ರಷ್ಯಾದ ಉಪ ವ್ಯಾಪಾರ ಪ್ರತಿನಿಧಿ ಎವ್ಗೆನಿ ಗ್ರಿವಾ ಅವರಿಂದ ಮಾಹಿತಿ

ನವದೆಹಲಿ – ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ರಷ್ಯಾದ ಉಪ ವ್ಯಾಪಾರ ಪ್ರತಿನಿಧಿ ಎವ್ಗೆನಿ ಗ್ರಿವಾ ಅವರು, ರಷ್ಯಾವು ಭಾರತಕ್ಕೆ ತೈಲ ಖರೀದಿಯಲ್ಲಿ ಶೇಖಡ 5 ರಷ್ಟು ರಿಯಾಯಿತಿ ನೀಡುತ್ತದೆ. ಅಮೆರಿಕದೊಂದಿಗಿನ ಸಂಬಂಧ ಹದಗೆಟ್ಟಿದ್ದರೂ, ಭಾರತವು ನಮ್ಮಿಂದ ತೈಲ ಖರೀದಿಯನ್ನು ಮುಂದುವರೆಸಿದೆ. ಈ ಕಷ್ಟದ ಸಮಯದಲ್ಲಿ ನಾವು ಭಾರತದ ಜೊತೆಗಿದ್ದೇವೆ.
🇷🇺➡️🇮🇳 Russia offers India an extra 5% discount on oil, confirms Deputy Trade Rep. Evgeny Griva.
📊 Before the Ukraine war: India imported just 68,000 barrels/day.
🔥 Today: 1.7 million barrels/day.
India emerging as Russia’s biggest energy partner in the new global order.… pic.twitter.com/8s9eHClHDg
— Sanatan Prabhat (@SanatanPrabhat) August 21, 2025
ನಾವು ತೈಲ ಖರೀದಿಯ ಮೇಲೆ ಭಾರತಕ್ಕೆ ಇನ್ನೂ ಶೇಕಡ 5 ರಷ್ಟು ರಿಯಾಯಿತಿ ನೀಡಬಹುದು. ಹೆಚ್ಚುವರಿ ವೆಚ್ಚವನ್ನೂ ಕಡಿಮೆ ಮಾಡುತ್ತೇವೆ. ಆದರೂ, ಈ ಬಗ್ಗೆ ಎರಡೂ ಕಡೆಯಿಂದ ನಿರ್ಧಾರವಾಗಬೇಕಿದೆ, ಎಂದು ಹೇಳಿದರು.

ಅಮೆರಿಕದೊಂದಿಗೆ ನಡೆಯುತ್ತಿರುವ ವ್ಯಾಪಾರ ಯುದ್ಧದ ವಿಷಯದಲ್ಲಿ ರಷ್ಯಾ ಭಾರತಕ್ಕೆ ಬೆಂಬಲ ನೀಡಿದೆ. ರಷ್ಯಾದ ರಾಯಭಾರ ಕಚೇರಿಯ ಮುಖ್ಯಸ್ಥ ರೋಮನ್ ಬಾಬುಶ್ಕಿನ್ ಅವರು, ಅಮೆರಿಕವು ಆರ್ಥಿಕತೆಯನ್ನು ಅಸ್ತ್ರವನ್ನಾಗಿ ಬಳಸಿದೆ. ಅಮೆರಿಕದ ಮಾರುಕಟ್ಟೆಗೆ ಭಾರತದ ಪ್ರವೇಶಕ್ಕೆ ಅಡ್ಡಿಯಾಗುತ್ತಿದ್ದರೆ, ರಷ್ಯಾದ ಮಾರುಕಟ್ಟೆಯಲ್ಲಿ ಅದಕ್ಕೆ ಸ್ವಾಗತವಿದೆ. ಸವಾಲುಗಳಿಗೆ ಪರಿಹಾರ ಹುಡುಕಲು ನಾವು ಭಾರತದೊಂದಿಗೆ ಬದ್ಧರಾಗಿದ್ದೇವೆ. ಎರಡೂ ದೇಶಗಳು ರಾಷ್ಟ್ರೀಯ ಹಿತಾಸಕ್ತಿಗಳಿಗಾಗಿ ಅಮೆರಿಕದ ಅಧ್ಯಕ್ಷ ಟ್ರಂಪ್ ಅವರ ತೆರಿಗೆ ಯುದ್ಧದೊಂದಿಗೆ ಹೋರಾಡುವ ಮಾರ್ಗಗಳನ್ನು ಕಂಡುಕೊಳ್ಳಲಿವೆ ಎಂದು ಹೇಳಿದ್ದಾರೆ.
ಭಾರತ ರಷ್ಯಾದಿಂದ ಇಷ್ಟು ತೈಲ ಆಮದು ಮಾಡಿಕೊಳ್ಳುತ್ತದೆ!
ರಷ್ಯಾ-ಉಕ್ರೇನ್ ಯುದ್ಧದ ಮೊದಲು, ಭಾರತವು ಪ್ರತಿದಿನ ರಷ್ಯಾದಿಂದ ಕೇವಲ 68 ಸಾವಿರ ಬ್ಯಾರೆಲ್ ತೈಲವನ್ನು ಖರೀದಿಸುತ್ತಿತ್ತು. ಪ್ರಸ್ತುತ ಈ ಸಂಖ್ಯೆ 17 ಲಕ್ಷ ಬ್ಯಾರೆಲ್‌ಗಳಷ್ಟಿದೆ.
ಅರುಣಾಚಲ ಪ್ರದೇಶದಲ್ಲಿ ಚೀನಾ ಸೇನೆಯ ನುಸುಳುವಿಕೆ ನಡೆದಿಲ್ಲ! – ಭಾರತೀಯ ಸೇನೆಯ ಸ್ಪಷ್ಟನೆ
ಶ್ರೀರಾಮ ಮಂದಿರದ ದಾನ ಕಳ್ಳತನದ ದೊಡ್ಡ ಹೆಸರುಗಳನ್ನು ಬಹಿರಂಗಪಡಿಸಿದರೆ, ಅವರು ನನ್ನನ್ನು ಕೊಲ್ಲುವರು! – ಪಂಡಿತ್ ಧೀರೇಂದ್ರಕೃಷ್ಣ ಶಾಸ್ತ್ರಿ
ಭಾರತದ ನೂತನ ಭೂಸೇನಾ ಮುಖ್ಯಸ್ಥರಾಗಿ ಜನರಲ್ ಧೀರಜ್ ಸೇಠ್
‘ಯಾರು ನೀರನ್ನು ತಡೆಯುತ್ತಾರೋ, ಅವರ ಕೈಗಳನ್ನು ಮುರಿಯುತ್ತೇವೆ !’
ಚೀನಾದ ಸೇನೆಯೊಂದಿಗೆ ಪ್ರತಿ ವರ್ಷ ೧ ಸಾವಿರದ, ೧೦೦ ಬಾರಿ ಮುಖಾಮುಖಿ ಮಾತುಕತೆ!
ಪಾಕಿಸ್ತಾನವನ್ನು ಮತ್ತೆ ‘ಎಫ್ಎಟಿಎಫ್’ನ ‘ಗ್ರೇ ಲಿಸ್ಟ್’ಗೆ ಸೇರಿಸಲು ಭಾರತದ ಸಿದ್ಧತೆ