|

ನವದೆಹಲಿ – ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯು ಆರ್ಥಿಕ ವರ್ಷ 2010-11 ರಿಂದ 2024-25 ರವರೆಗೆ 15 ವರ್ಷಗಳ ಅವಧಿಯಲ್ಲಿ, ಹಿಂದೂಗಳ ಮೇಲಿನ ದೌರ್ಜನ್ಯಗಳ ಸಂಕೇತಗಳಾಗಿರುವ ರಾಜಧಾನಿ ದೆಹಲಿಯ ವಿವಿಧ ‘ಐತಿಹಾಸಿಕ’ ಇಸ್ಲಾಮಿಕ್ ಕಟ್ಟಡಗಳ ಮೇಲೆ ಕೋಟಿಗಟ್ಟಲೆ ರೂಪಾಯಿಗಳನ್ನು ಖರ್ಚು ಮಾಡಿದೆ. ಈ ಮಾಹಿತಿಯನ್ನು ಹಿಂದೂ ವಿಧಿಜ್ಞ ಪರಿಷತ್ತಿನ ರಾಷ್ಟ್ರೀಯ ಅಧ್ಯಕ್ಷ ನ್ಯಾಯವಾದಿ ವೀರೇಂದ್ರ ಇಚಲಕರಂಜೀಕರ ಅವರು ಮಾಹಿತಿ ಹಕ್ಕು ಕಾಯಿದೆಯ ಅಡಿಯಲ್ಲಿ ಪಡೆದಿದ್ದಾರೆ. ಈ ಮಾಹಿತಿಯ ಪ್ರಕಾರ, ದೆಹಲಿಯ ಶಾಹಿ ಮಸೀದಿ ಅಥವಾ ಕುದಸಿಯಾ ಮಸೀದಿಯ ನಿರ್ವಹಣೆಗಾಗಿ 1 ಕೋಟಿ 23 ಲಕ್ಷ ರೂಪಾಯಿ, ಬೇಗಂಪುರಿ ಮಸೀದಿಗಾಗಿ 1 ಕೋಟಿ 6 ಲಕ್ಷ ರೂಪಾಯಿ, ಮಹಮ್ಮದ್ ತುಘಲಕನ ಗೋರಿಗೆ 22 ಲಕ್ಷ 13 ಸಾವಿರ ರೂಪಾಯಿ, ನಿಜಾಮುದ್ದೀನ್ ಔಲಿಯಾ ಕಬ್ರಕ್ಕೆ 9 ಲಕ್ಷ 67 ಸಾವಿರ ರೂಪಾಯಿ, ಮತ್ತು ಬಹಲೋಲ್ ಲೋದಿಯ ಕಬ್ರಕ್ಕೆ ಕಳೆದ 15 ವರ್ಷಗಳಲ್ಲಿ 16 ಲಕ್ಷ 53 ಸಾವಿರ ರೂಪಾಯಿಗಳ ಸರಕಾರಿ ನಿಧಿಯನ್ನು ನೀಡಲಾಗಿದೆ.
1. ನ್ಯಾಯವಾದಿ ಇಚಲಕರಂಜೀಕರ ಅವರಿಗೆ ಮಾಹಿತಿ ಹಕ್ಕು ಕಾಯಿದೆಯ ಅಡಿಯಲ್ಲಿ ಲಭ್ಯವಾದ ಮಾಹಿತಿಯ ಪ್ರಕಾರ, ಭಾರತೀಯ ನೋಟಿನ ಮೇಲೆ ಇರುವ ಕೋಟ್ಲಾದ ಅಶೋಕ ಸ್ತಂಭಕ್ಕಾಗಿ 2010 ರಿಂದ 2022 ರವರೆಗೆ 13 ವರ್ಷಗಳ ಅವಧಿಯಲ್ಲಿ ಒಂದು ನಯಾಪೈಸೆಯನ್ನೂ ಖರ್ಚು ಮಾಡಿಲ್ಲ.
2. ನಂತರದ 3 ವರ್ಷಗಳಲ್ಲಿ ಅಶೋಕ ಸ್ತಂಭಕ್ಕೆ 74 ಲಕ್ಷ 3 ಸಾವಿರ ರೂಪಾಯಿಗಳನ್ನು ಖರ್ಚು ಮಾಡಲಾಗಿದೆ ಎಂಬ ಮಾಹಿತಿ ಕೂಡ ಅವರಿಗೆ ಮಾಹಿತಿ ಹಕ್ಕು ಕಾಯಿದೆಯ ಅಡಿಯಲ್ಲಿ ಸಿಕ್ಕಿದೆ.
3. ಎನ್.ಸಿ.ಇ.ಆರ್.ಟಿ.ಯು ಇತ್ತೀಚಿನ ಇತಿಹಾಸ ಪಠ್ಯಪುಸ್ತಕಗಳಲ್ಲಿ ಮೊಘಲ್ ದೊರೆ ಬಾಬರನನ್ನು ಅತ್ಯಂತ ಕ್ರೂರ ಮತ್ತು ಕನಿಕರ ಇಲ್ಲದವ ಎಂದು ತೋರಿಸಿದೆ, ಅಲ್ಲಾವುದ್ದೀನ್ ಖಿಲ್ಜಿಯನ್ನು ‘ದೇವಸ್ಥಾನಗಳ ನಾಶಕ’ ಎಂದು ಕರೆದಿದೆ ಮತ್ತು ಔರಂಗಜೇಬ ಸೇರಿದಂತೆ ಎಲ್ಲಾ ಮೊಘಲ್ ದೊರೆಗಳು ದೇವಸ್ಥಾನಗಳನ್ನು ಲೂಟಿ ಮಾಡಿ ಧ್ವಂಸಗೊಳಿಸಿದ್ದಾರೆ ಎಂದು ಹೇಳಿದೆ. ಹೀಗಿರುವಾಗ ಇಸ್ಲಾಮಿಕ್ ದಾಳಿಕೋರರ ಕಟ್ಟಡಗಳಿಗೆ ಸರಕಾರದಿಂದ ಇಷ್ಟು ದೊಡ್ಡ ಸಹಾಯ ಏಕೆ ? ಎಂಬುದು ನೈಜ ಪ್ರಶ್ನೆಯಾಗಿದೆ.
4. ಇದರಿಂದ ಹಿಂದೂಗಳಲ್ಲಿ ತೀವ್ರ ಆಕ್ರೋಶದ ಅಲೆ ಎದ್ದಿದೆ. ‘ಅಶೋಕ ಸ್ತಂಭ ನಮ್ಮ ರಾಷ್ಟ್ರ ಲಾಂಛನದ ಅವಿಭಾಜ್ಯ ಅಂಗವಾಗಿದೆ. ಅದಕ್ಕೆ ಗೌರವ ದೊರಕಿರುವುದರಿಂದ ಅದಕ್ಕೆ ಇಷ್ಟು ನಿಧಿ ಅತ್ಯಗತ್ಯ; ಆದರೆ ಲಕ್ಷಾಂತರ ಹಿಂದೂಗಳನ್ನು ಕೊಂದ, ಹಿಂದೂ ಮಹಿಳೆಯರ ಮಾನಭಂಗ ಮಾಡಿದ ಮತ್ತು ಮೂರೂವರೆ ಲಕ್ಷಕ್ಕೂ ಹೆಚ್ಚು ಹಿಂದೂ ಮಂದಿರಗಳನ್ನು ನೆಲಸಮಗೊಳಿಸಿ ಇಸ್ಲಾಮಿಕ್ ಕಟ್ಟಡಗಳನ್ನು ಕಟ್ಟಿದವರಿಗೆ ಸರಕಾರದಿಂದ ಕೋಟಿಗಟ್ಟಲೆ ರೂಪಾಯಿಗಳನ್ನು ಏಕೆ ನೀಡಲಾಗುತ್ತಿದೆ? ಹಿಂದೂದ್ವೇಷಿಗಳ ಈ ವೈಭವೀಕರಣವು ಆಕ್ರೋಶವನ್ನುಂಟು ಮಾಡಿದೆ. ಇದು ಕೇವಲ ಜಾತ್ಯತೀತ ಪ್ರಜಾಪ್ರಭುತ್ವದ ಅಣಕವಲ್ಲ, ಬಹುಸಂಖ್ಯಾತ ಹಿಂದೂ ಸಮಾಜದ ಭಾವನೆಗಳನ್ನು ತುಳಿಯುವ ಪ್ರಯತ್ನವಾಗಿದೆ’, ಇಂತಹ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ.
ನ್ಯಾಯವಾದಿ ವೀರೇಂದ್ರ ಇಚಲಕರಂಜೀಕರ ಅವರ ಪ್ರಶ್ನೆಗಳಿಗೆ ಮಾಹಿತಿ ಹಕ್ಕು ಕಾಯಿದೆ ಅಡಿಯಲ್ಲಿ ಸಿಕ್ಕ ಉತ್ತರಗಳು |
ಪುರಾತತ್ವ ಇಲಾಖೆಯು ಇಸ್ಲಾಮಿಕ್ ದಾಳಿಕೋರರ ಗೋರಿಗಳ ಸಂರಕ್ಷಣೆ ಮಾಡುವುದು ‘ಬೌದ್ಧಿಕ ಜಿಹಾದ್’ ಆಗಿದೆ! – ನ್ಯಾಯವಾದಿ ಇಚಲಕರಂಜೀಕರ

ಈ ಕುರಿತು ನ್ಯಾಯವಾದಿ ಇಚಲಕರಂಜೀಕರ ಅವರು ‘ಸನಾತನ ಪ್ರಭಾತ’ಕ್ಕೆ ಮಾಹಿತಿ ನೀಡುತ್ತಾ,
1. ನಮ್ಮಲ್ಲಿ ಮಂದಿರ ಸಂಸ್ಥೆಗಳನ್ನು ವಿರೋಧಿಸಲಾಗುತ್ತದೆ. ಅದೇ ಸಮಯದಲ್ಲಿ ಗೋರಿಗಳನ್ನು ಮನಃಪೂರ್ವಕವಾಗಿ ಸಂರಕ್ಷಿಸಲಾಗುತ್ತದೆ. ಒಂದು ಕಡೆ ಮಂದಿರಗಳನ್ನು ವಶಪಡಿಸಿಕೊಂಡು ಅವುಗಳ ದೇಣಿಗೆಯನ್ನು ಎಲ್ಲೆಂದರಲ್ಲಿ ಖರ್ಚು ಮಾಡಲಾಗುತ್ತದೆ. ಮತ್ತೊಂದೆಡೆ, ವಕ್ಫ್ ಮಂಡಳಿಯು ದೇಶದ ಎಲ್ಲಾ ವಕ್ಫ್ ಅಡಿಯಲ್ಲಿ ಬರುವ ಇಸ್ಲಾಮಿಕ್ ಸಂಸ್ಥೆಗಳನ್ನು (ಆಸ್ತಿಗಳನ್ನು) ಒಂದರ್ಥದಲ್ಲಿ ಸರಕಾರೀಕರಣಗೊಳಿಸಿದ್ದರೂ, ಸರಕಾರಗಳು ಅವುಗಳಿಗೆ ಕೈ ಹಾಕಲು ಧೈರ್ಯ ಮಾಡುತ್ತಿಲ್ಲ. ಸ್ವಲ್ಪದರಲ್ಲಿ ಹೇಳಬೇಕೆಂದರೆ, ದೇವಸ್ಥಾನಗಳ ಹಣವನ್ನು ಬೇಕಾಬಿಟ್ಟಿಯಾಗಿ ಬಾಚಿಕೊಳ್ಳುವುದು; ಆದರೆ ವಕ್ಫ್ ನಲ್ಲಿ ಮುಸ್ಲಿಮರಿಗೇ ಎಲ್ಲಾ ವ್ಯವಹಾರಗಳ ಅಧಿಕಾರ ನೀಡಿ, ವಕ್ಫ್ ಮಂಡಳಿಗೆ ಹಣ ಒದಗಿಸುವುದು. ಇದು ದ್ವಿಮುಖ ನೀತಿಯಾಗಿದೆ. ಇದು ಬೌದ್ಧಿಕ ಜಿಹಾದ್ ನ ಲಕ್ಷಣವೇ ಆಗಿದೆ. ಈ ಬೌದ್ಧಿಕ ಭಯೋತ್ಪಾದನೆ ನಮಗೆ ಅರ್ಥವಾಗುತ್ತಿಲ್ಲ. ಎನ್.ಸಿ.ಇ.ಆರ್.ಟಿ. ಪುಸ್ತಕಗಳಿಂದ ಇಸ್ಲಾಮಿಕ್ ದಾಳಿಕೋರರ ವೈಭವೀಕರಣವಿರಲಿ ಅಥವಾ ಪುರಾತತ್ವ ಇಲಾಖೆಯು ಸಂರಕ್ಷಿಸುತ್ತಿರುವ ಇಸ್ಲಾಮಿಕ್ ದಾಳಿಕೋರರ ಗೋರಿಗಳಂತಹ ಸಂಕೇತಗಳಿರಲಿ, ಮೂಲ ವಿಷಯ ನಮ್ಮ (ಹಿಂದೂಗಳ) ನಿದ್ರಾವಸ್ಥೆಯಾಗಿದೆ. ನಾವು ಯಾವಾಗ ಎಚ್ಚೆತ್ತುಕೊಳ್ಳುತ್ತೇವೆ ಎಂಬುದು ನಿಜವಾದ ಪ್ರಶ್ನೆಯಾಗಿದೆ.
2. ಇಸ್ಲಾಂನಲ್ಲಿ ಗೋರಿಗಳಿಗೆ ಮಾನ್ಯತೆ ಇಲ್ಲ. ಆದ್ದರಿಂದಲೇ ಏನೋ, ಮಹಮ್ಮದ್ ಪೈಗಂಬರರ ಗೋರಿಗೆ ಯಾವುದೇ ಜಾಗತಿಕ ಪೂಜಾಸ್ಥಾನದ ಮಹತ್ವ ಸಿಕ್ಕಿಲ್ಲ. ಮಹತ್ವವೆಲ್ಲಾ ಮಕ್ಕಾಗೆ ಸಿಕ್ಕಿದೆ.
3. ಇಸ್ಲಾಂನ ವಹಾಬಿ ಪಂಥವಿರಲಿ ಅಥವಾ ಸಲಾಫಿ ಪಂಥವಿರಲಿ, ಅವು ಗೋರಿ ಅಥವಾ ದರ್ಗಾಗಳ ಪೂಜೆಯನ್ನು ತೀವ್ರವಾಗಿ ವಿರೋಧಿಸುತ್ತವೆ. ಸೂಫಿ ಸಂತರುಗಳ ಗೋರಿಗಳನ್ನೇ ವಿರೋಧಿಸುತ್ತಿರುವಾಗ, ಈ ರಾಜರುಗಳ ಗೋರಿಗಳ ಬಗ್ಗೆ ಇಷ್ಟೊಂದು ಪ್ರೀತಿ ಏಕೆ?
ಛತ್ರಪತಿ ಶಿವಾಜಿ ಮಹಾರಾಜರ ಕೋಟೆಗಳು ಮತ್ತು ಹಿಂದೂ ಕಟ್ಟಡಗಳ ಬಗ್ಗೆ ಜಾತ್ಯತೀತವಾದಿಗಳ ಉದ್ದೇಶಪೂರ್ವಕ ನಿರ್ಲಕ್ಷ್ಯ! – ರಮೇಶ ಶಿಂದೆ, ರಾಷ್ಟ್ರೀಯ ವಕ್ತಾರರು, ಹಿಂದೂ ಜನಜಾಗೃತಿ ಸಮಿತಿ

ಈ ವಿಷಯದ ಬಗ್ಗೆ ಶ್ರೀ. ರಮೇಶ ಶಿಂದೆ ಅವರು ‘ಸನಾತನ ಪ್ರಭಾತ’ಕ್ಕೆ ಮಾಹಿತಿ ನೀಡುತ್ತಾ, ಕಾಂಗ್ರೆಸ್ ಮತ್ತು ಇತರ ಜಾತ್ಯತೀತ ರಾಜಕೀಯ ಪಕ್ಷಗಳು ತಥಾಕಥಿತ ಜಾತ್ಯತೀತತೆಯ ಹೆಸರಿನಲ್ಲಿ ಮುಸ್ಲಿಮರನ್ನು ದೊಡ್ಡ ಪ್ರಮಾಣದಲ್ಲಿ ಓಲೈಕೆ ಮಾಡಿವೆ. ಇದರಲ್ಲಿ ಮದರಸಾಗಳಿಗೆ ನಿಧಿ ನೀಡುವುದು, ಮೌಲ್ವಿಗಳಿಗೆ ವೇತನ ನೀಡುವುದು, ಹಜ್ ಯಾತ್ರೆಗೆ ಸಹಾಯಧನ ನೀಡುವುದು ಮುಂತಾದ ಕೃತ್ಯಗಳು ಸೇರಿವೆ. ‘ಭಾರತವು ಇಸ್ಲಾಮಿಕ್ ಪರಂಪರೆಯನ್ನು ಪಡೆದ ದೇಶವೇನೋ ಎಂಬಂತೆ, ಮುಸ್ಲಿಂ ಸಮಾಜವು ತಾಜಮಹಲ್ ನಿಂದ ಹಿಡಿದು ವಿವಿಧ ಕಟ್ಟಡಗಳು ಮತ್ತು ಗೋರಿಗಳಿಗೆ ದೊಡ್ಡ ಪ್ರಮಾಣದಲ್ಲಿ ನಿಧಿ ನೀಡಿ, ಅವುಗಳನ್ನು ಸುಂದರಗೊಳಿಸಲು ಸರಕಾರಿ ಪ್ರಯತ್ನಗಳು ನಡೆದಿತ್ತು. ಮುಂಬಯಿಯಲ್ಲಿ ಭಯೋತ್ಪಾದಕ ಯಾಕೂಬ್ ಮೆಮನ್ ನ ದರ್ಗಾ ನಿರ್ಮಿಸಿ ಅದನ್ನು ಸುಂದರಗೊಳಿಸಲು ಕೂಡ ಪ್ರಯತ್ನ ನಡೆಯಿತು. ಇದನ್ನು ಮಾಡುತ್ತಿರುವಾಗ, ಹಿಂದೂಗಳ ಭವ್ಯ ಕಟ್ಟಡಗಳು, ಸುಂದರ ಶಿಲ್ಪಕಲೆ ಹೊಂದಿರುವ ಅದ್ಭುತ ದೇವಸ್ಥಾನಗಳು ಮತ್ತು ದೇವತೆಗಳ ವರ್ಣಿಸಲಾಗದ ಮೂರ್ತಿಗಳನ್ನು ವ್ಯವಸ್ಥಿತವಾಗಿ ನಿರ್ಲಕ್ಷಿಸಲಾಗಿದೆ. ಹಿಂದೂ ವಿಧೀಜ್ಞ ಪರಿಷತ್ತು ಮಾಹಿತಿ ಹಕ್ಕು ಕಾಯಿದೆಯ ಮೂಲಕ ಬಹಿರಂಗಪಡಿಸಿರುವ ಸತ್ಯವು ಎಲ್ಲರ ಕಣ್ಣು ತೆರೆಸುವಂತಹದ್ದಾಗಿದೆ. ಆದ್ದರಿಂದ, ಹಿಂದೂ ಸಂಘಟನೆಗಳು ಒಗ್ಗೂಡಿ, ಛತ್ರಪತಿ ಶಿವಾಜಿ ಮಹಾರಾಜರ ನಿರ್ಲಕ್ಷ್ಯಕ್ಕೊಳಗಾದ ಕೋಟೆಗಳು, ಪ್ರಾಚೀನ ದೇವಸ್ಥಾನಗಳು ಮತ್ತು ಪಾಳುಬಿದ್ದ ಕಟ್ಟಡಗಳನ್ನು ಪುನಶ್ಚೇತನಗೊಳಿಸಲು ಸರಕಾರದೊಂದಿಗೆ ಚರ್ಚಿಸಿ ಅದಕ್ಕೆ ನಿಧಿ ಸಿಗುವಂತೆ ಪ್ರಯತ್ನಿಸಬೇಕು.
ಸರಕಾರಿ ಸಂಸ್ಥೆಗಳ ತಪ್ಪಾದ ಆದ್ಯತೆಗಳನ್ನು ತಡೆಯಲು ಸರಕಾರ ಸಕ್ರಿಯವಾಗುವ ಅವಶ್ಯಕತೆಯಿದೆ! – ನೀರಜ ಅತ್ರಿ

ಈ ವಿಷಯದ ಬಗ್ಗೆ ‘ಸನಾತನ ಪ್ರಭಾತ’ವು ಪ್ರಸಿದ್ಧ ಇತಿಹಾಸಕಾರ ಶ್ರೀ. ನೀರಜ ಅತ್ರಿ ಅವರೊಂದಿಗೆ ಚರ್ಚಿಸಿದಾಗ ಅವರು, ಭಾರತೀಯ ಪುರಾತತ್ವ ಇಲಾಖೆಯು ಇನ್ನೂ ನೆಹರೂರವರ ತಪ್ಪಾದ ಜಾತ್ಯತೀತತೆಯ ಯುಗದಲ್ಲಿ ಬದುಕುತ್ತಿದೆ. ಇಲ್ಲಿ ನಮ್ಮ ಸಂಸ್ಕೃತಿಯ ಮೌಲ್ಯಗಳಿಗೆ ಸಂಬಂಧಿಸಿದ ಎಲ್ಲವನ್ನೂ ನಿರ್ಲಕ್ಷಿಸಲಾಗುತ್ತದೆ ಮತ್ತು ವಿದೇಶಿ ದಾಳಿಕೋರರ ವೈಭವವನ್ನು ಹೆಚ್ಚಿಸುವ ಎಲ್ಲವನ್ನೂ ಪೋಷಿಸಲಾಗುತ್ತದೆ. ‘ದಾಳಿಕೋರರು ಪರೋಪಕಾರಿಗಳು’ ಎಂದು ಬಿಂಬಿಸಲು ತೆರಿಗೆದಾರರ ಹಣವನ್ನು ಎಷ್ಟು ಪ್ರಮಾಣದಲ್ಲಿ ಬಳಸಲಾಗುತ್ತಿದೆ ಎಂಬುದನ್ನು ನೋಡಿದಾಗ ಇದರ ಅರಿವಾಗುತ್ತದೆ. ಸರಕಾರವು ತನ್ನ ಸಂಸ್ಥೆಗಳ ಇಂತಹ ತಪ್ಪಾದ ಆದ್ಯತೆಗಳನ್ನು ತಡೆಯಲು ಸಕ್ರಿಯವಾಗಬೇಕು. ಹಾಗಾದಾಗ ಮಾತ್ರ, ಇದು ಸ್ವಾತಂತ್ರ್ಯ ದಿನಾಚರಣೆಯಂದು ಪ್ರಧಾನಿ ನರೇಂದ್ರ ಮೋದಿ ಅವರು ಮಂಡಿಸಿದ ‘ಗುಲಾಮಗಿರಿಯ ಸಂಕೇತಗಳಿಂದ ನಾವು ಮುಕ್ತರಾಗಬೇಕು’ ಎಂಬ ದೃಷ್ಟಿಕೋನಕ್ಕೆ ಸರಿಯಾಗುತ್ತದೆ.
ಸಂಪಾದಕೀಯ ನಿಲುವುಅಯೋಧ್ಯೆಯ ಶ್ರೀರಾಮ ಮಂದಿರಕ್ಕಾಗಿ ಹಣ ಸಂಗ್ರಹಿಸುವಾಗ ಆ ಹಣವನ್ನು ಆಸ್ಪತ್ರೆಗಳಿಗೆ ಕೊಡಬೇಕೆಂದು ಉಪದೇಶಿಸಿ ಹಿಂದೂಗಳಿಗೆ ವಿರೋಧಿಸುವ ‘ಜಾತ್ಯತೀತವಾದಿಗಳು’ ಈಗ ಯಾಕೆ ಮೌನವಾಗಿದ್ದಾರೆ? ಅಥವಾ ಇಸ್ಲಾಮಿಕ್ ಕಟ್ಟಡಗಳಿಗೆ ಕೋಟಿಗಟ್ಟಲೆ ರೂಪಾಯಿ ಸಹಾಯ ಮಾಡುವುದು ಅವರ ಜಾತ್ಯತೀತತೆಯ ವ್ಯಾಖ್ಯಾನವೇ? ಈ ಚಿತ್ರಣವನ್ನು ಬದಲಾಯಿಸಲು ಹಿಂದೂಗಳು ಇಸ್ಲಾಮಿಕ್ ದಾಳಿಕೋರರನ್ನು ಹೀಗೆ ವೈಭವೀಕರಿಸುವುದನ್ನು ತೀವ್ರವಾಗಿ ವಿರೋಧಿಸಬೇಕು! |
ಪಾನ್ ಮಸಾಲಾ, ಗುಟ್ಕಾ ಮತ್ತು ಕಲಬೆರಕೆ ಆಹಾರ ಪದಾರ್ಥಗಳ ಒಂದೂವರೆ ಕೋಟಿಗೂ ಹೆಚ್ಚು ಮೌಲ್ಯದ ದಾಸ್ತಾನು ವಶ
‘ಲವ್ ಜಿಹಾದ್’, ‘ಲ್ಯಾಂಡ್ ಜಿಹಾದ್’ ಇವೆಲ್ಲಾ ಮೂರ್ಖತನದ ಸಂಗತಿಗಳಂತೆ !
ತುಮಕೂರಿನಲ್ಲಿ ಶ್ರೀರಾಮಮಂದಿರದ ಹತ್ತಿರ ಅಲ್ಪಸಂಖ್ಯಾತರ ವಸತಿಗೃಹ ನಿರ್ಮಿಸುವ ಸಂಚು !
ನಾಗಪುರ: ಮಾನಸಿಕ ಒತ್ತಡದಿಂದಾಗಿ ‘ನೀಟ್’ ಪರೀಕ್ಷೆಯ ವಿದ್ಯಾರ್ಥಿನಿ ಆತ್ಮಹತ್ಯೆ
ರಾಜ್ಯದಲ್ಲಿ ಮುಸಲ್ಮಾನರಿಗೆ 5 ಸಚಿವ ಸ್ಥಾನ ನೀಡದಿದ್ದರೆ ನಮ್ಮ ಶಕ್ತಿಯನ್ನು ತೋರಿಸುತ್ತೇವೆ !
ಬೆಂಗಳೂರಿನಲ್ಲಿ ಕಸ ಹಾಯುವ ಸೈಬುಲ್ನಿಂದ ವಿದ್ಯಾರ್ಥಿನಿ ಮೇಲೆ ಅತ್ಯಾಚಾರಕ್ಕೆ ಯತ್ನ!