
೧. ಜಪಾನನ್ನು ಹಿಂದಿಕ್ಕಿ ಜಗತ್ತಿನಲ್ಲಿ ನಾಲ್ಕನೆಯ ಸ್ಥಾನದಲ್ಲಿ ಭಾರತದ ಅರ್ಥವ್ಯವಸ್ಥೆ
‘ಅರ್ಥಸ್ಯ ಮೂಲಂ ರಾಜ್ಯಮ್ |’ (ಚಾಣಕ್ಯಸೂತ್ರ, ಅಧ್ಯಾಯ ೧, ಸೂತ್ರ ೪), ಅಂದರೆ ‘ಅರ್ಥದ (ಹಣದ) ಮೂಲ ರಾಜ್ಯವಾಗಿದೆ.’ ಭಾರತದ ಅರ್ಥವ್ಯವಸ್ಥೆ ೪ ಲಕ್ಷ ಕೋಟಿ ರೂಪಾಯಿಗಳ ವರೆಗೆ (೪ ಟ್ರಿಲಿಯನ್ ಡಾಲರ್ ವರೆಗೆ) ತಲುಪಿದೆ. ಆದ್ದರಿಂದ ಭಾರತ ಜಗತ್ತಿನ ನಾಲ್ಕನೆಯ ಕ್ರಮಾಂಕದ ಆರ್ಥಿಕ ಬಲಿಷ್ಠ ರಾಷ್ಟ್ರವಾಗಿದೆ. ಇತ್ತೀಚೆಗಷ್ಟೆ ಭಾರತ ಜಪಾನನ್ನು ಹಿಂದಿಕ್ಕಿದೆ. ಈಗ ಭಾರತದ ಮುಂದೆ ಕೇವಲ ಜರ್ಮನಿ, ಚೀನಾ ಮತ್ತು ಅಮೇರಿಕಾ ಈ ಬಲಿಷ್ಠ ೩ ದೇಶಗಳಿವೆ. ‘ಐ.ಎಮ್.ಎಫ್. ವರ್ಲ್ಡ್ ಎಕಾನಾಮಿಕ್ ಔಟ್ ಲುಕ್’ ಇದರ ಏಪ್ರಿಲ್ ೨೦೨೫ ರ ವರದಿಗನುಸಾರ ಭಾರತದ ‘ನಾಮಿನಲ್ ಜಿಡಿಪಿ’ (ನಾಮಮಾತ್ರ ಸಕಲ ದೇಶಾಂತರ್ಗತ ಉತ್ಪನ್ನ) ೪.೧೮೭ ಲಕ್ಷ ಕೋಟಿ ಡಾಲರ್‌ಗಳ ವರೆಗೆ ತಲಪಿದೆ, ಜಪಾನ್‌ನ ೪.೧೮೬ ಲಕ್ಷ ಕೋಟಿ ಡಾಲರ್ ಇದೆ.
🇮🇳 India becomes the 4th largest economy in the world — NITI Aayog confirms! 💹
On track to reach 3rd spot in 3 years!
While every Indian dreams of becoming No.1 🌍, there’s also a strong demand to tackle inflation & corruption so citizens can prosper in daily life. 💬
PC:… pic.twitter.com/TIxhpekANB
— Sanatan Prabhat (@SanatanPrabhat) May 25, 2025
೨. ಆರ್ಥಿಕ ಬಲಿಷ್ಠ ರಾಷ್ಟ್ರ ಆಗುವುದರ ಲಾಭ
ಭಾರತ ಜಗತ್ತಿನ ನಾಲ್ಕನೆಯ ಕ್ರಮಾಂಕದ ಆರ್ಥಿಕ ಬಲಿಷ್ಠ ರಾಷ್ಟ್ರ ಆಗುವುದರಿಂದ ಅಂತಾರಾಷ್ಟ್ರೀಯ ಮಟ್ಟದಲ್ಲಿ ‘ಜೀ ೨೦’, ನಾಣ್ಯ ನಿಧಿ, ಜಾಗತಿಕ ವ್ಯಾಪಾರ ಸಂಘಟನೆ (ಡಬ್ಲ್ಯುಟಿಓ)ಯಲ್ಲಿ ಜಾಗತಿಕ ಆರ್ಥಿಕ ಧೋರಣೆಯ ವಿಷಯದಲ್ಲಿ ಭಾರತದ ಧ್ವನಿ ಹೆಚ್ಚು ಪ್ರಮಾಣದಲ್ಲಿ ಸದ್ದು ಮಾಡಬಹುದು. ಭಾರತ ಜಗತ್ತಿನ ಆರ್ಥಿಕ ನೇತೃತ್ವದ ದಿಕ್ಕಿನಲ್ಲಿ ಒಂದು ಹೆಜ್ಜೆ ಮುಂದೆ ಇಟ್ಟಿದೆ. ಈ ಸ್ಥಿತಿ ಶಾಶ್ವತವಾಗಿ ಉಳಿದರೆ ಭಾರತವು ಜರ್ಮನಿಯನ್ನು ಹಿಂದಿಕ್ಕಿ ಮುಂದಿನ ೩ ವರ್ಷಗಳಲ್ಲಿ ಮೂರನೇ ಕ್ರಮಾಂಕದ ಆರ್ಥಿಕ ಬಲಿಷ್ಠ ರಾಷ್ಟ್ರವಾಗಬಹುದು. ಭಾರತದಲ್ಲಿ ನೇರ ವಿದೇಶ ಹೂಡಿಕೆ ಹೆಚ್ಚಾಗುವುದು ಹಾಗೂ ಜಾಗತಿಕ ಕಂಪನಿಗಳು ಭಾರತದ ಕಡೆಗೆ ಆಕರ್ಷಿಸಲ್ಪಡುವವು. ಆದ್ದರಿಂದ ಭಾರತದಲ್ಲಿ ಉದ್ಯೋಗದ ಅನೇಕ ಅವಕಾಶಗಳು ಉಪಲಬ್ಧವಾಗುವವು. ಇದರ ಜೊತೆಗೆ ಮೂಲಭೂತ ಸೌಲಭ್ಯ, ಆರೋಗ್ಯ ಸೇವೆ, ಶಿಕ್ಷಣ ವ್ಯವಸ್ಥೆಯಲ್ಲಿಯೂ ಬದಲಾವಣೆಯಾಗುವುದು. ಮಧ್ಯಮವರ್ಗದ ಜನರ ಉತ್ಪನ್ನ ಹೆಚ್ಚಾಗಿ ನಾಗರಿಕರ ಖರೀದಿಶಕ್ತಿ ಹೆಚ್ಚಾಗುವುದು. ಅದರಿಂದ ಪುನಃ ಸರಕಾರದ ಭಂಡಾರ ತುಂಬಿ ತುಳುಕುವುದು.
೩. ಸ್ವಾತಂತ್ರ್ಯಪೂರ್ವದಲ್ಲಿ ಆರ್ಥಿಕದೃಷ್ಟಿಯಲ್ಲಿ ಸಮೃದ್ಧ ಭಾರತೀಯ ಹಿಂದೂ ಸಾಮ್ರಾಜ್ಯಗಳು
ಚಂದ್ರಗುಪ್ತ ಮೌರ್ಯ, ಸಮುದ್ರಗುಪ್ತ, ಚೋಳ ಸಾಮ್ರಾಟ, ಶಾಲಿವಾಹನ ಇಂತಹ ಅನೇಕ ಶೂರವೀರ ಹಾಗೂ ಪರಾಕ್ರಮಿ ರಾಜರಿಗೆ ಆರ್ಥಿಕ ಸಮೃದ್ಧಿಯ ಮಹತ್ವ ತಿಳಿದಿತ್ತು. ಮೌರ್ಯರ ಕಾಲದಲ್ಲಿನ ಆರ್ಯ ಚಾಣಕ್ಯರು ಹೇಳುತ್ತಾರೆ,
ಸುಖಸ್ಯ ಮೂಲಂ ಧರ್ಮಃ | ಧರ್ಮಸ್ಯ ಮೂಲಮರ್ಥಃ | ಅರ್ಥಸ್ಯ ಮೂಲಂ ರಾಜ್ಯಮ್ | ರಾಜ್ಯಮೂಲಮಿನ್ದ್ರಿಯಜಯಃ | ಇಂದ್ರಿಯಜಯಸ್ಯ ಮೂಲಂ ವಿನಯಃ | ವಿನಯಸ್ಯ ಮೂಲಂ ವೃದ್ಧೋಪಸೇವಾ | – ಚಾಣಕ್ಯಸೂತ್ರ, ಅಧ್ಯಾಯ ೧, ಸೂತ್ರ ೨ ರಿಂದ ೭
ಅರ್ಥ : ಸುಖದ ಮೂಲ ಧರ್ಮ. ಧರ್ಮದ ಮೂಲ ಅರ್ಥ (ಧನ), ಅರ್ಥದ ಮೂಲ ರಾಜ್ಯ, ರಾಜ್ಯದ ಮೂಲ ಇಂದ್ರಿಯ ನಿಗ್ರಹ, ಇಂದ್ರಿಯ ನಿಗ್ರಹದ ಮೂಲ ವಿನಯ, ವಿನಯದ ಮೂಲ ಹಿರಿಯರ ಸೇವೆ.
ಪಾರತಂತ್ರ್ಯದ ಮೊದಲು ಭಾರತದ ಅರ್ಥವ್ಯವಸ್ಥೆ ಅತ್ಯಂತ ಸಮೃದ್ಧವಾಗಿತ್ತು. ಇದು ಜಗತ್ತಿನ ಅತೀ ಹೆಚ್ಚು ರಪ್ತು ಮಾಡುವ ದೇಶವಾಗಿತ್ತು. ತೀರಾ ಮೊಘಲರ ಕಾಲದಲ್ಲಿಯೂ ಭಾರತದಲ್ಲಿನ ಮಂದಿರಗಳಲ್ಲಿ ಚಿನ್ನ, ಬೆಳ್ಳಿ, ರತ್ನಗಳು ಮತ್ತು ವಜ್ರವೈಢೂರ್ಯ ಗಳಿದ್ದವು. ಅನೇಕ ಪರಾಕ್ರಮಿ ಹಿಂದೂ ರಾಜರು ಆರ್ಥಿಕವಾಗಿ ಸಮೃದ್ಧರಾಗಿದ್ದರು ಹಾಗೂ ದೊಡ್ಡ ಪ್ರಮಾಣದಲ್ಲಿ ದಾನಧರ್ಮ ಮಾಡುತ್ತಿದ್ದರು. ದುರದೃಷ್ಠವಶಾತ್ ಪ್ರತಿಯೊಬ್ಬ ಆಕ್ರಮಣಕಾರಿಯೂ ಇಲ್ಲಿನ ಧನ, ಸಂಪತ್ತು, ಚಿನ್ನದ ನಾಣ್ಯಗಳು, ಖನಿಜ ಸಂಪತ್ತು, ಮುತ್ತು ರತ್ನ, ಮಾಣಿಕ್ಯ ಇತ್ಯಾದಿಗಳನ್ನು ಕೊಳ್ಳೆಹೊಡೆದನು. ಅನಂತರ ಬಂದಿರುವ ಆಂಗ್ಲರು ಇಲ್ಲಿನ ಕಚ್ಚಾವಸ್ತುಗಳನ್ನು ತಮ್ಮ ದೇಶಗಳಿಗೆ ದೋಚಿಕೊಂಡು ಹೋದರು ಹಾಗೂ ಭಾರತಕ್ಕೆ ಉತ್ಪಾದನೆಗಳನ್ನು ಕಳುಹಿಸಿ ಸಾವಿರಾರು ಪಟ್ಟು ಲೂಟಿ ಮಾಡಿದರು.
೪. ನರೇಂದ್ರ ಮೋದಿಯವರ ಕಾರ್ಯಕಾಲದಲ್ಲಿ ಭಾರತದ ಉನ್ನತಿ
ಸ್ವಾತಂತ್ರ್ಯದ ನಂತರ ಪ್ರಾರಂಭದ ೪೦ ವರ್ಷ ಭಾರತೀಯ ಆಡಳಿತದವರಿಂದ ಆರ್ಥಿಕ ಸುಧಾರಣೆಯ ವಿಷಯದಲ್ಲಿ ಹೆಚ್ಚಿನ ವಿಚಾರ ಆಗಲಿಲ್ಲ. ಕಾಂಗ್ರೆಸ್ಸಿನ ನರಸಿಂಹ ರಾವ್ ಪ್ರಧಾನಮಂತ್ರಿಯಾದಾಗ ಭಾರತ ಮುಕ್ತ ಆರ್ಥಿಕ ನಿಲುವನ್ನು ಅವಲಂಬಿಸಿತು. ಆ ಸಮಯದಲ್ಲಿ ಮತ್ತು ಅದರ ನಂತರವೂ ಭಾರತದಲ್ಲಿ ದೊಡ್ಡ ಪ್ರಮಾಣದಲ್ಲಿ ಭ್ರಷ್ಟಾಚಾರ ನಡೆಯಿತು. ಆದ್ದರಿಂದ ಭಾರತಕ್ಕೆ ಜಗತ್ತಿನಲ್ಲಿ ಬಹಳ ಅವಮಾನವಾಯಿತು. ೨೦೧೪ ರಲ್ಲಿ ನರೇಂದ್ರ ಮೋದಿಯವರು ಪ್ರಧಾನಿಯಾದಾಗ ಅವರ ಮೂಲಕ ಭಾರತದ ಸಾಂಸ್ಕೃತಿಕ, ಧಾರ್ಮಿಕ ಹಾಗೂ ಆರ್ಥಿಕ ಸುಧಾರಣೆಯ ದೃಷ್ಟಿಯಲ್ಲಿ ಬಹಳಷ್ಟು ಪ್ರಯತ್ನ ಆರಂಭವಾಯಿತು. ಅದರ ಪರಿಣಾಮವೆಂದು ಇಂದು ಭಾರತ ಜಗತ್ತಿನಲ್ಲಿ ನಾಲ್ಕನೆಯ ಕ್ರಮಾಂಕದ ಅರ್ಥವ್ಯವಸ್ಥೆಯಾಗಿದೆ. ಆನಂದದ ವಿಷಯವೆಂದರೆ, ಈ ೧೧ ವರ್ಷಗಳಲ್ಲಿ ಒಂದೇ ಒಂದು ಮಹಾಹಗರಣ ಆಗಿಲ್ಲ. ಅದರ ಅರ್ಥ ಈ ಹಣವು ಉತ್ತಮ ಮೂಲಭೂತ ಸೌಲಭ್ಯಗಳ ನಿರ್ಮಾಣ, ಸೇನಾ ಸಾಮರ್ಥ್ಯ, ಆರೋಗ್ಯ ವ್ಯವಸ್ಥೆ ಸುಧಾರಣೆಗಾಗಿ ಉಪಯೋಗವಾಗುವುದು ಎಂಬುದರಲ್ಲಿ ಎಳ್ಳಷ್ಟೂ ಸಂಶಯವಿಲ್ಲ.
೫. ಅಮೇರಿಕಾದ ಡಂಭಾಚಾರ ಹಾಗೂ ವ್ಯವಸಾಯಿಕ ವೃತ್ತಿ ಬಹಿರಂಗವಾಯಿತು
ಭಾರತಕ್ಕೆ ದೊಡ್ಡ ಪ್ರಮಾಣದಲ್ಲಿ ಶಸ್ತ್ರಾಸ್ತ್ರಗಳನ್ನು ಖರೀದಿಸುವಂತೆ ಮಾಡುವುದು ಮತ್ತು ಅದರ ಉಪಯೋಗವನ್ನು ತನ್ನ ಅರ್ಥವ್ಯವಸ್ಥೆಯನ್ನು ಹೆಚ್ಚಿಸಿಕೊಳ್ಳಲು ಮಾಡುವುದು, ಇದು ಮೊದಲಿನಿಂದಲೂ ಅಮೇರಿಕಾದ ದ್ವಿಮುಖ ನೀತಿಯಾಗಿದೆ. ಇದರ ಜೊತೆಗೆ ಪಾಕಿಸ್ತಾನಕ್ಕೆ ವಿವಿಧ ಪ್ರಕಾರದಲ್ಲಿ ‘ಎಫ್-೧೬’ ನಂತಹ ಶಸ್ತ್ರಾಸ್ತ್ರಗಳನ್ನು ಪೂರೈಸಿ ಅದಕ್ಕೆ ಭಾರತದ ವಿರುದ್ಧ ಯುದ್ಧ ಮಾಡಲು ಶಕ್ತಿ ನೀಡಲು ಅಮೇರಿಕಾ ಉದ್ದೇಶಪೂರ್ವಕ ಪ್ರಯತ್ನಿಸಿದೆ. ಭಾರತದಲ್ಲಿ ‘ಐಫೋನ್’ನ ನಿರ್ಮಾಣ, ಇತರ ದೇಶಗಳ ತುಲನೆಯಲ್ಲಿ ಹೆಚ್ಚು ಲಾಭದಾಯಕವಾಗಿದೆ. ಆದ್ದರಿಂದ ‘ಯಾಪಲ್’ನಂತಹ ಬಹುರಾಷ್ಟ್ರೀಯ ಕಂಪನಿ ಭಾರತವನ್ನು ಆರಿಸಿತು. ಈ ವಿಷಯ ಅಮೇರಿಕಾದ ರಾಷ್ಟ್ರಾಧ್ಯಕ್ಷ ಡೋನಾಲ್ಡ್ ಟ್ರಂಪ್ ಇವರಿಗೆ ಇಷ್ಟವಾಗಲಿಲ್ಲ. ಆದ್ದರಿಂದ ಅವರು ‘ಆಪಲ್ ಐಫೋನ್’ನ ಉತ್ಪಾದನೆ ಅಮೇರಿಕಾದಲ್ಲಿಯೆ ಆಗಬೇಕು, ಎಂದು ದಬ್ಬಾಳಿಕೆಯನ್ನು ಆರಂಭಿಸಿದರು. ಅದರ ಉತ್ಪಾದನೆಗೆ ಶೇ. ೨೫ ರಷ್ಟು ಆಮದು ಶುಲ್ಕ ಹೇರುವುದಾಗಿ ಬೆದರಿಕೆ ಹಾಕಿದರು. ಆದರೂ ಅದನ್ನು ಆಪಲ್ ಕಂಪನಿ ಸ್ಪಷ್ಟವಾಗಿ ನಿರಾಕರಿಸಿತು.
೬. ಅಮೇರಿಕಾವನ್ನು ಬದಿಗೊತ್ತಿ ರಷ್ಯಾದ ಯುದ್ಧವಿಮಾನಗಳನ್ನು ಖರೀದಿಸಲು ಭಾರತದ ನಿರ್ಣಯ
ಅಮೇರಿಕಾದ ‘ಎಫ್-೩೫’ ಮತ್ತು ರಷ್ಯಾದ ‘ಎಸ್‌ಯು-೫೭’ ಯುದ್ಧ ವಿಮಾನ ಖರೀದಿ ಮಾಡಲು ಭಾರತ ಚಾತುರ್ಯವನ್ನು ತೋರಿಸುತ್ತಾ ಅಮೇರಿಕಾವನ್ನು ದೂರವಿಟ್ಟು ರಷ್ಯಾದ ಯುದ್ಧ ವಿಮಾನಗಳನ್ನು ಖರೀದಿಸಲು ನಿರ್ಧರಿಸಿತು. ರಷ್ಯಾದ ‘ಎಸ್‌ಯು – ೫೭’ ಈ ಯುದ್ಧ ವಿಮಾನವು ತಾಂತ್ರಿಕ ದೃಷ್ಟಿಯಲ್ಲಿ ಅಮೇರಿಕಾದ ‘ಎಫ್ ೩೫’ಕ್ಕಿಂತ ಅನೇಕ ಪಟ್ಟು ಹೆಚ್ಚು ಆಧುನಿಕವಾಗಿದೆ. ಅಮೇರಿಕಾದ ‘ಎಫ್-೩೫; ವಿಮಾನಗಳಿಗೆ ಅನೇಕ ಬಾರಿ ಅಪಘಾತವಾಗಿರುವ ವಾರ್ತೆಗಳು ಬಂದಿವೆ. ತದ್ವಿರುದ್ಧ ರಷ್ಯಾದ ‘ಎಸ್‌ಯು-೫೭’ ವಿಮಾನದಲ್ಲಿ ಶತ್ರುವಿನ ರಡಾರವನ್ನು ತಪ್ಪಿಕೊಳ್ಳುವುದು, ‘AI’ (ಕೃತಕ ಬುದ್ಧಿಶಕ್ತಿ) ಆಧಾರಿತ ಪದ್ಧತಿಯಿಂದ ಅನೇಕ ಗುರಿಗಳ ಮೇಲೆ ಆಕ್ರಮಣ ಮಾಡುವುದು, ಸುಪರ್ ಕ್ರೂಝ್ ಕ್ಷಿಪಣಿ ಕ್ಷಮತೆ ಇರುವುದು ಇತ್ಯಾದಿ ವೈಶಿಷ್ಟ್ಯಗಳಿವೆ. ರಷ್ಯಾ ಕೇವಲ ಭಾರತದೊಂದಿಗೆ ಈ ಒಪ್ಪಂದ ಮಾಡಿಕೊಂಡಿದೆ. ಇದರ ಜೊತೆಗೆ ಅದು ‘ಎಸ್-೫೦೦’ ಈ ವ್ಯವಸ್ಥೆಯನ್ನೂ ಭಾರತಕ್ಕೆ ಮಾರಾಟ ಮಾಡುವ ಇಚ್ಛೆಯನ್ನು ವ್ಯಕ್ತಪಡಿಸಿದೆ. ಇದಕ್ಕೆಲ್ಲ ದೇಶದಲ್ಲಿ ರಾಷ್ಟ್ರಪ್ರೇಮಿ ಪ್ರಧಾನಮಂತ್ರಿ ಇರಬೇಕಾಗುತ್ತದೆ. ಸೌಭಾಗ್ಯದಿಂದ ನರೇಂದ್ರ ಮೋದಿಯವರ ರೂಪದಲ್ಲಿ ಭಾರತಕ್ಕೆ ಒಬ್ಬ ಪ್ರಖರ ದೇಶಾಭಿಮಾನಿ ಪ್ರಧಾನಮಂತ್ರಿ ಸಿಕ್ಕಿದ್ದಾರೆ. ಆದ್ದರಿಂದ ಶೀಘ್ರದಲ್ಲಿಯೇ ಭಾರತ ‘ಹಿಂದೂ ರಾಷ್ಟ್ರ’ ಹಾಗೂ ಬಲಿಷ್ಠ ದೇಶವೆಂದು ಘೋಷಣೆಯಾಗುವುದರಲ್ಲಿ ಎಳ್ಳಷ್ಟೂ ಸಂದೇಹವಿಲ್ಲ.
– ಪೂ. ನ್ಯಾಯವಾದಿ ಸುರೇಶ ಕುಲಕರ್ಣಿ, ಮುಂಬಯಿ ಉಚ್ಚ ನ್ಯಾಯಾಲಯ (೨೭.೫.೨೦೨೫)
|| ಶ್ರೀಕೃಷ್ಣಾರ್ಪಣಮಸ್ತು ||
India-Nepal Border Dispute : ನೇಪಾಳದೊಂದಿಗಿನ ಗಡಿ ವಿವಾದದಲ್ಲಿ ಮೂರನೇ ಪಕ್ಷದ ಅಗತ್ಯವಿಲ್ಲ! – ಭಾರತ
Trump Tariff : ಭಾರತ ಸೇರಿದಂತೆ ಹಲವು ದೇಶಗಳ ಮೇಲೆ ಶೇ. ೧೨.೫% ರಷ್ಟು ಹೆಚ್ಚುವರಿ ಆಮದು ಸುಂಕ ವಿಧಿಸಲಿರುವ ಟ್ರಂಪ್
ಬಾಂಗ್ಲಾದೇಶದ ವಿರೋಧದಿಂದಾಗಿ ನುಸುಳುಕೋರರನ್ನು ಗಡಿಯಿಂದ ಹಿಂತಿರುಗಿಸುವುದು ಕಷ್ಟವಾಗುತ್ತಿದೆ !
|| ಶ್ರೀ ರಾಜಮಾತಂಗಿ ಮಹಾಯಾಗ ||
ಶ್ರೀ ಸೋಮನಾಥ ದೇವಸ್ಥಾನದ ಶಿಖರದ ಮೇಲೆ ಶ್ರೀಚಿತ್ಶಕ್ತಿ (ಸೌ.) ಅಂಜಲಿ ಗಾಡಗೀಳರವರು ಪೂಜಿಸಿದ ಧರ್ಮಧ್ವಜದ ಆರೋಹಣ !
ಮಹಾಕವಿ ಕಾಳಿದಾಸರು ಮಾಡಿರುವ ರಾಜಮಾತಂಗೀ ದೇವಿಯ ವರ್ಣನೆ