ಒರ್ವ ಪತ್ರಕರ್ತ ಹಮಾಸ್ ಭಯೋತ್ಪಾದಕ ಕೇಂದ್ರದ ಮುಖ್ಯಸ್ಥ ಎಂದು ಇಸ್ರೇಲ್‌ನ ಅನುಮಾನ

ಜೆರುಸಲೇಮ್ (ಇಸ್ರೇಲ್) – ಇಸ್ರೇಲ್ ಗಾಝಾ ನಗರದಲ್ಲಿ ನಡೆಸಿದ ವಾಯುದಾಳಿಯಲ್ಲಿ ‘ಅಲ್-ಜಝೀರಾ ಅರೇಬಿಕ್’ ವರದಿಗಾರ ಅನಸ್ ಅಲ್ ಶರೀಫ್ ಸೇರಿದಂತೆ ಒಟ್ಟು 5 ಪತ್ರಕರ್ತರು ಮೃತಪಟ್ಟಿದ್ದಾರೆ. ಗಾಝಾ ನಗರದ ಅಲ್-ಶಿರೀಫ ಆಸ್ಪತ್ರೆಯ ಮುಖ್ಯ ಪ್ರವೇಶದ್ವಾರದ ಬಳಿ ಈ ದಾಳಿ ನಡೆದಿದೆ. ಈ ದಾಳಿಯಲ್ಲಿ ಒಟ್ಟು 7 ಜನರು ಸಾವನ್ನಪ್ಪಿದ್ದಾರೆ.
ಅನಸ್ ಅಲ್ ಶರೀಫ್ ಹಮಾಸ್ ಭಯೋತ್ಪಾದಕ ಕೇಂದ್ರದ ಮುಖ್ಯಸ್ಥನಾಗಿದ್ದನು. ಇಸ್ರೇಲಿ ನಾಗರಿಕರು ಮತ್ತು ಸೈನಿಕರ ವಿರುದ್ಧ ರಾಕೆಟ್ ದಾಳಿಗಳನ್ನು ನಡೆಸುವಲ್ಲಿ ಅವನ ಕೈವಾಡವಿತ್ತು ಎಂದು ಇಸ್ರೇಲಿ ಸೇನೆ ಆರೋಪಿಸಿದೆ. ಇಸ್ರೇಲ್ ದಾಳಿಯಲ್ಲಿ ಸಾಯುವ ಮೊದಲು ಅನಸ್ ಅಲ್ ಶರೀಫ್ ‘ಎಕ್ಸ್’ನಲ್ಲಿ ಒಂದು ವೀಡಿಯೊವನ್ನು ಪ್ರಸಾರ ಮಾಡಿದ್ದನು. ಅದರಲ್ಲಿ ಗಾಝಾ ನಗರದ ಪೂರ್ವ ಮತ್ತು ದಕ್ಷಿಣ ಭಾಗಗಳಲ್ಲಿ ಹೆಚ್ಚುತ್ತಿರುವ ಬಾಂಬ್ ದಾಳಿಗಳ ಬಗ್ಗೆ ಮಾಹಿತಿ ನೀಡಿದ್ದನು.
ಅಕ್ಟೋಬರ್ 2023 ರಲ್ಲಿ ಗಾಝಾದಲ್ಲಿ ಸಂಘರ್ಷ ಆರಂಭವಾದಾಗಿನಿಂದ, ಇಸ್ರೇಲ್ ಹಮಾಸ್ ಜೊತೆಗಿನ ಸಂಬಂಧದ ಬಗ್ಗೆ ಪ್ಯಾಲೆಸ್ಟೀನಿಯನ್ ಪತ್ರಕರ್ತರ ಮೇಲೆ ಹಲವು ಬಾರಿ ಆರೋಪ ಮಾಡಿದೆ.
ಸಂಪಾದಕೀಯ ನಿಲುವುಜಿಹಾದಿ ಭಯೋತ್ಪಾದಕರನ್ನು ಬೆಂಬಲಿಸುವ ಕತಾರ್‌ನ ಜಾಗತಿಕ ಸುದ್ದಿ ವಾಹಿನಿ ‘ಅಲ್-ಜಝೀರಾ’ದ ಕುರಿತು ಇಸ್ರೇಲ್ ಹೇಳಿಕೆಯಲ್ಲಿ ಸತ್ಯಾಂಶವಿದೆ ಎಂದು ಯಾರಾದರೂ ಹೇಳಿದರೆ ಅದು ತಪ್ಪಾಗಲಾರದು ! |
ಉಕ್ರೇನಿನಿಂದ ರಷ್ಯಾದ ೨೦ ನೌಕೆಗಳ ಮೇಲೆ ದಾಳಿ! : Russia Ukraine War
ರಷ್ಯಾದಿಂದ ತೈಲ ಖರೀದಿಸುವ ಭಾರತ ಸೇರಿದಂತೆ ೫ ದೇಶಗಳ ಮೇಲೆ ಶೇ. ೧೦೦ ರಷ್ಟು ಸುಂಕ ವಿಧಿಸಲಿರುವ ಅಮೆರಿಕಾ ! : Oil purchase from Russia
ಬಲೂಚಿಸ್ತಾನದ ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿರುವವರಿಗೆ ಇಸ್ರೇಲ್ ಸಂಸ್ಥೆಗಳು ಸಹಾಯ ಮಾಡುತ್ತಿವೆ
ಟ್ರಂಪ್ ಅವರಿಂದ ಹಾರ್ಮುಜ್ ಜಲಸಂಧಿಯ ಮೇಲಿನ ಶೇಕಡಾ ೨೦ ರಷ್ಟು ಸುಂಕ ಹಿಂಪಡೆ : Donald Trump
ಹಾರ್ಮುಜ್: ತೈಲ ನೌಕೆಯ ಮೇಲೆ ಇರಾನ್ ದಾಳಿ: ಓರ್ವ ಭಾರತೀಯ ಸಾವು
ಭಗವಾನ್ ಜಗನ್ನಾಥರ ರಥಯಾತ್ರೆಗೂ ಮುನ್ನ ಗುಜರಾತ್ನಲ್ಲಿ ೫ ಭಯೋತ್ಪಾದಕರ ಬಂಧನ