ಅಂತೂ ಕಳಂಕ ಅಳಿಸಲ್ಪಟ್ಟಿತು !

ಇದು ವರೆಗೆ ೧೪ ಆರೋಪಿಗಳನ್ನು ಸಿಲುಕಿಸಿದ್ದ, ೭ ಆರೋಪಿಗಳ ಮೇಲೆ ದಾವೆ ಹೂಡಿದ, ೩ ತನಿಖಾ ದಳಗಳಿಂದ ತನಿಖೆಗೊಳಪಟ್ಟ, ೧೭ ವರ್ಷಗಳ ಕಾಲ ನಡೆದ, ೩ ಆರೋಪಪಟ್ಟಿಗಳನ್ನು ಸಲ್ಲಿಸಿದ, ೫ ‘ಬೆಂಚ್‌’ಗಳು ಕೆಲಸ ಮಾಡಿದ, ೧ ಸಾವಿರಕ್ಕೂ ಹೆಚ್ಚು ಪುಟಗಳ ತೀರ್ಪು ಹೊಂದಿರುವ ‘೨೦೦೮ ರ ಮಾಲೆಗಾಂವ್‌ ಬಾಂಬ್‌ಸ್ಫೋಟ’ ಪ್ರಕರಣದ ಐತಿಹಾಸಿಕ ತೀರ್ಪು ಜುಲೈ ೩೧ ರಂದು ಅಂತಿಮವಾಗಿ ಪ್ರಕಟವಾಯಿತು. ‘ಆರೋಪಿಗಳು ಪಿತೂರಿಯ ಮೂಲಕ ಮಾಲೆಗಾಂವ್‌ ಬಾಂಬ್‌ ಸ್ಫೋಟ ನಡೆಸಿದರು’ ಎಂದು ದೃಢವಾಗಿ ಹೇಳಿದ್ದ ತನಿಖಾ ದಳಗಳ ಪಿತೂರಿಯನ್ನೇ ರಾಷ್ಟ್ರೀಯ ತನಿಖಾ ದಳದ ವಿಶೇಷ ನ್ಯಾಯಾಲಯವು ತೀರ್ಪು ನೀಡುವಾಗ ಬಯಲು ಮಾಡಿದೆ. ಇದರಿಂದ ‘ಕೇಸರಿ ಭಯೋತ್ಪಾದನೆ’ಯ ಸುಳ್ಳು ಕಥೆಯನ್ನು ಸೃಷ್ಟಿಸಿ ಅದನ್ನು ಸಾಬೀತುಪಡಿಸಲು ಪ್ರಯತ್ನಿಸಿದವರ ಕನಸು ನುಚ್ಚುನೂರಾಗಿದೆ. ಹಿಂದೂದ್ವೇಷಿ ಕಾಂಗ್ರೆಸ್‌ ನಾಯಕರು ಮತ್ತು ಸಂಸ್ಥೆಗಳು ಹಿಂದೂಗಳ ಪವಿತ್ರ ‘ಕೇಸರಿ’ಯ ಹೆಸರಿಗೆ ‘ಭಯೋತ್ಪಾದನೆ’ ಎಂಬ ಪದವನ್ನು ಸೇರಿಸಿ, ಸಮಸ್ತ ಹಿಂದೂಗಳ ಘನತೆಗೆ ಧಕ್ಕೆ ತಂದು, ಅವರಿಗೆ ಹಚ್ಚಿದ ಕಳಂಕವನ್ನು ಇಂದು ಅಂತಿಮವಾಗಿ ತೊಡೆದು ಹಾಕಲಾಗಿದೆ. ಮಾಂಸ ತಿನ್ನಿಸುವುದು, ಅಸಭ್ಯವಾಗಿ ಬೈಯ್ಯುವುದು, ಅಶ್ಲೀಲ ಚಲನಚಿತ್ರಗಳನ್ನು ತೋರಿಸುವುದು, ಥಳಿಸುವುದು, ಆರೋಪಿಗಳು ಮತ್ತು ಅವರ ಕುಟುಂಬಗಳಿಗೆ ಮಾನಸಿಕ ಹಿಂಸೆ ನೀಡುವುದು, ಸುಳ್ಳು ಸಾಕ್ಷಿ ಮತ್ತು ಪುರಾವೆಗಳನ್ನು ಸೃಷ್ಟಿಸುವುದು ಮುಂತಾದವುಗಳನ್ನು ಮಾಡಿ ಪೊಲೀಸ್‌ ವ್ಯವಸ್ಥೆ ಮತ್ತು ಅದರ ಮುಖ್ಯಸ್ಥರಾದ ನಾಯಕರು ಒಟ್ಟಾಗಿ ಹಿಂದೂಗಳನ್ನು ‘ಭಯೋತ್ಪಾದಕರು’ ಎಂದು ನಿರ್ಧರಿಸಲು ದೊಡ್ಡ ಪಿತೂರಿ ನಡೆಸಿದ್ದರು. ಹಿಂದೂಗಳ ವಿರುದ್ಧ ಈ ಭಯಾನಕ ಷಡ್ಯಂತ್ರ ರಚಿಸಿರುವುದು ನ್ಯಾಯಾಲಯದಲ್ಲಿ ಸಾಬೀತಾಗಿರುವುದರಿಂದ, ಈಗ ಅವರಿಗೆ ಶಿಕ್ಷೆ ಆಗಬೇಕು ಎಂದು ಯಾವುದೇ ರಾಷ್ಟ್ರಭಕ್ತನ ಮನಸ್ಸಿನಲ್ಲಿ ಬಂದರೆ ಆಶ್ಚರ್ಯವಿಲ್ಲ. ಇಂತಹ ನಾಯಕರು ಮತ್ತು ಇಂತಹ ವ್ಯವಸ್ಥೆ ಮತ್ತೆ ಯಾವುದೇ ರಾಷ್ಟ್ರಭಕ್ತನ ಜೀವನದಲ್ಲಿ ಬರಬಾರದೆಂದು ಹಿಂದೂ ರಾಷ್ಟ್ರ ಬೇಕು !

೨೦೦೯ ರ ಲೋಕಸಭಾ ಚುನಾವಣೆಯನ್ನು ಕಣ್ಣೆದುರಿಟ್ಟು ಮತ್ತು ಅಲ್ಪಸಂಖ್ಯಾತರ ಓಲೈಕೆಗಾಗಿ, ೨೦೦೮ ರ ಮಾಲೆಗಾಂವ್‌ ಬಾಂಬ್‌ ಸ್ಫೋಟ ಪ್ರಕರಣದಲ್ಲಿ ಆ ಕಾಲದ ಭಯೋತ್ಪಾದನಾ ನಿಗ್ರಹದಳವು (ATS) ಊಹಿಸಲೂ ಸಾಧ್ಯವಾಗದಂತಹ ಸುಳ್ಳು ಪುರಾವೆ ಗಳನ್ನು ಸಂಗ್ರಹಿಸಿ ತಮ್ಮ ಕಾಂಗ್ರೆಸ್‌ ಮತ್ತು ‘ಎನ್‌ಸಿಪಿ’ ನಾಯಕರನ್ನು ಸಂತೋಷಪಡಿಸಿತು. ಆದರೆ, ಅದೆಲ್ಲವೂ ಸುಳ್ಳು ಎಂದು ಸಾಬೀತಾದ ಕಾರಣ, ‘UAPA’ (ಕಾನೂನುಬಾಹಿರ ದೇಶದ್ರೋಹಿ ಚಟುವಟಿಕೆ ಗಳನ್ನು ತಡೆಯುವ ಕಾಯಿದೆ) ಅಡಿಯಲ್ಲಿ ಸಿಲುಕಿಸಲು ಸಾಧ್ಯವಿಲ್ಲ ಎಂದು ವಿಶೇಷ ನ್ಯಾಯಾಲಯವು ತೀರ್ಪು ನೀಡಿತು.

ಇದಕ್ಕಿಂತ ಮೊದಲು ನ್ಯಾಯಾಲಯವು ‘MCOCA’ (ಸಂಘಟಿತ ಅಪರಾಧವನ್ನು ತಡೆಯುವ ಕಾಯಿದೆ) ಕೂಡ ಅನ್ವಯಿಸುವುದಿಲ್ಲ ಎಂದು ಹೇಳಿತ್ತು. ತನಿಖಾ ಸಂಸ್ಥೆಗಳಿಗೆ ಇದು ತಲೆ ತಗ್ಗಿಸುವ ವಿಷಯವಾಗಿದೆ. ಈಗಲೂ ತೀರ್ಪು ಬಂದ ನಂತರ, ಮಾಧ್ಯಮಗಳು ನಿರಂತರವಾಗಿ ‘ಪುರಾವೆಗಳಿಲ್ಲದ ಕಾರಣ ನಿರಪರಾಧಿ ಎಂದು ಬಿಡುಗಡೆ’ ಎಂದು ಶೀರ್ಷಿಕೆಗಳನ್ನು ಪ್ರಸಾರ ಮಾಡಿವೆ. ತಾಂತ್ರಿಕವಾಗಿ ಅದು ನಿಜವಾಗಿದ್ದರೂ, ‘ಸುಳ್ಳು ಪುರಾವೆಗಳನ್ನು ಸಲ್ಲಿಸಿದ ಕಾರಣ’ ಎಂದು ಹೇಳುವುದು ಹೆಚ್ಚು ಸೂಕ್ತವಾಗಿರುತ್ತಿತ್ತು. ಕೆಲವು ಚಾನೆಲ್‌ಗಳು ತಕ್ಷಣವೇ ಮುಸಲ್ಮಾನರ ಪ್ರತಿಕ್ರಿಯೆಗಳನ್ನು ಪಡೆದು, ವರದಿಯಲ್ಲಿ ಹೇಗಾದರೂ ‘ಸಮತೋಲನ’ ಸಾಧಿಸಲು ನಿರರ್ಥಕ ಪ್ರಯತ್ನಗಳನ್ನು ಆರಂಭಿಸಿವೆ. ಹಲವು ವರ್ಷಗಳಿಂದ ‘ಹಿಂದೂ ಭಯೋತ್ಪಾದನೆ ಇದೆ’ ಎಂದು ಚಿತ್ರಣ ಸೃಷ್ಟಿಸಿದ ಮಾಧ್ಯಮಗಳಿಗೆ ಅದರ ಬಗ್ಗೆ ಮಾತನಾಡಬೇಕೆಂದೇ ಅನಿಸಲಿಲ್ಲ.

ಸುಳ್ಳು ಪುರಾವೆಗಳನ್ನು ನೀಡಿದ ಹಿಂದೂವಿರೋಧಿ ಸಂಸ್ಥೆಗಳು !

ಸುಳ್ಳು ಪುರಾವೆಗಳ ಸರಣಿಯನ್ನು ಬಯಲು ಮಾಡಿ ವಿಶೇಷ ನ್ಯಾಯಾಲಯವು ಭಯೋತ್ಪಾದನಾ ನಿಗ್ರಹ ದಳದ (ಂಖಿಶ್) ಮೇಲೆ ತೀವ್ರ ಆಕ್ರೋಶ ವ್ಯಕ್ತಪಡಿಸಿತು. ೧೧ ನೇ ಆರೋಪಿ ಎಂದು ಹೇಳಲಾದ ಸಮೀರ ಕುಲಕರ್ಣಿ ಕೂಡಾ ೫ ರಾಜ್ಯಗಳ ಭಯೋತ್ಪಾದನಾ ನಿಗ್ರಹ ದಳದಿಂದ ತಾನು ಥಳಿತಕ್ಕೆ ಒಳಗಾಗಿದ್ದೇನೆ ಎಂದು ತಿಳಿಸಿದ್ದರು. ಒಂದೆರಡಲ್ಲ, ಎಲ್ಲ ಪುರಾವೆಗಳೂ ಸುಳ್ಳು ಎಂದು ನ್ಯಾಯಾಲಯ ಹೇಳಿರುವುದು ಆ ಸಮಯದಲ್ಲಿ ಆಡಳಿತಗಾರರು ಭಯೋತ್ಪಾದನಾ ನಿಗ್ರಹ ದಳದ ಸಂಸ್ಥೆಯನ್ನು ಎಷ್ಟು ಹಿಂದೂವಿರೋಧಿ ಮಾಡಿದ್ದರು ಎಂಬುದನ್ನು ಸಾಬೀತು ಪಡಿಸುತ್ತದೆ. ಸಾಧ್ವಿ ಪ್ರಜ್ಞಾ ಸಿಂಗ್‌ ಅವರ ಮೋಟರ್‌ ಸೈಕಲ್‌ನ ಸತ್ಯಾಸತ್ಯತೆ, ವಿವಿಧ ಸ್ಥಳಗಳಲ್ಲಿ ಸಭೆಗಳಲ್ಲಿ ಪಿತೂರಿ ರಚಿಸಿದ ಆರೋಪ, ಕರ್ನಲ್‌ ಪುರೋಹಿತ್‌ರಿಂದ ‘ಆರ್‌ಡಿಎಕ್ಸ್‌’ ತಂದಿದ್ದು, ಅಭಿನವ ಭಾರತ ಸಂಸ್ಥೆಯ ಹಣವನ್ನು ಈ ಬಾಂಬ್‌ ಸ್ಫೋಟಕ್ಕೆ ಬಳಸಿದ್ದು ಮುಂತಾದವುಗಳ ಬಗ್ಗೆ ಯಾವುದೇ ಪುರಾವೆಗಳು ಸತ್ಯವಲ್ಲ ಎಂದು ನ್ಯಾಯಾಲಯ ಹೇಳಿದೆ. ಅಷ್ಟೇ ಅಲ್ಲ, ತನಿಖಾ ಸಂಸ್ಥೆಯೇ ಒಬ್ಬ ಆರೋಪಿ ಚತುರ್ವೇದಿ ಅವರ ಮನೆಯಲ್ಲಿ ‘ಆರ್‌ಡಿಎಕ್ಸ್‌’ ಇರಿಸಿದ ಬಗ್ಗೆ ಕೂಡಾ ಹೇಳಿದೆ. ಸಾಕ್ಷಿಗಳಿಗೆ ಹೇಗೆ ಬೆದರಿಕೆ ಹಾಕಲಾಗಿತ್ತು ಎಂಬುದನ್ನೂ ತಿಳಿಸಿದೆ. ಕೇವಲ ‘ಕೇಸರಿ ಭಯೋತ್ಪಾದನೆ’ಯನ್ನು ಸಾಬೀತುಪಡಿಸಲು ಸಂಸ್ಥೆಯು ಆರೋಪಪಟ್ಟಿಯಲ್ಲಿ ಈ ಎಲ್ಲ ಪುರಾವೆಗಳು ಇವೆ ಎಂದು ಬರೆದಿರುವುದು, ಆಡಳಿತಗಾರರು ಮತ್ತು ಸಂಸ್ಥೆಗಳು ಹಿಂದೂ ವಿರೋಧಿ ಧೋರಣೆಯಿಂದ ಎಷ್ಟು ತುಂಬಿಕೊಂಡಿದ್ದವು ಎಂಬುದನ್ನು ಸಾಬೀತುಪಡಿಸುತ್ತದೆ. ಇಂತಹ ಹಿಂದೂದ್ವೇಷಿ ಅಧಿಕಾರಿಗಳಿಗೆ ಸ್ಥಾನ ನೀಡುವ ಸಂಸ್ಥೆಗಳು ಹಿಂದೂಬಹುಸಂಖ್ಯಾತ ಭಾರತದಲ್ಲಿ ಇರುವುದು ನಾಚಿಕೆಗೇಡಿನ ಸಂಗತಿ. ಸಾಧ್ವಿಯವರನ್ನು ಅತಿಯಾಗಿ ಹಿಂಸಿಸಿದ ಹೇಮಂತ ಕರಕರೆ ಎಂಬ ಭಯೋತ್ಪಾದನಾ ನಿಗ್ರಹ ದಳದ ಅಧಿಕಾರಿಯ ಅಂತ್ಯ ಹೇಗೆ ಆಯಿತು ಎಂಬುದನ್ನು ಇಡೀ ಜಗತ್ತು ನೋಡಿದೆ. ಮುಂಬಯಿ ಸೆಷನ್ಸ್ ನ್ಯಾಯಾಲಯದ ರಾಷ್ಟ್ರೀಯ ತನಿಖಾ ದಳದ ವಿಶೇಷ ನ್ಯಾಯಾಲಯವೇ ‘ಸುಳ್ಳು ಪುರಾವೆಗಳನ್ನು ನೀಡಿ ಆರೋಪಿಗಳನ್ನು ಸಿಲುಕಿಸಲು ಪಿತೂರಿ ನಡೆಸಲಾಗಿದೆ’ ಎಂದು ಹೇಳಿದೆ.

ಇನ್ನೂ ಅನೇಕ ಪ್ರಶ್ನೆಗಳಿಗೆ ಉತ್ತರ ಸಿಕ್ಕಿಲ್ಲ !

ಮೂಲ ಪ್ರಥಮ ವರ್ತಮಾನ ವರದಿಯೂ ಇಲ್ಲದ ಮತ್ತು ಆರೋಪಿಗಳು ಅಪರಾಧ ಮಾಡಿಲ್ಲ ಎಂದು ತಿಳಿದಿದ್ದರೂ ಹಿಂದೂಗಳ ನಾಯಕರ ಹೆಸರನ್ನು ಹೇಳಲು ಥಳಿಸಿದ ಆ ಪೊಲೀಸರ ಮೇಲೆ ಯಾರು ಪ್ರಕರಣ ದಾಖಲಿಸುತ್ತಾರೆ ? ಗಾಯಾಳುಗಳ ೧೦೧ ಸುಳ್ಳು ಪ್ರಮಾಣಪತ್ರಗಳನ್ನು ತಯಾರಿಸುವ ಬಗ್ಗೆ ಈ ಸಂದರ್ಭದಲ್ಲಿ ನ್ಯಾಯಾಲಯವು ತನಿಖೆಗೆ ಆದೇಶಿಸಿದೆ; ಆದರೆ ಅದನ್ನು ಸಿದ್ಧಪಡಿಸಲು ಯಾರು ಆದೇಶ ನೀಡಿದ್ದರು ? ಸುಶೀಲ್‌ ಕುಮಾರ್‌ ಶಿಂದೆ ಅವರು ‘ಪಕ್ಷವು (‘ಹೈಕಮಾಂಡ್‌’) ‘ಕೇಸರಿ ಭಯೋತ್ಪಾದನೆ’ ಎಂಬ ಪದ ಬಳಸಲು ಹೇಳಿತ್ತು’ ಎಂದು ೨೦೨೪ ರಲ್ಲಿ ಒಪ್ಪಿಕೊಂಡಿದ್ದರು. ‘ಹಿಂದೂ ಭಯೋತ್ಪಾದನೆ’ಯ ಬೆದರಿಕೆಯನ್ನು ಸೃಷ್ಟಿಸುವುದು ಇದರ ಮತ್ತೊಂದು ಅರ್ಥ ‘ಭಯೋತ್ಪಾದಕರನ್ನು ಪೋಷಿಸುವುದು’; ಆದರೆ ಸ್ವಾರ್ಥದ ಮುಂದೆ ಕಾಂಗ್ರೆಸ್‌ಗೆ ದೇಶಹಿತ ಯಾವಾಗ ಅರ್ಥವಾಗುತ್ತದೆ ಎಂದು ನಾವು ನಿರೀಕ್ಷಿಸಲು ಸಾಧ್ಯವಿಲ್ಲ. ಇಂತಹ ಭಯೋತ್ಪಾದಕರಿಗೆ ಸಹಾಯ ಮಾಡುವ ಕಾಂಗ್ರೆಸ್‌ ಅನ್ನು ಈಗ ನಿಷೇಧಿಸಬಾರದೇ ? ಇಂತಹ ಅನೇಕ ಪ್ರಶ್ನೆಗಳಿಗೆ ಇನ್ನೂ ಉತ್ತರ ಸಿಕ್ಕಿಲ್ಲ.

ಹಾನಿಯನ್ನು ಹೇಗೆ ತುಂಬಿಕೊಡುವುದು ?

ಯಾರೂ ಊಹಿಸಲಾಗದಂತಹ ಕೇಸರಿ ಭಯೋತ್ಪಾದನೆಯ ಹೆಸರಿನಡಿಯಲ್ಲಿನ ವ್ಯವಸ್ಥಿತ ಪಿತೂರಿಯನ್ನು ಭಾರತದ ತನಿಖಾ ದಳಗಳಿಂದ ಅದೃಶ್ಯ ರಾಜಕೀಯ ಕೈವಾಡವಿರುವ ನಾಯಕರು ನಡೆಸಿದ್ದಾರೆ. ಇಂದು ಬಯಲಾಗಿದ್ದರೂ ಹಿಂದುತ್ವನಿಷ್ಠ ಯುವಕರ ಜೀವನದ ಅಮೂಲ್ಯ ೧೭ ವರ್ಷಗಳು, ಅವರಿಗೆ ಮತ್ತು ಅವರ ಕುಟುಂಬಗಳಿಗಾದ ಭಾರಿ ದೈಹಿಕ, ಮಾನಸಿಕ, ಆರ್ಥಿಕ, ಕೌಟುಂಬಿಕ ಮತ್ತು ಸಾಮಾಜಿಕ ತೊಂದರೆಗಳನ್ನು ಶಬ್ದಗಳಲ್ಲಿ ಹೇಳಲು ಸಾಧ್ಯವಿಲ್ಲ. ಈ ಪ್ರಕರಣದ ಆರೋಪಿಗಳು ಕೋಟ್ಯಂತರ ಹಿಂದೂಗಳ ಪ್ರತಿನಿಧಿಗಳು. ನಗರ ನಕ್ಸಲವಾದಿ ಚಿಂತನೆಯ ಆಡಳಿತಗಾರರು ‘ಭಯೋತ್ಪಾದನೆ’ಯ ಪರಿಕಲ್ಪನೆಯನ್ನು ಬಳಸಿ ತಮ್ಮ ಅತ್ಯಂತ ಕ್ರೂರ ಮನಸ್ಸಿನ ಅಧಿಕಾರಿಗಳಿಂದ ಹಿಂದೂಗಳ ಮೇಲೆ ಘೋರ ದೌರ್ಜನ್ಯಗಳನ್ನು ಮಾತ್ರವಲ್ಲ, ಬದಲಾಗಿ ಇಡೀ ಹಿಂದೂ ಧರ್ಮ, ಸಂಸ್ಕೃತಿ, ಪರಂಪರೆ ಮತ್ತು ನಾಗರಿಕರ ಘನತೆಗೆ ಧಕ್ಕೆ ತಂದಿದ್ದಾರೆ. ಲಕ್ಷಾಂತರ ವರ್ಷಗಳ ಸಹಿಷ್ಣು ಸಂಸ್ಕೃತಿಯನ್ನು ಭಯೋತ್ಪಾದಕರೆಂದು ಕರೆದು ಕೇವಲ ಅವಮಾನ ಮಾಡಲಿಲ್ಲ, ಬದಲಾಗಿ ಇಡೀ ಜಗತ್ತಿನಲ್ಲಿ ಹಿಂದೂ ಸಮಾಜದ ಘನತೆಯನ್ನು ಮಣ್ಣುಪಾಲು ಮಾಡಿದರು. ಭಾರತದ ಕೆಲವು ಹೊರತುಪಡಿಸಿ ಎಲ್ಲಾ ಮಾಧ್ಯಮಗಳು ಹಾಗೂ ‘ಬಿಬಿಸಿ’ಯಂತಹ ವಿದೇಶಿ ಮಾಧ್ಯಮವೂ ‘ಮೀಡಿಯಾ ಟ್ರಯಲ್’ ನಡೆಸಿ ಹಿಂದೂಗಳ ಆತ್ಮಗೌರವವನ್ನು ನಾಶಪಡಿಸಿದವು. ನಾಯಕರು, ಆಡಳಿತ, ಪೊಲೀಸ್, ತಥಾಕಥಿತ ಚಿಂತಕರು ಮತ್ತು ಮಾಧ್ಯಮಗಳ ಹಿಂದೂದ್ವೇಷಿ ‘ಇಕೋಸಿಸ್ಟಮ್’ (ಪರಸ್ಪರರಿಗೆ ಸಹಾಯ ಮಾಡುವ ವ್ಯವಸ್ಥೆ) ಅನೇಕ ವರ್ಷಗಳಿಂದ ನಡೆಯುತ್ತಿತ್ತು, ಇದು ಇಂತಹ ಉದಾಹರಣೆಗಳಿಂದ ಪುನಃ ಸಾಬೀತಾಗುತ್ತದೆ. ರಾಷ್ಟ್ರಭಿಮಾನಿ ಮತ್ತು ಧರ್ಮಾಭಿಮಾನಿ ಹಿಂದೂಗಳು ಇದನ್ನು ಎಂದಿಗೂ ಮರೆಯಬಾರದು. ಈ ಎಲ್ಲವನ್ನೂ ಮಾಡಿದವರಿಗೆ ಕಠಿಣ ಶಿಕ್ಷೆ ಆಗುವವರೆಗೂ, ಹಿಂದೂ ಧರ್ಮ ಮತ್ತು ಧರ್ಮಿಗಳನ್ನು ನಶಿಸಲು ಹೊರಟಿರುವ ಆಸುರಿ ಭಯೋತ್ಪಾದಕರು ಮತ್ತು ಸಾಮ್ಯವಾದಿ ನಕ್ಸಲ್‌ ಮನೋಭಾವದ ಜನರು ಮಣ್ಣಿನಲ್ಲಿ ಸೇರುವವರೆಗೂ, ರಾಷ್ಟ್ರಭಕ್ತರ ಹೋರಾಟದ ಈ ಚಕ್ರ ಪೂರ್ಣಗೊಳ್ಳುವುದಿಲ್ಲ. ಹಿಂದೂಗಳ ಸಹನೆಯನ್ನು ನ್ಯಾಯವ್ಯವಸ್ಥೆ ಪರೀಕ್ಷಿಸುತ್ತದೆ ಮತ್ತು ಹಿಂದೂಗಳು ಸಹನಾಶೀಲರಾಗಿರುವುದರಿಂದಲೇ ನ್ಯಾಯ ವ್ಯವಸ್ಥೆಯಲ್ಲಿ ವಿಶ್ವಾಸವಿಡುತ್ತಾರೆ; ಆದರೆ ನಾಯಕರಿಂದ ಪೊಲೀಸ್‌ ವ್ಯವಸ್ಥೆಯವರೆಗೆ ಎಲ್ಲ ವ್ಯವಸ್ಥೆಗಳು ಹಿಂದೂವಿರೋಧಿ ಎಂದು ಇಂತಹ ಪ್ರಕರಣಗಳಿಂದ ಮತ್ತೊಮ್ಮೆ ಸಾಬೀತಾದಾಗ, ಇದನ್ನು ಬದಲಾಯಿಸಲು ಹಿಂದೂ ರಾಷ್ಟ್ರವೇ ಬೇಕು ಎಂದು ಹಿಂದೂಗಳು ದೃಢವಾಗಿ ಹೇಳಬೇಕಾಗುತ್ತದೆ.