
೧. ಅಂತರ್ಮನಸ್ಸಿನಿಂದ ‘ಹೇ ಭಗವಂತಾ, ಈ ಸೇವೆಯು ನಿನ್ನ ಕೃಪೆಯಿಂದಾಯಿತು. ಅಜ್ಞಾನಿ ಮತ್ತು ಅಸಮರ್ಥನಾಗಿ ರುವ ನನ್ನಿಂದ ನೀನೇ ಈ ಸೇವೆಯನ್ನು ಮಾಡಿಸಿ ಕೊಂಡು ನನಗೆ ಆನಂದವನ್ನು ನೀಡಿರುವೆ.’ ಈ ರೀತಿ ಸಾಧಕನ ಅಂತರ್ಮನಸ್ಸಿನಿಂದ ಕೃತಜ್ಞತೆ ವ್ಯಕ್ತವಾಗಬೇಕು. ಕೃತಜ್ಞತೆಯು ಮೇಲ್ನೋಟಕ್ಕೆ ಅಥವಾ ಸಂಖ್ಯಾತ್ಮಕವಾದರೆ ಅದು ಭಗವಂತನವರೆಗೆ ತಲುಪುವುದಿಲ್ಲ.

೨. ಭಾವಪೂರ್ಣ
‘ನನ್ನ ಸಾಧನೆ ಮತ್ತು ಸೇವೆ ಭಗವಂತನ ಕೃಪೆಯಿಂದಲೇ ಆಯಿತು’, ಎಂಬ ಉತ್ಕಟ ಭಾವವಿರಬೇಕು.
೩. ಕರ್ತೃತ್ವವಿರಹಿತ
ಭಗವಂತನ ಆಜ್ಞೆಯ ಹೊರತು ಮರದ ಒಂದು ಎಲೆಯೂ ಅಲುಗಾಡುವುದಿಲ್ಲ. ಹೀಗಿರುವಾಗ ನಮ್ಮ ಸಾಧನೆಯ, ಸೇವೆಯ ಕರ್ತರು ಯಾರು ? ಕರ್ತೃತ್ವವನ್ನು ಅರ್ಪಿಸುವುದರಿಂದ ಅಹಂ ನಾಶವಾಗಿ ಸಂಪೂರ್ಣ ಶರಣಾಗತಭಾವದ ಕಡೆಗೆ ಹೋಗಲು ಸುಲಭವಾಗುತ್ತದೆ. ಯಾವುದೇ ಸೇವೆಯಾದ ಕೂಡಲೇ ನಮ್ಮ ಮನಸ್ಸು ಕರ್ತೃತ್ವವು ತನ್ನ ಕಡೆಗೆ ತೆಗೆದುಕೊಳ್ಳಲು ಪ್ರಯತ್ನಿಸುತ್ತದೆ. ‘ಗುರುದೇವರಿಗೆ ಭಾವಪೂರ್ಣ ಪ್ರಾರ್ಥಿಸಿರುವುದರಿಂದ ಈ
ಸೇವೆಯು ಒಳ್ಳೆಯದಾಯಿತು’, ಎಂಬುದನ್ನು ನಾವು ಮರೆಯುತ್ತೇವೆ.
೪. ಅಹಂರಹಿತ
ಕೃತಜ್ಞತೆಯಿಂದ ಅಹಂ ನಾಶವಾಗಿ ಮನಸ್ಸು ನಿರ್ಮಲ ಮತ್ತು ಬುದ್ಧಿ ಸಾತ್ತ್ವಿಕವಾಗುತ್ತದೆ. ಅಂತರ್ಮುಖತೆ ಹೆಚ್ಚಾಗಿ ಅಂತರ್ಮನಸ್ಸಿನಲ್ಲಿನ ಸಂಸ್ಕಾರಗಳ ಮೇಲೆ ನಿಯಂತ್ರಣವಿರಿಸಬಹುದು. ನಮಗೆ ನಮ್ಮಲ್ಲಿನ ಬುದ್ಧಿಯ ಅಡೆÀತಡೆ, ನಕಾರಾತ್ಮಕ ವಿಚಾರ, ಬಹಿರ್ಮುಖವೃತ್ತಿ, ಹಾಗೆಯೇ ಅಹಂಭಾವ ಮತ್ತು ಸ್ವಭಾವದೋಷಗಳ ನಿರ್ಮೂಲನೆ ಮಾಡುವುದು ಸಾಧ್ಯವಿದೆಯೇ ? ಸಾಧಕರ ಸಾಧನೆಯು ಯೋಗ್ಯ ರೀತಿಯಲ್ಲಿ ಆಗಬೇಕೆಂದು, ಅನೇಕ ಆಶ್ರಮಗಳು ಮತ್ತು ಸೇವಾಕೇಂದ್ರಗಳನ್ನು ಸ್ಥಾಪಿಸಿ ಮನೆಗಿಂತಲೂ ಹೆಚ್ಚು ಸೌಕರ್ಯಗಳನ್ನು ನೀಡುವ ಗುರುದೇವರ ಬಗ್ಗೆ ಕೃತಜ್ಞತೆಯನ್ನು ಅರ್ಪಿಸಲು ನಮ್ಮ ಬಳಿ ಶಬ್ದಗಳೇ ಇಲ್ಲ. ನಮ್ಮಂತಹ ಅಪಾತ್ರ ಮತ್ತು ಅಜ್ಞಾನಿ ಜೀವಗಳ ಕೈ ಹಿಡಿದು ಮೋಕ್ಷದವರೆಗೆ ಕರೆದೊಯ್ಯುವ ಗುರುದೇವರ ಬಗ್ಗೆ ಎಷ್ಟು ಕೃತಜ್ಞತೆಗಳನ್ನು ಅರ್ಪಿಸಿದರೂ ಅದು ಕಡಿಮೆಯೇ ಆಗಿದೆ !
೫. ಶರಣಾಗತಭಾವದಿಂದ
ಕೃತಜ್ಞತಾಭಾವದ ಮುಂದಿನ ಹಂತವೆಂದರೆ ಶರಣಾಗತಭಾವ ! ಇಲ್ಲಿ ಗುರುದೇವರಿಗೆ ಸಂಪೂರ್ಣ ಶರಣಾದರೆ ನಾವು ನಮ್ಮ ‘ನಾನು’ ಎಂಬುದನ್ನು ಮರೆತುಬಿಡುತ್ತೇವೆ. ಶರಣಾಗತಭಾವದಲ್ಲಿ ‘ಗುರುದೇವರೇ ನನ್ನ ಸಾಧನೆ ಮತ್ತು ಸೇವೆ ಮಾಡುತ್ತಿದ್ದಾರೆ’, ಎಂಬ ಭಾವವು ಜಾಗೃತವಾಗುತ್ತದೆ. ಮೊದಲನೇ ಹಂತದಲ್ಲಿ ಕೃತಜ್ಞತೆಯನ್ನು ವ್ಯಕ್ತಪಡಿಸುವಾಗ ನಮ್ಮಲ್ಲಿ ‘ಗುರುದೇವರೇ ನನ್ನ ಮಾಧ್ಯಮದಿಂದ ಎಲ್ಲ ಸೇವೆಯನ್ನು ಮಾಡಿಸಿಕೊಂಡರು’, ಎಂಬ ಭಾವವಿರುತ್ತದೆ. ಶರಣಾಗತಭಾವದಲ್ಲಿ ಮಾಧ್ಯಮವೂ ಇರುವುದಿಲ್ಲ ಮತ್ತು ‘ನಾನು’ ಎಂಬುದೂ ಇರುವುದಿಲ್ಲ. ‘ಎಲ್ಲವನ್ನೂ ನೀವೇ ಮಾಡಿಸಿಕೊಂಡಿದ್ದೀರಿ’, ಎಂಬ ಭಾವವಿರುತ್ತದೆ. ‘ನೀವೇ ನನ್ನನ್ನು ಅನುಸಂಧಾನದಲ್ಲಿಟ್ಟಿದ್ದೀರಿ, ನೀವೇ ನನ್ನಿಂದ ಪ್ರಾರ್ಥನೆ ಮತ್ತು ಕೃತಜ್ಞತೆಯನ್ನು ವ್ಯಕ್ತಪಡಿಸಿಕೊಂಡಿದ್ದೀರಿ’, ಎಂದೆನಿಸುವುದು, ಅಂದರೆ ಕರ್ತೃತ್ವವು ಶೂನ್ಯವಾಗಿರುವುದು. ಇದರಿಂದ ‘ನಾನು’ ಎಂಬುದು ಸಂಪೂರ್ಣ ನಾಶವಾಗಿ ಜೀವವು ಭಗವಂತನಿಗೆ ಶರಣಾಗುತ್ತದೆ. ಕೃತಜ್ಞತಾಭಾವಕ್ಕಿಂತ ಶರಣಾಗತಭಾವದಿಂದ ಭಗವಂತನು ಬೇಗ ಪ್ರಸನ್ನನಾಗುತ್ತಾನೆ. ಶರಣಾಗತಭಾವದಿಂದ ಜೀವವು ಗುರುಚರಣಗಳಲ್ಲಿ ಸಂಪೂರ್ಣವಾಗಿ ಸಮರ್ಪಿತವಾಗುತ್ತದೆ.’
– ಪೂ. ಉಮೇಶ ಶೆಣೈ, ಸನಾತನ ಆಶ್ರಮ, ದೇವದ, ಪನವೇಲ.
ಈರೋಡ್ (ತಮಿಳುನಾಡು) ನಲ್ಲಿರುವ ಕಸ್ತೂರಿ ರಂಗನಾಥ ದೇವಾಲಯದಲ್ಲಿ ಭಕ್ತಿಪೂರ್ವಕವಾಗಿ ನೆರವೇರಿದ ‘ಮಹಾಸುದರ್ಶನ ಯಾಗ’!
ದೈವಿ ಯುವ ಸಾಧಕಿಯರ ಪ್ರಬುದ್ಧ ವಿಚಾರಗಳಿಗೆ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ನೀಡಿದ ಅಮೂಲ್ಯ ಮಾರ್ಗದರ್ಶನ !
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ’ದ ಮಾಧ್ಯಮದಿಂದ ಕಲಾವಿದರಿಗೆ ಕಲೆಯ ಕಡೆಗೆ ಸಾಧನೆ ಎಂದು ನೋಡಲು ನೀಡಿದ ಮಾರ್ಗದರ್ಶನ !
ಸಾಧಕರಲ್ಲಿ ಆಂತರಿಕ ಬದಲಾವಣೆಯನ್ನು ತರುವ ಪೂ. ರಮಾನಂದ ಗೌಡ !
‘ತಮ್ಮ ಶಾರೀರಿಕ ಸ್ಥಿತಿಯನ್ನು ಪೂರ್ಣ ಸ್ವೀಕರಿಸುವುದು’, ಭಗವತ್ಪ್ರಾಪ್ತಿಯ ಮೊದಲ ಮೆಟ್ಟಿಲಾಗಿದೆ !
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಹೆಚ್ಚಿದ ನಿದ್ರೆ, ಅಂದರೆ ದೇವರು ಅವರ ನಿರ್ವಿಚಾರ ಸ್ಥಿತಿಯನ್ನು ಹೆಚ್ಚಿಸಲು ಮಾಡಿದ ಉಪಾಯಯೋಜನೆಯಾಗಿದೆ !