ಸಾಧಕರೇ, ಮಾಯೆಯ ಆಮಿಷಗಳಿಗೆ ಬಲಿಯಾಗದೆ ಸಾಧನೆ ಮಾಡಿ ಶಾಶ್ವತ ಆನಂದವನ್ನು ಪಡೆಯಿರಿ !

ಶ್ರೀಸತ್‌ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ

‘ಒಬ್ಬ ಸಾಧಕನು ಬಾಲ್ಯದಿಂದಲೇ ಸನಾತನ ಸಂಸ್ಥೆಯ ಮಧ್ಯಮದಿಂದ ಸಾಧನೆ ಮಾಡಲು ಪ್ರಾರಂಭಿಸಿದನು. ಅವನ ಇಡೀ ಕುಟುಂಬ ಸಾಧನೆ ಮಾಡುತ್ತಿದ್ದರಿಂದ ಬಾಲ್ಯದಿಂದಲೇ ಅವನ ಮೇಲೆ ಸಾಧನೆಯ ಸಮಸ್ಕಾರ ಗಳಾದವು ಮತ್ತು ಅವನ ಮನಸ್ಸಿನಲ್ಲಿ ಅಧ್ಯಾತ್ಮದ ಆಸಕ್ತಿ ಮೂಡಿಸಿತು. ಮಾಯೆಯ ಆಮಿಷಗಳನ್ನು ತ್ಯಜಿಸಿ ಕಳೆದ ಕೆಲವು ವರ್ಷಗಳಿಂದ ಅವನು ಸನಾತನದ ರಾಮನಾಥಿ ಆಶ್ರಮದಲ್ಲಿ ಪೂರ್ಣಾವಧಿ ಸಾಧನೆ ಮಾಡುತ್ತಿದ್ದಾನೆ. ಕೆಲವು ದಿನಗಳ ಹಿಂದೆ ಆ ಸಾಧಕ ಮತ್ತು ಅವನ ಸ್ನೇಹಿತನ ನಡುವೆ ನಡೆದ ಸಂಭಾಷಣೆಯನ್ನು ಮುಂದೆ ನೀಡಲಾಗಿದೆ.

ಸ್ನೆಹಿತ : ನಿನಗೆ ಉತ್ತಮ ವೇತನದ ಮತ್ತು ಉತ್ತಮ ಹುದ್ದೆಯ ನೌಕರಿ ಅವಕಾಶವು ಸಿಕ್ಕಿದೆ. ಆ ನೌಕರಿಯನ್ನು ನೀನು ಮಾಡು.

ಸಾಧಕ : ನನಗೆ ನೌಕರಿ ಮಾಡಲು ಇಷ್ಟವಿಲ್ಲ. ನಾನು ಸನಾತನದ ಸಂಸ್ಥೆಯ ಮಾರ್ಗದರ್ಶನದ ಪ್ರಕಾರ ಪೂರ್ಣಾವಧಿ ಸಾಧನೆ ಮಾಡುತ್ತಿದ್ದೇನೆ.

ಸ್ನೇಹಿತ : ‘ನಿನಗೆ ಅಲ್ಲಿ ಏನು ಸಿಕ್ಕಿದೆಯೆಂದು ನೀನು ಈ ಎಲ್ಲಾ ಅವಕಾಶಗಳನ್ನು ನಿರಾಕರಿಸುತ್ತಿದ್ದೀಯಾ ?’

ಸಾಧಕ : ಸಾಧನೆಯಿಂದ ನನಗೆ ಸಮಾಧಾನ ಮತ್ತು ಆನಂದ ಸಿಗುತ್ತದೆ.

ಸ್ನೇಹಿತ : ‘ಹಣ ಅಥವಾ ನೌಕರಿಯಲ್ಲಿನ ಉನ್ನತ ಹುದ್ದೆ’ ಇವುಗಳಿಗಿಂತ ದೊಡ್ಡದೇನಾದರೂ ಇದೆಯೇ ? ನೀನು ನಿನ್ನ ಪತ್ನಿ ಮತ್ತು ನಿಮ್ಮ ಭವಿಷ್ಯದ ಬಗ್ಗೆ ವಿಚಾರ ಮಾಡಿದ್ದೀಯಾ ?

ಸಾಧಕ : ಸಾಧನೆಯೇ ನಿಜವಾದ ಆನಂದ ಮತ್ತು ಇದುವೇ ಜೀವನದ ನಿಜವಾದ ಸಂಪಾದನೆಯಾಗಿದೆ. ಇದರಲ್ಲಿ ನನಗೆ ನನ್ನ ಪತ್ನಿಯ ಸಹಕಾರವೂ ಲಭಿಸಿದೆ.

ಸಾಧಕನ ಈ ಮಾತಿನಿಂದ ಆತನ ಸ್ನೇಹಿತನು ಪ್ರಭಾವಿತನಾದನು. ಉತ್ತಮ ವೇತನದ ನೌಕರಿಯ ಸಹಜವಾಗಿ ದೊರಕುವ ಅವಕಾಶವನ್ನು ನಿರಾಕರಿಸಿದ ಸಾಧಕನ ಬಗ್ಗೆ ಅವನಿಗೆ ಆಶ್ಚರ್ಯವಾಯಿತು. ಸಾಧಕನು ಪೂರ್ಣಾವಧಿ ಸಾಧನೆ ಮಾಡುತ್ತಿರುವ ಸನಾತನ ಆಶ್ರಮವನ್ನು ನೋಡುವ ಮತ್ತು ಸನಾತನ ಸಂಸ್ಥೆಯ ಮಾರ್ಗದರ್ಶನದಂತೆ ಸಾಧನೆ ಮಾಡಬೇಕೆಂಬ ಇಚ್ಛೆಯನ್ನು ಆತನ ಸ್ನೇಹಿತ ವ್ಯಕ್ತಪಡಿಸಿದನು. ಈ ಸಾಧಕನ ವಿಚಾರಗಳು ಆದರ್ಶಪ್ರಾಯವಾಗಿದ್ದು ಅವನು ಸಾಧನೆಯಲ್ಲಿನ ನಿಜವಾದ ಆನಂದವನ್ನು ಅನುಭವಿಸಿರುವುದರಿಂದ ಆತನಿಗೆ ಭೌತಿಕ ಜಗತ್ತಿನ ಆಕರ್ಷಣೆ ಇಲ್ಲ. ಗುರುದೇವರ ಬೋಧನೆಗಳಿಂದ ಮಾಯೆಯ ಆಮಿಷಗಳಿಗೆ ಬಲಿಯಾಗದೆ ಸಾಧನೆಯ ಆನಂದ ಅನುಭವಿಸುತ್ತಿರುವ ಸಾಧಕ ಮತ್ತು ಆತನಿಗೆ ಸಹಕಾರ ಮಾಡುತ್ತಿರುವ ಆತನ ಪತ್ನಿಯ ವಿಚಾರಗಳು ಪ್ರಶಂಸನೀಯ ಮತ್ತು ಇತರ ಸಾಧಕರಿಗೆ ಅನುಕರಣೀಯವಾಗಿವೆ. ತ್ಯಾಗ ಮಾಡಿದಾಗ ಮಾತ್ರ ನಿಜವಾದ ಆನಂದ ಮತ್ತು ಸಮಾಧಾನ ಸಿಗುತ್ತದೆ. ಆದುದರಿಂದ ಸಚ್ಚಿದಾನಂದ ಪರಬ್ರಹ್ಮ ಗುರುದೇವರು ಸಾಧಕರಿಗೆ ತನು-ಮನ-ಧನದ ತ್ಯಾಗ ಮಾಡುವ ಬೋಧನೆಯನ್ನು ನೀಡಿದ್ದಾರೆ. ಧನಾದಿ ಮಾಯೆಯ ವಿಷಯಗಳು ಅಶಾಶ್ವತವಾಗಿರುವುದರಿಂದ ಅವು ಕ್ಷಣಿಕ ಸುಖವನ್ನು ನೀಡುತ್ತವೆ, ಆದರೆ ಸಾಧನೆಯಿಂದ ಅತ್ಯುಚ್ಚ ಮಟ್ಟದ ಆನಂದ ಸಿಗುತ್ತದೆ. ಸಾಧಕರೇ, ಗುರುದೇವರು ನೀಡಿದ ಬೋಧನೆಯಂತೆ ಸಾಧನೆಯಲ್ಲಿನ ಶಾಶ್ವತ ಆನಂದವನ್ನು ಅನುಭವಿಸಿ !’

– ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ (೧೬.೭.೨೦೨೫)