
2006 ರಲ್ಲಿ ಮುಂಬಯಿಯಲ್ಲಿ ನಡೆದ ಸರಣಿ ಬಾಂಬ್ ಸ್ಫೋಟಗಳ ಪ್ರಕರಣದಲ್ಲಿ ಮುಂಬಯಿ ಉಚ್ಚ ನ್ಯಾಯಾಲಯ ತೀರ್ಪು ನೀಡಿದೆ. 2015 ರಲ್ಲಿ ವಿಶೇಷ ನ್ಯಾಯಾಲಯವು ದೋಷಿ ಎಂದು ಘೋಷಿಸಿದ್ದ ಎಲ್ಲಾ 12 ಆರೋಪಿಗಳನ್ನು ಉಚ್ಚ ನ್ಯಾಯಾಲಯ ಈಗ ನಿರ್ದೋಷಿ ಎಂದು ತೀರ್ಪು ಪ್ರಕಟಿಸಿದೆ. ವಿಶೇಷ ನ್ಯಾಯಾಲಯವು ದೋಷಿ ಎಂದು ತೀರ್ಪು ನೀಡಿದ್ದ 12 ಆರೋಪಿಗಳಲ್ಲಿ 5 ಆರೋಪಿಗಳಿಗೆ ಗಲ್ಲು ಶಿಕ್ಷೆ ವಿಧಿಸಿತ್ತು. ಈಗ “ಆರೋಪಿಗಳ ಮೇಲಿನ ದೋಷವನ್ನು ಸಾಬೀತುಪಡಿಸಲು ತನಿಖಾ ಸಂಸ್ಥೆಗಳು ಸಂಪೂರ್ಣವಾಗಿ ವಿಫಲವಾದ ಕಾರಣ ಆರೋಪಿಗಳನ್ನು ದೋಷಮುಕ್ತಗೊಳಿಸಬೇಕಾಗಿದೆ” ಎಂದು ಉಚ್ಚ ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

ಇದರಿಂದ ತನಿಖಾ ಸಂಸ್ಥೆಗಳ ಬಗ್ಗೆ ಪ್ರಶ್ನಾರ್ಥಕ ಚಿಹ್ನೆಗಳು ಮೂಡಿವೆ. 2006 ರಿಂದ 2015 ರವರೆಗಿನ 9 ವರ್ಷಗಳ ಅವಧಿಯಲ್ಲಿ ವಿವಿಧ ಸರಕಾರಿ ಸಂಸ್ಥೆಗಳು ಬೆವರು ಸುರಿಸಿ, ಶ್ರಮಪಟ್ಟು ಈ ಪ್ರಕರಣವನ್ನು ನಿಭಾಯಿಸಿದವು, ಹಾಗಿದ್ದರೆ ಇಲ್ಲಿಯವರೆಗೆ ನಡೆದ ವಿಚಾರಣೆಗಳ ಅಂತಿಮ ಫಲಿತಾಂಶ ‘ಶೂನ್ಯ’ವಾಗಿದೆಯೇ? ಒಂದು ನ್ಯಾಯಾಲಯವು ಗಲ್ಲು ಶಿಕ್ಷೆಯನ್ನು ವಿಧಿಸುತ್ತದೆ, ಆದರೆ ಮೇಲಿನ ನ್ಯಾಯಾಲಯವು ‘ಸಾಕಷ್ಟು ಪುರಾವೆಗಳಿಲ್ಲ’ ಎಂದು ತೀರ್ಪು ನೀಡುತ್ತದೆ. ಇದನ್ನು ಏನನ್ನಬೇಕು? ಈ ಬಾಂಬ್ ಸ್ಫೋಟವೇನು ಸಣ್ಣ ಘಟನೆಯಾಗಿರಲಿಲ್ಲ. ಜುಲೈ 11, 2006 ರಂದು ಮುಂಬಯಿಯ ‘ವೆಸ್ಟರ್ನ್ ಲೈನ್’ನಲ್ಲಿ ನಡೆದ ಸರಣಿ ಬಾಂಬ್ ಸ್ಫೋಟಗಳು 189 ಜನರ ಜೀವವನ್ನು ಬಲಿ ತೆಗೆದುಕೊಂಡಿತು ಮತ್ತು 800 ಜನರನ್ನು ಗಾಯಗೊಂಡಿದ್ದರು.

ಇಂತಹ ಭೀಕರ ಘಟನೆ ಪಾಕಿಸ್ತಾನ ಅಥವಾ ಬಾಂಗ್ಲಾದೇಶದಂತಹ ಮುಸ್ಲಿಂ ಬಹುಸಂಖ್ಯಾತ ದೇಶದಲ್ಲಿ ಸಂಭವಿಸಿದ್ದರೆ ಮತ್ತು ಹಿಂದೂಗಳು ಹತ್ಯೆಗೀಡಾಗಿದ್ದರೆ, ‘ಮೃತ ಹಾಗೂ ಗಾಯಗೊಂಡ ಹಿಂದೂಗಳ ಕುಟುಂಬಗಳಿಗೆ ನ್ಯಾಯ ಸಿಗುವುದು ಕಷ್ಟ’ ಎಂದು ಹೇಳುವುದರಲ್ಲಿ ಯಾವುದೇ ತಪ್ಪಿರಲಿಲ್ಲ. ಭಾರತವು ಹಿಂದೂ ಬಹುಸಂಖ್ಯಾತ ದೇಶ; ಆದರೆ ಈ ತೀರ್ಪಿನ ಬಳಿಕ ಇಲ್ಲಿಯ ವ್ಯವಸ್ಥೆ ಹಿಂದೂ ವಿರೋಧಿಯೇ ಎಂಬ ಪ್ರಶ್ನೆ ಮತ್ತೊಮ್ಮೆ ಉದ್ಭವಿಸಿದೆ. ಹಿಂದೂಗಳಿಗೆ ಯಾರೂ ದಿಕ್ಕಿಲ್ಲ ಎಂಬುದು ಮಾತ್ರ ಸತ್ಯ!

ಈಗ ಈ ಸರಣಿ ಬಾಂಬ್ ಸ್ಫೋಟಗಳ ನಿಜವಾದ ಆರೋಪಿಗಳು ಯಾರು ಎಂಬ ಪ್ರಶ್ನೆ ಮಾತ್ರ ಪ್ರಶ್ನೆಯಾಗಿಯೇ ಉಳಿದಿದೆ. 2006 ರಲ್ಲಿ ಕಾಂಗ್ರೆಸ್ ನೇತೃತ್ವದ ‘ಡಬಲ್ ಇಂಜಿನ್’ ಸರಕಾರವಿತ್ತು. ಕೇಸರಿ ಭಯೋತ್ಪಾದನೆಯ ಕಥೆಯನ್ನು ಹೆಣೆದ ಕಾಂಗ್ರೆಸ್ ಆಳ್ವಿಕೆಯಲ್ಲಿ, ಅದರ ಪೊಲೀಸ್ ಇಲಾಖೆ ಹಿಡಿದ ಎಲ್ಲಾ ಆರೋಪಿಗಳು ‘ಆರೋಪಿಗಳೇ’ ಆಗಿರಲಿಲ್ಲ ಎಂಬುದು ಈಗ ಸಾಬೀತಾಗಿದೆ. ಹಾಗಾದರೆ ನಿಜವಾದ ಆರೋಪಿಗಳು ಎಲ್ಲಿ ಹೋದರು? ಈ ತೀರ್ಪಿನಿಂದ ಕಳೆದ 19 ವರ್ಷಗಳಲ್ಲಿ ದೇಶಾದ್ಯಂತ ನಡೆದ ಸಮಾಜಘಾತುಕ ಚಟುವಟಿಕೆಗಳು ಈ ನಿಜವಾದ ಆರೋಪಿಗಳಿಂದಲೇ ನಡೆದಿವೆಯೇ? ವಾಸ್ತವವಾಗಿ, ಜನರು ಇಲ್ಲಿಯವರೆಗೆ ನಿಜವಾದ ಅಪರಾಧಿಗಳನ್ನು ಗಲ್ಲಿಗೇರಿಸಲಾಗುವುದು ಎಂದು ಆಶಯ ಇಟ್ಟುಕೊಂಡಿದ್ದರು; ಆದರೆ ಆ ನಿರೀಕ್ಷೆಗಳು ಈಗ ಮರೀಚಿಕೆಯಾಗಿವೆ. ಈ ತೀರ್ಪಿನಿಂದ ಈಗ ಎರಡು ಪ್ರಶ್ನೆಗಳು ಹುಟ್ಟಿಕೊಂಡಿವೆ. ಒಂದು, 189 ಜನರನ್ನು ಕೊಂದವರು ಯಾರು? ಎರಡು, ಈ ಸಂಪೂರ್ಣ ಘಟನಾಕ್ರಮದಿಂದ ತನಿಖಾ ಸಂಸ್ಥೆಯು ಭಾರತೀಯ ಪ್ರಜಾಪ್ರಭುತ್ವವನ್ನು ಅಪಹಾಸ್ಯ ಮಾಡಿದೆಯೇ? ಈ ಎರಡಕ್ಕೂ ಉತ್ತರ ಸಿಕ್ಕರೆ ಮಾತ್ರ ಈ ದೇಶ ಸುರಾಜ್ಯವನ್ನು ಕಾಣಲು ಸಾಧ್ಯ, ಇಲ್ಲದಿದ್ದರೆ ಜನ ಸಾಯುತ್ತಲೇ ಇರುತ್ತಾರೆ ಮತ್ತು ಸರ್ಕಾರ ಮಾತ್ರ ನಿರ್ದಯತೆಯಿಂದ ಈ ಅನ್ಯಾಯವನ್ನು ನೋಡಿ ನಗುತ್ತಲೇ ಇರುತ್ತದೆ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!
ನಿಜಾಮಾಬಾದ್ (ತೆಲಂಗಾಣ): ಶಾಲೆಯಲ್ಲಿ ಹಿಂದೂ ವಿದ್ಯಾರ್ಥಿಗಳಿಗೆ ಉರ್ದು ಮತ್ತು ಕಲ್ಮಾ ಕಲಿಸುವುದಕ್ಕೆ ವಿರೋಧ
ರಾಜ್ಯದಲ್ಲಿ ಅಕ್ರಮ ವಲಸಿಗರ ಸಂಖ್ಯೆ 13 ಸಾವಿರಕ್ಕೂ ಹೆಚ್ಚು! – ರಾಜ್ಯ ಗೃಹ ಇಲಾಖೆಯ ವರದಿ
ತಂತ್ರಜ್ಞಾನ ಬಿಟ್ಟು ಜ್ಯೋತಿಷ್ಯದತ್ತ ಐಐಟಿ?
ಮಧ್ಯಪ್ರದೇಶದ ಬಡನಗರದಲ್ಲಿ ಕ್ರೇನ್ ಮೂಲಕ ಕಾರನ್ನು ಎತ್ತಿ ಉದ್ದೇಶಪೂರ್ವಕವಾಗಿ ಸ್ಫೋಟಿಸಲಾಯಿತು ! : Ujjain Muharram