‘ಖಾಲಿದ್ ಕಾ ಶಿವಾಜಿ’ ಚಲನಚಿತ್ರದ ಬಗ್ಗೆ ಸತ್ಯಾಂಶಗಳನ್ನು ಬಹಿರಂಗಪಡಿಸಿದ್ದಕ್ಕಾಗಿ ಹಿಂದುತ್ವನಿಷ್ಠ ವ್ಯಕ್ತಿಗೆ ಪೊಲೀಸರಿಂದ ನೋಟಿಸ್

ಮುಂಬಯಿ – ಛತ್ರಪತಿ ಶಿವಾಜಿ ಮಹಾರಾಜರ ಸೈನ್ಯದಲ್ಲಿ ಶೇ. ೩೫ ರಷ್ಟು ಮುಸ್ಲಿಮರಿದ್ದರು, ಅವರ ೧೧ ಅಂಗರಕ್ಷಕರು ಮುಸ್ಲಿಮರಾಗಿದ್ದರು ಮತ್ತು ಛತ್ರಪತಿ ಶಿವಾಜಿ ಮಹಾರಾಜರು ಅವರಿಗಾಗಿ ರಾಯಗಡದಲ್ಲಿ ಮಸೀದಿ ಕಟ್ಟಿಸಿದ್ದರು ಎಂಬಂತಹ ಕಪೋಲಕಲ್ಪಿತ ಇತಿಹಾಸವನ್ನು ‘ಖಾಲಿದ್ ಕಾ ಶಿವಾಜಿ’ ಚಲನ ಚಿತ್ರದಲ್ಲಿ ತೋರಿಸಲಾಗಿದೆ. ಇಂತಹ ಕಪೋಲಕಲ್ಪಿತ ಚಲನ ಚಿತ್ರದ ವಿರುದ್ಧ ಕ್ರಮ ಕೈಗೊಳ್ಳುವ ಬದಲು, ಈ ಚಲನ ಚಿತ್ರದ ನಿಜ ಸ್ವರೂಪವನ್ನು ಸಾಮಾಜಿಕ ಮಾಧ್ಯಮಗಳ ಮೂಲಕ ಪ್ರಸ್ತುತಪಡಿಸಿದ ‘ಸಕಲ ಹಿಂದೂ ಸಮಾಜ ಗ್ರೂಪ್ ೧’ ವಾಟ್ಸಾಪ್ ಗುಂಪಿನ ನಿರ್ವಾಹಕರಾದ ಶ್ರೀ. ಪ್ರಮೋದ ಕಾಟೆ ಅವರಿಗೆ ಪೊಲೀಸರು ನೋಟಿಸ್ ಕಳುಹಿಸಿದ್ದಾರೆ.

ಸಾಮಾಜಿಕ ಮಾಧ್ಯಮಗಳಲ್ಲಿ ಈ ರೀತಿಯ ಸಂದೇಶಗಳನ್ನು ಕಳುಹಿಸಿದರೆ ದೂರು ದಾಖಲಿಸುವುದಾಗಿ ಪೊಲೀಸರು ಈ ನೋಟಿಸ್‌ನಲ್ಲಿ ಎಚ್ಚರಿಕೆ ನೀಡಿದ್ದಾರೆ. ಆಗಸ್ಟ್ ೨ ರಂದು ಭಾಂಡೂಪ ಪೊಲೀಸ್ ಠಾಣೆಯಿಂದ ಶ್ರೀ. ಪ್ರಮೋದ ಕಾಟೆ ಅವರಿಗೆ ಈ ನೋಟಿಸ್ ಕಳುಹಿಸಲಾಗಿದೆ.

ಮಿಚೆಲ ಥೇವರ್ ಅವರು ‘ಖಾಲಿದ್ ಕಾ ಶಿವಾಜಿ’ ಚಲನ ಚಿತ್ರವನ್ನು ನಿರ್ಮಿಸಿದ್ದು, ರಾಜ್ ಮೋರೆ ಅವರು ನಿರ್ದೇಶಿಸಿದ್ದಾರೆ. ‘ಶಿವಾಜಿ ಅಂಡರ್ ಗ್ರೌಂಡ್ ಇನ್ ಭೀಮನಗರ್ ಮೊಹಲ್ಲಾ’ ಎಂಬ ಆಕ್ಷೇಪಾರ್ಹ ನಾಟಕವನ್ನು ಆಧರಿಸಿ ಈ ಚಲನ ಚಿತ್ರವನ್ನು ನಿರ್ಮಿಸಲಾಗಿದೆ. ಗೋವಾದಲ್ಲಿ ನಡೆದ ಐಎಫ್‌ಎಫ್‌ಐ (‘ಇಂಡಿಯನ್ ಪ್ಯಾನ್‌ರಮಾ ಎನ್‌ಡಿಎಫ್‌ಸಿ ಫಿಲ್ಮ್ ಫೆಸ್ಟಿವಲ್’) ಮತ್ತು ಅಜಂತಾ-ಎಲ್ಲೋರಾ ಅಂತರರಾಷ್ಟ್ರೀಯ ಚಲನಚಲನ ಚಿತ್ರೋತ್ಸವ ೨೦೨೪ ರಲ್ಲಿ ಈ ಚಲನ ಚಿತ್ರಕ್ಕೆ ನಾಮನಿರ್ದೇಶನ ಲಭಿಸಿದೆ. ಫ್ರಾನ್ಸ್‌ನಲ್ಲಿ ನಡೆಯಲಿರುವ ‘ಕಾನ್’ ಚಲನಚಲನ ಚಿತ್ರೋತ್ಸವಕ್ಕೂ ಈ ಚಲನ ಚಿತ್ರವನ್ನು ಆಯ್ಕೆ ಮಾಡಲಾಗಿದೆ.

‘ಖಾಲಿದ್ ಕಾ ಶಿವಾಜಿ’ ಚಲನ ಚಿತ್ರದ ಬಗ್ಗೆ ಹಿಂದೂ ಮಹಾಸಂಘದಿಂದ ‘ಸೆನ್ಸಾರ್ ಮಂಡಳಿ’ಗೆ ನೋಟಿಸ್!

ಯಾವುದೇ ಪರಿಸ್ಥಿತಿಯಲ್ಲಿ ಚಲನ ಚಿತ್ರವನ್ನು ಪ್ರದರ್ಶಿಸಲು ಬಿಡುವುದಿಲ್ಲ! – ಹಿಂದೂ ಮಹಾಸಂಘ

ಮುಂಬಯಿ – ಛತ್ರಪತಿ ಶಿವಾಜಿ ಮಹಾರಾಜರ ಕುರಿತ ಸುಳ್ಳು ಇತಿಹಾಸ ಇರುವ ‘ಖಾಲಿದ್ ಕಾ ಶಿವಾಜಿ’ ಚಲನ ಚಿತ್ರವನ್ನು ಯಾವುದೇ ಪರಿಸ್ಥಿತಿಯಲ್ಲಿ ಪ್ರದರ್ಶಿಸಲು ನಾವು ಬಿಡುವುದಿಲ್ಲ ಎಂದು ಹಿಂದೂ ಮಹಾಸಂಘ ಎಚ್ಚರಿಕೆ ನೀಡಿದೆ. ಈ ಕುರಿತು ಹಿಂದೂ ಮಹಾಸಂಘವು ಚಲನಚಲನ ಚಿತ್ರ ಪ್ರಮಾಣೀಕರಣ ಮಂಡಳಿಗೆ (ಸೆನ್ಸಾರ್ ಬೋರ್ಡ್) ಕಾನೂನು ನೋಟಿಸ್ ಕಳುಹಿಸಿದೆ.

ಇದು ಇತಿಹಾಸವನ್ನು ತಿರುಚುವ ಪ್ರಯತ್ನವಾಗಿದೆ. ಈ ಚಲನ ಚಿತ್ರದ ಪ್ರದರ್ಶನಕ್ಕೆ ಅನುಮತಿ ನೀಡಿದರೆ, ಉಂಟಾಗುವ ಪರಿಣಾಮಗಳಿಗೆ ಚಲನಚಲನ ಚಿತ್ರ ಪ್ರಮಾಣೀಕರಣ ಮಂಡಳಿ ಜವಾಬ್ದಾರವಾಗಿರುತ್ತದೆ ಎಂದು ಹಿಂದೂ ಮಹಾಸಂಘ ನೋಟಿಸ್‌ನಲ್ಲಿ ಎಚ್ಚರಿಕೆ ನೀಡಿದೆ. ಹಿಂದೂ ಮಹಾಸಂಘವು ಚಲನಚಲನ ಚಿತ್ರ ಪ್ರಮಾಣೀಕರಣ ಮಂಡಳಿಗೆ ಕಳುಹಿಸಿದ ಪತ್ರದ ಪ್ರತಿಯನ್ನು ಗೃಹ ಸಚಿವ ದೇವೇಂದ್ರ ಫಡ್ನವೀಸ್ ಅವರಿಗೂ ಕಳುಹಿಸಿದೆ.

 

ಸಂಪಾದಕೀಯ ನಿಲುವು

  • ಹಿಂದುತ್ವನಿಷ್ಠರ ಮೇಲೆ ಕಾನೂನು ಕ್ರಮ ಜರುಗಿಸುವ ಪೊಲೀಸರು ಮತಾಂಧ ಮುಸ್ಲಿಮರ ಮುಂದೆ ಯಾವಾಗಲೂ ಬಾಲ ಮುದುಡುತ್ತಾರೆ ಎಂಬುದನ್ನು ಗಮನಿಸಿ!
  • ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಕುರಿತು ಸುಳ್ಳು ಇತಿಹಾಸವನ್ನು ತೋರಿಸುವ ಇಂತಹ ಚಲನ ಚಿತ್ರಕ್ಕೆ ಚಲನ ಚಿತ್ರ ಪ್ರಮಾಣೀಕರಣ ಮಂಡಳಿ ಹೇಗೆ ಅನುಮತಿ ನೀಡುತ್ತದೆ? ಇದರ ಬಗ್ಗೆ ಸರಕಾರ ತನಿಖೆ ನಡೆಸಬೇಕು. ‘ವ್ಯವಸ್ಥೆ’ ಇನ್ನೂ ಹಿಂದೂ ವಿರೋಧಿಯಾಗಿದೆಯೇ ಎಂದು ಇದರಿಂದ ತಿಳಿದುಬರುತ್ತದೆ!