
‘ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಅವರ ೮೩ನೇ ಜನ್ಮೋತ್ಸವ ಮತ್ತು ಸನಾತನ ಸಂಸ್ಥೆಯ ರಜತ ಮಹೋತ್ಸವದ ಅಂಗವಾಗಿ, ಮೇ ೧೭ ರಿಂದ ೧೯, ೨೦೨೫ ರವರೆಗೆ ಫರ್ಮಾಗುಡಿ (ಗೋವಾ) ಇಲ್ಲಿನ ಇಂಜನಿಯರಿಂಗ್ ಕಾಲೇಜಿನ ಆವರಣದಲ್ಲಿ ‘ಸನಾತನ ರಾಷ್ಟ್ರ ಶಂಖನಾದ ಮಹೋತ್ಸವ’ ನಡೆಯಿತು. ಈ ಮಹೋತ್ಸವದಲ್ಲಿ ನನಗೆ ಒಂದು ಸೇವೆ ಸಿಕ್ಕಿತ್ತು. ಆದರೆ, ಆ ಸೇವೆಯನ್ನು ನನಗೆ ಪರಿಪೂರ್ಣವಾಗಿ ಮತ್ತು ಭಾವಪೂರ್ಣವಾಗಿ ಮಾಡಲು ಆಗದ ಕಾರಣ, ನನ್ನ ಮನಸ್ಸಿನಲ್ಲಿ ತೀವ್ರ ಪಶ್ಚಾತ್ತಾಪ ಮೂಡಿತು ಮತ್ತು ಮನಸ್ಸು ಅಶಾಂತವಾಯಿತು. ಇದರ ಬಗ್ಗೆ ಚಿಂತನೆ ಮಾಡುತ್ತಿದ್ದಾಗ, ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಅವರ ಕೃಪೆಯಿಂದ ನನ್ನ ಗಮನಕ್ಕೆ ಬಂದ ಅಂಶಗಳನ್ನು ಇಲ್ಲಿ ನೀಡಲಾಗಿದೆ.
೧. ಪಶ್ಚಾತ್ತಾಪ ಎಂದರೇನು ?
ಪಶ್ಚಾತ್ತಾಪ ಎಂದರೆ ತನ್ನ ಮನಸ್ಸಿಗೆ ಆದ ಅಪರಾಧದ ಪ್ರಜ್ಞೆ ಮತ್ತು ಅದರಿಂದಾಗಿ ಮನಸ್ಸಿನಲ್ಲಿ ಮೂಡುವ ಅಶಾಂತ ಸ್ಥಿತಿ.
೨. ಪಶ್ಚಾತ್ತಾಪ ಮೂಡಲು ಕಾರಣಗಳು
ಅ. ನಾವು ಸೇವೆ ಮಾಡುವಾಗ ಅಥವಾ ಇನ್ನಾವುದೇ ಸಮಯದಲ್ಲಿ ತಪ್ಪು ಮಾಡುವುದು.
ಆ. ಜವಾಬ್ದಾರ ಸಾಧಕರು ಒಂದು ಸೇವೆಯನ್ನು ಹೇಳಿದ್ದರೂ ನಾವು ಅವರ ಆಜ್ಞಾಪಾಲನೆ ಮಾಡದಿರುವುದು.
ಇ. ನಮ್ಮ ಅಯೋಗ್ಯ ಮಾತಿನಿಂದ ಇತರರಿಗೆÉ ನೋವಾಗುವುದು.
ಈ. ಯಾವುದೇ ಒಂದು ಸೇವೆಯನ್ನು ನಮ್ಮಿಂದ ಸ್ವೀಕರಿಸಲು ಸಾಧ್ಯವಾಗದಿರುವುದು, ಸೇವೆ ಅಪೂರ್ಣವಾಗಿ ಉಳಿಯುವುದು ಅಥವಾ ಭಾವಪೂರ್ಣ ಮತ್ತು ಪರಿಪೂರ್ಣವಾಗಿ ಆಗದಿರುವುದು.
೩. ಪಶ್ಚಾತ್ತಾಪ ಮೂಡುವುದರಿಂದಾಗುವ ಲಾಭಗಳು
ಅ. ಮನಸ್ಸಿನಲ್ಲಿ ತೀವ್ರ ಪಶ್ಚಾತ್ತಾಪ ಮೂಡಿದಾಗ ನಮ್ಮಲ್ಲಿ ಸುಧಾರಣೆಯ ತೀವ್ರ ಹಂಬಲ ಹೆಚ್ಚುತ್ತದೆ.
ಆ. ನಮ್ಮಲ್ಲಿ ಆಜ್ಞಾಪಾಲನೆಯ ತೀವ್ರ ಹಂಬಲ ಮೂಡುತ್ತದೆ.
ಇ. ಇನ್ನೊಬ್ಬರಿಗೆ ‘ನೋವಾಗುವಂತೆ ಮಾತನಾಡಬಾರದು’ ಎಂಬ ಭಾವನೆ ನಮ್ಮಲ್ಲಿ ಮೂಡುತ್ತದೆ.
ಈ. ನಮ್ಮಲ್ಲಿ ಶರಣಾಗತಿಭಾವ ಹೆಚ್ಚುತ್ತದೆ.
೪. ಪಶ್ಚಾತ್ತಾಪ ಮೂಡಿ ಮನಸ್ಸಿನಲ್ಲಿ ನಿರಂತರವಾಗಿ ಅದೇ ಆಲೋಚನೆಗಳು ಬರುತ್ತಿದ್ದರೆ ಅದರಿಂದಾಗುವ ಹಾನಿ
ಅ. ಮನಸ್ಸಿನಲ್ಲಿ ಪಶ್ಚಾತ್ತಾಪ ಇರುವಾಗ ಬೇರೆ ಸೇವೆ ಮಾಡಿದರೆ ಅದರಲ್ಲಿ ತಪ್ಪುಗಳು ಆಗಬಹುದು.
ಆ. ಮನಸ್ಸಿಗೆ ಕೆಟ್ಟದನಿಸುತ್ತದೆ. ‘ನಾವು ಇದರಿಂದ ಯಾವಾಗ ಹೊರಬರುತ್ತೇವೆ ?’ ಎಂಬ ಯೋಚನೆಯಿಂದ ಮನಸ್ಸು ನಿರಾಶೆಗೆ ಹೋಗಬಹುದು.
ಇ. ಕೆಟ್ಟ ಶಕ್ತಿಗಳು ಮನಸ್ಸಿನ ಈ ಸ್ಥಿತಿಯ ಲಾಭ ಪಡೆಯಬಹುದು.
೫. ಪಶ್ಚಾತ್ತಾಪ ಒಳ್ಳೆಯದೇ ಅಥವಾ ಕೆಟ್ಟದ್ದೇ ?
ಪಶ್ಚಾತ್ತಾಪ ಮೂಡುವುದು ಖಂಡಿತವಾಗಿಯೂ ಒಳ್ಳೆಯದು. ಇದರಿಂದ ತಪ್ಪುಗಳ ಪರಿಣಾಮಗಳ ತೀವ್ರತೆ ಅಂತರ್ಮನವನ್ನು ತಲುಪುತ್ತದೆ. ಆದರೆ, ಸತತವಾಗಿ ಮತ್ತು ದೀರ್ಘಕಾಲ ಈ ಸ್ಥಿತಿಯಲ್ಲಿ ಇರುವುದು ಕೆಟ್ಟದ್ದಾಗಿದೆ.
೬. ಪರಿಹಾರಗಳು
ಅ. ಯಾವುದೇ ಕಾರಣದಿಂದ ಮನಸ್ಸಿನಲ್ಲಿ ಪಶ್ಚಾತ್ತಾಪ ಮೂಡಿದರೆ, ಮೊದಲು ಅದನ್ನು ಮನಃಪೂರ್ವಕವಾಗಿ ಸ್ವೀಕರಿಸಬೇಕು.
ಆ. ಯಾವ ಕಾರಣದಿಂದ ಪಶ್ಚಾತ್ತಾಪ ಮೂಡಿದೆಯೋ, ಅದನ್ನು ಹೋಗಲಾಡಿಸಲು ಭೌತಿಕವಾಗಿ ಪರಿಹಾರ ಮಾಡಬೇಕು ಉದಾ. ಒಬ್ಬ ವ್ಯಕ್ತಿಯೊಂದಿಗೆ ಆಯೋಗ್ಯ ಮಾತನಾಡಿದುದರಿಂದ ಪಶ್ಚಾತ್ತಾಪ ಮೂಡಿದ್ದರೆ, ಮನಃಪೂರ್ವಕವಾಗಿ ಅವರ ಕ್ಷಮೆ ಕೇಳಬೇಕು.
ಇ. ಮುಂದೆ ನಮ್ಮಿಂದ ಯೋಗ್ಯ ಕೃತಿಯಾಗಲು ಮನಸ್ಸಿಗೆ ಸ್ವಯಂಸೂಚನೆಗಳನ್ನು ನೀಡಬೇಕು.
ಈ. ‘ಸಂಪೂರ್ಣವಾಗಿ ಗುರುದೇವರಲ್ಲಿ ಶರಣಾಗಿ, ಅವರ ಹೊರತಾಗಿ ಮನಸ್ಸಿನ ಈ ಸ್ಥಿತಿ ದೂರವಾಗುವುದಿಲ್ಲ’ ಎಂಬ ಭಾವ ವನ್ನು ಅಂತರ್ಮನದಲ್ಲಿ ಜಾಗೃತಗೊಳಿಸಬೇಕು. ‘ಗುರುದೇವರೇ ಸಹಾಯ ಮಾಡಬೇಕು’ ಎಂದು ಕಳಕಳಿಯಿಂದ ಪ್ರಾರ್ಥಿಸಬೇಕು. ‘ದಯಾಘನ ಗುರುದೇವರೇ ನನಗೆ ಈ ಅಂಶಗಳನ್ನು ಸೂಚಿಸಿ, ನನ್ನಿಂದ ಬರೆಸಿಕೊಂಡಿದ್ದಾರೆ’ ಇದಕ್ಕಾಗಿ ನಾನು ಅವರ ಚರಣಗಳಿಗೆ ಕೋಟಿ ಕೋಟಿ ಕೃತಜ್ಞತೆ ಸಲ್ಲಿಸುತ್ತೇನೆ.
– ಶ್ರೀ. ಕಿರಣ ಕುಲಕರ್ಣಿ (ಆಧ್ಯಾತ್ಮಿಕ ಮಟ್ಟ ಶೇ.೬೩ ವಯಸ್ಸು ೬೪ ವರ್ಷ), ಮಿರಜ, ಜಿಲ್ಲೆ ಸಾಂಗ್ಲಿ. (೯.೫.೨೦೨೫)
ಸೋಮನಾಥ ಜ್ಯೋತಿರ್ಲಿಂಗದ ದಿವ್ಯ ಅಂಶಗಳು ಸನಾತನ ಸಂಸ್ಥೆಗೆ ಪ್ರಾಪ್ತವಾಗುವ ವರೆಗಿನ ದಿವ್ಯ ಪ್ರಯಾಣ !
ಯಜ್ಞಸಂಸ್ಕೃತಿಯನ್ನು ಪುನರುಜ್ಜೀವನಗೊಳಿಸುವ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ !
ಯಜ್ಞಸಂಸ್ಕೃತಿಯ ಸಂವರ್ಧನೆ ಬಗ್ಗೆ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ದೃಷ್ಟಿಕೋನ !
ಹಿಂದೂ ರಾಷ್ಟ್ರದ ಸ್ಥಾಪನೆಗಾಗಿಯೇ ಯಜ್ಞಸಮಾರಂಭ ಮತ್ತು ಸಮಷ್ಟಿ ಧರ್ಮಪ್ರಸಾರ !
೧೨ ಜ್ಯೋತಿರ್ಲಿಂಗಗಳಲ್ಲಿ ಪ್ರಥಮವಾಗಿರುವ ಮೂಲ ಸೋಮನಾಥ ಜ್ಯೋತಿರ್ಲಿಂಗದ ದಿವ್ಯ ಅಂಶಗಳು ಸನಾತನ ಸಂಸ್ಥೆಗೆ ಸಮರ್ಪಣೆ !
ಯಜ್ಞಗಳನ್ನು ಆಯೋಜಿಸುವಲ್ಲಿ ಸಚ್ಚಿದಾನಂದ ಪರಬ್ರಹ್ಮ ಡಾಕ್ಟರರ ವ್ಯಾಪಕ ಉದ್ದೇಶ !