
ದ್ವಾಪರಯುಗದಲ್ಲಿ ಗೋಕುಲದ ಜನತೆ ಇಂದ್ರನಿಗೆ ಯಜ್ಞದ ಹವಿರ್ಭಾಗ ಅರ್ಪಿಸುತ್ತಿದ್ದರು. ಇದರಿಂದ ಇಂದ್ರನ ಅಹಂಕಾರ ಹೆಚ್ಚಾಯಿತು. ಆಗ ಶ್ರೀಕೃಷ್ಣನು ಗೋಪಗೋಪಿಯರಿಗೆ, ”ಇಂದ್ರದೇವನಿಗೆ ಯಜ್ಞದ ಹವಿರ್ಭಾಗ ನೀಡಬೇಡಿ’’ ಎಂದು ಹೇಳಿದರು. ಶ್ರೀಕೃಷ್ಣನು ಇಂದ್ರನ ಬದಲು ಗೋವುಗಳಿಗೆ ಹುಲ್ಲನ್ನು ನೀಡುವ ಗೋವರ್ಧನ ಪರ್ವತದ ಪೂಜೆ ಮಾಡುವಂತೆ ತಿಳಿಸಿದನು. ಇದರಿಂದ ಯಾರೂ ಇಂದ್ರದೇವನಿಗೆ ಹವಿರ್ಭಾಗ ನೀಡಲಿಲ್ಲ. ಇದರಿಂದ ಇಂದ್ರನಿಗೆ ಕೋಪಬಂದಿತು. ಇಂದ್ರನು ಭಾರಿ ಮಳೆಯ ಮೂಲಕ ಗೋಪಾಲಕರನ್ನು ಹಿಂಸಿಸಲು ಆರಂಭಿಸಿದನು. ಆಗ ಎಲ್ಲ ಗೋಪಗೋಪಿಯರು ಶ್ರೀಕೃಷ್ಣನಿಗೆ ಶರಣಾಗಿ ಪ್ರಾರ್ಥನೆ ಮಾಡಿದರು. ಆಗ ಶ್ರೀಕೃಷ್ಣನು ಅವರನ್ನು ಗೋವರ್ಧನ ಪರ್ವತದ ಅಡಿಯಲ್ಲಿ ಕರೆದೊಯ್ದು ರಕ್ಷಿಸಿದನು. ಇಂತಹ ಈ ಗೋವರ್ಧನ ಪರ್ವತದ ಪೂಜೆ ಇಂದಿಗೂ ನಡೆಯುತ್ತದೆ. (ಆಧಾರ : ದೈನಿಕ ‘ಸನಾತನ ಪ್ರಭಾತ’)
ಈಶ್ವರೀ ಯೋಜನೆಯಂತೆ ಭಾರತದಲ್ಲಿ ‘ಹಿಂದೂ ರಾಷ್ಟ್ರ’ ಸ್ಥಾಪನೆಯಾಗಲಿದೆ. ಸಂತರು ಮತ್ತು ದಾರ್ಶನಿಕರಿಗೂ ಇದರ ಸೆಳೆತವಿದೆ. ಭಗವಾನ್ ಶ್ರೀಕೃಷ್ಣನು ಗೋವರ್ಧನ ಪರ್ವತವನ್ನು ಎತ್ತಿದಾಗ ಗೋಪ-ಗೋಪಿಯರು ತಮ್ಮ ಕರ್ತವ್ಯವೆಂದು ತಮ್ಮ ಕೋಲುಗಳನ್ನು ಗೋವರ್ಧನ ಪರ್ವತಕ್ಕೆ ತಾಗಿಸಿದಂತೆ ನಾವೂ ಹಿಂದೂ ರಾಷ್ಟ್ರ ಸ್ಥಾಪನೆಯ ಕರ್ತವ್ಯವನ್ನು ನಿರ್ವಹಿಸಬೇಕಾಗಿದೆ. ಹಿಂದೂ ರಾಷ್ಟ್ರ ಸ್ಥಾಪಿಸಲು ದೇವರಿಗೆ ನಮ್ಮ ಅಗತ್ಯವಿಲ್ಲ; ಆದರೆ ನಮಗೆ ದೇವರ ಅಗತ್ಯವಿದೆ. ನಾವು ಸಾಧನೆಯ ಭಾಗವಾಗಿ ಹಿಂದೂ ರಾಷ್ಟ್ರಕ್ಕಾಗಿ ಕಾರ್ಯ ಮಾಡಿದರೆ, ಹಿಂದೂ ರಾಷ್ಟ್ರ ಸ್ಥಾಪನೆಯ ಜೊತೆಗೆ ನಮ್ಮ ಆತ್ಮೋದ್ಧಾರವೂ ಆಗುತ್ತದೆ. (ಆಧಾರ : ಸನಾತನ ಪ್ರಕಾಶನದ ಗ್ರಂಥ ‘ಹಿಂದೂ ರಾಷ್ಟ್ರ ಸ್ಥಾಪನೆಯ ದಿಶೆ’)
ದೈವಿ ಯುವ ಸಾಧಕಿಯರ ಪ್ರಬುದ್ಧ ವಿಚಾರಗಳಿಗೆ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ನೀಡಿದ ಅಮೂಲ್ಯ ಮಾರ್ಗದರ್ಶನ !
ಭಾರತವು ಹಿಂದೂ ರಾಷ್ಟ್ರವೇ ಆಗಿದೆ! : Union Minister Pralhad Joshi
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ’ದ ಮಾಧ್ಯಮದಿಂದ ಕಲಾವಿದರಿಗೆ ಕಲೆಯ ಕಡೆಗೆ ಸಾಧನೆ ಎಂದು ನೋಡಲು ನೀಡಿದ ಮಾರ್ಗದರ್ಶನ !
ಸಾಧಕರಲ್ಲಿ ಆಂತರಿಕ ಬದಲಾವಣೆಯನ್ನು ತರುವ ಪೂ. ರಮಾನಂದ ಗೌಡ !
‘ತಮ್ಮ ಶಾರೀರಿಕ ಸ್ಥಿತಿಯನ್ನು ಪೂರ್ಣ ಸ್ವೀಕರಿಸುವುದು’, ಭಗವತ್ಪ್ರಾಪ್ತಿಯ ಮೊದಲ ಮೆಟ್ಟಿಲಾಗಿದೆ !
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಹೆಚ್ಚಿದ ನಿದ್ರೆ, ಅಂದರೆ ದೇವರು ಅವರ ನಿರ್ವಿಚಾರ ಸ್ಥಿತಿಯನ್ನು ಹೆಚ್ಚಿಸಲು ಮಾಡಿದ ಉಪಾಯಯೋಜನೆಯಾಗಿದೆ !