ಕೇರಳ ಉಚ್ಚ ನ್ಯಾಯಾಲಯದಿಂದ 3 ದೇವಸ್ವಂ ಮಂಡಳಿಗಳಿಗೆ ನಿರ್ದೇಶನ

ಕೊಚ್ಚಿ (ಕೇರಳ) – ಧಾರ್ಮಿಕ ಸಂಸ್ಥೆಗಳ (ದುರುಪಯೋಗ ತಡೆಗಟ್ಟುವಿಕೆ) ಕಾಯ್ದೆಯ ಪ್ರಕಾರ, ಯಾವುದೇ ದೇವಸ್ಥಾನ ಅಥವಾ ಅದರ ವ್ಯವಸ್ಥಾಪಕರು ತಮ್ಮ ದೇವಸ್ಥಾನದ ಆವರಣವನ್ನು ಯಾವುದೇ ರಾಜಕೀಯ ಕಾರ್ಯಕ್ರಮಗಳ ಪ್ರಚಾರಕ್ಕಾಗಿ ಅಥವಾ ಪ್ರಸಾರಕ್ಕಾಗಿ ಬಳಸಬಾರದು ಅಥವಾ ಬಳಸಲು ಅವಕಾಶ ನೀಡಬಾರದು. ಈ ಕಾಯ್ದೆಯು ಯಾವುದೇ ರಾಜಕೀಯ ಪಕ್ಷದ ಲಾಭಕ್ಕಾಗಿ ಧಾರ್ಮಿಕ ಸಂಸ್ಥೆಗಳ ನಿಧಿಯನ್ನು ಬಳಸುವುದನ್ನು ನಿಷೇಧಿಸುತ್ತದೆ ಎಂದು ಕೇರಳ ಉಚ್ಚ ನ್ಯಾಯಾಲಯ ಒಂದು ಅರ್ಜಿಯ ವಿಚಾರಣೆಯ ಸಂದರ್ಭದಲ್ಲಿ ತ್ರಾವಣಕೋರ, ಕೊಚ್ಚಿನ ಮತ್ತು ಮಲಬಾರ ದೇವಸ್ವಂ ಮಂಡಳಿಗಳಿಗೆ ನಿರ್ದೇಶನ ನೀಡುವಾಗ ಸ್ಪಷ್ಟಪಡಿಸಿದೆ. ಎರ್ನಾಕುಲಂ ನಿವಾಸಿ ಎನ್. ಪ್ರಕಾಶ ಅವರ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯವು ಈ ನಿರ್ದೇಶನಗಳನ್ನು ನೀಡಿದೆ.
1. ಅರ್ಜಿಯಲ್ಲಿ, ಕೋಳಿಕೋಡನ ತಾಲಿ ದೇವಸ್ಥಾನ, ಅಟ್ಟಿಂಗಲ್ ನ ಶ್ರೀ ಇಂದಿಲಯಪ್ಪನ್ ದೇವಸ್ಥಾನ ಮತ್ತು ಕೊಲ್ಲಂನ ಶ್ರೀ ಕಡಕ್ಕಲದೇವಿ ದೇವಸ್ಥಾನಗಳಂತಹ ವಿವಿಧ ದೇವಸ್ಥಾನಗಳ ಆವರಣವನ್ನು ರಾಜಕೀಯ ಚಟುವಟಿಕೆಗಳನ್ನು ಉತ್ತೇಜಿಸಲು ಬಳಸಲಾಗುತ್ತಿತ್ತು ಎಂದು ಹೇಳಲಾಗಿದೆ. ಇಂತಹ ಚಟುವಟಿಕೆಗಳು ಅನುಚಿತವಾಗಿದ್ದು, ಭಕ್ತರ ಭಾವನೆಗಳಿಗೆ ಧಕ್ಕೆ ತರುತ್ತವೆ.
2. ಮಲಬಾರ್ ದೇವಸ್ವಂ ಮಂಡಳಿಯು ನ್ಯಾಯಾಲಯಕ್ಕೆ, ದೇವಸ್ಥಾನದ ಸಾಂಪ್ರದಾಯಿಕ ಪೂಜೆ ಮತ್ತು ವಿಧಿಗಳಿಗೆ ಸಂಬಂಧಿಸಿದ ಕಾರ್ಯಕ್ರಮಗಳನ್ನು ಹೊರತುಪಡಿಸಿ, ಮಂಡಳಿಯು ಯಾವುದೇ ರೀತಿಯ ಕಾರ್ಯಕ್ರಮ ಅಥವಾ ಚಟುವಟಿಕೆಗಳ ಆಯ್ಕೆಯನ್ನು ನಿಯಂತ್ರಿಸಲು ನಿರ್ದೇಶನ ನೀಡುವುದು ಪ್ರಾಯೋಗಿಕವಾಗಿಲ್ಲ ಎಂದು ತಿಳಿಸಿತ್ತು.
3. ಎರಡೂ ಪಕ್ಷಗಳ ವಾದವನ್ನು ಆಲಿಸಿದ ನಂತರ, ನ್ಯಾಯಾಲಯವು 3 ದೇವಸ್ವಂ ಮಂಡಳಿಗಳಿಗೆ ತಮ್ಮ ನಿಯಂತ್ರಣ ಅಥವಾ ಮೇಲ್ವಿಚಾರಣೆಯಲ್ಲಿರುವ ವಿವಿಧ ದೇವಸ್ಥಾನಗಳಲ್ಲಿ ಕಾಯ್ದೆಯ ನಿಬಂಧನೆಗಳನ್ನು ಪ್ರಾಮಾಣಿಕವಾಗಿ ಪಾಲಿಸಬೇಕು ಎಂದು ಹೇಳಿದೆ. ಅಲ್ಲದೆ, ಕಾಯ್ದೆಯ ಯಾವುದೇ ಉಲ್ಲಂಘನೆಯು ಮಂಡಳಿಯ ಗಮನಕ್ಕೆ ಬಂದರೆ, ಅವರು ತಕ್ಷಣವೇ ಕಾಯ್ದೆಯನ್ನು ಜಾರಿಗೊಳಿಸುವ ಅಧಿಕಾರಿಗಳಿಗೆ ತಿಳಿಸಬೇಕು. ಇದರಿಂದ ಕಾಯ್ದೆಯ ಪ್ರಕಾರ ಸೂಕ್ತ ಕ್ರಮ ತೆಗೆದುಕೊಳ್ಳಬಹುದು. ಕಾಯ್ದೆಯ ನಿಬಂಧನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುವುದು ಎಂಬುದನ್ನು ಖಚಿತಪಡಿಸಿಕೊಳ್ಳಲು, ನ್ಯಾಯಾಲಯವು ಮಂಡಳಿಗೆ ತಮ್ಮ ನಿಯಂತ್ರಣದಲ್ಲಿರುವ ಧಾರ್ಮಿಕ ಸಂಸ್ಥೆಗಳಿಗೆ ಹೊಸ ನಿರ್ದೇಶನಗಳನ್ನು ಹೊರಡಿಸುವಂತೆ ಸೂಚಿಸಿದೆ.
ಸಂಪಾದಕೀಯ ನಿಲುವುಮೂಲತಃ ಇಂತಹ ಆದೇಶವನ್ನು ನ್ಯಾಯಾಲಯವೇಕೆ ನೀಡಬೇಕಾಗುತ್ತದೆ? ಇದು ದೇವಸ್ವಂ ಮಂಡಳಿಗಳಿಗೆ ಏಕೆ ಅರ್ಥವಾಗುತ್ತಿಲ್ಲ? ದೇವಸ್ಥಾನಗಳ ಸರಕಾರೀಕರಣವಾದ ಬಳಿಕ ಇಂತಹ ಪರಿಸ್ಥಿತಿ ಉಂಟಾಗುತ್ತದೆ ಎಂಬುದನ್ನು ಗಮನದಲ್ಲಿಟ್ಟುಕೊಂಡು, ದೇವಸ್ಥಾನಗಳ ಸರಕಾರೀಕರಣವನ್ನು ರದ್ದುಗೊಳಿಸಿ ಅವುಗಳನ್ನು ಭಕ್ತರ ಕೈಗೆ ಒಪ್ಪಿಸಬೇಕು! |
ಗೋರೆಗಾಂವ್: ಸರಕಾರಿ ಭೂಮಿಯಲ್ಲಿದ್ದ ಅಕ್ರಮ ದರ್ಗಾ ನೆಲಸಮ !
TMC Cut Money : ಬಂಗಾಳ: ಲಂಚದ ಹಣವನ್ನು ಜನರಿಗೆ ಹಿಂತಿರುಗಿಸುತ್ತಿರುವ ತೃಣಮೂಲ ಕಾಂಗ್ರೆಸ್ ನಾಯಕರು!
ಇಂದಿನಿಂದ ಕರ್ಣಾವತಿ (ಗುಜರಾತ್)ಯಲ್ಲಿ ಮೊದಲ ವಿಶ್ವ ಯೋಗಾಸನ ಸ್ಪರ್ಧೆ !
‘ಕಳ್ಳಭಟ್ಟಿಗಳನ್ನು ಅಧಿಕೃತಗೊಳಿಸಿದರೆ ಸರಕಾರಕ್ಕೆ ಆದಾಯ ಸಿಗುತ್ತದೆ !’(ಅಂತೆ)
ಗೋಪಾಲಗಡ ಸರಕಾರದ್ದಾಗಿದ್ದು ಎಲ್ಲರಿಗೂ ಮುಕ್ತವಾಗಿದೆ : ವದಂತಿಗಳನ್ನು ನಂಬಿ ಕಾನೂನನ್ನು ಕೈಗೆತ್ತಿಕೊಳ್ಳಬೇಡಿ !
ಪಾಟಲಿಪುತ್ರ (ಬಿಹಾರ) ಇಲ್ಲಿ ಪ್ರಸಿದ್ಧ ಖಾನ್ ಸರ್ ಅವರ ತರಬೇತಿ ಕೇಂದ್ರದ ಮೇಲೆ ದಾಳಿ