ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಸರಕಾರ ಮತ್ತು ಸೇನೆಯ ವಿರುದ್ಧ ಪ್ರತಿಭಟನೆ

  • ಪಾಕಿಸ್ತಾನದ ಸ್ವಾತಂತ್ರ್ಯ ದಿನಾಚರಣೆಯ ಹಿಂದಿನ ದಿನ ನಡೆದ ಘಟನೆ

  • ಅಸೀಮ್ ಮುನೀರ್ ಅಮೆರಿಕದ ಕೈಗೊಂಬೆ ಎಂದು ಆರೋಪ


ಇಸ್ಲಾಮಾಬಾದ್ (ಪಾಕಿಸ್ತಾನ) – ಪಾಕಿಸ್ತಾನದ ಸ್ವಾತಂತ್ರ್ಯ ದಿನಾಚರಣೆಯ ಹಿಂದಿನ ದಿನ, ಅಂದರೆ ಆಗಸ್ಟ್ 13 ರಂದು ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ರಾವಲ್ಕೋಟ್‌ನಲ್ಲಿ ದೊಡ್ಡ ಪ್ರತಿಭಟನಾ ಮೆರವಣಿಗೆ ನಡೆಯಿತು. ಈ ಸಮಯದಲ್ಲಿ ಪ್ರತಿಭಟನಾಕಾರರು ಅಸೀಮ್ ಮುನೀರ್ ಅವರು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಕೈಗೊಂಬೆಯಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ‘ಅಮೆರಿಕವು ನಾಯಿಗಳನ್ನು ಸಾಕುತ್ತಿದೆ – ಸಮವಸ್ತ್ರಧಾರಿಗಳು, ಸಮವಸ್ತ್ರಧಾರಿಗಳು’ ಎಂದು ಘೋಷಣೆಗಳನ್ನು ಕೂಗಿದರು. ಕಾಶ್ಮೀರಿ ನಾಗರಿಕರ ಮಾನವ ಹಕ್ಕುಗಳನ್ನು ಉಲ್ಲಂಘಿಸಲಾಗುತ್ತಿದೆ ಎಂದು ಸಹ ಅವರು ಆರೋಪಿಸಿದರು. ಪಾಕಿಸ್ತಾನ ಸೇನೆಯ ಬಗ್ಗೆ ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಜನರಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗುತ್ತಿರುವುದು ಕಂಡುಬರುತ್ತಿತ್ತು.

ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಪಾಕಿಸ್ತಾನ ಸರಕಾರ ಮತ್ತು ಸೇನೆಯ ವಿರುದ್ಧ ನಡೆಯುತ್ತಿರುವ ಪ್ರತಿಭಟನೆ ಇದೇ ಮೊದಲಲ್ಲ. ಕಳೆದ ಕೆಲವು ವರ್ಷಗಳಲ್ಲಿ, ಇಲ್ಲಿನ ಪ್ರಮುಖ ನಗರಗಳಲ್ಲಿ ಆಗಾಗ್ಗೆ ಪಾಕಿಸ್ತಾನ ಸೇನೆಯ ವಿರುದ್ಧ ಪ್ರತಿಭಟನೆಗಳು ನಡೆದಿವೆ. ಮುಜಫರಾಬಾದ್ ಸೇರಿದಂತೆ ಇತರ ನಗರಗಳಲ್ಲಿ, ಪಾಕಿಸ್ತಾನಿ ಸೇನೆ ಮತ್ತು ಭದ್ರತಾ ಪಡೆಗಳನ್ನು ನಾಗರಿಕರು ಹಲವು ಬಾರಿ ಓಡಿಸಿದ್ದಾರೆ.

ಸಂಪಾದಕೀಯ ನಿಲುವು

ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಜನರಿಗೆ ಪಾಕಿಸ್ತಾನದ ವಿರುದ್ಧ ದ್ವೇಷವಿದ್ದರೆ, ಜಮ್ಮು- ಕಾಶ್ಮೀರದ ಮತಾಂಧರು ಮಾತ್ರ ಇನ್ನೂ ಪಾಕಿಸ್ತಾನ ಪ್ರೀತಿಯಲ್ಲಿ ಮುಳುಗಿದ್ದು ಭಯೋತ್ಪಾದಕರಿಗೆ ಸಹಾಯ ಮಾಡುತ್ತಿದ್ದಾರೆ!