪ್ರವಾಸಕ್ಕೆ ಬಂದಿದ್ದ ಪಾಕಿಸ್ತಾನದ ಉಪಪ್ರಧಾನಿಗೆ ಬಾಂಗ್ಲಾದೇಶದ ನಾಯಕರಿಂದ ಛೀಮಾರಿ!

ನವದೆಹಲಿ – ಪಾಕಿಸ್ತಾನದ ವಿದೇಶಾಂಗ ಸಚಿವ ಇಶಾಕ್ ಡಾರ್ ಅವರು ಬಾಂಗ್ಲಾದೇಶಕ್ಕೆ ಭೇಟಿ ನೀಡಿ ಅಲ್ಲಿನ ವಿವಿಧ ರಾಜಕೀಯ ಪಕ್ಷಗಳ ನಾಯಕರೊಂದಿಗೆ ಚರ್ಚೆ ನಡೆಸಿದರು. ಅವರು ಬಾಂಗ್ಲಾದೇಶ ನ್ಯಾಷನಲಿಸ್ಟ್ ಪಾರ್ಟಿ (ಬಿಎನ್‌ಪಿ), ನ್ಯಾಷನಲ್ ಸಿಟಿಜನ್ ಪಾರ್ಟಿ (ಎನ್‌ಸಿಪಿ) ಮತ್ತು ಜಮಾತ್-ಎ-ಇಸ್ಲಾಮಿ ನಾಯಕರನ್ನು ಭೇಟಿಯಾದರು. ಎನ್‌ಸಿಪಿ ಕಾರ್ಯದರ್ಶಿ ಅಖ್ತರ್ ಹುಸೇನ್ ನೇತೃತ್ವದ 7 ಸದಸ್ಯರ ನಿಯೋಗವು ಪಾಕಿಸ್ತಾನದ ಇಶಾಕ್ ಡಾರ್ ಅವರನ್ನು ಭೇಟಿಯಾಯಿತು. ಸಭೆಯ ನಂತರ ಅಖ್ತರ್ ಹುಸೇನ್ ಅವರು, 1971 ರ ಸಮಸ್ಯೆಯನ್ನು ಪರಿಹರಿಸಲು ಪಾಕಿಸ್ತಾನವು ಮುಂದಾದಾಗ ಮಾತ್ರ ಎರಡೂ ದೇಶಗಳ ನಡುವಿನ ದ್ವಿಪಕ್ಷೀಯ ಸಂಬಂಧಗಳು ಸುಧಾರಿಸುತ್ತವೆ ಎಂದು ಹೇಳಿದರು.
1971 ರ ವಿವಾದವೇನು?
ಬಾಂಗ್ಲಾದೇಶವು 1971 ರ ಘಟನೆಗಳನ್ನು ನರಮೇಧ ಎಂದು ಕರೆಯುತ್ತದೆ. ಆ ವರ್ಷ, ಪಶ್ಚಿಮ ಪಾಕಿಸ್ತಾನ (ಪಾಕಿಸ್ತಾನ) ಸರಕಾರವು ಪೂರ್ವ ಪಾಕಿಸ್ತಾನ (ಬಾಂಗ್ಲಾದೇಶ)ದಲ್ಲಿನ ಬಂಗಾಳಿ ನಿವಾಸಿಗಳ ಮೇಲೆ ಸಾಮೂಹಿಕ ಹತ್ಯೆ, ಅತ್ಯಾಚಾರ ಮತ್ತು ಇತರ ದೌರ್ಜನ್ಯಗಳ 9 ವಿನಾಶಕಾರಿ ಅಭಿಯಾನಗಳನ್ನು ನಡೆಸಿತು. ಈ ಘಟನೆಗಳಿಗೆ ಪಾಕಿಸ್ತಾನವು ಜವಾಬ್ದಾರಿಯನ್ನು ಒಪ್ಪಿಕೊಂಡು ಕ್ಷಮೆ ಕೇಳಬೇಕೆಂದು ಬಾಂಗ್ಲಾದೇಶ ಯಾವಾಗಲೂ ಒತ್ತಾಯಿಸುತ್ತಿದೆ, ಆದರೆ ಪಾಕಿಸ್ತಾನ ಇದನ್ನು ನಿರಾಕರಿಸಿದೆ. ಪಾಕಿಸ್ತಾನಿ ಸೈನಿಕರು ಕನಿಷ್ಠ 10 ಲಕ್ಷ ಬಂಗಾಳಿ ಮಹಿಳೆಯರ ಮೇಲೆ ಅತ್ಯಾಚಾರ ಎಸಗಿದರು ಮತ್ತು ಲಕ್ಷಾಂತರ ಬಂಗಾಳಿ ಜನರನ್ನು ಹತ್ಯೆ ಮಾಡಿದರು.
ಸಂಪಾದಕೀಯ ನಿಲುವುಪ್ರಸ್ತುತ ಪಾಕಿಸ್ತಾನ ಮತ್ತು ಬಾಂಗ್ಲಾದೇಶದ ನಡುವೆ ಹೆಚ್ಚುತ್ತಿರುವ ಪ್ರೀತಿ ಮತ್ತು ಸಲುಗೆಯನ್ನು ನೋಡಿದಾಗ, ಪಾಕಿಸ್ತಾನವು ಬಾಂಗ್ಲಾದೇಶವನ್ನು ಮತ್ತೆ ತನ್ನ ವಶ ಮಾಡಿಕೊಂಡರೆ ಆಶ್ಚರ್ಯಪಡಬೇಕಾಗಿಲ್ಲ! |
ಅರುಣಾಚಲ ಪ್ರದೇಶದಲ್ಲಿ ಚೀನಾ ಸೇನೆಯ ನುಸುಳುವಿಕೆ ನಡೆದಿಲ್ಲ! – ಭಾರತೀಯ ಸೇನೆಯ ಸ್ಪಷ್ಟನೆ
ಶ್ರೀರಾಮ ಮಂದಿರದ ದಾನ ಕಳ್ಳತನದ ದೊಡ್ಡ ಹೆಸರುಗಳನ್ನು ಬಹಿರಂಗಪಡಿಸಿದರೆ, ಅವರು ನನ್ನನ್ನು ಕೊಲ್ಲುವರು! – ಪಂಡಿತ್ ಧೀರೇಂದ್ರಕೃಷ್ಣ ಶಾಸ್ತ್ರಿ
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
‘ಯಾರು ನೀರನ್ನು ತಡೆಯುತ್ತಾರೋ, ಅವರ ಕೈಗಳನ್ನು ಮುರಿಯುತ್ತೇವೆ !’
ಪಾಕಿಸ್ತಾನವನ್ನು ಮತ್ತೆ ‘ಎಫ್ಎಟಿಎಫ್’ನ ‘ಗ್ರೇ ಲಿಸ್ಟ್’ಗೆ ಸೇರಿಸಲು ಭಾರತದ ಸಿದ್ಧತೆ
ಪಾಕಿಸ್ತಾನದಲ್ಲಿ 125 ವರ್ಷ ಹಳೆಯ ಗುರುದ್ವಾರವನ್ನು ನೆಲಸಮಗೊಳಿಸಲು ಯತ್ನ : Pakistan Gurdwara