
ಗೋಪುರ (ಟಾವರ್) ಮುದ್ರೆಯನ್ನು ಮಾಡುವಾಗ
ಮುಷ್ಠಿಗಳಿಂದ ಆವರಣವನ್ನು ತೆಗೆಯುವುದು
ತೆಗೆದ ಆವರಣವನ್ನು ಹೊರಗೆ ಎಸೆಯುವುದು
‘ಮೊದಲು ನನ್ನ ಮನಸ್ಸಿನಲ್ಲಿ ನಾಮಜಪಾದಿ ಉಪಾಯ ಗಳನ್ನು ಮಾಡುವಾಗ ಅನೇಕ ಪ್ರಶ್ನೆಗಳು ಬರುತ್ತಿದ್ದವು; ಆದ್ದರಿಂದ ‘ನನ್ನ ನಾಮಜಪಾದಿ ಉಪಾಯಗಳು ಸರಿಯಾಗಿ ಆಗುತ್ತಿರಲಿಲ್ಲ’, ಇದರ ಬಗ್ಗೆ ನನಗೆ ಒತ್ತಡವಿರುತ್ತಿತ್ತು ಮತ್ತು ನಾಮಜಪ ನಡೆದ ನಂತರವೂ ನನಗೆ ಸಮಾಧಾನವಾಗು ತ್ತಿರಲಿಲ್ಲ. ೧೮.೮.೨೦೨೪ ರಂದು ಗೋವಾದ ರಾಮನಾಥಿಯಲ್ಲಿನ ಸನಾತನದ ಆಶ್ರಮಮದಲ್ಲಿ ನನಗೆ ಸದ್ಗುರು ಡಾ. ಮುಕುಲ ಗಾಡಗೀಳ ಇವರ ಮಾರ್ಗದರ್ಶನ ಲಭಿಸಿತು. ಅವರ ಮಾರ್ಗದರ್ಶನವನ್ನು ಕೇಳಿ ನನ್ನ ಮನಸ್ಸು ಸಕಾರಾತ್ಮಕವಾಯಿತು. ಆದುದರಿಂದ ನನಗೆ ದೇವರ ಕೃಪೆಯಿಂದ ನಾಮಜಪಾದಿ ಉಪಾಯಗಳ ಪರಿಣಾಮವನ್ನು ಸ್ವಲ್ಪ ಪ್ರಮಾಣದಲ್ಲಿ ಅನುಭವಿಸಲು ಸಾಧ್ಯವಾಗತೊಡಗಿತು. ನಾನು ನಾಮಜಪಾದಿ ಉಪಾಯಗಳ ಬಗ್ಗೆ ಸದ್ಗುರು ಡಾ. ಮುಕುಲ ಗಾಡಗೀಳ ಇವರಿಗೆ ಕೇಳಿದ ಪ್ರಶ್ನೆಗಳು ಮತ್ತು ಅವರು ನೀಡಿದ ಉತ್ತರಗಳನ್ನು ಮುಂದೆ ಕೊಟ್ಟಿದ್ದೇನೆ.
೧. ‘ಅಂಗೈಗಳ ಹಿಮ್ಮುಖ-ಮುಮ್ಮುಖ ಮುದ್ರೆ’ ಮಾಡಿ ಶರೀರದ ಮೇಲಿನ ಆವರಣ ತೆಗೆಯುವುದು, ‘ಮುಷ್ಠಿಗಳಿಂದ ಆವರಣ ತೆಗೆಯುವುದು’ ಮತ್ತು ‘ಗೋಪುರ (ಟಾವರ್) ಮುದ್ರೆ’ ಮಾಡಿ ಆವರಣ ತೆಗೆಯುವುದು’, ಈ ಪ್ರಕ್ರಿಯೆಗಳಿಂದ ಶರೀರದ ಮೇಲಿನ ಆವರಣ ಸಂಪೂರ್ಣ ದೂರವಾಗುತ್ತದೆ
೧ ಅ. ಪ್ರಶ್ನೆ : ಶರೀರದ ಮೇಲಿನ ತೊಂದರೆದಾಯಕ ಶಕ್ತಿಯ ಆವರಣ ದೂರವಾಗುವ ಪ್ರಕ್ರಿಯೆ ಹೇಗಿರುತ್ತದೆ ?
೧ ಆ. ಉತ್ತರ : ೧. ಸದ್ಯ ಅನುಭವಕ್ಕೆ ಬರುವ ಅಂಶವೆಂದರೆ, ನಮ್ಮ ಎರಡಕ್ಕಿಂತ ಹೆಚ್ಚು ಕುಂಡಲಿನಿಚಕ್ರಗಳ ಮೇಲೆ ಆವರಣದ (ತೊಂದರೆದಾಯಕ ಶಕ್ತಿಯ) ದಪ್ಪ ಪಟ್ಟಿ ಬಂದಿದೆ.
೨. ಮೊದಲಿಗೆ, ‘ಅಂಗೈಗಳ ಹಿಮ್ಮುಖ-ಮುಮ್ಮುಖ ಮುದ್ರೆ’ಯನ್ನು ಮಾಡಿ ಆವರಣವನ್ನು ತೆಗೆಯಬೇಕು. (ಛಾಯಾಚಿತ್ರ ೧) ಈ ಮುದ್ರೆಯನ್ನು ‘ಸಹಸ್ರಾರದಿಂದ ಸ್ವಾಧಿಷ್ಠಾನಚಕ್ರ’ ಈ ಪ್ರತಿಯೊಂದು ಚಕ್ರದ ಮುಂದೆ ೧-೨ ಸೆಂ.ಮೀ. ಅಂತರದಲ್ಲಿ ೧೫ ರಿಂದ ೩೦ ಸೆಕೆಂಡುಗಳ ಕಾಲ ಹಿಡಿಯಬೇಕು. ಇದರಲ್ಲಿ, ಅಂಗೈಯ ಮುಮ್ಮುಖ ಮುದ್ರೆಯು ನಮ್ಮ ಶರೀರದ ಕಡೆಗೆ ಇರುತ್ತದೆ ಮತ್ತು ಅದು ಶರೀರದ ಮೇಲೆ ಉಪಾಯ ಮಾಡುತ್ತದೆ. ಅಂಗೈಯ ಮುಮ್ಮುಖ ಮುದ್ರೆಯ ಮೇಲೆ ಇರಿಸಲಾದ ಮತ್ತೊಂದು ಅಂಗೈಯ ಹಿಮ್ಮುಖ ಮುದ್ರೆಯು ಶರೀರದ ಹೊರಗಿನ ದಿಕ್ಕಿಗೆ ಇರುತ್ತದೆ. ಈ ಮುದ್ರೆಯು ಹೊರಗಿನಿಂದ ನಮ್ಮ ಶರೀರದ ಮೇಲೆ ಬರುವ ತೊಂದರೆದಾಯಕ ಶಕ್ತಿಯನ್ನು ತಡೆಯುತ್ತದೆ ಮತ್ತು ಅದನ್ನು ನಾಶಪಡಿಸುತ್ತದೆ. ಇದರಿಂದಾಗಿ, ‘ಅಂಗೈಗಳ ಹಿಮ್ಮುಖ-ಮುಮ್ಮುಖ ಮುದ್ರೆ’ಯನ್ನು ಮಾಡಿ ಆವರಣವನ್ನು ತೆಗೆದರೆ, ಹೊರಗಿನಿಂದ ಶರೀರದ ಮೇಲಾಗುವ ಕೆಟ್ಟ ಶಕ್ತಿಗಳ ಆಕ್ರಮಣಗಳನ್ನು ತಡೆಯಲಾಗುತ್ತದೆ, ಹಾಗೆಯೇ ಶರೀರದ ಮೇಲಿನ ಆವರಣವೂ ಕಡಿಮೆಯಾಗಲು ಸಹಾಯವಾಗುತ್ತದೆ. ಈ ಮುದ್ರೆಯಿಂದಾಗಿ ಶರೀರದ ಮೇಲಿನ ಆವರಣದ ಪಟ್ಟಿಯ ದಪ್ಪತನವು ಬಹಳಷ್ಟು ಕಡಿಮೆಯಾಗುತ್ತದೆ.
೩. ಇದರ ನಂತರ ‘ಮುಷ್ಟಿಗಳಿಂದ ಆವರಣವನ್ನು ತೆಗೆಯುವುದು’ (‘ಶರೀರದ ಮೇಲೆ ಬಂದಿರುವ ತೊಂದರೆದಾಯಕ ಶಕ್ತಿಯ ಆವರಣವನ್ನು ಎರಡೂ ಕೈಗಳ ಮುಷ್ಟಿಗಳಲ್ಲಿ ಸಂಗ್ರಹಿಸುವುದು ಮತ್ತು ಅದನ್ನು ಶರೀರದಿಂದ ದೂರ ಎಸೆಯುವುದು’) (ಛಾಯಾಚಿತ್ರ ೩ ಮತ್ತು ಛಾಯಾಚಿತ್ರ ೪) ಈ ಪದ್ಧತಿಯಿಂದ ತಲೆಯ ಸುತ್ತಲೂ ಇರುವ, ಹಾಗೆಯೇ ಪ್ರತಿಯೊಂದು ಚಕ್ರದ ಮೇಲಿರುವ ಆವರಣವನ್ನು ತೆಗೆದರೆ, ಶರೀರದ ಸುತ್ತಲೂ ಮಂದವಾಗಿ ಹರಡಿರುವ ತೊಂದರೆದಾಯಕ ಶಕ್ತಿ ಯನ್ನು ದೂರ ಮಾಡಬಹುದು.
೪. ಇದರ ನಂತರ, ಶರೀರದ ಮೇಲಿನ ಉಳಿದ ಆವರಣದ ಪಟ್ಟಿಯನ್ನು ದೂರ ಮಾಡಲು ‘ಗೋಪುರ (ಟಾವರ್) ಮುದ್ರೆ’ಯನ್ನು ಉಪಯೋಗಿಸಬೇಕು. (ಛಾಯಾಚಿತ್ರ ೨) ಈ ಮುದ್ರೆಯನ್ನು ‘ಸಹಸ್ರಾರದಿಂದ ಸ್ವಾಧಿಷ್ಠಾನ ಚಕ್ರ’ ಈ ಪ್ರತಿಯೊಂದು ಚಕ್ರದ ಮುಂದೆ ೧೫ ರಿಂದ ೩೦ ಸೆಕೆಂಡುಗಳ ಕಾಲ ಹಿಡಿಯಬೇಕು. ಈ ಮುದ್ರೆಯಲ್ಲಿ, ಎರಡೂ ಕೈಗಳ ಪರಸ್ಪರ ಜೋಡಿಸಿದ ಮಧ್ಯದ ಬೆರಳುಗಳ ತುದಿಗಳಿಂದ (ಗೋಪುರದಂತೆ ಮಾಡಿದ ಬೆರಳುಗಳ ರಚನೆಯಿಂದ) ನಾಮಜಪದ ಸ್ಪಂದನಗಳು ಎರಡೂ ಅಂಗೈಗಳ ಮಧ್ಯಭಾಗಕ್ಕೆ ಬಂದು, ಅವು ಶರೀರದ ಮೇಲೆ ಹರಡುತ್ತವೆ, ಹಾಗೆಯೇ ಚಕ್ರಗಳ ಮಾಧ್ಯಮದಿಂದ ಶರೀರದ ಒಳಗೂ ಹೋಗುತ್ತವೆ. ನಾಮಜಪದ ಸ್ಪಂದನಗಳಿಂದಾಗಿ ಶರೀರದಲ್ಲಿ ಮತ್ತು ಶರೀರದ ಮೇಲೆ ನಿರಂತರವಾಗಿ ಬಂದಿರುವ ಆವರಣದ ಪಟ್ಟಿಯು ನಾಶವಾಗುತ್ತದೆ ಹಾಗೂ ಶರೀರದೊಳಗಿನ ಆವರಣವೂ ನಾಶವಾಗಲು ಸಹಾಯವಾಗುತ್ತದೆ.
೫. ಇದರ ನಂತರ ಪುನಃ ‘ಮುಷ್ಟಿಗಳಿಂದ ಆವರಣವನ್ನು ತೆಗೆಯುವ’ ಪದ್ಧತಿಯಿಂದ ಆವರಣವನ್ನು ತೆಗೆದರೆ, ಶರೀರದ ಸುತ್ತಲಿರುವ ಆವರಣವು ಸಂಪೂರ್ಣ ದೂರವಾಗುತ್ತದೆ.
೨. ಶರೀರದ ಮೇಲಿನ ಆವರಣವನ್ನು ತೆಗೆಯುವಾಗ ನಾಮಜಪದ ಕಡೆಗೆ ಗಮನವನ್ನು ಏಕಾಗ್ರಗೊಳಿಸುವುದಕ್ಕಿಂತ ಮುದ್ರೆಯನ್ನು ಮಾಡುತ್ತಿರುವ ಸ್ಥಾನದ ಮೇಲೆ ಗಮನವನ್ನು ಏಕಾಗ್ರಗೊಳಿಸುವುದು ಹೆಚ್ಚು ಮಹತ್ವದ್ದಾಗಿದೆ
೨ ಅ. ಪ್ರಶ್ನೆ : ನಾಮಜಪವನ್ನು ಹುಡುಕಿದ ನಂತರ ನಾವು ನಾಮಜಪವನ್ನು ಮಾಡುತ್ತಾ ಆವರಣವನ್ನು ತೆಗೆಯುತ್ತೇವೆ. ಆಗ ನಾಮಜಪವು ಅಯೋಗ್ಯವಾಗಿದ್ದರೆ ಆವರಣವು ಹೋಗುವುದಿಲ್ಲವೇ ?
೨ ಆ. ಉತ್ತರ : ಶರೀರದ ಮೇಲಿನ ತೊಂದರೆದಾಯಕ ಶಕ್ತಿಯ ಆವರಣವನ್ನು ತೆಗೆಯುವಾಗ ನಾವು ಮುಂದಿನ ಮುದ್ರೆಗಳನ್ನು ಉಪಯೋಗಿಸುತ್ತೇವೆ.
೧. ‘ಒಂದು ಅಂಗೈಯನ್ನು ನಮ್ಮ ದೇಹದ ದಿಕ್ಕಿಗೆ ದೇಹದಿಂದ ೧-೨ ಸೆಂ.ಮೀ. ಅಂತರದಲ್ಲಿ ಮತ್ತು ಆ ಅಂಗೈಗೆ ತಾಗುವಂತೆ ಇನ್ನೊಂದು ಅಂಗೈಯನ್ನು ‘ದೇಹದ ಹೊರಗಿನ ದಿಕ್ಕಿಗೆ ಬರುವಂತೆ’ ಇಟ್ಟು’ ‘ಅಂಗೈಗಳ ಹಿಮ್ಮುಖ-ಮುಮ್ಮುಖ ಮುದ್ರೆ’ (ಛಾಯಾಚಿತ್ರ ೧) ಮಾಡಬೇಕು.
೨. ‘ಎರಡೂ ಕೈಗಳ ಮಧ್ಯದ ಬೆರಳುಗಳನ್ನು ಒಂದಕ್ಕೊಂದು ಜೋಡಿಸಿ ಮತ್ತು ಮಣಿಕಟ್ಟು ಗಳಲ್ಲಿ ೪-೫ ಸೆಂ.ಮೀ. ಅಂತರವನ್ನಿಟ್ಟು ಹಾಗೂ ಮಣಿಕಟ್ಟುಗಳನ್ನು ಶರೀರಕ್ಕೆ ತಗಲಿಸಿಟ್ಟು’ ‘ಟವರ್ ಮುದ್ರೆ’ ಮಾಡಬೇಕು. (ಛಾಯಾಚಿತ್ರ ೨)
ಈ ಎರಡೂ ಮುದ್ರೆಗಳಿಂದ ಶರೀರದ ಮೇಲಿನ ಆವರಣವನ್ನು ತೆಗೆಯುವಾಗ ನಾಮಜಪದ ಕಡೆಗೆ ಗಮನವನ್ನು ಏಕಾಗ್ರಗೊಳಿಸದೆ, ಯಾವ ಸ್ಥಾನದ ಮೇಲೆ ಆ ಮುದ್ರೆಯನ್ನು ಹಿಡಿಯುತ್ತೇವೆಯೋ, ಆ ಸ್ಥಾನದ ಮೇಲೆ ಗಮನವನ್ನು ಏಕಾಗ್ರಗೊಳಿಸಬೇಕು. ಅದರಿಂದ
ಆ ಸ್ಥಾನದ ಮೇಲೆ ನಿಖರವಾದ ಉಪಾಯಗಳು ಆಗುತ್ತವೆ ಮತ್ತು ಆವರಣವು ಬೇಗನೆ ಹೋಗುತ್ತದೆ. ನಿಜ ಹೇಳಬೇಕೆಂದರೆ, ನಾಮಜಪ ಮಾಡುವುದಕ್ಕಿಂತ ಕೇವಲ ನಮ್ಮ ಶ್ವಾಸದ ಮೇಲೆ ಗಮನ ಕೊಟ್ಟರೂ ನಡೆಯುತ್ತದೆ. ಆವರಣವನ್ನು ತೆಗೆಯುವಾಗ ಮಾಡುತ್ತಿರುವ ಮುದ್ರೆಯಲ್ಲಿಯೇ ಶಕ್ತಿ ಇರುತ್ತದೆ. ಆವರಣವನ್ನು ತೆಗೆದ ನಂತರ ಉಪಾಯ ಮಾಡಲು ನೀವು ಮತ್ತೆ ನಾಮಜಪವನ್ನು ಹುಡುಕಬಹುದು.
೩. ಕಣ್ಣುಗಳ ಮೇಲೆ ಆವರಣ ಬಂದರೆ ಏನು ಮಾಡಬೇಕು ?
೩ ಅ. ಪ್ರಶ್ನೆ : ‘ಕೋಣೆಯಲ್ಲಿರುವ ಪ್ರಕಾಶಕ್ಕಿಂತ ಕಡಿಮೆ ಪ್ರಕಾಶ ಕಾಣಿಸುತ್ತಿದೆ ಅಥವಾ ಕಣ್ಣುಗಳು ಭಾರವಾದಂತೆ ಆಗಿವೆ’ ಎಂದು ಅನಿಸಿದರೆ ಏನು ಮಾಡಬೇಕು ?
೩ ಆ. ಉತ್ತರ : ಆ ಸಮಯದಲ್ಲಿ ‘ನಮ್ಮ ಕಣ್ಣುಗಳ ಮೇಲೆ ತೊಂದರೆದಾಯಕ ಶಕ್ತಿಯ ಆವರಣ ಬಂದಿದೆ’ ಎಂದು ತಿಳಿಯಬೇಕು. ಕಣ್ಣುಗಳ ಮೇಲಿನ ಆವರಣವನ್ನು ತೆಗೆಯಲು ಕಣ್ಣುಗಳ ಮುಂದೆ ೧-೨ ಸೆಂ.ಮೀ. ಅಂತರದಲ್ಲಿ ಬಲ ಅಂಗೈಯನ್ನು ಹಿಡಿದು ಮತ್ತು ತಲೆಯ ಹಿಂದಿನ ಭಾಗದ ಮುಂದೆ ೧-೨ ಸೆಂ.ಮೀ. ಅಂತರದಲ್ಲಿ ಎಡ ಅಂಗೈಯನ್ನು ಹಿಡಿದು ‘ಮಹಾಶೂನ್ಯ’ ಈ ನಾಮಜಪವನ್ನು ೫ ರಿಂದ ೧೦ ನಿಮಿಷಗಳ ಕಾಲ ಮಾಡಬೇಕು. ‘ಕಣ್ಣುಗಳ ಮೇಲಿನ ಭಾರ ಕಡಿಮೆಯಾಗಿದೆ’ ಎಂದು ಅರಿವಾದರೆ ಉಪಾಯವನ್ನು ನಿಲ್ಲಿಸಬೇಕು. ಅನಂತರ ಕಣ್ಣುಗಳ ಮೇಲೆ ಮತ್ತು ತಲೆಯ ಸುತ್ತಲೂ ಸ್ವಲ್ಪ ಪ್ರಮಾಣದಲ್ಲಿ ಉಳಿದಿರುವ ತೊಂದರೆದಾಯಕ ಶಕ್ತಿಯನ್ನು ‘ಮುಷ್ಟಿಗಳಿಂದ ಆವರಣ ತೆಗೆಯುವುದು’, ಈ ಪದ್ಧತಿಯಿಂದ ೧-೨ ನಿಮಿಷಗಳ ಕಾಲ ಮಾಡಿ ದೂರ ಮಾಡಬೇಕು. (ಮುಂದುವರಿಯುವುದು)
– ಕು. ಪ್ರಿಯಾಂಕಾ ಪ್ರಭುದೇಸಾಯಿ, ಠಾಣೆ (೨೯.೧೨.೨೦೨೪)
ಸೋಮನಾಥ ಜ್ಯೋತಿರ್ಲಿಂಗದ ದಿವ್ಯ ಅಂಶಗಳು ಸನಾತನ ಸಂಸ್ಥೆಗೆ ಪ್ರಾಪ್ತವಾಗುವ ವರೆಗಿನ ದಿವ್ಯ ಪ್ರಯಾಣ !
ಯಜ್ಞಸಂಸ್ಕೃತಿಯನ್ನು ಪುನರುಜ್ಜೀವನಗೊಳಿಸುವ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ !
ಯಜ್ಞಸಂಸ್ಕೃತಿಯ ಸಂವರ್ಧನೆ ಬಗ್ಗೆ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ದೃಷ್ಟಿಕೋನ !
ಹಿಂದೂ ರಾಷ್ಟ್ರದ ಸ್ಥಾಪನೆಗಾಗಿಯೇ ಯಜ್ಞಸಮಾರಂಭ ಮತ್ತು ಸಮಷ್ಟಿ ಧರ್ಮಪ್ರಸಾರ !
೧೨ ಜ್ಯೋತಿರ್ಲಿಂಗಗಳಲ್ಲಿ ಪ್ರಥಮವಾಗಿರುವ ಮೂಲ ಸೋಮನಾಥ ಜ್ಯೋತಿರ್ಲಿಂಗದ ದಿವ್ಯ ಅಂಶಗಳು ಸನಾತನ ಸಂಸ್ಥೆಗೆ ಸಮರ್ಪಣೆ !
ಯಜ್ಞಗಳನ್ನು ಆಯೋಜಿಸುವಲ್ಲಿ ಸಚ್ಚಿದಾನಂದ ಪರಬ್ರಹ್ಮ ಡಾಕ್ಟರರ ವ್ಯಾಪಕ ಉದ್ದೇಶ !