ಅಮೆರಿಕದಿಂದ ಇಸ್ರೇಲ್‌ಗೆ ಬೆಂಬಲ ನೀಡಿದ್ದರಿಂದ, ಮಿತ್ರ ರಾಷ್ಟ್ರ ಜರ್ಮನಿ ಸೇನಾ ಶಸ್ತ್ರಾಸ್ತ್ರಗಳ ರಫ್ತು ಸ್ಥಗಿತ !

ತೆಲ್ ಅವೀವ್ (ಇಸ್ರೇಲ್) – ಇತ್ತೀಚೆಗೆ ಗಾಜಾದಲ್ಲಿ ನಡೆಸಿದ ಆಕ್ರಮಣಗಳನ್ನು ಇಸ್ರೇಲ್ ಪ್ರಧಾನ ಮಂತ್ರಿ ಬೆಂಜಮಿನ್ ನೆತನ್ಯಾಹು ಸಮರ್ಥಿಸಿಕೊಂಡಿದ್ದಾರೆ. ಹಮಾಸ್ ಅನ್ನು ಸಂಪೂರ್ಣವಾಗಿ ನಾಶಪಡಿಸುವುದನ್ನು ಹೊರತುಪಡಿಸಿ ಇಸ್ರೇಲ್‌ಗೆ ಬೇರೆ ದಾರಿಯಿಲ್ಲ ಎಂದು ಅವರು ಪುನರುಚ್ಚರಿಸಿದರು. ನಾವು ಗಾಜಾದ ಮೇಲೆ ಹಿಡಿತ ಸಾಧಿಸಲು ಬಯಸುವುದಿಲ್ಲ, ಬದಲಿಗೆ ಗಾಜಾಗೆ ಸ್ವಾತಂತ್ರ್ಯ ನೀಡಲು ಬಯಸುತ್ತೇವೆ ಎಂದು ಅವರು ಹೇಳಿದರು. ಆದರೂ, ಗಾಜಾ ಮೇಲಿನ ಆಕ್ರಮಣಗಳ ಕಾರಣ ಇಸ್ರೇಲ್‌ಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ವಿರೋಧ ಹೆಚ್ಚಾಗಿದೆ.
೧. ಗಾಜಾ ಆಕ್ರಮಣದ ಯೋಜನೆಯ ಬಗ್ಗೆ ನೆತನ್ಯಾಹು ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗೆ ಚರ್ಚೆ ನಡೆಸಿದರು. ಚರ್ಚೆಯ ಬಳಿಕ ಅಮೇರಿಕಾ ಬೆಂಬಲ ನೀಡಿದ್ದರಿಂದ ನೆತನ್ಯಾಹು ಅವರು ಟ್ರಂಪ್‌ಗೆ ಧನ್ಯವಾದ ತಿಳಿಸಿದರು.

೨. ಗಾಜಾದಲ್ಲಿನ ಅನೇಕ ಸಮಸ್ಯೆಗಳಿಗೆ ಹಮಾಸ್ ಕಾರಣವಾಗಿದೆ. ಗಾಜಾದಲ್ಲಿ ಈಗಲೂ ಸಾವಿರಾರು ಭಯೋತ್ಪಾದಕರಿದ್ದು, ಪ್ಯಾಲೆಸ್ತೀನ್ ಜನರು ಅವರಿಂದ ಸ್ವಾತಂತ್ರ್ಯ ಬಯಸುತ್ತಾರೆ ಎಂದು ನೆತನ್ಯಾಹು ಮತ್ತೊಮ್ಮೆ ದಾವೆ ಮಾಡಿದ್ದಾರೆ.
೩. ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಅಮೆರಿಕ ಇಸ್ರೇಲ್‌ಗೆ ಬೆಂಬಲ ನೀಡಿದೆ. ತನ್ನ ಸುರಕ್ಷತೆಗಾಗಿ ಉತ್ತಮ ನಿರ್ಧಾರ ತೆಗೆದುಕೊಳ್ಳುವ ಹಕ್ಕು ಇಸ್ರೇಲ್‌ಗಿದೆ ಎಂದು ಅದು ಹೇಳಿದೆ.
೪. ಮತ್ತೊಂದೆಡೆ, ಜರ್ಮನ್ ಚಾನ್ಸಲರ್ ಫ್ರೆಡರಿಕ್ ಮೆರ್ಜ್ ಅವರು ಹೆಚ್ಚುತ್ತಿರುವ ಅಂತಾರಾಷ್ಟ್ರೀಯ ಟೀಕೆಗೆ ಮಣಿದು, ಗಾಜಾದಲ್ಲಿ ಬಳಸಬಹುದಾದ ಸೇನಾ ಉಪಕರಣಗಳ ಇಸ್ರೇಲ್‌ಗೆ ರಫ್ತು ಮಾಡುವುದನ್ನು ನಿಲ್ಲಿಸಿದ್ದಾರೆ ಎಂದು ಸ್ವತಃ ನೆತನ್ಯಾಹು ಅವರೇ ಮಾಹಿತಿ ನೀಡಿದ್ದಾರೆ.
ಉಕ್ರೇನಿನಿಂದ ರಷ್ಯಾದ ೨೦ ನೌಕೆಗಳ ಮೇಲೆ ದಾಳಿ! : Russia Ukraine War
ಪಾಕಿಸ್ತಾನ ಆಕ್ರಮಿತ ಕಾಶ್ಮೀರ: ಪ್ರತಿಭಟನಾಕಾರರ ಮೇಲೆ ಪಾಕ್ ಸೈನಿಕರಿಂದ ಗುಂಡಿನ ದಾಳಿ : ೧೨ ಸಾವು, ೩೮ ಜನರಿಗೆ ಗಾಯ : POK Protest
ರಷ್ಯಾದಿಂದ ತೈಲ ಖರೀದಿಸುವ ಭಾರತ ಸೇರಿದಂತೆ ೫ ದೇಶಗಳ ಮೇಲೆ ಶೇ. ೧೦೦ ರಷ್ಟು ಸುಂಕ ವಿಧಿಸಲಿರುವ ಅಮೆರಿಕಾ ! : Oil purchase from Russia
ಬಲೂಚಿಸ್ತಾನದ ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿರುವವರಿಗೆ ಇಸ್ರೇಲ್ ಸಂಸ್ಥೆಗಳು ಸಹಾಯ ಮಾಡುತ್ತಿವೆ
ಟ್ರಂಪ್ ಅವರಿಂದ ಹಾರ್ಮುಜ್ ಜಲಸಂಧಿಯ ಮೇಲಿನ ಶೇಕಡಾ ೨೦ ರಷ್ಟು ಸುಂಕ ಹಿಂಪಡೆ : Donald Trump
ಹಾರ್ಮುಜ್: ತೈಲ ನೌಕೆಯ ಮೇಲೆ ಇರಾನ್ ದಾಳಿ: ಓರ್ವ ಭಾರತೀಯ ಸಾವು