ಈ ಹಿಂದೆ ನನ್ನ ಮನಸ್ಸಿನಲ್ಲಿ ನಾಮಜಪಾದಿ ಉಪಾಯಗಳನ್ನು ಮಾಡುವಾಗ ಅನೇಕ ಪ್ರಶ್ನೆಗಳು ಬರುತ್ತಿದ್ದವು. ಆದುದರಿಂದ ‘ನನ್ನ ನಾಮಜಪಾದಿ ಉಪಾಯಗಳು ಸರಿಯಾಗಿ ಆಗುತ್ತಿರಲಿಲ್ಲ, ಆದ್ದರಿಂದ ನನಗೆ ಒತ್ತಡವಾಗುತ್ತಿತ್ತು ಹಾಗೂ ನಾಮಜಪ ಆದನಂತರವೂ ನನಗೆ ಸಮಾಧಾನವೆನಿಸುತ್ತಿರಲಿಲ್ಲ. ೧೮.೮.೨೦೨೪ ರಂದು ಸನಾತನದ ರಾಮನಾಥಿ ಆಶ್ರಮದಲ್ಲಿ ನನಗೆ ಸದ್ಗುರು ಡಾ. ಮುಕುಲ ಗಾಡಗೀಳರ ಮಾರ್ಗದರ್ಶನ ಲಭಿಸಿತು. ಅವರ ಮಾರ್ಗದರ್ಶನವನ್ನು ಕೇಳಿ ನನ್ನ ಮನಸ್ಸು ಸಕಾರಾತ್ಮಕವಾಯಿತು. ಆದ್ದರಿಂದ ನನಗೆ ದೇವರ ಕೃಪೆಯಿಂದ ನಾಮಜಪಾದಿ ಉಪಾಯದಿಂದ ಸಾಕಷ್ಟು ಪರಿಣಾಮವನ್ನು ಅನುಭವಿಸಲು ಸಾಧ್ಯವಾಯಿತು. ನಾನು ನಾಮಜಪಾದಿ ಉಪಾಯಗಳ ಬಗ್ಗೆ ಸದ್ಗುರು ಡಾ. ಗಾಡಗೀಳರಿಗೆ ಕೇಳಿದ ಪ್ರಶ್ನೆಗಳು ಮತ್ತು ಅವರು ನೀಡಿದ ಉತ್ತರಗಳನ್ನು ೨೬/೪೮ ರಲ್ಲಿ ನೋಡಿದ್ದೇವೆ. ಈ ವಾರ ಅದರ ಉಳಿದ ಭಾಗವನ್ನು ನೋಡೋಣ

೧೧. ನಾಮಜಪಾದಿ ಉಪಾಯಗಳನ್ನು ಮಾಡುವಾಗ ಕೃತಜ್ಞತಾಭಾವದಲ್ಲಿರಬೇಕು
೧೧ ಅ. ಪ್ರಶ್ನೆ : ಉಪಾಯ ಮಾಡುವಾಗ ಮನಸ್ಸಿನಲ್ಲಿನ ವಿಚಾರಪ್ರಕ್ರಿಯೆ ಹೇಗಿರಬೇಕು ?
೧೧ ಆ. ಉತ್ತರ : ಕಲಿಯುವ ವೃತ್ತಿಯನ್ನಿಟ್ಟುಕೊಂಡು ಸಾಧನೆಯೆಂದು ನಾಮಜಪಾದಿ ಉಪಾಯಗಳನ್ನು ಮಾಡಬೇಕು. ಕಲಿಯುವುದರಲ್ಲಿ ಆನಂದವಿದೆ, ಅದನ್ನು ಪಡೆಯಲು ಈಶ್ವರನು ಅವಕಾಶವನ್ನು ನೀಡುತ್ತಿದ್ದಾನೆ’, ಅದಕ್ಕಾಗಿ ಕೃತಜ್ಞತಾಭಾವದಲ್ಲಿರಬೇಕು.

೧೨. ಹುಣ್ಣಿಮೆ ಮತ್ತು ಅಮವಾಸ್ಯೆಯಂದು ಕೆಟ್ಟ ಶಕ್ತಿಗಳಿಂದಾಗುವ ತೊಂದರೆಗಳು ಕಡಿಮೆಯಾಗಬೇಕೆಂದು ಪ್ರಾರ್ಥನೆ ಮತ್ತು ನಾಮಜಪವನ್ನು ಹೆಚ್ಚಿಸಬೇಕು !
೧೨ ಅ. ಪ್ರಶ್ನೆ : ಹುಣ್ಣಿಮೆ ಮತ್ತು ಅಮವಾಸ್ಯೆಯ ದಿನ ಏನಾಗುತ್ತದೆ ?
೧೨ ಆ. ಉತ್ತರ : ಹುಣ್ಣಿಮೆಯಂದು ನಕಾರಾತ್ಮಕ ವಿಚಾರಗಳಿಂದ ತೊಂದರೆಯಾಗುತ್ತದೆ, ಅಮವಾಸ್ಯೆಯಂದು ತುಂಬಾ ಅವರಣ ಬರುತ್ತದೆ. ಅದ್ದರಿಂದ ಈ ಎರಡೂ ದಿನ ಜಾಗರೂಕರಾಗಿದ್ದು ನಾಮಜಪಾದಿ ಉಪಾಯಗಳ ಕಡೆಗೆ ಗಮನವಿಡಬೇಕು. ಇಷ್ಟು ಮಾತ್ರವಲ್ಲದೇ, ಇನ್ನೊಂದು ಮಹತ್ವದ ವಿಷಯ ಗಮನಕ್ಕೆ ಬಂದಿತು, ಅದೆಂದರೆ ಅಮಾವಾಸ್ಯೆಯ ಮೊದಲ ಎರಡು ದಿನಗಳಿಂದಲೇ ಹೆಚ್ಚು ಪ್ರಮಾಣದಲ್ಲಿ ತೊಂದರೆಯಾಗುತ್ತದೆ ಮತ್ತು ಹುಣ್ಣಿಮೆಯ ನಂತರದ ೨ ದಿನ ಹೆಚ್ಚು ಪ್ರಮಾಣದಲ್ಲಿ ತೊಂದರೆಯಾಗುತ್ತದೆ. ಅದ್ದರಿಂದ ಹುಣ್ಣಿಮೆ ಮತ್ತು ಅಮವಾಸ್ಯೆಯ ಎರಡು ದಿನ ಮೊದಲು, ಆ ದಿನ ಮತ್ತು ಆ ಎರಡೂಗಳ ನಂತರದ ೨ ದಿನ ಸಾಧಕರಿಗೆ ಪ್ರಾರ್ಥನೆ ಮತ್ತು ನಾಮಜಪ ಹೆಚ್ಚಿಸಲು ಹೇಳಲಾಗುತ್ತದೆ.
೧೩. ಪರಿಣಾಮಕಾರಿ ಉಪಾಯಗಳ ಪರಿಣಾಮ ೪-೫ ಗಂಟೆ ಇರುವುದು
೧೩ ಅ. ಪ್ರಶ್ನೆ : ನಾಮಜಪಾದಿ ಉಪಾಯಗಳ ಎರಡನೆಯ ಸತ್ರ ವನ್ನು (ಸೆಶ್ಶನ್) ಮಾಡುವ ಅವಶ್ಯಕತೆ ಯಾವಾಗ ಇರುತ್ತದೆ ?
೧೩ ಆ. ಉತ್ತರ : ಬೆಳಗ್ಗಿನ ನಾಮಜಪಾದಿ ಉಪಾಯ
ಪರಿಣಾಮಕಾರಿಯಾದರೆ, ನಂತರ ೪-೫ ಗಂಟೆ ಅದರ ಪರಿಣಾಮ ಇರುತ್ತದೆ. ಅದರ ನಂತರ ಪುನಃ ನಾಮಜಪಾದಿ ಉಪಾಯದ ಎರಡನೆ ಸತ್ರ ಮಾಡಬಹುದು. ಆಗ ನಾಮಜಪವನ್ನು ಹುಡುಕಿದಾಗ ಅದು ಮೊದಲಿನಗಿಂತ ಕೆಳಮಟ್ಟದ ನಾಮಜಪ ಸಿಗಬಹುದು (ಉದಾ. ಬೆಳಗ್ಗಿನ ಉಪಾಯದ ಮೊದಲ ಸತ್ರದಲ್ಲಿ ‘ಮಹಾಶೂನ್ಯ’ ಈ ಜಪ ಬಂದಿದ್ದರೆ, ೪-೫ ಗಂಟೆಯ ನಂತರ ಎರಡನೆಯ ಸತ್ರ ಮಾಡುವಾಗ ‘ಶೂನ್ಯ’ಈ ಕೆಳಗಿನ ಮಟ್ಟದ ನಾಮಜಪ ಸಿಗುತ್ತದೆ), ಅದೇರೀತಿ ಉಪಾಯ ಬೇಗನೆ ಪೂರ್ಣವಾಯಿತು’, ಎಂದು ಅನಿಸುತ್ತದೆ.
೧೪. ಉಪಾಯ ಮಾಡುವಾಗ ಧ್ಯಾನ ತಗಲಿದರೆ ಆಗುವ ಪರಿಣಾಮ
೧೪ ಅ. ಪ್ರಶ್ನೆ : ನಾಮಜಪಾದಿ ಉಪಾಯಗಳನ್ನು ಮಾಡುವಾಗ ಧ್ಯಾನವನ್ನು ತಗಲಿಸುವಾಗ ಭಾವಜಾಗೃತಿಯ ಪ್ರಯೋಗವನ್ನು ಮಾಡಬಹುದೇ ?
೧೪ ಆ. ಉತ್ತರ : ಧ್ಯಾನವನ್ನು ತಗಲಿಸುವಾಗ ಮನಸ್ಸು ನಿರ್ವಿಚಾರ
ವಾಗಿರಬೇಕು. ನಿರ್ವಿಚಾರ ಸ್ಥಿತಿಯು ನಿರ್ಗುಣ ಸ್ಥಿತಿಯಾಗಿರುತ್ತದೆ. ಆದ್ದರಿಂದ ೨ ನಿಮಿಷ ಆ ಸ್ಥಿತಿಯಲ್ಲಿದ್ದರೂ ತುಂಬಾ ಉಪಾಯ ವಾಗುತ್ತದೆ. ಉಪಾಯ ಮಾಡುವಾಗ ಒಂದು ನಾಮಜಪದ ಮೂಲಕ ಉಪಾಯವಾದರೆ ೨ ನಿಮಿಷ ಧ್ಯಾನ ಮಾಡಲು ಹೇಳಲಾಗಿದೆ. ನಂತರ ಪುನಃ ನಾಮಜಪವನ್ನು ಹುಡುಕಿ ಉಪಾಯ ಮಾಡುವುದು. ಆಗ ಮೊದಲಿಗಿಂತ ಕೆಳಗಿನ ಹಂತದ ನಾಮಜಪ ಸಿಗುತ್ತದೆ. ಚೆನ್ನಾಗಿ ಧ್ಯಾನ ತಗಲಿದರೆ ಹಾಗೂ ನಿರ್ಗುಣ ಸ್ಥಿತಿಗೆ ಹೋದರೆ, ಕೆಲವೊಮ್ಮೆ ಎರಡು ಹಂತದ ಕೆಳಗಿನ ನಾಮಜಪ ಕೂಡ ಸಿಗಬಹುದು. ಉದಾ. ‘ನಿರ್ಗುಣ’ ಈ ನಾಮಜಪದ ಮೂಲಕ ಉಪಾಯ ಮಾಡಿ ಅನಂತರ ೨ ನಿಮಿಷ ಧ್ಯಾನದಲ್ಲಿದ್ದು ಪುನಃ ನಾಮಜಪ ಹುಡುಕಿದಾಗ ಅದು ‘ಮಹಾಶೂನ್ಯ’ವಾಗಿರದೆ ‘ಶೂನ್ಯ’ ಈ ನಾಮಜಪ ಬರುತ್ತದೆ.) ಧ್ಯಾನಾವಸ್ಥೆಯಲ್ಲಿರುವಾಗ ಭಾವಜಾಗೃತಿಯ ಪ್ರಯೋಗ ಮಾಡ ಬಾರದು; ಏಕೆಂದರೆ ಭಾವಜಾಗೃತಿಯ ಪ್ರಯೋಗ ಮಾಡುವುದರಿಂದ ನಾವು ಸಗುಣಕ್ಕೆ ಬರುತ್ತೇವೆ. ಧ್ಯಾನದಲ್ಲಿ ನಾವು ನಿರ್ಗುಣಕ್ಕೆ ಹೋಗಬೇಕು.
೧೫. ನಾಮಜಪಾದಿ ಉಪಾಯಗಳನ್ನು ಮಾಡುವಾಗ ತೊಂದರೆಯಾಗಿ ಉಪಾಯ ಮಾಡಲು ಸಾಧ್ಯವಾಗದಿದ್ದರೆ ‘ಧ್ಯಾನಾವಸ್ಥೆಯಲ್ಲಿರಬಹುದು ಹಾಗೂ ಗುರುದೇವರಿಗೆ ಪ್ರಾರ್ಥನೆ ಮಾಡಬಹುದು !
೧೫ ಅ. ಪ್ರಶ್ನೆ : ನಾಮಜಪಾದಿ ಉಪಾಯ ಮಾಡುವಾಗ ತೊಂದರೆಯಾದರೆ ಏನು ಮಾಡಬೇಕು ?
೧೫ ಆ. ಉತ್ತರ : ನಾಮಜಪಾದಿ ಉಪಾಯ ಮಾಡುವಾಗ ವಿಪರೀತ
ತೊಂದರೆಯಾದರೆ ೫ ನಿಮಿಷ ನಿಲ್ಲಿಸಿ ಆಗ ಧ್ಯಾನಕ್ಕೆ ಹೋಗಬಹುದು. ಇದರಿಂದ ನಿರ್ಗುಣ ಮಟ್ಟದಲ್ಲಿ ಉಪಾಯವಾಗಿ ತೊಂದರೆ ಕಡಿಮೆಯಾಗುತ್ತದೆ. ಅನಂತರ ಪುನಃ ಉಪಾಯ ಆರಂಭಿಸಬಹುದು. ಉಪಾಯ ಮಾಡುವಾಗ ಕೆಟ್ಟಶಕ್ತಿಗಳ ಮುಖ
ಕಾಣಿಸಿದರೆ ಅಥವಾ ಆಯಾಸವಾದರೆ ‘ನನ್ನ ಸುತ್ತಲೂ ರಕ್ಷಣಾಕವಚ ನಿರ್ಮಾಣವಾಗಲಿ’, ಎಂದು ಗುರುದೇವರಿಗೆ ಪ್ರಾರ್ಥನೆ ಮಾಡಬೇಕು.
೧೬. ಕ್ಷಮಾಯಾಚನೆ ಮಾಡುವುದರಿಂದಾಗುವ ಲಾಭ
೧೬ ಅ. ಪ್ರಶ್ನೆ : ನಾಮಜಪಾದಿ ಉಪಾಯ ಮಾಡುವಾಗ ೨ ನಿಮಿಷ
ಕ್ಷಮಾಯಾಚನೆ ಮಾಡಿದರೆ ಯಾವ ಲಾಭಗಳು ಆಗುತ್ತವೆ ?
೧೬ ಆ. ಉತ್ತರ : ಕ್ಷಮಾಯಾಚನೆ ಮಾಡುವುದರಿಂದ ನಮ್ಮಲ್ಲಿ ಶರಣಾಗತಭಾವ ನಿರ್ಮಾಣವಾಗುತ್ತದೆ. ಅದರಿಂದ ಉಪಾಯ ಇನ್ನೂ ಹೆಚ್ಚು ಪರಿಣಾಮಕಾರಿಯಾಗುತ್ತದೆ.
‘ಗುರುದೇವರ ಅಪಾರ ಕೃಪೆಯಿಂದ ನನಗೆ ಸದ್ಗುರು ಗಾಡಗೀಳ ಕಾಕಾರವರ ಮಾರ್ಗದರ್ಶನ ಲಭಿಸಿತು’, ಅದಕ್ಕಾಗಿ ನಾನು ಗುರುದೇವರು ಮತ್ತು ಸದ್ಗುರು ಗಾಡಗೀಳಕಾಕಾರವರ ಚರಣಗಳಿಗೆ ಕೋಟಿ ಕೋಟಿ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ.’ (ಮುಕ್ತಾಯ)
– ಕು. ಪ್ರಿಯಾಂಕಾ ಪ್ರಭುದೇಸಾಯಿ, ಠಾಣೆ, ಮಹಾರಾಷ್ಟ್ರ (೨೯.೧೨.೨೦೨೪)
ಸೋಮನಾಥ ಜ್ಯೋತಿರ್ಲಿಂಗದ ದಿವ್ಯ ಅಂಶಗಳು ಸನಾತನ ಸಂಸ್ಥೆಗೆ ಪ್ರಾಪ್ತವಾಗುವ ವರೆಗಿನ ದಿವ್ಯ ಪ್ರಯಾಣ !
ಯಜ್ಞಸಂಸ್ಕೃತಿಯನ್ನು ಪುನರುಜ್ಜೀವನಗೊಳಿಸುವ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ !
ಯಜ್ಞಸಂಸ್ಕೃತಿಯ ಸಂವರ್ಧನೆ ಬಗ್ಗೆ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ದೃಷ್ಟಿಕೋನ !
ಹಿಂದೂ ರಾಷ್ಟ್ರದ ಸ್ಥಾಪನೆಗಾಗಿಯೇ ಯಜ್ಞಸಮಾರಂಭ ಮತ್ತು ಸಮಷ್ಟಿ ಧರ್ಮಪ್ರಸಾರ !
೧೨ ಜ್ಯೋತಿರ್ಲಿಂಗಗಳಲ್ಲಿ ಪ್ರಥಮವಾಗಿರುವ ಮೂಲ ಸೋಮನಾಥ ಜ್ಯೋತಿರ್ಲಿಂಗದ ದಿವ್ಯ ಅಂಶಗಳು ಸನಾತನ ಸಂಸ್ಥೆಗೆ ಸಮರ್ಪಣೆ !
ಯಜ್ಞಗಳನ್ನು ಆಯೋಜಿಸುವಲ್ಲಿ ಸಚ್ಚಿದಾನಂದ ಪರಬ್ರಹ್ಮ ಡಾಕ್ಟರರ ವ್ಯಾಪಕ ಉದ್ದೇಶ !