12 ನಿಮಿಷಗಳ ಪತ್ರಿಕಾಗೋಷ್ಠಿಯಲ್ಲಿ ಪತ್ರಕರ್ತರ ಯಾವುದೇ ಪ್ರಶ್ನೆಗಳಿಗೆ ಉತ್ತರಿಸಲಿಲ್ಲ

ವಾಷಿಂಗ್ಟನ (ಅಮೆರಿಕಾ) – ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ರಷ್ಯಾದ ಅಧ್ಯಕ್ಷ ಪುಟಿನ್ ಅವರ ನಡುವೆ ಉಕ್ರೇನ್‌ನೊಂದಿಗೆ ನಡೆಯುತ್ತಿರುವ ಯುದ್ಧವನ್ನು ಸ್ಥಗಿತಗೊಳಿಸುವ ಕುರಿತು ಅಮೆರಿಕದ ಅಲಾಸ್ಕಾ ರಾಜ್ಯದಲ್ಲಿ 3 ಗಂಟೆಗಳ ಕಾಲ ಚರ್ಚೆ ನಡೆಯಿತು. ಇದರ ನಂತರ, ಇಬ್ಬರೂ ನಾಯಕರು ಕೇವಲ 12 ನಿಮಿಷಗಳ ಕಾಲ ಜಂಟಿ ಪತ್ರಿಕಾಗೋಷ್ಠಿಯನ್ನು ನಡೆಸಿದರು; ಆದರೆ ಅವರು ಪತ್ರಕರ್ತರ ಯಾವುದೇ ಪ್ರಶ್ನೆಗಳಿಗೆ ಉತ್ತರಿಸಲಿಲ್ಲ. ಈ ಸಂದರ್ಭದಲ್ಲಿ ಟ್ರಂಪ್ ಅವರು, ‘ನಮ್ಮ ಸಭೆ ಅತ್ಯಂತ ಸಕಾರಾತ್ಮಕವಾಗಿತ್ತು. ನಾವು ಅನೇಕ ವಿಷಯಗಳ ಮೇಲೆ ಒಮ್ಮತಕ್ಕೆ ಬಂದಿದ್ದೇವೆ; ಆದರೆ ಯಾವುದೇ ಒಪ್ಪಂದವಾಗಿಲ್ಲ’ ಎಂದು ಹೇಳಿದರು. ಪುಟಿನ್ ಅವರು ಮಾತನಾಡಿ, ‘ರಷ್ಯಾದ ಸುರಕ್ಷತೆ ನಮಗೆ ಅತ್ಯಂತ ಮುಖ್ಯವಾಗಿದೆ’ ಎಂದು ಹೇಳಿದರು. ಪುಟಿನ್ ಮುಂದಿನ ಸಭೆಯನ್ನು ಮಾಸ್ಕೋದಲ್ಲಿ ಆಯೋಜಿಸಲು ಸಲಹೆ ನೀಡಿದರು. ಇದರ ನಂತರ ಇಬ್ಬರೂ ನಾಯಕರು ವೇದಿಕೆಯಿಂದ ನಿರ್ಗಮಿಸಿದರು.
ಚರ್ಚೆಯ ಕುರಿತು ಭಾರತದ ಪ್ರಭಾವ
ಈ ಸಭೆಯ ಕೇಂದ್ರಬಿಂದು ಉಕ್ರೇನ್ ಆಗಿರುತ್ತದೆ ಎಂದು ಪರಿಗಣಿಸಲಾಗಿತ್ತು; ಆದರೆ ಸಭೆಯ ಮೊದಲು ಮತ್ತು ನಂತರವೂ ಟ್ರಂಪ್ ಭಾರತದ ಹೆಸರನ್ನು ಪ್ರಸ್ತಾಪಿಸಿದರು. ಹಾಗೆಯೇ ಪುಟಿನ್ ಕೂಡ ಭಾರತದ ಹೆಸರನ್ನು ಪ್ರಸ್ತಾಪಿಸಿದರು. ಇದರಿಂದಾಗಿ, ಈ ಸಭೆಯ ಮೇಲೆ ಭಾರತದ ಪ್ರಭಾವವಿತ್ತು ಎಂದು ಅಧಿಕಾರಿಗಳು ಹೇಳತೊಡಗಿದರು. ಪುಟಿನ್ ಅವರು, ‘ವಿವಾದವನ್ನು ಪರಿಹರಿಸುವಲ್ಲಿ ಭಾರತದ ಪಾತ್ರ ಮಹತ್ವದ್ದಾಗಿದೆ’ ಎಂದು ಹೇಳಿದರು. ಟ್ರಂಪ್ ಅವರು ‘ಫಾಕ್ಸ್ ನ್ಯೂಸ್’ ಸುದ್ದಿವಾಹಿನಿಯೊಂದಿಗೆ ಮಾತನಾಡುವಾಗ ಭಾರತವನ್ನು ಉಲ್ಲೇಖಿಸಿದರು. ‘ರಷ್ಯಾ ತನ್ನ ಒಬ್ಬ ಪ್ರಮುಖ ಪಾಲುದಾರ ಮತ್ತು ಗ್ರಾಹಕನನ್ನು ಕಳೆದುಕೊಂಡಿದೆ’ ಎಂದು ಅವರು ಹೇಳಿದರು. ಚೀನಾದ ಕುರಿತು ಟ್ರಂಪ್, ‘ನಾನು ಈಗ ಚೀನಾದ ಮೇಲೆ ಇನ್ನೂ ಹೆಚ್ಚು ಆಮದು ಸುಂಕವನ್ನು ವಿಧಿಸಿದರೆ, ಚೀನಾ ಮತ್ತು ರಷ್ಯಾದ ಸ್ಥಿತಿ ಕೆಟ್ಟದಾಗುತ್ತದೆ’ ಎಂದು ಹೇಳಿದರು.
ರಷ್ಯಾದಿಂದ ತೈಲ ಖರೀದಿಸುವವರ ಮೇಲೆ ಹೆಚ್ಚುವರಿ ಸುಂಕ ವಿಧಿಸುವ ನಿರ್ಧಾರದ ಬಗ್ಗೆ ಪರಿಶೀಲನೆ – ಟ್ರಂಪ್
ಈ ಸಭೆಯ ನಂತರ ಟ್ರಂಪ್ ಮಾಧ್ಯಮಗಳಿಗೆ, ‘ರಷ್ಯಾದಿಂದ ತೈಲ ಖರೀದಿಸುವ ದೇಶಗಳ ಮೇಲೆ ಹೆಚ್ಚುವರಿ ಆಮದು ಸುಂಕವನ್ನು ವಿಧಿಸುವ ನಿರ್ಧಾರವನ್ನು ನಾವು ಪರಿಗಣಿಸಬೇಕಾಗಬಹುದು; ಆದರೆ ಈಗಲೇ ಹಾಗೆ ಮಾಡುವ ಅವಶ್ಯಕತೆ ಇಲ್ಲ’ ಎಂದು ಹೇಳಿದರು. ಟ್ರಂಪ್ ಈಗಾಗಲೇ ಭಾರತದ ಮೇಲೆ ಹೆಚ್ಚುವರಿ 25% ತೆರಿಗೆಯನ್ನು ಘೋಷಿಸಿದ್ದಾರೆ.
ಅರುಣಾಚಲ ಪ್ರದೇಶದಲ್ಲಿ ಚೀನಾ ಸೇನೆಯ ನುಸುಳುವಿಕೆ ನಡೆದಿಲ್ಲ! – ಭಾರತೀಯ ಸೇನೆಯ ಸ್ಪಷ್ಟನೆ
ಶ್ರೀರಾಮ ಮಂದಿರದ ದಾನ ಕಳ್ಳತನದ ದೊಡ್ಡ ಹೆಸರುಗಳನ್ನು ಬಹಿರಂಗಪಡಿಸಿದರೆ, ಅವರು ನನ್ನನ್ನು ಕೊಲ್ಲುವರು! – ಪಂಡಿತ್ ಧೀರೇಂದ್ರಕೃಷ್ಣ ಶಾಸ್ತ್ರಿ
‘ಯಾರು ನೀರನ್ನು ತಡೆಯುತ್ತಾರೋ, ಅವರ ಕೈಗಳನ್ನು ಮುರಿಯುತ್ತೇವೆ !’
ಚೀನಾದ ಸೇನೆಯೊಂದಿಗೆ ಪ್ರತಿ ವರ್ಷ ೧ ಸಾವಿರದ, ೧೦೦ ಬಾರಿ ಮುಖಾಮುಖಿ ಮಾತುಕತೆ!
ಪಾಕಿಸ್ತಾನವನ್ನು ಮತ್ತೆ ‘ಎಫ್ಎಟಿಎಫ್’ನ ‘ಗ್ರೇ ಲಿಸ್ಟ್’ಗೆ ಸೇರಿಸಲು ಭಾರತದ ಸಿದ್ಧತೆ
ಪಾಕಿಸ್ತಾನದಲ್ಲಿ 125 ವರ್ಷ ಹಳೆಯ ಗುರುದ್ವಾರವನ್ನು ನೆಲಸಮಗೊಳಿಸಲು ಯತ್ನ : Pakistan Gurdwara