
ಭಗವಾನ್ ಶ್ರೀಕೃಷ್ಣನ ಕುರಿತು ‘ಕೃಷ್ಣಂ ವಂದೇ ಜಗದ್ಗುರುಮ್’ ಎಂದು ಹೇಳಲಾಗಿದೆ. ಎಲ್ಲಾ ದೇವತೆಗಳಲ್ಲಿ ಶ್ರೀಕೃಷ್ಣನಿಗೆ ಮಾತ್ರ ‘ಜಗದ್ಗುರು’ ಎಂಬ ಬಿರುದು ಇದೆ. ಅವನು ಸಮಸ್ತ ಬ್ರಹ್ಮಾಂಡದ, ಅಂದರೆ ಸಂಪೂರ್ಣ ಮನುಕುಲದ ಮಾರ್ಗದರ್ಶಕನಾಗಿದ್ದಾನೆ. ಅಂತಹ ಭಗವಂತನು ಆಷಾಢ ಮಾಸದ ಕೃಷ್ಣಪಕ್ಷ ಅಷ್ಟಮಿಯ ದಿನದಂದು, ಮಧ್ಯರಾತ್ರಿ ೧೨ ಗಂಟೆಗೆ ಕಂಸನ ಕಾರಾಗೃಹದಲ್ಲಿ ಜನಿಸಿದನು. ಈ ವರ್ಷ ಆಗಸ್ಟ್ ೧೫ ರಂದು ಕೃಷ್ಣಜನ್ಮಾಷ್ಟಮಿ ಇದೆ. ಈ ಸಂದರ್ಭದಲ್ಲಿ ಅವನ ಮಹಾನ್ ಅವತಾರ ಕಾರ್ಯವನ್ನು ತಿಳಿದುಕೊಂಡು, ಅದನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದು ಅತ್ಯಂತ ಮಹತ್ವದ್ದಾಗಿದೆ. ಕೇವಲ ಮೊಸರು ಕುಡಿಕೆ ಕಾರ್ಯಕ್ರಮ ಮಾಡಿದರೆ ಸಾಕಾಗುವುದಿಲ್ಲ.
ಈ ಪರಿಪೂರ್ಣ ಅವತಾರಿ ಶ್ರೀಕೃಷ್ಣನು ಬಾಲ್ಯದಿಂದಲೂ ಲೀಲೆಗಳನ್ನು ತೋರಿಸಿದ್ದಾನೆ. ಶ್ರೀಕೃಷ್ಣನು ತನ್ನ ತಾಯಿಗೆ ”ತಾನು ಪರಿಪೂರ್ಣ ಅವತಾರಿ’’ ಎಂಬುದರ ತುಣುಕನ್ನು ತೋರಿಸಿದನು. ಬಾಲ್ಯದಲ್ಲಿ ಮಣ್ಣು ತಿಂದಾಗ, ಯಶೋದಾಮಾತೆ ಅವನಿಗೆ ಬಾಯನ್ನು ತೆರೆಯಲು ಹೇಳಿದಳು. ಆಗ ಅವನು ತನ್ನ ಬಾಯಿ ತೆರೆದು ವಿಶ್ವರೂಪವನ್ನು ತೋರಿಸಿದನು. ಅದರಿಂದ ತಾಯಿಗೆ ಶ್ರೀಕೃಷ್ಣ ಭಗವಂತನೆಂಬುದು ಗಮನಕ್ಕೆ ಬಂದಿತು.
ಇಂದ್ರನು ಭಾರಿ ಮಳೆ ಸುರಿಸಿದಾಗ, ಶ್ರೀಕೃಷ್ಣನು ಗೋವರ್ಧನ ಪರ್ವತವನ್ನೆತ್ತಿ, ಗೋಪ-ಗೋಪಿಯರನ್ನು ರಕ್ಷಿಸಿದನು. ಆದರೆ ಆ ಸಮಯದಲ್ಲಿ ಗೋಪ-ಗೋಪಿಯರೂ ತಮ್ಮ ತಮ್ಮ ಕೋಲು ಗಳನ್ನು ಗೋವರ್ಧನ ಗಿರಿಯ ಬುಡದಲ್ಲಿ ಹಿಡಿದು ಸಹಾಯ ಮಾಡಿದರು. ನಿಜವಾಗಿ ಪರ್ವತವನ್ನು ಎತ್ತಲು ಶ್ರೀಕೃಷ್ಣನ ಕಿರುಬೆರಳಿನ ತುದಿಯು ಸಾಕಾಗುತ್ತಿತ್ತು. ಆದರೆ ಗೋಪಿಯರು ಸಹಾಯ ಮಾಡಿದುದು ಅವರ ಸಾಧನೆಯಾಗಿತ್ತು. ಹೀಗೆ ಶ್ರೀಕೃಷ್ಣನು ತನ್ನ ಲೀಲೆಯ ಮೂಲಕ ಕಲಿಸಿದನು. ಈಗಲೂ ಧರ್ಮಸಂಸ್ಥಾಪನೆ ಕಾರ್ಯದಲ್ಲಿ ಪ್ರತಿಯೊಬ್ಬರೂ ದೇವರ ಭಕ್ತಿ ಮಾಡುತ್ತ ತಮ್ಮ ಸಹಭಾಗಿತ್ವವನ್ನು ನೀಡಬೇಕು.
ಕೌರವ ಮತ್ತು ಪಾಂಡವರು ಯುದ್ಧಕ್ಕೆ ಸಿದ್ಧರಾದಾಗ, ಭಗವಂತನು ಒಂದು ಉಪಾಯ ಮಾಡಿದನು. ಒಂದು ಬದಿಗೆ ೧೮ ಅಕ್ಷೋಹಿಣಿ ಸೇನೆ, ಇನ್ನೊಂದು ಬದಿಗೆ ನಿರಾಯುಧ ಕೃಷ್ಣನಿರುತ್ತಾನೆ. ಯಾರಿಗೆ ಏನು ಬೇಕು ಎಂದು ಕೇಳುತ್ತಾನೆ. ಆಗ, ಕೌರವರಿಗೆ ”ನಿರಾಯುಧ ಕೃಷ್ಣ ಯಾರಿಗೆ ಬೇಕು ?’’ ಅನ್ನಿಸಿತು. ಅವರು ಸೇನೆ ಬೇಕು ಎಂದರು. ಆದರೆ ಪಾಂಡವರು ಶ್ರೀಕೃಷ್ಣನಿಗೆ ”ನೀವು ನಮ್ಮ ಪರವಾಗಿ ನಿಲ್ಲಿರಿ’’ ಎಂದು ಬೇಡಿ ಕೊಂಡರು. ”ಭಗವಂತನಿರುವ ಕಡೆ ಜಯ ಖಚಿತ. ಭಗವಂತ ಇಲ್ಲದ ಕಡೆ ಪರಾಭವ ಖಚಿತ’’ ಎಂಬ ಸತ್ಯವನ್ನು ಶ್ರೀಕೃಷ್ಣನು ಈ ಲೀಲೆಯ ಮೂಲಕ ಸಾಬೀತುಪಡಿಸಿದನು.
ಮಹಾಭಾರತದ ಯುದ್ಧದಲ್ಲಿ ಅರ್ಜುನನನ್ನು ನಿಮಿತ್ತವನ್ನಾಗಿಸಿ, ಶ್ರೀಕೃಷ್ಣನು ಭಗವದ್ಗೀತೆಯ ಮೂಲಕ ಸಮಸ್ತ ಮಾನವಕುಲಕ್ಕೆ ಮಹಾನ್ ತತ್ತ್ವಜ್ಞಾನವನ್ನೇ ನೀಡಿದನು. ಅರ್ಜುನನಿಗೆ ವಿಶ್ವರೂಪವನ್ನೂ ತೋರಿಸಿ, ಕೊನೆಗೆ ”ನೀನು ಯುದ್ಧವನ್ನು ಮಾಡು’’ ಎಂದು ಒತ್ತಾಯಿಸಿದನು. ಅಂತಹ ಈ ಭಗವಂತನಾಗಿರುವ ಶ್ರೀಕೃಷ್ಣನು ಭಕ್ತರಿಗೆ ಒಂದು ವಚನವನ್ನು ಕೊಟ್ಟನು; ”ನನ್ನ ಭಕ್ತರನ್ನು ಯಾರು ಕೂಡ ನಾಶ ಮಾಡಲಾರರು. ನಾನು ನನ್ನ ಭಕ್ತರನ್ನು ಮಾತ್ರ ರಕ್ಷಿಸುತ್ತೇನೆ, ದುರ್ಜನರನ್ನು ಅಲ್ಲ.’’ ಸುಮ್ಮನೆ ಸಜ್ಜನರನ್ನು ರಕ್ಷಿಸುವ ಜವಾಬ್ದಾರಿಯನ್ನು ಶ್ರೀಕೃಷ್ಣನು ವಹಿಸಿ ಕೊಳ್ಳುವುದಿಲ್ಲ. ಅದಕ್ಕಾಗಿ ಶ್ರೀಕೃಷ್ಣ ಭಕ್ತಿ ಮಾಡುವುದು ಅತ್ಯಂತ ಅಗತ್ಯವಾಗಿದೆ. ಆದ್ದರಿಂದ ಶ್ರೀಕೃಷ್ಣ ಜನ್ಮಾಷ್ಟಮಿಯ ದಿನದಿಂದಲೇ ಗೀತೆಯ ಉಪದೇಶವನ್ನು ಜೀವನದಲ್ಲಿ ಅಳವಡಿಸಿಕೊಳ್ಳೋಣ. ಭಗವಂತನ ಭಕ್ತಿ ಮತ್ತು ಸಾಧನೆ ಮಾಡುತ್ತಾ ಹಿಂದೂ ರಾಷ್ಟ್ರ ನಿರ್ಮಾಣದ ಕಾರ್ಯದಲ್ಲಿ ಸಮರ್ಪಿಸಿಕೊಳ್ಳೋಣ. ಭಗವಂತನ ಭಕ್ತರಾದರೆ ನಮ್ಮ ವೈಯಕ್ತಿಕ ಜೀವನವೂ ಆನಂದಮಯವಾಗುತ್ತದೆ ಮತ್ತು ರಾಷ್ಟ್ರಸೇವೆಯಲ್ಲೂ ಯಶಸ್ಸು ಸಿಗುತ್ತದೆ !
– ಶ್ರೀ. ಶ್ರೀರಾಮ ಖೆಡೆಕರ, ಫೊಂಡಾ, ಗೋವಾ.
|| ಶ್ರೀ ರಾಜಮಾತಂಗಿ ಮಹಾಯಾಗ ||
ಶ್ರೀ ಸೋಮನಾಥ ದೇವಸ್ಥಾನದ ಶಿಖರದ ಮೇಲೆ ಶ್ರೀಚಿತ್ಶಕ್ತಿ (ಸೌ.) ಅಂಜಲಿ ಗಾಡಗೀಳರವರು ಪೂಜಿಸಿದ ಧರ್ಮಧ್ವಜದ ಆರೋಹಣ !
ಮಹಾಕವಿ ಕಾಳಿದಾಸರು ಮಾಡಿರುವ ರಾಜಮಾತಂಗೀ ದೇವಿಯ ವರ್ಣನೆ
ಶ್ರೀ ರಾಜಮಾತಂಗಿ ಮಹಾಯಜ್ಞ !
ವಾತಾವರಣದಲ್ಲಿ ಬದಲಾವಣೆಯಾಗುತ್ತಿರುವ ಹಿನ್ನೆಲೆಯಲ್ಲಿ ಮುಂದಿನ ೧೫ ದಿನಗಳ ಕಾಲ ಪಾಲಿಸಬೇಕಾದ ಕೆಳಗಿನ ೫ ನಿಯಮಗಳು !
ಆರ್ಥಿಕ ಶಿಸ್ತು