
‘ಒಬ್ಬ ವ್ಯಕ್ತಿಗೆ ಕೆಟ್ಟ ಶಕ್ತಿಗಳ ತೊಂದರೆ ಮಂದ, ಮಧ್ಯಮ ಅಥವಾ ತೀವ್ರ ಸ್ವರೂಪದ್ದಿರಬಹುದು. ವ್ಯಕ್ತಿಗೆ ಆಗುತ್ತಿರುವ ಕೆಟ್ಟ ಶಕ್ತಿಗಳ ತೊಂದರೆ ದೂರವಾಗಲು, ಅಂದರೆ ಅವನೊಳಗಿನ ನಕಾರಾತ್ಮಕ (ತೊಂದರೆದಾಯಕ) ಶಕ್ತಿ ದೂರವಾಗಲು, ಅವನಿಗೆ ನಾಮಜಪಾದಿ ಉಪಾಯಗಳನ್ನು ಮಾಡಬೇಕಾಗುತ್ತದೆ. ನಾಮಜಪಾದಿ ಉಪಾಯಗಳ ಮೂಲಕ ಸಕಾರಾತ್ಮಕ ಶಕ್ತಿಯನ್ನು (ಚೈತನ್ಯಶಕ್ತಿ) ನೀಡಲಾಗುತ್ತದೆ.
೧. ಕೆಟ್ಟ ಶಕ್ತಿಗಳಿಂದ ಆಗುವ ಆಧ್ಯಾತ್ಮಿಕ ತೊಂದರೆಯ ತೀವ್ರತೆ, ಆಕ್ರಮಣ ಮಾಡುವ ಕೆಟ್ಟ ಶಕ್ತಿಗಳ ಸ್ಥಾನ ಮತ್ತು ಉಪಾಯ ಮಾಡಲು ಆವಶ್ಯಕವಾಗಿರುವ ಕನಿಷ್ಠ ಆಧ್ಯಾತ್ಮಿಕ ಮಟ್ಟ (ಶೇಕಡ)

೨. ಭುವರ್ಲೋಕದಲ್ಲಿನ ಕೆಟ್ಟ ಶಕ್ತಿಗಳ ಶಕ್ತಿ ಎಲ್ಲಕ್ಕಿಂತ ಕಡಿಮೆ ಇರುತ್ತದೆ ಮತ್ತು ಮೊದಲನೇ ಪಾತಾಳದಿಂದ ಏಳನೇ ಪಾತಾಳದ ಕಡೆಗೆ ಹೋದಂತೆ ಕೆಟ್ಟ ಶಕ್ತಿಗಳ ಶಕ್ತಿ ಹೆಚ್ಚಾಗುತ್ತ ಹೋಗುತ್ತದೆ
ಮೇಲಿನ ಕೋಷ್ಟಕವನ್ನು ನೋಡಿದರೆ, ಮಂದ, ಮಧ್ಯಮ ಅಥವಾ ತೀವ್ರ ಸ್ವರೂಪದ ಕೆಟ್ಟ ಶಕ್ತಿಗಳ ತೊಂದರೆ ಯಾವ ಸ್ಥಾನಗಳ (ಭುವರ್ಲೋಕದ ಅಥವಾ ಎಷ್ಟನೇ ಪಾತಾಳದ) ಕೆಟ್ಟ ಶಕ್ತಿಗಳಿಂದ ಆಗುತ್ತದೆ’ ಎಂಬುದು ತಿಳಿಯುತ್ತದೆ. ಭುವರ್ಲೋಕದ ಕೆಟ್ಟ ಶಕ್ತಿಗಳ ಶಕ್ತಿ ಎಲ್ಲಕ್ಕಿಂತ ಕಡಿಮೆ ಇರುತ್ತದೆ ಮತ್ತು ನಾವು ಮೊದಲನೇ ಪಾತಾಳದಿಂದ ಏಳನೇ ಪಾತಾಳದ ಕಡೆಗೆ ಹೋದಂತೆ ಕೆಟ್ಟ ಶಕ್ತಿಗಳ ಶಕ್ತಿ ಹೆಚ್ಚಾಗುತ್ತಾ ಹೋಗುತ್ತದೆ. ಇದರಿಂದ, ‘ಭುವರ್ಲೋಕದ ಕೆಟ್ಟ ಶಕ್ತಿಗಳ ಶಕ್ತಿ ಎಲ್ಲಕ್ಕಿಂತ ಕಡಿಮೆ ಮತ್ತು ಏಳನೇ ಪಾತಾಳದ ಕೆಟ್ಟ ಶಕ್ತಿಗಳ ಶಕ್ತಿ ಎಲ್ಲಕ್ಕಿಂತ ಹೆಚ್ಚಿರುತ್ತದೆ’ ಎಂಬುದು ತಿಳಿಯುತ್ತದೆ.
೩. ಒಬ್ಬ ವ್ಯಕ್ತಿಯು ಕೆಟ್ಟ ಶಕ್ತಿಗಳ ತೊಂದರೆ ಇರುವ ವ್ಯಕ್ತಿಗೆ ಆಧ್ಯಾತ್ಮಿಕ ಉಪಾಯವನ್ನು ಮಾಡಬೇಕಾಗಿದ್ದರೆ, ಅವನಲ್ಲಿ ಸಕಾರಾತ್ಮಕ ಶಕ್ತಿ, ಅಂದರೆ ಚೈತನ್ಯ ಇರಬೇಕಾಗುತ್ತದೆ ಮತ್ತು ವ್ಯಕ್ತಿಯ ಆಧ್ಯಾತ್ಮಿಕ ಮಟ್ಟ ಹೆಚ್ಚಾದಂತೆ ಅವನಲ್ಲಿರುವ ಚೈತನ್ಯದ ಪ್ರಮಾಣವೂ ಹೆಚ್ಚಾಗುತ್ತದೆ
ಮೇಲಿನ ಕೋಷ್ಟಕದಲ್ಲಿ, ಯಾವುದಾದರೊಬ್ಬ ವ್ಯಕ್ತಿಗೆ ಕೆಟ್ಟ ಶಕ್ತಿಗಳಿಂದ ಆಗುವ ಆಧ್ಯಾತ್ಮಿಕ ತೊಂದರೆಯ ತೀವ್ರತೆ ಮಂದ, ಮಧ್ಯಮ ಅಥವಾ ತೀವ್ರವಾಗಿದ್ದರೆ, ಅವನಿಗೆ ಆಧ್ಯಾತ್ಮಿಕ ಮಟ್ಟದ ಉಪಾಯಗಳನ್ನು ಮಾಡುವ ವ್ಯಕ್ತಿಯ ಆಧ್ಯಾತ್ಮಿಕ ಮಟ್ಟ ಕನಿಷ್ಠ ಎಷ್ಟು ಶೇಕಡಾ ಆವಶ್ಯಕವಾಗಿದೆ ?’ ಎಂಬುದನ್ನು ನೀಡಲಾಗಿದೆ. ಏಕೆ ಹಾಗೆ ನೀಡಲಾಗಿದೆ ಎಂಬುದು ಮುಂದಿನ ವಿಶ್ಲೇಷಣೆಯಿಂದ ಗಮನಕ್ಕೆ ಬರುತ್ತದೆ. ಕಡಿಮೆ ಶಕ್ತಿಯುಳ್ಳ ಕೆಟ್ಟ ಶಕ್ತಿಗಳಿಂದ ಆಗುವ ಕಡಿಮೆ ಸ್ವರೂಪದ ತೊಂದರೆಗಳನ್ನು ದೂರ ಮಾಡಲು ಕಡಿಮೆ ಪ್ರಮಾಣದ ಸಕಾರಾತ್ಮಕ ಶಕ್ತಿ ಆವಶ್ಯಕವಾಗಿರುತ್ತದೆ. ಆದರೆ, ಹೆಚ್ಚು ಶಕ್ತಿಯುಳ್ಳ ಕೆಟ್ಟ ಶಕ್ತಿಗಳಿಂದ ಆಗುವ ತೀವ್ರ ಸ್ವರೂಪದ ತೊಂದರೆಗಳನ್ನು ದೂರ ಮಾಡಲು ಹೆಚ್ಚು ಪ್ರಮಾಣದ ಸಕಾರಾತ್ಮಕ ಶಕ್ತಿ ಆವಶ್ಯಕವಾಗಿರುತ್ತದೆ. ಯಾವುದಾದರೊಬ್ಬ ವ್ಯಕ್ತಿಯು ಕೆಟ್ಟ ಶಕ್ತಿಗಳ ತೊಂದರೆ ಇರುವ ವ್ಯಕ್ತಿಯ ಮೇಲೆ ಆಧ್ಯಾತ್ಮಿಕ ಉಪಾಯಗಳನ್ನು ಮಾಡಲು ಅವನಲ್ಲಿ ಸಕಾರಾತ್ಮಕ ಶಕ್ತಿ, ಅಂದರೆ ಚೈತನ್ಯ ಇರಬೇಕಾಗುತ್ತದೆ. ವ್ಯಕ್ತಿಯ ಆಧ್ಯಾತ್ಮಿಕ ಮಟ್ಟ ಹೆಚ್ಚಾದಂತೆ, ಅವನಲ್ಲಿರುವ ಚೈತನ್ಯದ ಪ್ರಮಾಣವೂ ಹೆಚ್ಚಾಗುತ್ತದೆ. ಆಧ್ಯಾತ್ಮಿಕ ಉಪಾಯಗಳನ್ನು ಮಾಡಲು ಆಧ್ಯಾತ್ಮಿಕ ಮಟ್ಟದ ಮಾನದಂಡ ನಿಜವಾಗಿದ್ದರೂ, ಆಧ್ಯಾತ್ಮಿಕ ಉಪಾಯಗಳನ್ನು ಮಾಡುವ ವ್ಯಕ್ತಿಯ ಮೇಲಿನ ಗುರುಕೃಪೆಯೂ ಮುಖ್ಯವಾಗಿರುತ್ತದೆ. ಗುರುಕೃಪೆಯಿಂದ ಅಥವಾ ಗುರುಗಳ ಆಜ್ಞೆಯಿಂದ, ಕಡಿಮೆ ಆಧ್ಯಾತ್ಮಿಕ ಮಟ್ಟದ ವ್ಯಕ್ತಿಯೂ ಆವಶ್ಯಕತೆಗನುಸಾರ ತನ್ನ ಉಪಾಯ ಮಾಡುವ ಕ್ಷಮತೆಗಿಂತ ಸ್ವಲ್ಪ ಹೆಚ್ಚು ಶಕ್ತಿಯಿರುವ ಕೆಟ್ಟ ಶಕ್ತಿಗಳಿಂದ ಆಗುವ ತೊಂದರೆಗಳನ್ನು ಉಪಾಯದ ಮೂಲಕ ದೂರ ಮಾಡಬಹುದು.’
– ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ
ದೈವಿ ಯುವ ಸಾಧಕಿಯರ ಪ್ರಬುದ್ಧ ವಿಚಾರಗಳಿಗೆ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ನೀಡಿದ ಅಮೂಲ್ಯ ಮಾರ್ಗದರ್ಶನ !
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ’ದ ಮಾಧ್ಯಮದಿಂದ ಕಲಾವಿದರಿಗೆ ಕಲೆಯ ಕಡೆಗೆ ಸಾಧನೆ ಎಂದು ನೋಡಲು ನೀಡಿದ ಮಾರ್ಗದರ್ಶನ !
ಸಾಧಕರಲ್ಲಿ ಆಂತರಿಕ ಬದಲಾವಣೆಯನ್ನು ತರುವ ಪೂ. ರಮಾನಂದ ಗೌಡ !
‘ತಮ್ಮ ಶಾರೀರಿಕ ಸ್ಥಿತಿಯನ್ನು ಪೂರ್ಣ ಸ್ವೀಕರಿಸುವುದು’, ಭಗವತ್ಪ್ರಾಪ್ತಿಯ ಮೊದಲ ಮೆಟ್ಟಿಲಾಗಿದೆ !
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಹೆಚ್ಚಿದ ನಿದ್ರೆ, ಅಂದರೆ ದೇವರು ಅವರ ನಿರ್ವಿಚಾರ ಸ್ಥಿತಿಯನ್ನು ಹೆಚ್ಚಿಸಲು ಮಾಡಿದ ಉಪಾಯಯೋಜನೆಯಾಗಿದೆ !
ಸಾಧನೆಯಿಂದ ಸಾಧಕರಲ್ಲಿ ಚೈತನ್ಯ ಮತ್ತು ದೈವೀ ಗುಣಗಳು ಹೆಚ್ಚಳವಾಗುವುದು ಹಾಗೂ ಸಮಾಜದ ವ್ಯಕ್ತಿಗಳು ಸಾಧಕರ ಕಡೆಗೆ ಆಕರ್ಷಿತರಾಗುವುದು