ಪ.ಪೂ ಡಾಕ್ಟರರಿಗೆ ಲಭಿಸಿದ ಪ.ಪೂ. ಭಕ್ತರಾಜ ಮಹಾರಾಜರ ಒಡನಾಟ ! : ಡಾ. (ಸೌ.) ಕುಂದಾ ಆಠವಲೆ ಇವರ ಮಾತುಗಳಲ್ಲಿ

|| ಹರಿ ಓಂ ತತ್ಸತ್‌ ||

ಶಿಷ್ಯ ಡಾ. ಜಯಂತ ಆಠವಲೆ ಅವರು ಜಿಜ್ಞಾಸೆಯಿಂದ ಕೇಳಿದ ಪ್ರಶ್ನೆಗಳಿಗೆ ಉತ್ತರಿಸುತ್ತಿರುವ ಪ.ಪೂ. ಭಕ್ತರಾಜ ಮಹಾರಾಜರು

‘ಡಾ. ಆಠವಲೆಯವರ ಅಂದರೆ, ನನ್ನ ಪತಿದೇವರ ೮೩ ನೆಯ ಹುಟ್ಟುಹಬ್ಬ ಆಚರಣೆಯಾಯಿತು. ಆದ್ದರಿಂದ ಅವರ ವಿಷಯದಲ್ಲಿ ಬರೆಯಬೇಕೆಂದು ನನಗೆ ಸೂಚಿಸಲಾಯಿತು. ಆದ್ದರಿಂದ ನಾನು ಬರೆಯಲು ಮುಂದಾದೆನು. ‘ಡಾಕ್ಟರರ ಆಧ್ಯಾತ್ಮಿಕ ಪ್ರಯಾಣದ ವಿಷಯದಲ್ಲಿ ಮತ್ತು ಅವರಲ್ಲಿದ್ದ ಶಿಷ್ಯಭಾವದ ವಿಷಯದಲ್ಲಿ ನಾನು ಅನುಭವಿಸಿದ್ದನ್ನು ಬರೆಯಬೇಕೆಂದು ನನಗನಿಸಿತು.

ಅಧ್ಯಾತ್ಮದ ಬಗ್ಗೆ ಪ್ರಶ್ನೆಗಳನ್ನು ಕೇಳಿದ ನಂತರ ಶಿಷ್ಯ ಡಾ. ಜಯಂತ ಆಠವಲೆಯವರ ಸಂದೇಹಗಳನ್ನು

ನಿವಾರಿಸುತ್ತಿರುವ ಪ.ಪೂ. ಭಕ್ತರಾಜ ಮಹಾರಾಜರು

ಗುರುಪೂರ್ಣಿಮೆಯಂದು ಪ.ಪೂ. ಭಕ್ತರಾಜ ಮಹಾರಾಜರಿಗೆ ಆರತಿಯನ್ನು ಬೆಳಗುತ್ತಿರುವ ಶಿಷ್ಯ ಡಾ. ಜಯಂತ ಆಠವಲೆ

ಮತ್ತು ಡಾ. (ಸೌ.) ಕುಂದಾ ಆಠವಲೆ

ಪ.ಪೂ. ಭಕ್ತರಾಜ ಮಹಾರಾಜರು ಮನೆಗೆ (ಮುಂಬಯಿಗೆ) ಬಂದಾಗ ಅವರ ಚರಣಕಮಲಗಳನ್ನು ಪೂಜಿಸುತ್ತಿರುವ

ಶಿಷ್ಯ ಡಾ. ಜಯಂತ ಆಠವಲೆ ಮತ್ತು ಡಾ. (ಸೌ.) ಕುಂದಾ ಆಠವಲೆ (ವರ್ಷ ೧೯೯೦)

ಅಮೃತಮಹೋತ್ಸವದ ಸಮಯದ ಒಂದು ಪ್ರಸಂಗದಲ್ಲಿ ಶಿಷ್ಯ ಡಾ. ಜಯಂತ ಆಠವಲೆ ಇವರಿಗೆ

ಮಾರ್ಗದರ್ಶನ ಮಾಡುತ್ತಿರುವ ಪ.ಪೂ. ಭಕ್ತರಾಜ ಮಹಾರಾಜರು

‘ಡಾ. ಜಯಂತ ಆಠವಲೆ ಅವರ ಆಧ್ಯಾತ್ಮಿಕ ಪಯಣ’ ಈ ಲೇಖನದ ಕೆಲವು ಭಾಗ ೨೬/೪೪ ರ ಕನ್ನಡ ಸಾಪ್ತಾಹಿಕ ‘ಸನಾತನ ಪ್ರಭಾತ’ದಲ್ಲಿ ಮುದ್ರಣವಾಗಿದೆ. ಈ ವಾರ ಅದರ ಮುಂದಿನ ಭಾಗ ನೋಡೋಣ.

೯. ಪ.ಪೂ. ಭಕ್ತರಾಜ ಮಹಾರಾಜರ ಸಹವಾಸದ ಲಾಭ

೯ ಇ. ಪ.ಪೂ. ಭಕ್ತರಾಜ ಮಹಾರಾಜರೊಂದಿಗೆ ಶಿರ್ಡಿಗೆ ಹೋಗಲು ಇರುವ ತೊಂದರೆಯನ್ನು ಹೇಳಿದಾಗ, ಘಳಸಾಸಿಯವರು ಅದಕ್ಕೆ ಉಪಾಯ ಹೇಳುವುದು ಮತ್ತು ಕಾಂದಳಿಗೆ ಹಿಂದಿರುಗಿದ ನಂತರ ಪ.ಪೂ. ಅಣ್ಣಾ ಇವರು ‘ಆಠವಲೆ ದಂಪತಿಯನ್ನು ಶಿರ್ಡಿಗೆ ಕರೆದುಕೊಂಡು ಹೋಗುವುದು ಬೇಡ’ ಎಂದು ಹೇಳಿದಾಗ, ಪ.ಪೂ. ಬಾಬಾ ಇವರು ‘ಸರಿ’ ಎಂದು ಹೇಳುವುದು : ಕಾಂದಳಿಯ ‘೨೨ ಎಕರೆ’ಯ ಹೊಲದಲ್ಲಿ ಟೊಮೇಟೊ ಬೆಳೆ ಸಿದ್ಧ ವಾಗುತ್ತಿತ್ತು. ಘಳಸಾಸಿಯವರು ನಮಗೂ ೨ ಚೀಲಗಳಷ್ಟು ಟೊಮೇಟೊಗಳನ್ನು ನೀಡಿದರು. ನಾವು ಅವರಿಗೆ, ‘‘ಪ.ಪೂ. ಭಕ್ತರಾಜ ಮಹಾರಾಜರು ನಮ್ಮನ್ನು ಶಿರ್ಡಿಗೆ ಕರೆದುಕೊಂಡು ಹೋಗಬೇಕೆಂದು ಹೇಳುತ್ತಿದ್ದಾರೆ; ಆದರೆ ನಾವು ಉಳಿಯುವ ಸಿದ್ಧತೆಯೊಂದಿಗೆ ಬಂದಿಲ್ಲ. ಆದುದರಿಂದ ನಾಳೆ ಸ್ನಾನದ ನಂತರ ಬಟ್ಟೆಗಳ ಪ್ರಶ್ನೆ ಎದುರಾಗುತ್ತದೆ’’ ಎಂದು ಹೇಳಿದೆವು. ಆಗ ಶ್ರೀ. ಘಳಸಾಸಿಯವರು, ‘ಪಕ್ಕದಲ್ಲೇ ‘ಆಳೆಫಾಟಾ’ ಎಂಬ ಊರಿದೆ. ಅಲ್ಲಿ ನಿಮಗೆ ತಾತ್ಕಾಲಿಕವಾಗಿ ಬೇಕಾದ ಬಟ್ಟೆಗಳು ಸಿಗುತ್ತವೆ, ಅವುಗಳನ್ನು ಖರೀದಿಸಬಹುದು’’ ಎಂದರು. ಆಮೇಲೆ ನಾವು ಸಿದ್ಧರಾದೆವು. ೨೨ ಎಕರೆ ಹೊಲವನ್ನು ದಾಟಿ ಹಿಂದಿರುಗುವಾಗ ಅವರನ್ನು ಕರೆದುಕೊಂಡೇ ಆಳೆಫಾಟಾದ ಮಾರುಕಟ್ಟೆಗೆ ಹೋಗಿ ಬಟ್ಟೆಗಳನ್ನು ಖರೀದಿಸಿ ಬಂದೆವು. ಹಿಂದಿರುಗಿದ ನಂತರ ಊಟವಾಯಿತು ಮತ್ತು ಪ.ಪೂ. ಭಕ್ತರಾಜ ಮಹಾರಾಜರು, ”ಬನ್ನಿ, ಈಗ ಹೊರಡೋಣ’’, ಎಂದು ಹೇಳಿದರು. ಆಗ ಪ.ಪೂ. ಅಣ್ಣಾ ಇವರು ಪ.ಪೂ ಭಕ್ತರಾಜ ಮಹಾರಾಜರಿಗೆ, ‘‘ಈ ಬಾರಿ ಅವರನ್ನು ಶಿರ್ಡಿಗೆ ಕರೆದುಕೊಂಡು ಹೋಗುವುದು ಬೇಡ. ಮುಂದಿನ ಬಾರಿ ನೋಡೋಣ’’, ಎಂದು ಹೇಳಿದರು. ಅದಕ್ಕೆ ಪ.ಪೂ. ಭಕ್ತರಾಜರು, ‘‘ಸರಿ. ಹಾಗಿದ್ದರೆ ಮುಂದಿನ ಬಾರಿ ನೋಡೋಣ’’, ಎಂದು ಹೇಳಿದರು. ನಂತರ ನಾವು ಪುಣೆಗೆ ಹಿಂದಿರುಗಿ, ಅಲ್ಲಿಂದಲೇ ಮುಂಬಯಿಗೆ ಹೊರಟೆವು.

೯ ಈ. ಪ.ಪೂ. ಭಕ್ತರಾಜ ಮಹಾರಾಜರು ‘ಮುಂಬಯಿ, ಪುಣೆ ಅಥವಾ ನಾಸಿಕ್‌’ಗೆ ಬಂದಾಗ, ಡಾಕ್ಟರರನ್ನು ಕರೆಸುವುದು, ಡಾಕ್ಟರರು ತಮ್ಮ ಉದ್ಯೋಗದ ಚಿಂತೆ ಮಾಡದೇ ಹೋಗುವುದು ಮತ್ತು ಅಲ್ಲಿ ‘ಅಧ್ಯಾತ್ಮ’ ವಿಷಯದ ಬಗ್ಗೆ ಬಹಳಷ್ಟು ಮಾಹಿತಿ ಲಭಿಸುವುದು : ನಂತರ ಪ.ಪೂ. ಬಾಬಾ ಇವರು ಮುಂಬಯಿಯಲ್ಲಿ ಡಾ. ಗಡಕರಿಕಾಕಾರ ಮನೆಗೆ ಬರುತ್ತಿದ್ದರು ಮತ್ತು ನಮ್ಮನ್ನು ಕರೆಯುತ್ತಿದ್ದರು. ಅವರು ಪುಣೆಯಲ್ಲಿ ಶ್ರೀ. ದತ್ತಾತ್ರೇಯ ಜೋಶಿಯವರ ಮನೆಗೆ ಬಂದಾಗ, ಅವರು ನಮ್ಮನ್ನು ಪುಣೆಗೆ ಕರೆಯುತ್ತಿದ್ದರು. ಡಾಕ್ಟರರ ಬಳಿ ಒಂದು ಪುಸ್ತಕ ಮತ್ತು ಪೆನ್‌ ಇರುತ್ತಿದ್ದವು. ಬಿಡುವು ಸಿಕ್ಕಾಗ ಪ್ರಶ್ನೋತ್ತರಗಳು ಪ್ರಾರಂಭವಾಗುತ್ತಿದ್ದವು. ಇತರ ಭಕ್ತರ ಸಂಭಾಷಣೆಯಿಂದಲೂ ಬಹಳಷ್ಟು ಆಧ್ಯಾತ್ಮಿಕ ಮಾಹಿತಿ ಮತ್ತು ಅವರ ಅನುಭೂತಿಗಳ ಮಾಹಿತಿ ಸಿಗುತ್ತಿತ್ತು. ಪ.ಪೂ. ಬಾಬಾ ಅವರು ನಾಸಿಕ್‌ನಲ್ಲಿ ಶ್ರೀ. ಗಿರೀಶ ದೀಕ್ಷಿತರ ಮನೆಗೆ ಬಂದಾಗ ತಕ್ಷಣವೇ ಫೋನ್‌ ಬರುತ್ತಿತ್ತು, ‘‘ನಾನು ಬಂದಿದ್ದೇನೆ. ಭೇಟಿಯಾಗಲು ಬನ್ನಿ’’, ಎಂದು. ಆಗ ಡಾಕ್ಟರರು ತಕ್ಷಣವೇ ಹೊರಡುತ್ತಿದ್ದರು. ಡಾಕ್ಟರರು ತಮ್ಮ ವ್ಯವಸಾಯದ ಮತ್ತು ಗಳಿಕೆಯ ಬಗ್ಗೆ ಯಾವುದೇ ಚಿಂತೆ ಮಾಡಲಿಲ್ಲ; ಆದರೆ ಅವರ (ಪ.ಪೂ. ಬಾಬಾ ಇವರ) ಕೃಪೆಯಿಂದ ಯಾವುದಕ್ಕೂ ಕಡಿಮೆಯಾಗಲಿಲ್ಲ.

೯ ಉ. ಪ.ಪೂ. ಬಾಬಾ ಇವರು ಪ.ಪೂ. ಬೇಜನ್‌ ದೇಸಾಯಿಯವರ ಪರಿಚಯ ಮಾಡಿಸಿಕೊಡುವುದು : ಪ.ಪೂ. ಬಾಬಾ ಇವರು ‘ಬಾಯ್ಸ್ ಟೌನ್’ ಎಂಬ ‘ಪಬ್ಲಿಕ್‌ ಸ್ಕೂಲ್‌’ನ ಹಿಂದಿನ ಮುಖ್ಯೋಪಾಧ್ಯಾಯರು (ಹೆಡ್‌ ಮಾಸ್ಟರ್) ಮತ್ತು ನಿವೃತ್ತಿಯ ನಂತರ ಅಲ್ಲಿನ ನಿರ್ದೇಶಕರಾಗಿದ್ದ ಶ್ರೀ. ಬೇಜನ್‌ ದೇಸಾಯಿಯವರ ಪರಿಚಯ ಮಾಡಿಸಿಕೊಟ್ಟರು. ಅವರು ಪಾರ್ಸಿಗಳಾಗಿದ್ದರೂ, ಅವರಿಗೆ ಹಿಂದೂ ಧರ್ಮ ಮತ್ತು ಅಧ್ಯಾತ್ಮ ಸಾಹಿತ್ಯದ ಬಗ್ಗೆ ಗಹನವಾದ ಅಧ್ಯಯನವಿತ್ತು. ಶ್ರೀ. ಬೇಜನ್‌ ದೇಸಾಯಿ ಮತ್ತು ಅವರ ಶ್ರೀಮತಿಯವರಿಗೆ ಪ.ಪೂ. ಭಕ್ತರಾಜ ಮಹಾರಾಜರ ಬಗ್ಗೆ ಬಹಳ ಪ್ರೀತಿ ಇತ್ತು.

೯ ಊ. ಪ.ಪೂ. ಭಕ್ತರಾಜ ಮಹಾರಾಜರು ಸಾಂಗಲಿ ಮತ್ತು ಇಸ್ಲಾಮಪುರದಲ್ಲಿ ವಾಸ್ತವ್ಯದಲ್ಲಿದ್ದಾಗ, ಪಪೂ. ಬಾಬಾ ಮತ್ತು ಭಕ್ತರ ಮಾತುಕತೆಯಿಂದ ಅಧ್ಯಾತ್ಮಜ್ಞಾನ ಲಭಿಸುವುದು : ಪ.ಪೂ. ಭಕ್ತರಾಜ ಮಹಾರಾಜರು ಸಾಂಗಲಿಯಲ್ಲಿ ಶ್ರೀ. ತಾತ್ಯಾ ಭೋಸಲೆ ಮತ್ತು ಇಸ್ಲಾಮಪುರದಲ್ಲಿ ಶ್ರೀ. ರವಿ ಬೋರಕರ ಅವರ ಮನೆಗೆ ಹೋಗುತ್ತಿದ್ದರು. ಅವರು ಅಲ್ಲಿ ತಂಗುತ್ತಲೂ ಇದ್ದರು. ಆ ಸಮಯ ದಲ್ಲಿ ಇತರ ಭಕ್ತರೂ ಬರುತ್ತಿದ್ದರು. ಆಗ ಪ.ಪೂ. ಮಹಾರಾಜರು ಮತ್ತು ಭಕ್ತರ ಮಾತುಕತೆಯಿಂದ ಅಧ್ಯಾತ್ಮಜ್ಞಾನ ಲಭಿಸುತ್ತಿತ್ತು. ಅವರ ಭಕ್ತರಿಗೆ ಬಂದ ಅನುಭೂತಿಗಳೂ ತಿಳಿಯುತ್ತಿದ್ದವು.

೯ ಎ. ಪ.ಪೂ. ಮಹಾರಾಜರ ಸಹವಾಸ ಮತ್ತು ಜ್ಞಾನವನ್ನು ಪಡೆಯಲು ಪ.ಪೂ. ಡಾಕ್ಟರರು ಪಟ್ಟ ಕಠಿಣ ಪರಿಶ್ರಮ ! : ತಮ್ಮ ಕಾರ್ಯವನ್ನು ಒಂದೆಡೆ ಮುಂದುವರೆಸುವುದು, ಇನ್ನೊಂದೆಡೆ ಅದರ ಪ್ರಸಾರ ಮತ್ತು ಪ್ರಚಾರವನ್ನು ಹೆಚ್ಚಿಸುತ್ತಾ, ಪ.ಪೂ. ಮಹಾರಾಜರ ಸಹವಾಸ ಮತ್ತು ಜ್ಞಾನವನ್ನು ಪಡೆಯಲು ಅವರು ಕರೆಯುವಲ್ಲಿಗೆ ಹೋಗುವುದು, ಜೊತೆಗೆ ತಮ್ಮ ವ್ಯವಸಾಯವನ್ನು ನಿಭಾಯಿಸುವುದು, ಎಂದರೆ ಹಗ್ಗದ ಮೇಲಿನ ನಡಿಗೆಯೇ ಆಗಿತ್ತು;
ಆದರೆ ಈಶ್ವರನ ಕೃಪೆಯಿಂದ ಮತ್ತು ಪ.ಪೂ. ಭಕ್ತರಾಜ ಮಹಾರಾಜರ ಆಶೀರ್ವಾದದಿಂದ ಎಲ್ಲವೂ ಸುಗಮವಾಗಿ ಸಾಗಿತ್ತು.

೯ ಏ. ಪ.ಪೂ. ಮಹಾರಾಜರು ಪ.ಪೂ. ರಾಮಜಿದಾದಾ ಮತ್ತು ಪ.ಪೂ. ಭಾವೂ ಬಿಡವಯಿ ಇವರ ನಾಮಕರಣ ಮಾಡಿದ್ದು ! : ೧೯೮೭ ರ ಡಿಸೆಂಬರ್‌ ತಿಂಗಳಲ್ಲಿ ಪ.ಪೂ. ಮಹಾರಾಜರು ಮೋರಟಕ್ಕಾದ ಆಶ್ರಮದಲ್ಲಿ ‘ವಿಷ್ಣುಯಾಗ’ವನ್ನು ಮಾಡಿದ್ದರು. ಆಗ ಪ.ಪೂ. ರಾಮಜಿದಾದಾ ಮತ್ತು ಪ.ಪೂ. ಭಾವೂ ಬಿಡವಯಿ ಅವರನ್ನು ಕ್ರಮವಾಗಿ ‘ಪ.ಪೂ. ರಾಮಾನಂದ ಮಹಾರಾಜ’ ಮತ್ತು ‘ಪ.ಪೂ. ಅಚ್ಯುತಾನಂದ ಮಹಾರಾಜ’ ಎಂದು ನಾಮಕರಣ ಮಾಡಿದ್ದರು.

೯ ಓ. ಪ.ಪೂ. ಬಾಬಾ ಇವರ ಗುರುಪೂರ್ಣಿಮೆಗಾಗಿ ಇಂದೂರಿಗೆ ಹೋದಾಗ, ಅವರು ಪ.ಪೂ. ಢಾಂಡೇಶಾಸ್ತ್ರಿಯವರನ್ನು ಭೇಟಿಯಾಗಲು ಹೇಳುವುದು, ಅದರಂತೆ ಭೇಟಿಯಾದ ನಂತರ ಅವರು ಅರ್ಧ ಗಂಟೆ ರಾಮನಾಮ ಜಪವನ್ನು ಮಾಡಿಸಿಕೊಳ್ಳುವುದು : ೧೯೮೮ ರಲ್ಲಿ ನಾವು ಮೊದಲ ಗುರುಪೂರ್ಣಿಮೆಗಾಗಿ ಇಂದೂರಿನಲ್ಲಿ ಉಪಸ್ಥಿತರಿದ್ದೆವು. ಪ.ಪೂ. ಮಹಾರಾಜರು ನಮಗೆ ಪ.ಪೂ. ಢಾಂಡೇಶಾಸ್ತ್ರಿಯವರನ್ನು ಭೇಟಿಯಾಗಲು ಹೇಳಿದರು. ಅದರಂತೆ ನಾವು ಅವರನ್ನು ಭೇಟಿಯಾದೆವು. ಅವರು ನಮ್ಮಿಂದ ಅರ್ಧ ಗಂಟೆ ರಾಮನಾಮ ಜಪವನ್ನು ಮಾಡಿಸಿಕೊಂಡರು. ನಂತರ ನಾವು ಸಮಾರಂಭ ನಡೆಯುತ್ತಿದ್ದ ಸಭಾಂಗಣಕ್ಕೆ ಹಿಂದಿರುಗಿದೆವು. ತಂದ ಪ್ರಸಾದ ಮತ್ತು ದಕ್ಷಿಣೆಯನ್ನು ನೀಡಿ ಪ.ಪೂ. ಮಹಾರಾಜರಿಗೆ ನಮಸ್ಕರಿಸಿದೆವು. ಮಹಾಪ್ರಸಾದವನ್ನು ಸ್ವೀಕರಿಸಿ ನಾವು ಸಂಜೆಯ ರೈಲಿನಲ್ಲಿ ಮುಂಬಯಿಗೆ ಹಿಂದಿರುಗಿದೆವು.

೯ ಔ. ಪ.ಪೂ. ಅಣ್ಣಾ ಕರಂದೀಕರ ಅವರ ಕ್ಯಾನ್ಸರ್‌ರೋಗ ಪತ್ತೆ ಮತ್ತು ಪ.ಪೂ. ಬಾಬಾರೊಂದಿಗಿನ ಅವರ ಕೊನೆಯ ಭಾವಪೂರ್ಣ ಭೇಟಿ !

೯ ಔ ೧. ಪ.ಪೂ. ಕರಂದೀಕರ ಇವರಿಗೆ ಕ್ಯಾನ್ಸರ್‌ ಆದುದರಿಂದ ಅವರಿಗೆ ಶಸ್ತ್ರಚಿಕಿತ್ಸೆ ಮಾಡುವುದು; ಆದರೆ ೨ – ೩ ತಿಂಗಳ ನಂತರ ಅವರ ಆರೋಗ್ಯ ಪುನಃ ಹದಗೆಡುವುದು : ಜೂನ್‌ ೧೯೮೮ ರಲ್ಲಿ ಪ.ಪೂ. ಕರಂದೀಕರ ಇವರ ಆರೋಗ್ಯ ಬಹಳಷ್ಟು ಹದಗೆಟ್ಟಿತು. ಅವರಿಗೆ ಕ್ಯಾನ್ಸರ್‌ ಆಗಿರುವುದು ದೃಢಪಟ್ಟಿತು. ಮುಂಬಯಿಯ ಡಾ. ಶ್ರೀಖಂಡೆ ಎಂಬ ಹೆಸರಾಂತ ಶಸ್ತ್ರಚಿಕಿತ್ಸಕರು ಅವರಿಗೆ ಶಸ್ತ್ರಚಿಕಿತ್ಸೆ ಮಾಡಿದರು; ಆದರೆ ಕ್ಯಾನ್ಸರ್‌ ಆದ ಒಂದು ಚಿಕ್ಕ ಭಾಗವನ್ನು ಅವರಿಗೆ ತೆಗೆಯಲು ಸಾಧ್ಯವಾಗಲಿಲ್ಲ. ಶಸ್ತ್ರಚಿಕಿತ್ಸೆಯ ನಂತರ ಅವರು ಆ ಬಗ್ಗೆ ತಿಳಿಸಿದ್ದರು. ನಂತರ ೨-೩ ತಿಂಗಳುಗಳು ಸರಿಯಾಗಿ ಕಳೆದವು. ನಂತರ ಮತ್ತೆ ಪರಮಪೂಜ್ಯ ಕರಂದೀಕರ ಅವರ ಆರೋಗ್ಯ ಹದಗೆಟ್ಟಿತು.

೯ ಔ ೨. ಪ.ಪೂ. ಮಹಾರಾಜರು ಮೋರಟಕ್ಕಾದಲ್ಲಿ ನಡೆದ ಭಂಡಾರದಲ್ಲಿ ಪ.ಪೂ. ಅಣ್ಣಾ ಅವರಿಗಾಗಿ ‘ಮಹಾಮೃತ್ಯುಂಜಯ ಯಜ್ಞ’ವನ್ನು ಮಾಡಿಸುವುದು; ಆದರೆ ಆರೋಗ್ಯ ಹದಗೆಟ್ಟಿದ್ದರಿಂದ ಅವರನ್ನು ‘ನಾನಾವತಿ ಆಸ್ಪತ್ರೆ’ಯಲ್ಲಿ ದಾಖಲಿಸಬೇಕಾಗುವುದು : ಪ.ಪೂ. ಮಹಾರಾಜರು ಮೋರಟಕ್ಕಾದಲ್ಲಿ ಡಿಸೆಂಬರ್‌ನಲ್ಲಿ ನಡೆದ ಅನ್ನದಾಸೋಹದಲ್ಲಿ ಪ.ಪೂ. ಅಣ್ಣಾ ಅವರಿಗಾಗಿ ‘ಮಹಾ ಮೃತ್ಯುಂಜಯ ಯಜ್ಞ’ವನ್ನು ಮಾಡಿಸಿದರು. ಅದಕ್ಕಾಗಿ ಅವರನ್ನು ಅಲ್ಲಿಗೆ ಕರೆಸಿದರು; ಆದರೆ ಆಗ ಪ.ಪೂ. ಕರಂದೀಕರ ಅವರ ಆರೋಗ್ಯ ಬಹಳಷ್ಟು ಹದಗೆಟ್ಟಿತ್ತು. ಯಜ್ಞ ಮುಗಿದ ನಂತರ, ಮರುದಿನ ಆಂಬ್ಯುಲೆನ್ಸ್ ಮೂಲಕ ಅವರನ್ನು ಡಹಾಣೂವಿಗೆ ಕರೆದೊಯ್ದರು ಮತ್ತು ಅಲ್ಲಿಂದ ಅವರನ್ನು ಮುಂಬಯಿಯ ನಾನಾವತಿ ಆಸ್ಪತ್ರೆಯಲ್ಲಿ ದಾಖಲಿಸಲಾಯಿತು.

೯ ಔ ೩. ಪ.ಪೂ. ಅಣ್ಣಾ ಅವರನ್ನು ಭೇಟಿಯಾಗಲು ಆಸ್ಪತ್ರೆಗೆ ಹೋದಾಗ, ಅವರು ‘ಜನವರಿ ೨೦ ರಂದು ನನ್ನ ಗುರುಪರಂಪರೆಯಲ್ಲಿನ ಯಾರಾದರೂ ನನ್ನನ್ನು ಭೇಟಿಯಾಗಲು ಬರುತ್ತಾರೆ, ಆಗ ನಾನು ಹೊರಡಲು ಸ್ವತಂತ್ರನಾಗುತ್ತೇನೆ !’ ಎಂದು ಹೇಳುವುದು ಮತ್ತು ಜನವರಿ ೨೦ ರಂದು ಪ.ಪೂ. ಭಕ್ತರಾಜ ಮಹಾರಾಜರು ಅವರನ್ನು ಆಸ್ಪತ್ರೆಯಲ್ಲಿ ಭೇಟಿಯಾಗಲು ಹೋದಾಗ, ಪ.ಪೂ. ಅಣ್ಣಾ ಭಾವತುಂಬಿ ಅಳಲು ಪ್ರಾರಂಭಿಸುವುದು : ನಾವು ೧೪ ಜನವರಿ ೧೯೮೯ ರಂದು ಪ.ಪೂ. ಅಣ್ಣಾ ಅವರನ್ನು ಭೇಟಿಯಾಗಲು ಹೋದೆವು. ಆಗ ಅವರು, ‘‘ಜನವರಿ ೨೦ ರಂದು ನನ್ನ ಗುರುಪರಂಪರೆಯಲ್ಲಿನ ಒಬ್ಬರು ನನ್ನನ್ನು ಭೇಟಿಯಾಗಲು ಬರುತ್ತಾರೆ. ಆಗ ನಾನು ಹೊರಡಲು ಸ್ವತಂತ್ರನಾಗುತ್ತೇನೆ !’’ ಎಂದು ಹೇಳಿದರು. ೧೯.೧.೧೯೮೯ ರಂದು ಬೆಳಗ್ಗೆ ಶಹಾಪುರದಿಂದ ಪ.ಪೂ. ಭಕ್ತರಾಜ ಮಹಾರಾಜರಿಂದ ನಮಗೆ ‘‘ನಾನು ಸಂಜೆಯೊಳಗೆ ಬರುತ್ತೇನೆ’’ ಎಂದು ದೂರವಾಣಿ ಕರೆ ಬಂದಿತು. ನಾವು ಸಿದ್ಧರಾಗಿ ಅವರಿಗಾಗಿ ಕಾಯುತ್ತಾ ಕುಳಿತೆವು. ಅವರು ಸಂಜೆ ೭ ಗಂಟೆಗೆ ಬಂದರು ಮತ್ತು ಸ್ವಲ್ಪ ಸಮಯದ ನಂತರ, ‘‘ನಾಳೆ ನಾವು ಕರಂದೀಕರ ಅವರನ್ನು ಆಸ್ಪತ್ರೆಯಲ್ಲಿ ಭೇಟಿಯಾಗಬೇಕು’’, ಎಂದು ಹೇಳಿದರು. ಮರುದಿನ ಬೆಳಗ್ಗೆ ನಾವು ಆಸ್ಪತ್ರೆಗೆ ಹೋದೆವು. ನಂತರ ಪ.ಪೂ. ಅಣ್ಣಾ ಅವರ ಕೋಣೆಗೆ ಹೋದೆವು. ಆಗ ಪ.ಪೂ. ಭಕ್ತರಾಜ ಮಹಾರಾಜರ ಕೈಗಳನ್ನು ಹಿಡಿದುಕೊಂಡು ಪ.ಪೂ. ಕರಂದೀಕರ ಇವರು ಬಿಕ್ಕಿಬಿಕ್ಕಿ ಅಳತೊಡಗಿದರು. ಅವರು ನಮ್ಮನ್ನು ಹೊರಗೆ ಕಳುಹಿಸಿದರು. ಆಗ ಅಲ್ಲಿ ಪ.ಪೂ. ಕರಂದೀಕರ ದಂಪತಿ, ಪ.ಪೂ. ಭಕ್ತರಾಜ ಮಹಾರಾಜರು ಮತ್ತು ಪ.ಪೂ. ರಾಮಜಿದಾದಾ ಇವರು ಮಾತ್ರ ಕೋಣೆಯಲ್ಲಿದ್ದರು. ನಾವು ಹೊರಗೆ ನಿಂತಿರುವಾಗ ನಾನು ಡಾಕ್ಟರರಿಗೆ, ‘‘ಇಂದು ೨೦ ನೇ ತಾರೀಕು. ‘ಇಂದೇ ಉತ್ತರ ದಿಕ್ಕಿನಿಂದ ಗುರುಪರಂಪರೆಯಲ್ಲಿನ ಒಬ್ಬರು ಬರಲಿದ್ದಾರೆ’ ಎಂದು ಅವರು ಹೇಳಿದ್ದರು. ಅವರು ಎಂದರೆ ಪ.ಪೂ. ಭಕ್ತರಾಜ ಮಹಾರಾಜರೇ ಆಗಿರಬೇಕು !’’ ಎಂದು ಹೇಳಿದೆನು. ಬಹುಶಃ ಅವರಿಗೂ ಅದರ ಅರಿವು ಇಂದೇ ಆದ ಕಾರಣ ಅವರು ಅಷ್ಟು ಭಾವಕ್ಕೆ ಒಳಗಾಗಿದ್ದರು.

೯ ಅಂ. ಪ.ಪೂ. ಭಕ್ತರಾಜ ಮಹಾರಾಜರ ಗುರುಪೂರ್ಣಿಮೆಯ ಆಚರಣೆ

೯ ಅಂ ೧. ೧೯೮೯ ರ ಗುರುಪೂರ್ಣಿಮೆಯನ್ನು ಕಾಂದಳಿಯಲ್ಲಿ ಆಚರಿಸುವುದು : ೧೯೮೯ ರ ಗುರುಪೂರ್ಣಿಮೆ ಕಾಂದಳಿಯಲ್ಲಿ ನೆರವೇರಿತು. ಆ ಸಮಯದಲ್ಲಿ ಬಾಬಾ ಅವರು ಮೊದಲು ‘ಭೀಮಾ ಶಂಕರ’ಕ್ಕೆ ದರ್ಶನ ಪಡೆದು ಮನೆಗೆ ಹೋಗಲು ಹೇಳಿದರು. ಹಾಗೆ ನಾವು ಹೋಗಿ ಅಲ್ಲಿಂದಲೇ ಮುಂಬಯಿಗೆ ಹೋದೆವು.
೯ ಅಂ ೨. ೧೯೯೦ ರ ಗುರುಪೂರ್ಣಿಮೆಯ ನಿಮಿತ್ತ ಪ.ಪೂ. ಬಾಬಾ ರವರ ಭಜನೆಗಳ ಪುಸ್ತಕದ ಪುನರ್‌ಮುದ್ರಣದ ಕಾರ್ಯವನ್ನು ಡಾಕ್ಟರರು ಮಾಡುವುದು : ೧೯೯೦ ರ ಗುರುಪೂರ್ಣಿಮೆ ನರಸೋಬಾವಾಡಿಯಲ್ಲಿ ನಡೆಯಿತು. ಅದಕ್ಕಾಗಿ ಅವರ ಭಜನೆಗಳ ಪುಸ್ತಕದ ಪುನರ್‌ಮುದ್ರಣದ ಕೆಲಸ ಡಾಕ್ಟರರ ಬಳಿ ಬಂತು. ಡಾ. ಆಠವಲೆ, ಶ್ರೀ. ವಿಜಯ ದೇಶಪಾಂಡೆ ಮತ್ತು ನಾನು, ಹೀಗೆ ನಾವು ‘ಪ್ರೂಫ್‌ ರೀಡಿಂಗ್’ (ಮುದ್ರಣ ಬರಹ ಶೋಧನೆ) ಮಾಡಿದೆವು. ಪುಸ್ತಕದ ಮುಖಪುಟವನ್ನು ದೇಶಪಾಂಡೆ ಮತ್ತು ಡಾ. ಆಠವಲೆಯವರು ನಿರ್ಧರಿಸಿದರು. ಪ.ಪೂ. ಮಹಾರಾಜರ ಮಿತ್ರರಾದ ‘ಹರಿ ಓಂ ಬಾಗವೇ’ ಎಂಬವರು ಮುದ್ರಣ ವ್ಯವಸಾಯದಲ್ಲಿದ್ದರು. ಅವರ ಮೂಲಕ ಪ್ರತಿಗಳನ್ನು ಮುದ್ರಿಸಲಾಯಿತು.

೯ ಅಂ ೨ ಅ. ಅಧ್ಯಾತ್ಮದ ವಿಭೂತಿಯಾಗಿದ್ದ ‘ಹರಿ ಓಂ ಬಾಗವೇ’ ಇವರ ಛಾಯಾಚಿತ್ರವನ್ನು ತೆಗೆಯುವಾಗ ಛಾಯಾಚಿತ್ರಕಾರನಿಗೆ ಕ್ಯಾಮರಾ ‘ಕ್ಲಿಕ್’ ಮಾಡಲು ಸಾಧ್ಯವಾಗದೇ ಇರುವುದು, ಆ ಸಮಯ ದಲ್ಲಿ ಪ.ಪೂ. ಬಾಬಾ ಇವರು ಅವನ ತಪ್ಪನ್ನು ಹೇಳುವುದು : ‘ಹರಿ ಓಂ ಬಾಗವೇ’ ಇವರು ಅಧ್ಯಾತ್ಮದ ಓರ್ವ ವಿಭೂತಿಯಾಗಿದ್ದರು. ಒಮ್ಮೆ ಪ.ಪೂ. ಭಕ್ತರಾಜ ಮಹಾರಾಜರು ಬಂದಿದ್ದಾಗ ಅವರು ಭೇಟಿಯಾಗಲು ಬಂದಿದ್ದರು. ಆ ಸಮಯದಲ್ಲಿ ಶ್ರೀ. ಅರವಿಂದ ಪರಳಕರ ಇವರು ಅವರ ಫೋಟೋ ತೆಗೆಯಲು ಹೋದರು. ಆಗ ಅವರು (‘ಹರಿ ಓಂ ಬಾಗವೇ’ ಇವರು) ಬಲಗೈಯ ತರ್ಜನಿ (ತೋರುಬೆರಳು) ಯನ್ನು ಮೇಲೆತ್ತಿದರು. ಆಗ ಅರವಿಂದ ಇವರಿಗೆ ಕ್ಯಾಮರಾ ‘ಕ್ಲಿಕ್’ ಮಾಡಲು ಸಾಧ್ಯವಾಗುತ್ತಲೇ ಇರಲಿಲ್ಲ. ಕೊನೆಗೆ ಪ.ಪೂ. ಭಕ್ತರಾಜ ಮಹಾರಾಜರು ಅವರನ್ನು ನೋಡಿ ನಕ್ಕು, ‘‘ಅರೆ, ಸಂತ-ಮಹಾತ್ಮರ ಛಾಯಾಚಿತ್ರವನ್ನು ತೆಗೆಯುವಾಗ ಅವರ ಅನುಮತಿಯನ್ನು ಪಡೆಯಬೇಕಿರುತ್ತದೆ. ನೀನು ಅದನ್ನು ಪಡೆದೆಯಾ ?’’, ಎಂದು ಕೇಳಿದರು. ಆಗ ಅರವಿಂದ ಅವರಿಗೆ ತಮ್ಮ ತಪ್ಪಿನ ಅರಿವಾಯಿತು. ಅವರು ಕ್ಷಮೆ ಕೇಳಿ ಅವರ ಅನುಮತಿಯನ್ನು ಪಡೆದರು. ಮುಂದಿನ ಕ್ಷಣವೇ ಅವರ ಕ್ಯಾಮರಾ ‘ಕ್ಲಿಕ್’ ಆಯಿತು.

೯ ಅಂ ೩. ೧೯೯೧ ರಲ್ಲಿ ಅಂಬರನಾಥದಲ್ಲಿ ನಡೆದ ಪ.ಪೂ. ಬಾಬಾರವರ ಗುರುಪೂರ್ಣಿಮೆಯ ಸಮಯದಲ್ಲಿ ಧಾರಾಕಾರ ಮಳೆ ಸುರಿಯುವುದು, ಪ.ಪೂ. ಬಾಬಾ ಅವರು ಎಲ್ಲಾ ಭಕ್ತರಿಗೆ ಪ್ರಸಾದ ತೆಗೆದುಕೊಂಡು ತಕ್ಷಣವೇ ಮನೆಗೆ ಹೋಗಲು ಹೇಳುವುದು, ಯಾರು ಪ.ಪೂ. ಬಾಬಾ ಅವರ ಆಜ್ಞಾಪಾಲನೆ ಮಾಡಿದರೋ, ಅವರು ಮನೆಗೆ ತಲುಪುವುದು : ನಂತರದ ೧೯೯೧ ರ ಗುರುಪೂರ್ಣಿಮೆ ಅಂಬರನಾಥದಲ್ಲಿ ನಡೆಯಿತು. ಶ್ರೀ. ಲೋಖಂಡೆ ಕಾಕಾ ಅವರು ಅದನ್ನು ಆಯೋಜಿಸಿದ್ದರು. ಹುಣ್ಣಿಮೆಯ ದಿನ ಗುರುಪೂಜೆಯ ಸಮಯದಲ್ಲಿ ಮಳೆ ಪ್ರಾರಂಭವಾಯಿತು. ಮಂಟಪದಲ್ಲಿ ನೀರು ಸೋರಲು ಆರಂಭವಾಯಿತು. ನಿಂತುಕೊಂಡೇ ಗುರುಪೂಜೆಯ ಸಮಾರಂಭ ನೆರವೇರಿತು. ಪ.ಪೂ. ಮಹಾರಾಜರು ಎಲ್ಲರಿಗೂ, ‘‘ಪ್ರಸಾದ ತೆಗೆದುಕೊಂಡು ತಕ್ಷಣವೇ ಹೊರಡಿ, ಇಲ್ಲದಿದ್ದರೆ ‘ಏನಾಗುತ್ತದೆ ಎಂದು ಗೊತ್ತಿಲ್ಲ’’ ಎಂದು ಹೇಳಿದರು. ಅವರು ನಮಗೆ, ‘‘ನಾನು ನಿಮ್ಮ ಬಳಿ ಬರಲಿದ್ದೇನೆ’’, ಎಂದು ಹೇಳಿದರು. ನಾವು ಪ್ರಸಾದ ತೆಗೆದುಕೊಂಡು ಹೊರಟೆವು. ಧಾರಾಕಾರ ಮಳೆ ಸುರಿಯಿತು. ಮುಂಬಯಿ ಜಲಮಯವಾಯಿತು. ಯಾರು ತಕ್ಷಣವೇ ಹೊರಟರೋ, ಅವರು ಹೇಗೋ ಮನೆಗೆ ತಲುಪಿದರು. ಯಾರು ತಡಮಾಡಿದರೋ, ಅವರಿಗೆ ರೈಲು ಸಂಚಾರ ಸ್ಥಗಿತ ಗೊಂಡಿದ್ದರಿಂದ ಅಲ್ಲಿಯೇ ಉಳಿಯಬೇಕಾಯಿತು.’

– ಡಾ. (ಸೌ.) ಕುಂದಾ ಜಯಂತ ಆಠವಲೆ (೨೩.೪.೨೦೨೫) (ಮುಂದುವರಿಯುವುದು)