
ಇಟಲಿಯ ಮಹಾನ್ ಕ್ರಾಂತಿಕಾರಿ ಜೋಸೆಫ್ ಮ್ಯಾಜಿನಿ ಅವರ ಆತ್ಮಚರಿತ್ರೆಯಿಂದ ಸ್ವಾತಂತ್ರ್ಯವೀರ ವಿನಾಯಕ ದಾಮೋದರ ಸಾವರಕರ ಅವರು ಸ್ಫೂರ್ತಿ ಪಡೆದಿದ್ದರು. ಅದು ೧೯೦೭ ರ ಸಮಯ ! ೧೮೫೭ ರಲ್ಲಿ ಬ್ರಿಟಿಷರ ವಿರುದ್ಧ ನಡೆದ ಭಾರತೀಯರ ದಂಗೆಯನ್ನು ‘೧೮೫೭ ರ ಸ್ವಾತಂತ್ರ್ಯ ಸಂಗ್ರಾಮ’ ಅಂದರೆ ‘ಭಾರತದ ಸ್ವಾತಂತ್ರ್ಯಕ್ಕಾಗಿ ಮೊದಲ ಯುದ್ಧ’ ಎಂಬ ಹೆಸರಿನಲ್ಲಿ ಸಾವರಕರ ಅವರು ಇಂಗ್ಲೆಂಡ್‌ನಲ್ಲಿ ತಮ್ಮ ೨೪ ನೆಯ ವಯಸ್ಸಿನಲ್ಲಿ ಪುಸ್ತಕ ಬರೆದರು. ಆ ಪುಸ್ತಕದ ಪ್ರತಿಗಳನ್ನು ಇತರ ಕ್ರಾಂತಿಕಾರಿಗಳ ಮೂಲಕ ಭಾರತಕ್ಕೆ ಕಳುಹಿಸಲಾಯಿತು, ಇದರಿಂದ ಭಾರತೀಯ ಕ್ರಾಂತಿಕಾರಿಗಳಿಗೆ ಅದರಿಂದ ಸ್ಫೂರ್ತಿ ಸಿಗುತ್ತದೆ; ಆದರೆ ಆ ಪುಸ್ತಕ ಪ್ರಕಟವಾಗುವ ಮೊದಲೇ ಬ್ರಿಟಿಷರು ಅದನ್ನು ನಿಷೇಧಿಸಿದರು. ಪ್ರಕಟಣೆಯ ಮೊದಲೇ ನಿಷೇಧ ಹೇರಿದ್ದು ಇದೇ ಮೊದಲ ಉದಾಹರಣೆಯಾಗಿರಬಹುದು. ಇದೇ ರೀತಿಯ ಘಟನೆ ಇತ್ತೀಚೆಗೆ ಬಿಡುಗಡೆಯಾಗಲಿರುವ ‘ಉದಯಪುರ ಫೈಲ್ಸ್’ ಚಲನಚಿತ್ರದ ವಿಷಯದಲ್ಲಿಯೂ ಕಂಡುಬರುತ್ತಿದೆ. ಚಲನಚಿತ್ರದ ಪ್ರದರ್ಶನಕ್ಕೆ ದೆಹಲಿ ಉಚ್ಚ ನ್ಯಾಯಾಲಯ ತಡೆ ನೀಡಿತು. ಸರ್ವೋಚ್ಚ ನ್ಯಾಯಾಲಯ ಕೂಡ ಜುಲೈ ೧೬ ರಂದು ಮಧ್ಯಾಹ್ನ ಈ ತಡೆಯನ್ನು ಎತ್ತಿಹಿಡಿದು, ಈ ಬಗ್ಗೆ ಆದಷ್ಟು ಬೇಗ ನಿರ್ಧಾರ ತೆಗೆದುಕೊಳ್ಳುವಂತೆ ಕೇಂದ್ರ ಸರಕಾರಕ್ಕೆ ಹೇಳಿತು. ಸಾಮಾನ್ಯವಾಗಿ ‘ಅಭಿವ್ಯಕ್ತಿ ಸ್ವಾತಂತ್ರ್ಯ’ದ ಹೆಸರಿನಲ್ಲಿ ಕಿರುಚುತ್ತಾ ಹಿಂದೂಗಳನ್ನು ಗುರಿ ಮಾಡುವ ಪ್ರಗತಿ(ಅಧೋಗತಿ)ಪರ ಮತ್ತು ಕಾಂಗ್ರೆಸ್ಸಿಗರೇ ಈ ಸಂದರ್ಭದಲ್ಲಿ ಈ ಸ್ವಾತಂತ್ರ್ಯದ ಕತ್ತು ಹಿಸುಕಿದ್ದಾರೆ. ಕಾಂಗ್ರೆಸ್ ನಾಯಕ ಮತ್ತು ಹಿರಿಯ ವಕೀಲ ಕಪಿಲ ಸಿಬ್ಬಲ್ ಅವರು ಈ ಚಲನಚಿತ್ರದ ಮೇಲೆ ನಿಷೇಧ ಹೇರಲು ಬೆನ್ನತ್ತಿದ್ದಾರೆ. ‘ಜಮಿಯತ್ ಉಲೇಮಾ-ಎ-ಹಿಂದ್’ ಎಂಬ ಕಟ್ಟರ ಇಸ್ಲಾಮಿಕ್ ಸಂಘಟನೆಯು ಈ ಚಲನಚಿತ್ರದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದೆ.

ಮಧ್ಯಕಾಲೀನ ಹತ್ಯೆ !
ಈ ಚಲನಚಿತ್ರದ ನಿಷೇಧದ ಹಿನ್ನೆಲೆಯನ್ನು ಅರ್ಥ ಮಾಡಿಕೊಳ್ಳೋಣ. ೨೦೨೨ ! ಆಗಿನ ಭಾಜಪ ವಕ್ತಾರರಾದ ನೂಪುರ್ ಶರ್ಮಾ ಅವರು ಪ್ರವಾದಿ ಮಹಮ್ಮದ್ ಪೈಗಂಬರ್ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸ ಲಾಯಿತು. ಈ ಬಗ್ಗೆ ಇಸ್ಲಾಮಿಕ್ ರಾಷ್ಟ್ರಗಳು ಭಾರತದಲ್ಲಿನ ಭಾಜಪ ಸರಕಾರವನ್ನು ಗುರಿಯಾಗಿಸಿದವು. ಭಾರತದಾದ್ಯಂತ ಮುಸಲ್ಮಾನರು ಹಿಂಸಾತ್ಮಕ ಪ್ರತಿಭಟನೆಗಳನ್ನು ನಡೆಸಿದರು. ‘ಗುಸ್ತಾಖ್ ಎ ನಬಿ ಕಿ ಏಕ್ ಹಿ ಸಜಾ, ಸರ್ ತನ್ ಸೇ ಜುದಾ, ಸರ್ ತನ್ ಸೇ ಜುದಾ’, ಅಂದರೆ ‘ಅಲ್ಲಾಹನಿಗೆ ಅವಮಾನ ಮಾಡುವವನಿಗೆ ‘ಶಿರಚ್ಛೇದ’ ಒಂದೇ ಶಿಕ್ಷೆ’ ಎಂಬ ಭಯಾನಕ ಘೋಷಣೆಗಳನ್ನು ಕೂಗಿದರು. ಇದರ ಪರಿಣಾಮವಾಗಿ, ಭಾಜಪ ನೂಪುರ್ ಶರ್ಮಾ ಅವರನ್ನು ೬ ವರ್ಷಗಳ ಕಾಲ ಪಕ್ಷದಿಂದ ಉಚ್ಛಾಟಿಸಿತು. ಈ ಸಂದರ್ಭದಲ್ಲಿ, ರಾಜಸ್ಥಾನದ ಉದಯಪುರದಲ್ಲಿರುವ ಕನ್ಹಯ್ಯಲಾಲ್ ಎಂಬ ಹಿಂದೂ ಟೈಲರ್, ಶರ್ಮಾ ಅವರನ್ನು ಬೆಂಬಲಿಸಿ ಫೇಸ್‌ಬುಕ್ ಪೋಸ್ಟ್ ಮಾಡಿದರು. ಇದಕ್ಕೆ ವಿರೋಧ ವ್ಯಕ್ತವಾದಾಗ ಅವರು ಜೈಲಿಗೂ ಹೋಗಬೇಕಾಯಿತು. ಜಾಮೀನು ಪಡೆದ ನಂತರ ೨೮ ಜೂನ್ ೨೦೨೨ ರಂದು ಅವರು ತಮ್ಮ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದಾಗ, ರಿಯಾಜ್ ಅತ್ತಾರಿ ಮತ್ತು ಮೊಹಮ್ಮದ್ ಗೌಸ್ ‘ಸರ್ ತನ್ ಸೇ ಜುದಾ’ ಎಂಬ ಘೋಷಣೆಯೊಂದಿಗೆ ಅವರ ತಲೆ ಕತ್ತರಿಸಿದರು. ಈ ಸಂಪೂರ್ಣ ಘಟನಾವಳಿಯನ್ನು ಆಧರಿಸಿದೆ ‘ಉದಯಪುರ ಫೈಲ್ಸ್’ ! ಇಂತಹ ಮಧ್ಯಕಾಲೀನ ಕೃತ್ಯವನ್ನು ಖಂಡಿಸಬೇಕಿತ್ತು; ಆದರೆ ಅದಕ್ಕೆ ವಿರುದ್ಧವಾಯಿತು. ಸರ್ವೋಚ್ಚ ನ್ಯಾಯಾಲಯ ನೂಪುರ್ ಶರ್ಮಾ ಅವರ ಪ್ರಕರಣದ ಸಮಯದಲ್ಲಿ, ‘ಶರ್ಮಾ ಅವರ ಹೇಳಿಕೆಯಿಂದ ಎಲ್ಲೆಡೆ ಹಿಂಸಾಚಾರ ಹರಡಿದೆ. ಅವರು ಇದಕ್ಕಾಗಿ ಸಮಾಜದ ಕ್ಷಮೆ ಕೇಳಬೇಕು’, ಎಂದು ಹೇಳಿದ್ದರು. ಈ ವೀಕ್ಷಣೆ ಯಿಂದ ಅಭಿವ್ಯಕ್ತಿ ಸ್ವಾತಂತ್ರ್ಯದಂತಹ ಮೂಲಭೂತ ಮಾನವ ಹಕ್ಕಿಗೆ ಧಕ್ಕೆ ಬಂದಿತು. ಎಲ್ಲೆಡೆ ಸಾಂಸ್ಕೃತಿಕವಲ್ಲ, ಮಾನವ ಹಕ್ಕುಗಳ ಶಿರಚ್ಛೇದವಾಗಿತ್ತು. ಮೂರು ವರ್ಷಗಳು ಕಳೆದಿವೆ. ರಾಜಸ್ಥಾನದ ನ್ಯಾಯಾಲಯದಲ್ಲಿ ಜಿಹಾದಿಗಳ ವಿರುದ್ಧದ ಮೊಕದ್ದಮೆ ಇನ್ನೂ ಪೂರ್ಣಗೊಂಡಿಲ್ಲ.
ಕನ್ಹಯ್ಯಲಾಲ್ ಅವರ ವಿಧವೆ ಪತ್ನಿ ಮತ್ತು ಇಬ್ಬರು ಮಕ್ಕಳು ನ್ಯಾಯಕ್ಕಾಗಿ ಕಾಯುತ್ತಿದ್ದಾರೆ. ಅವರ ದುರದೃಷ್ಟಕರ ಕಥೆಯನ್ನು ಜಗತ್ತಿಗೆ ತೋರಿಸುವ ಚಲನಚಿತ್ರದ ಪ್ರದರ್ಶನಕ್ಕೆ ಕೇವಲ ೩ ದಿನಗಳಲ್ಲಿ ತಡೆ ಬರುತ್ತದೆ. ಒಂದೇ ಪ್ರಕರಣ, ಒಂದೇ ವ್ಯವಸ್ಥೆ; ಆದರೆ ಕಣ್ಣು ತೆರೆಯುವ ವಿರುದ್ಧದ ನ್ಯಾಯವೇ ? ಎಂದು ಜನರಿಗೆ ಅನಿಸಬಹುದು. ನ್ಯಾಯವ್ಯವಸ್ಥೆಯನ್ನು ಗೌರವಿಸಬೇಕು, ಇದು ಸಮ್ಮತವೇ. ಪ್ರಜಾಪ್ರಭುತ್ವದ ಮೂರನೇ ಸ್ತಂಭವಾಗಿ ಅರಾಜಕತೆ ಯನ್ನು ತಡೆಗಟ್ಟಲು ಅದರ ಪ್ರತಿಷ್ಠೆಯನ್ನು ಕಾಪಾಡುವುದು ಅತ್ಯಂತ ಅವಶ್ಯಕ; ಆದರೆ ಇಂತಹ ವಿಷಯಗಳು ಕಂಡುಬಂದಾಗ, ೧೦೦ ಕೋಟಿ ಹಿಂದೂ ಜನರ ಮನಸ್ಸು ಮಾತ್ರ ದುಃಖಿತವಾಗುತ್ತದೆ. ಇದಕ್ಕೆ ಯಾರ ಬಳಿಯಾದರೂ ಉತ್ತರ ಇದೆಯೇ ?
ಈಗ ಚಲನಚಿತ್ರದ ಬಗ್ಗೆ ‘ಕೇಂದ್ರ ಸರಕಾರ, ಪ್ರಧಾನಿ ಮೋದಿ ನಿರ್ಧಾರ ತೆಗೆದುಕೊಳ್ಳಬೇಕು’ ಎಂದು ಮೊದಲ ಬಾರಿಗೆ ತೀರ್ಪು ನೀಡಲಾಗಿದೆ. ಸೆನ್ಸಾರ್ ಮಂಡಳಿ ಚಲನಚಿತ್ರಕ್ಕೆ ನೇರವಾಗಿ ಹಸಿರು ನಿಶಾನೆ ತೋರಿಸಲಿಲ್ಲ. ಅದರಲ್ಲಿ ೫೦ ‘ಕಟ್’ಗಳನ್ನು ನೀಡಲಾಯಿತು. ಅದನ್ನೂ ಮೀರಿ ಚಲನಚಿತ್ರದ ಪ್ರಸಾರಕ್ಕೆ ನಿಷೇಧ ಬರುತ್ತದೆ ಎಂದರೆ ಸೆನ್ಸಾರ್ ಮಂಡಳಿಯ ಅಗತ್ಯತೆ, ಪ್ರತಿಷ್ಠೆಯ ಮೇಲೂ ಪ್ರಶ್ನಾರ್ಥಕ ಚಿಹ್ನೆ ಮೂಡುತ್ತದೆ. ಸೆನ್ಸಾರ್ ಮಂಡಳಿಯೂ ತೊಳೆದ ಅಕ್ಕಿಯಂತೆ ಶುದ್ಧವಾಗಿಲ್ಲ. ಕಳೆದ ೩೦ ವರ್ಷಗಳಲ್ಲಿ ಹಿಂದೂ ದೇವತೆಗಳು, ಹಿಂದೂ ಆಚರಣೆಗಳು, ಸಾಧುಸಂತರನ್ನು ಅಪಹಾಸ್ಯ ಮಾಡುವ ಅನೇಕ ಚಲನಚಿತ್ರಗಳು ಬಂದಿವೆ, ಅವುಗಳನ್ನು ಇದೇ ಸೆನ್ಸಾರ್ ಮಂಡಳಿ ಪ್ರದರ್ಶಿಸಲು ಅವಕಾಶ ನೀಡಿದೆ. ‘ಪಿಕೆ’, ‘ಮೊಹಲ್ಲಾ ಅಸ್ಸಿ’, ‘ಲಕ್ಷ್ಮಿ ಬಾಂಬ್’, ‘ಓ ಮೈ ಗಾಡ್’, ‘ವಾಟರ್’, ‘ಲಜ್ಜಾ’, ‘ಫೈರ್’, ‘ತುಂಬಡ್’, ‘ಬಾಂಬೆ’ ಮುಂತಾದ ಅನೇಕ ಚಲನಚಿತ್ರಗಳಿಂದ ಹಿಂದೂಗಳ ಭಾವನೆಗಳಿಗೆ ಧಕ್ಕೆ ತರಲಾಯಿತು. ಹಿಂದೂ ಶ್ರದ್ಧೆಗಳನ್ನು ಹೇಗೆ ಗುರಿಯಾಗಿಸಲಾಗುತ್ತದೆ ಎಂಬುದನ್ನು ಹೇಳಲು ‘ಜೆಮ್ಸ್ ಆಫ್ ಬಾಲಿವುಡ್’ ಎಂಬ ಸಂಸ್ಥೆಯೂ ಇದೆ. ಈ ಉದಾಹರಣೆಯೇ ಈ ‘ಹಿಂದೂಫೋಬಿಯಾ’ದ ವ್ಯಾಪ್ತಿಯನ್ನು ಹೇಳಲು ಸಾಕು.
ಒಂದೇ ಪರಿಹಾರ !
ಆದರೆ ಈಗ, ನ್ಯಾಯವ್ಯವಸ್ಥೆಯನ್ನು ಬಳಸಿಕೊಂಡು ಹಿಂದೂ ವಿರೋಧಿ ಜನರು ಭಯಾನಕ ಪ್ರವೃತ್ತಿಯನ್ನು ಸ್ಥಾಪಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಕೆಲವು ತಜ್ಞ ವಕೀಲರು ಹೇಳುತ್ತಾರೆ. ಹಿಂದೂಗಳ ಮೇಲಿನ ದೌರ್ಜನ್ಯಗಳ ಬಗ್ಗೆ ಒಂದು ಚಲನಚಿತ್ರ ಬಿಡುಗಡೆಯಾಗುವ ಸುಳಿವು ಸಿಕ್ಕಿದ ತಕ್ಷಣ, ಸೆನ್ಸಾರ್ ಮಂಡಳಿ ಅದರ ಮೇಲೆ ಕತ್ತರಿ ಹಾಕಿ ಮೊದಲೇ ಅದರ ಹಲ್ಲುಗಳನ್ನು ಕತ್ತರಿಸುತ್ತದೆ. ನಂತರ ಚಲನಚಿತ್ರವನ್ನು ನ್ಯಾಯಾಲಯಕ್ಕೆ ಎಳೆಯ ಲಾಗುತ್ತದೆ ಮತ್ತು ಅದರ ಮೇಲೆ ನಿಷೇಧ ಹೇರಲಾಗುತ್ತದೆ. ಈ ಉದಾಹರಣೆಯಲ್ಲಿ, ‘ಉದಯಪುರ ಫೈಲ್ಸ್’ನ ಪ್ರಸಾರ ಮತ್ತು ಅದರ ಸಂಭವನೀಯ ಪರಿಣಾಮಗಳಿಗೆ ಸಂಪೂರ್ಣವಾಗಿ ಕೇಂದ್ರ ಸರಕಾರವೇ ಹೊಣೆಗಾರನಾಗಿರುತ್ತದೆ. ಬರುವ ಸಮಯವು ಹಿಂದೂಗಳಿಗೆ ಮತ್ತು ಕೇಂದ್ರ ಸರಕಾರಕ್ಕೆ ಅಪಾಯದ ಗಂಟೆಯಾಗಿದೆ, ಅಂದರೆ ಈ ಚಲನಚಿತ್ರವೇ. ನಿರ್ಮಾಪಕ-ನಿರ್ದೇಶಕ ಮನಪ್ರೀತ್ ಸಿಂಗ್ ಧಾಮಿ ಅವರ ಇತ್ತೀಚೆಗೆ ಬಿಡುಗಡೆಯಾದ ‘ಹಿಸ್ ಸ್ಟೋರಿ ಆಫ್ ಇತಿಹಾಸ’ ಚಲನಚಿತ್ರದಲ್ಲಿ ಹಿಂದೂ ಮಕ್ಕಳಿಗೆ ಅವರ ಧರ್ಮದ ವಿರುದ್ಧ ಕಲಿಸುವ ಇತಿಹಾಸದ ಪಠ್ಯಪುಸ್ತಕಗಳ ಮೇಲೆ ಆಕ್ರೋಶ ವ್ಯಕ್ತಪಡಿಸಲಾಗಿದೆ. ಅದರಿಂದ ಆ ಚಲನಚಿತ್ರಕ್ಕೆ ಚಲನಚಿತ್ರ ಗೃಹÀಗಳು ಸಿಗಲಿಲ್ಲ. ಶೀಘ್ರದಲ್ಲೇ ವಿವೇಕ್ ಅಗ್ನಿಹೋತ್ರಿ ನಿರ್ದೇಶನದ ‘ದಿ ಬೆಂಗಾಲ್ ಫೈಲ್ಸ್’ ಚಲನಚಿತ್ರ ಬಿಡುಗಡೆಯಾಗಲಿದೆ. ಅದು ಹಿಂದೂಗಳ ಕೈಯಿಂದ ಬಹುತೇಕ ತಪ್ಪಿಹೋದ ಬಂಗಾಳ ರಾಜ್ಯದಲ್ಲಿ ಹಿಂದೂಗಳ ಮೇಲೆ ಯಾವ ರೀತಿ ಅನ್ಯಾಯ-ದೌರ್ಜನ್ಯಗಳು ನಡೆದವು ಎಂಬುದರ ಮೇಲೆ ಬೆಳಕು ಚೆಲ್ಲಲಿದೆ. ಅದಕ್ಕೆ ಯಾವ ಹೋರಾಟವನ್ನು ಎದುರಿಸಬೇಕಾಗುತ್ತದೆ ಎಂದು ದೇವರಿಗೆ ಗೊತ್ತು; ಆದರೆ ಈಗ ‘ಉದಯಪುರ ಫೈಲ್ಸ್’ನ ‘ಸರ್ ತನ್ ಸೇ ಜುದಾ’ ಆಗಿದೆ. ಈ ಭಯಾನಕ ಸಮಸ್ಯೆಗೆ ಒಂದೇ ಪರಿಹಾರ, ಭಾರತೀಯ ಪ್ರಜಾಪ್ರಭುತ್ವದ ಮೊದಲ ಸ್ತಂಭ – ಸಂಸತ್ತು ! ಅದು ನಿಮ್ಮ-ನಮ್ಮ ಮತದಾನದಿಂದ ನಿರ್ಮಿಸಲ್ಪಟ್ಟಿದೆ ! ಈಗ ದೇಶದ ಕೋಟ್ಯಂತರ ಹಿಂದೂಗಳು ಚಲನಚಿತ್ರದ ಪ್ರಸಾರಕ್ಕಾಗಿ ಸರಕಾರವನ್ನು ಒತ್ತಾಯಿಸಬೇಕು ಮತ್ತು ಸಂಭವನೀಯ ಪರಿಣಾಮಗಳ ಸಮಯದಲ್ಲಿ ಸರಕಾರದ ಬೆಂಬಲಕ್ಕೆ ನಿಲ್ಲಬೇಕು. ಇದರಿಂದ ಕನ್ಹಯ್ಯಲಾಲ್ ಅವರ ಕುಟುಂಬಕ್ಕೆ ಸ್ವಲ್ಪ ಮಟ್ಟಿಗೆ ನ್ಯಾಯ ಸಿಗುತ್ತದೆ, ಇಲ್ಲದಿದ್ದರೆ ಈ ಖಂಡಿತ ದೇಶದಲ್ಲಿ ಶಿರಚ್ಛೇದದ ಮನಸ್ಥಿತಿ ವಿಜಯ ಸಾಧಿಸುತ್ತಲೇ ಇರುತ್ತದೆ !
ಆರ್ಥಿಕ ಶಿಸ್ತು
ಸಂಪಾದಕೀಯ : ಜಿರಳೆ ಮತ್ತು ಬೋಧನೆ
ಬಂಗಾಳದಲ್ಲಿ ಅನಿವಾರ್ಯ ಸಂಘರ್ಷ !
ಬಹಿರಂಗ ಸತ್ಯ: ಭೋಜಶಾಲೆ ಮುಕ್ತ!
ಗೋಹತ್ಯೆ ಮತ್ತು ಸರ್ವೋಚ್ಚ ನ್ಯಾಯಾಲಯ !
ಥಾಪರ್ ಅವರ ‘ವೋಕಿಸಂ’ !