|

ಇಸ್ಲಾಮಾಬಾದ್ (ಪಾಕಿಸ್ತಾನ) – ಓರ್ವ ಜ್ಯೋತಿಷಿಯ ಭವಿಷ್ಯವಾಣಿಯಿಂದಾಗಿ ಇಡೀ ಪಾಕಿಸ್ತಾನ ಬೆಚ್ಚಿಬಿದ್ದಿದೆ. ಈ ಜ್ಯೋತಿಷಿ ಪಾಕಿಸ್ತಾನಕ್ಕೆ ಅತ್ಯಂತ ವಿನಾಶಕಾರಿ ಆಗಬಹುದಾದ ನಾಲ್ಕು ದಿನಾಂಕಗಳನ್ನು ಹೇಳಿದ್ದು, “ಆ ದಿನಗಳಲ್ಲಿ ಪಾಕಿಸ್ತಾನದ ಮೇಲೆ ಮತ್ತೆ ದಾಳಿ ಆಗಲಿದೆ” ಎಂದು ಹೇಳಿದ್ದಾರೆ. ವಿಶೇಷವೆಂದರೆ, ಈ ಭವಿಷ್ಯವಾಣಿಯನ್ನು ನಂಬಿ ಪಾಕಿಸ್ತಾನ ತನ್ನ ವಿಮಾನಯಾನ ಪ್ರದೇಶವನ್ನು ಮುಚ್ಚಿದೆ.
ಪಾಕಿಸ್ತಾನದ ಪ್ರಸಿದ್ಧ ಜ್ಯೋತಿಷಿ ಒಸಾಮಾ ಅಲಿ ಖಾನ್ ನು, ಈ ಬಾರಿ ಆಕ್ರಮಣ ಬಹಳ ದೊಡ್ಡದಾಗಿರುತ್ತದೆ. ಯಾರು ಮೊದಲು ಆಕ್ರಮಣ ಮಾಡಿದ್ದರೋ, ಅವರು ಮತ್ತೆ ಏಕೆ ಮಾಡುವುದಿಲ್ಲ? ಈ ಬಾರಿ ಅವರಿಗೆ ದೊಡ್ಡ ಪ್ರಮಾಣದಲ್ಲಿ ಕ್ಷಿಪಣಿಗಳನ್ನು ಉಡಾಯಿಸಲು ದೊಡ್ಡ ಪ್ರಸಂಗ ಬೇಕಿದೆ ಎಂದು ಹೇಳಿದ್ದಾನೆ.
ಭಾರತದಿಂದಲ್ಲ, ಬದಲಿಗೆ ಇಸ್ರೇಲ್‌ನಿಂದ ಆಕ್ರಮಣದ ಸಾಧ್ಯತೆ!
ಒಸಾಮಾ ಅಲಿ ಖಾನ್ ಅವರು ‘ಆಪರೇಷನ್ ಸಿಂಧೂರ’ದ ಬಗ್ಗೆಯೂ ಭವಿಷ್ಯ ನುಡಿದಿದ್ದರು. ಪೂರ್ವ ಪಾಕಿಸ್ತಾನದಲ್ಲಿ ಪ್ರಳಯಂಕರ ಪ್ರವಾಹ ಬರಲಿದೆ ಎಂದೂ ಅವರು ಭವಿಷ್ಯ ನುಡಿದಿದ್ದರು. ಈ ಎರಡೂ ಭವಿಷ್ಯವಾಣಿಗಳು ನಿಜವಾಗಿದ್ದವು. ಒಸಾಮಾ ಅಲಿ ಖಾನ್ ಅವರ ಸತತ ಎರಡು ಭವಿಷ್ಯವಾಣಿಗಳು ನಿಜವಾಗಿದ್ದರಿಂದ ಪಾಕಿಸ್ತಾನದಲ್ಲಿ ಭಯದ ವಾತಾವರಣ ಸೃಷ್ಟಿಯಾಗಿದೆ. ಈ ಆಕ್ರಮಣದ ಸಾಧ್ಯತೆಯ ಹಿನ್ನೆಲೆಯಲ್ಲಿ ಪಾಕಿಸ್ತಾನ ಜುಲೈ 16 ರಿಂದ 23 ರವರೆಗೆ ತನ್ನ ವಿಮಾನಯಾನ ಪ್ರದೇಶವನ್ನು ಸಂಪೂರ್ಣವಾಗಿ ಮುಚ್ಚಿದೆ. ಕೆಲವು ಜನರ ಪ್ರಕಾರ, ಈ ಆಕ್ರಮಣ ಭಾರತದಿಂದಲ್ಲ, ಬದಲಿಗೆ ಇಸ್ರೇಲ್‌ನಿಂದ ಆಗಲಿದೆ, ಎಂದು ತಿಳಿದಿದ್ದಾರೆ.
ಪಾಕಿಸ್ತಾನಕ್ಕೆ ಭಾರತಕ್ಕಿಂತ ಇಸ್ರೇಲ್‌ನಿಂದ ಹೆಚ್ಚು ಅಪಾಯ!
ಪಾಕಿಸ್ತಾನಿ ಪತ್ರಕರ್ತೆ ಫಿಜಾ ಅಕ್ಬರ್ ಖಾನ್ ಈ ಕುರಿತು ಮಾತನಾಡಿದ್ದು, ಪಾಕಿಸ್ತಾನ ಅಣ್ವಸ್ತ್ರಗಳನ್ನು ಮತ್ತು ದೊಡ್ಡ ಸೇನೆಯನ್ನು ಹೊಂದಿದೆ, ಆದ್ದರಿಂದ ಅದರ ಅಸ್ತಿತ್ವದಿಂದ ಇಸ್ರೇಲ್‌ಗೆ ಆಕ್ರೋಶ ಬರುತ್ತದೆ. ಗಾಜಾ, ಸಿರಿಯಾ, ಲೆಬನಾನ್ ಮತ್ತು ಇರಾನ್ ಮೇಲಿನ ಇಸ್ರೇಲ್‌ನ ಆಕ್ರಮಣ ಕೇವಲ ತೋರಿಕೆಯಾಗಿದೆ. ಇಸ್ರೇಲ್‌ನ ನಿಜವಾದ ಗುರಿ ಪಾಕಿಸ್ತಾನವೇ ಆಗಿದೆ; ಏಕೆಂದರೆ ಈ ದೇಶ (ಪಾಕಿಸ್ತಾನ) ‘ಗ್ರೇಟರ್ ಇಸ್ರೇಲ್’ನ (ಬೃಹತ್ ಇಸ್ರೇಲ್‌ನ) ಕನಸನ್ನು ಅಂತ್ಯಗೊಳಿಸಬಹುದು ಎಂದು ಹೇಳಿದ್ದಾರೆ.
ಪಿಒಕೆ ಪ್ರತಿಭಟನಾಕಾರರ ದಬ್ಬಾಳಿಕೆ; ವಿಶ್ವಸಂಸ್ಥೆ ಕಳವಳ : UN Concern PoK
ಬಾಂಗ್ಲಾದೇಶದಲ್ಲಿ ಹಿಂದೂ ಯುವಕನ ಅನ್ಯಾಯದ ಬಂಧನದ ವಿರುದ್ಧ ಅಲ್ಪಸಂಖ್ಯಾತರಿಂದ ಪ್ರತಿಭಟನೆ !
ಪಾಕಿಸ್ತಾನದ ಕ್ರಿಕೆಟಿಗ ಮಹಮ್ಮದ್ ನವಾಜ್ ಮೇಲೆ ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿಯಿಂದ ೩ ತಿಂಗಳು ನಿಷೇಧ !
ಅಮೆರಿಕಾ ೧೮ ಸಾವಿರ ಭಾರತೀಯ ನಾಗರಿಕರನ್ನು ದೇಶದಿಂದ ಹೊರಹಾಕಲಿದೆ !
ಇರಾನ್ ದಾಳಿ; ಜೋರ್ಡಾನ್ನಲ್ಲಿದ್ದ ಇಬ್ಬರು ಅಮೆರಿಕನ್ ಸೈನಿಕರ ಸಾವು – ಅಮೆರಿಕ ತಿರುಗೇಟು !
ದಕ್ಷಿಣ ಆಫ್ರಿಕಾದಲ್ಲಿ ೧೭ ಸಾವಿರ ಹಿಂದೂಗಳಿಂದ ಒಂದೆಡೆ ಸೇರಿ ಹನುಮಾನ್ ಚಾಲೀಸಾ ಪಠಣ!