
ಕೆಲವರು ಗಣೇಶನನ್ನು ವಿಪತ್ತುಗಳಿಂದ ದೂರವಿರಿಸಲು ಪೂಜಿಸಿದರೆ, ಇನ್ನು ಕೆಲವರು ತಮ್ಮ ಆಸೆಗಳನ್ನು ಈಡೇರಿಸಲು ಪೂಜಿಸುತ್ತಾರೆ, ಇನ್ನು ಕೆಲವರು ಮನಸ್ಸಿನ ಶಾಂತಿಗಾಗಿ ಅಥವಾ ನಿರ್ದಿಷ್ಟ ಉದ್ದೇಶ ಅಥವಾ ಆಕಾಂಕ್ಷೆಯನ್ನು ಸಾಧಿಸಲು ಪೂಜಿಸುತ್ತಾರೆ. ಆದರೆ, ಸಾಧಕರಲ್ಲಿ ಪರಿಶ್ರಮ, ತಾಳ್ಮೆ, ಸಂಯಮ ಶ್ರದ್ಧೆ ಮತ್ತು ನಿಷ್ಠೆ ಅಗತ್ಯ ಬೇಕಾಗುತ್ತದೆ.
೧. ೨೧ ದಿನ ಗಣಪತಿ ದೇವಸ್ಥಾನಕ್ಕೆ ಹೋಗಿ ಶ್ರೀ ಗಣೇಶನ ದರ್ಶನವನ್ನು ಪಡೆಯುವುದು
೨. ನಿಯಮಿತವಾಗಿ ಗಣಪತಿಯ ದೇವಸ್ಥಾನಕ್ಕೆ ಹೋಗಿ ಶ್ರೀ ಗಣಪತಿಯ ಮೂರ್ತಿಗೆ ೨೧ ಪ್ರದಕ್ಷಿಣೆಗಳನ್ನು ಹಾಕುವುದು
೩. ನಿಯಮಿತವಾಗಿ ‘ಶ್ರೀ ಗಣೇಶ ಅಥರ್ವಶೀರ್ಷ’ವನ್ನು ೨೧ ಬಾರಿ ಪಠಿಸುವುದು ಮತ್ತು ಶ್ರೀ ಗಣೇಶನ ಮೂರ್ತಿಯ ಮೇಲೆ ಮಡಿಯಿಂದ ಅಭಿಷೇಕವನ್ನು ಮಾಡುವುದು
೪. ಗಣಪತಿಯ ದೇವಸ್ಥಾನಕ್ಕೆ ಹೋಗಿ ಶ್ರದ್ಧೆ ಮತ್ತು ಭಕ್ತಿ ಪೂರ್ವಕ ದರ್ಶನ ಪಡೆಯುವುದು
೫. ಶ್ರೀ ಗಣೇಶನಿಗೆ ಗರಿಕೆಗಳನ್ನು ಅರ್ಪಿಸಿಯೇ ಆಹಾರವನ್ನು ಸೇವಿಸುವುದು
೬. ನಾರದಕೃತ ‘ಸಂಕಟನಾಶನ ಸ್ತೋತ್ರ’ವನ್ನು ಪಠಿಸುವುದು
೭. ‘ಗಣೇಶಗೀತೆಯ’ ನಿಯಮಿತ ಒಂದು ಶ್ಲೋಕವನ್ನು ಹೇಳುವುದು
೮. ನಿಯಮಿತ ಗಣೇಶನನ್ನು ಪೂಜಿಸುವುದು
೯. ೨೧, ೪೮ ಮತ್ತು ೧೨೧ ದಿನಗಳ ವರೆಗೆ ಗಜಾನನನ ವಿಶಿಷ್ಟ ನಾಮಜಪವನ್ನು ಮಾಡುವುದು
೧೦. ಓಂ ಶ್ರೀಂ ಹ್ರೀಂ ಕ್ಲೀಂ ಗ್ಲೌಂ ಗಂ ಗಣಪತಯೇ ವರ ವರದ ಸರ್ವಜನಂ ಮೇ ವಶಮಾನಯ ಸ್ವಾಹಾ |’ ಈ ‘ಸಂಕಟನಿವಾರಣೆ’ ಮಂತ್ರವನ್ನು ಪಠಿಸಿ ಶ್ರೀ ಗಣಪತಿಯ ಮೂರ್ತಿಯ ಎದುರಿಗೆ ಉದುಬತ್ತಿಯ ವಿಭೂತಿಯನ್ನು ಸಂಗ್ರಹಿಸಿ ಅದನ್ನು ತನ್ನ ಮತ್ತು ಕುಟುಂಬದಲ್ಲಿನ ಎಲ್ಲರ ಹಣೆಗೆ ಹಚ್ಚಬೇಕು.
೧೧. ಗಣೇಶನ ದೇವಸ್ಥಾನದಲ್ಲಿ ಅಥವಾ ಅಷ್ಟವಿನಾಯಕಗಳಲ್ಲಿ ಒಂದು ಜಾಗೃತ ಸ್ಥಳದಲ್ಲಿ ಕುಳಿತು ತಮ್ಮ ಸ್ವಹಸ್ತಾಕ್ಷರಗಳಲ್ಲಿ ‘ಗಣೇಶಸ್ತೋತ್ರ’ವನ್ನು ಬರೆಯಬೇಕು. ಆ ಸ್ತೋತ್ರಗಳನ್ನು ಕನಿಷ್ಠ ಪುನರಾವೃತ್ತಿಯ, ಅಂದರೆ ಪ್ರತಿಗಳನ್ನು ತೆಗೆದು ಅವುಗಳನ್ನು ೮ ವಟುಗಳಿಗೆ ಹಂಚಬೇಕು. ಅವರಿಂದ ಸ್ತೋತ್ರವನ್ನು ಪಠಿಸಿಕೊಳ್ಳ ಬೇಕು. ವಟುಗಳಿಗೆ ಸಿಹಿ ಭೋಜನವನ್ನು ನೀಡಿ ದಕ್ಷಿಣೆಯನ್ನೂ ನೀಡಬೇಕು.
೧೨. ಮಣ್ಣಿನಿಂದ ಹೊಸ ಗಣೇಶಮೂರ್ತಿಯನ್ನು ಸ್ವತಃ ಸಿದ್ಧಪಡಿಸಬೇಕು. ಅದನ್ನು ಶಾಸ್ತ್ರೋಕ್ತವಾಗಿ ಭಾವಪೂರ್ಣ ಪೂಜಿಸಬೇಕು. ನಂತರ ವಿಸರ್ಜನೆ ಮಾಡಬೇಕು.
೧೩. ಮಂದಾರ ವೃಕ್ಷದ ಬೇರಿನಲ್ಲಿ ತಯಾರಾದ ಗಣೇಶ ಮೂರ್ತಿಯನ್ನು ಪೂಜಿಸಬೇಕು. ಅದಕ್ಕೆ ‘ಮಂದಾರಗಣೇಶನ ಉಪಾಸನೆ’ ಎಂದು ಹೇಳುತ್ತಾರೆ. ೨೧ ವರ್ಷ ವೃಕ್ಷದ ಪೂಜೆಯನ್ನು ಮಾಡಿದರೆ ವೃಕ್ಷದಲ್ಲಿ ಗಣೇಶನ ಮೂರ್ತಿ ಪ್ರಕಟವಾಗುತ್ತದೆ.
೧೪. ಬನ್ನಿಮರದ ಕೆಳಗೆ ಕುಳಿತು ಮಾಡಿದ ಉಪಾಸನೆಯಿಂದ ತಕ್ಷಣ ಫಲಪ್ರಾಪ್ತಿ ಆಗುತ್ತದೆ.
೧೫. ಸಂಕಟ ನಿವಾರಣೆಗಾಗಿ ೪೨ ಮಂಗಳವಾರ ವ್ರತವನ್ನು ಮಾಡಬೇಕು. ಅದನ್ನು ಮುಂದಿನಂತೆ ಮಾಡಬೇಕು. ದಿನವಿಡಿ ಉಪವಾಸ ಮಾಡಬೇಕು. ಗಣೇಶನಿಗೆ ಕೆಂಪು ಹಣ್ಣುಗಳು, ಬೆಲ್ಲ, ಕೆಂಪು ಹೂವು, ತಾಮ್ರದ ನಾಣ್ಯ, ಚೆನ್ನಂಗಿಯ ಬೇಳೆ, ಕೆಂಪು ಅಡಿಕೆ ಮತ್ತು ತೆಂಗಿನಕಾಯಿಯನ್ನು ಅರ್ಪಿಸಬೇಕು. ಸಿಹಿ ಶಿರಾವನ್ನು ಸೇವಿಸಿ ಉಪವಾಸವನ್ನು ಬಿಡಬೇಕು. ೪೨ ಮಂಗಳವಾರಗಳ ನಂತರ ‘ಸತ್ಯವಿನಾಯಕ’ವನ್ನು ಮಾಡಬೇಕು.
ತೀವ್ರ ಅನಾರೋಗ್ಯ ಅಥವಾ ರೋಗಗಳಾದರೆ ಮತ್ತು ಎಲ್ಲ ರೀತಿಯ ವೈದ್ಯಕೀಯ ಚಿಕಿತ್ಸೆಗಳನ್ನು ಮಾಡಿದರೂ ರೋಗಿಯ ಆರೋಗ್ಯದಲ್ಲಿ ಸುಧಾರಣೆ ಕಂಡುಬರದಿದ್ದರೆ, ಶ್ರೀ ಗಣೇಶನ ಮೂರ್ತಿಯ ಮೇಲೆ ಅಭಿಷೇಕವನ್ನು ಮಾಡಿ ಸತ್ಪಾತ್ರ ಬ್ರಾಹ್ಮಣನಿಗೆ ಚಿನ್ನದ ಗಣೇಶಮೂರ್ತಿಯನ್ನು ದಾನ ಮಾಡಬೇಕು. ಇದರಿಂದ ರೋಗಿಯ ಆರೋಗ್ಯದಲ್ಲಿ ಸುಧಾರಣೆ ಕಂಡುಬರುತ್ತದೆ. ಗಣೇಶನ ನಾಮಜಪವನ್ನು ಮಾಡುವುದರಿಂದ ಗ್ರಹಪೀಡೆ ಅಥವಾ ಗ್ರಹದೋಷ ದೂರವಾಗುತ್ತವೆ.
(ಆಧಾರ : ‘ಹರಿ-ವಿಜಯ’, ದೀಪೋತ್ಸವ ೨೦೦೮)
ರಾಜ್ಯದಲ್ಲಿನ ಪ್ರಾರ್ಥನಾ ಸ್ಥಳಗಳ ಮೇಲಿನ ಧ್ವನಿವರ್ಧಕಗಳ ಶಬ್ದವನ್ನು ಸೀಮಿತವಾಗಿಡಿ !
ಅಕ್ಷಯ ತದಿಗೆಯ ದಿನ ಪುಣ್ಯವನ್ನು ಹೇಗೆ ಪಡೆಯುವಿರಿ ?
ಅಕ್ಷಯ ತದಿಗೆಯ ಶುಭ ಮುಹೂರ್ತದ ಮಹತ್ವ !
ಅಕ್ಷಯ ತದಿಗೆಯಂದು ಬಿಡಿಸುವ ರಂಗೋಲಿಗಳು
ಸಹೋದರ ಬಿದಿಗೆ (ಯಮದ್ವಿತೀಯಾ) ಕಾರ್ತಿಕ ಶುಕ್ಲ ಬಿದಿಗೆ (ಅಕ್ಟೋಬರ್ ೨೩)
ಬಲಿಪಾಡ್ಯ (ಅಕ್ಟೋಬರ್ ೨೨)