ಪರಾತ್ಪರ ಗುರು ಡಾಕ್ಟರರು ಒಂದು ವಾಕ್ಯದಲ್ಲಿ ‘ಸಾಧಕರ ಬಗ್ಗೆ ಕೃತಜ್ಞತೆ ಅನಿಸಬೇಕು’ ಎಂದು ಕಲಿಸುವುದು

‘ಹೇ ಪ್ರಭು, ಒಮ್ಮೆ ನಾನು ಸೇವೆಯ ನಿಮಿತ್ತ ರಾಮನಾಥಿ ಆಶ್ರಮಕ್ಕೆ ಬಂದಾಗ ನನಗೆ ನಿಮ್ಮ ದರ್ಶನವಾಯಿತು. ಆಗ ನೀವು ನನಗೆ ಏನು ಹೇಳಿದ್ದೀರಿ ಎಂದು ನೆನಪಿದೆಯೇ ! ‘ನಾನು ನಿಮ್ಮನ್ನು ಭೇಟಿ ಯಾಗದಿದ್ದರೆ ತುಂಬಾ ಅಸ್ವಸ್ಥನಾಗಿ ಹೋಗುತ್ತಿದ್ದೆ ಇಂದು ನಿಮ್ಮ ದರ್ಶನದಿಂದ ನನ್ನ ಮೇಲೆ ಕೃಪೆ ಯಾಯಿತು,’ ಎಂದು ಹೇಳಿದಿರಿ. ಭಗವಂತಾ, ನೀವು ನನ್ನನ್ನು ನಿಶಬ್ದಗೊಳಿಸಿದ್ದೀರಿ. ಕೆಲವೊಮ್ಮೆ ನಾನು ನಿಮ್ಮ ಈ ವಾಕ್ಯವನ್ನು ಸ್ಮರಿಸುತ್ತೇನೆ. ‘ಅದರಿಂದ ನೀವು ನನಗೆ ಏನು ಕಲಿಸಿದ್ದೀರಿ ?’ ಎಂಬುದನ್ನು ತಿಳಿದುಕೊಳ್ಳಲು ಕೆಲವು ತಿಂಗಳು ಅಭ್ಯಾಸ ಮತ್ತು ಚಿಂತನೆ ಮಾಡಿದೆ.
ಎಲ್ಲಿ ಸಾಕ್ಷಾತ್ ಪರಮೇಶ್ವರನಿಗೆ ನನ್ನಂತಹ ಸಾಮಾನ್ಯ ಸಾಧಕರ ಕೃಪೆಯಾಗಿದೆ ಎಂದು ಅನಿಸುತ್ತಿದ್ದರೆ ನನಗೆ ಸಾಧಕರನ್ನು ಭೇಟಿ ಮಾಡುವಾಗ, ಅವರಲ್ಲಿ ಮಾತನಾಡು ವಾಗ, ದೂರವಾಣಿಯಲ್ಲಿ ಅವರ ಧ್ವನಿಯನ್ನು ಕೇಳುವಾಗ, ಅವರ ಸತ್ಸಂಗ ದೊರೆತಾಗ ಅಥವಾ ಅವರ ವಿಚಾರ ಮಾಡಿದಾಗ ಏನನಿಸಬೇಕು ? ಸಾಧಕರು ನಿಮ್ಮ ಸಗುಣ ರೂಪವೇ ಆಗಿದ್ದಾರೆ; ಆದರೆ ನನ್ನಂತಹ ಅಜ್ಞಾನಿ ಜೀವಕ್ಕೆ ಅದು ಗಮನಕ್ಕೆ ಬರುವುದಿಲ್ಲ. ಈ ಪ್ರಸಂಗದಿಂದ ನೀವು ನನ್ನ ಸಂಪೂರ್ಣ ದೃಷ್ಟಿಕೋನವನ್ನು ಬದಲಾಯಿಸಿದ್ದೀರಿ. ಹೇ ಪ್ರಭು, ನೀವು ನನಗೆ ಅಧ್ಯಾತ್ಮದ ಒಂದು ಮಹತ್ವದ ಬೋಧನೆಯನ್ನು ಪ್ರಾಯೋಗಿಕ ಮತ್ತು ಆನಂದಮಯ ಪದ್ಧತಿಯನ್ನು ಕಲಿಸಿದಿರಿ. ನಮಗೆ ಅಧ್ಯಾತ್ಮವನ್ನು ಕಲಿಸಲು ಇಷ್ಟು ಪ್ರಾಯೋಗಿಕ ಮತ್ತು ಆನಂದಮಯ ಪದ್ಧತಿ ಹೇಗೆ ಹೊಳೆಯುತ್ತದೆ ?
– ಪೂ. (ಸೌ.) ಉಮಾ ರವಿಚಂದ್ರನ್, ಚೆನ್ನೈ (೨೯.೧೧.೨೦೧೬)
ದೈವಿ ಯುವ ಸಾಧಕಿಯರ ಪ್ರಬುದ್ಧ ವಿಚಾರಗಳಿಗೆ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ನೀಡಿದ ಅಮೂಲ್ಯ ಮಾರ್ಗದರ್ಶನ !
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ’ದ ಮಾಧ್ಯಮದಿಂದ ಕಲಾವಿದರಿಗೆ ಕಲೆಯ ಕಡೆಗೆ ಸಾಧನೆ ಎಂದು ನೋಡಲು ನೀಡಿದ ಮಾರ್ಗದರ್ಶನ !
ಸಾಧಕರಲ್ಲಿ ಆಂತರಿಕ ಬದಲಾವಣೆಯನ್ನು ತರುವ ಪೂ. ರಮಾನಂದ ಗೌಡ !
‘ತಮ್ಮ ಶಾರೀರಿಕ ಸ್ಥಿತಿಯನ್ನು ಪೂರ್ಣ ಸ್ವೀಕರಿಸುವುದು’, ಭಗವತ್ಪ್ರಾಪ್ತಿಯ ಮೊದಲ ಮೆಟ್ಟಿಲಾಗಿದೆ !
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಹೆಚ್ಚಿದ ನಿದ್ರೆ, ಅಂದರೆ ದೇವರು ಅವರ ನಿರ್ವಿಚಾರ ಸ್ಥಿತಿಯನ್ನು ಹೆಚ್ಚಿಸಲು ಮಾಡಿದ ಉಪಾಯಯೋಜನೆಯಾಗಿದೆ !
ಸಾಧನೆಯಿಂದ ಸಾಧಕರಲ್ಲಿ ಚೈತನ್ಯ ಮತ್ತು ದೈವೀ ಗುಣಗಳು ಹೆಚ್ಚಳವಾಗುವುದು ಹಾಗೂ ಸಮಾಜದ ವ್ಯಕ್ತಿಗಳು ಸಾಧಕರ ಕಡೆಗೆ ಆಕರ್ಷಿತರಾಗುವುದು