‘ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ವಾಕ್ಯವು ಬ್ರಹ್ಮವಾಕ್ಯ ಆಗಿದೆ’ ಎಂಬ ಬಗ್ಗೆ ೧೮ ವರ್ಷಗಳ ನಂತರ ಬಂದ ಅನುಭೂತಿ !

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ

೧. ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆಯವರ ಕೃಪೆಯಿಂದ ‘ಸನಾತನ ರಾಷ್ಟ್ರ ಶಂಖನಾದ ಮಹೋತ್ಸವ’ದ ಆಯೋಜನೆಯು ನಿರ್ವಿಘ್ನವಾಗಿ ನೆರವೇರುವುದು

೧೭ ರಿಂದ ೧೯ ಮೇ ೨೦೨೫ ಈ ಕಾಲಾವಧಿಯಲ್ಲಿ ಗೋವಾದ, ಫೋಂಡಾದಲ್ಲಿರುವ ಸನಾತನ ಸಂಸ್ಥೆಯ ವತಿಯಿಂದ ‘ಸನಾತನ ರಾಷ್ಟ್ರ ಶಂಖನಾದ ಮಹೋತ್ಸವ’ದ ಆಯೋಜನೆಯನ್ನು ಮಾಡಲಾಗಿತ್ತು. ಮಹೋತ್ಸವಕ್ಕೆ ೩೦ ಸಾವಿರಕ್ಕಿಂತಲೂ ಹೆಚ್ಚು ಜನರ ಉಪಸ್ಥಿತಿ ಇತ್ತು. ಸನಾತನವು ಮೊದಲ ಬಾರಿಗೆ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಮತ್ತು ಸತತ ೩ ದಿನಗಳ ನಿವಾಸಿ ಕಾರ್ಯಕ್ರಮವನ್ನು ಆಯೋಜಿಸಿತ್ತು. ಮಹೋತ್ಸವಕ್ಕೆ ಉಪಸ್ಥಿತರಿರುವ ಎಲ್ಲರ ನಿವಾಸ ವ್ಯವಸ್ಥೆ, ಭೋಜನ, ವ್ಯವಸ್ಥೆಯನ್ನು ಸಂಸ್ಥೆಯ ವತಿಯಿಂದ ಮಾಡಲಾಗಿತ್ತು. ಕೇವಲ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆಯವರ ಕೃಪೆಯಿಂದ ಇಷ್ಟೊಂದು ದೊಡ್ಡ ಪ್ರಮಾಣದ ಎಲ್ಲ ಆಯೋಜನೆಗಳು ನಿರ್ವಿಘ್ನವಾಗಿ ನೆರವೇರಿದವು.

ಸದ್ಗುರು ರಾಜೇಂದ್ರ ಶಿಂದೆ

೨. ೨೦೦೭ ರಲ್ಲಿ ಮುಂಬಯಿಯಲ್ಲಿನ ಹಿಂದೂ ಧರ್ಮಜಾಗೃತಿ ಸಭೆಯಲ್ಲಿನ ಅಡಚಣೆಗಳನ್ನು ಮಂಡಿಸಿದಾಗ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆಯವರು ‘ಕಾಲು ಚಾಚಲು ಎಷ್ಟು ಹಾಸಿಗೆಯ ಆವಶ್ಯಕತೆ ಇದೆಯೋ, ಅಷ್ಟು ಹಾಸಿಗೆ ಭಗವಂತನಿಂದ ದೊರಕಲಿದೆ’, ಎಂದು ಹೇಳಿ ಭರವಸೆ ನೀಡುವುದು

ಮಹೋತ್ಸವದ ಖರ್ಚಿನ ದೃಷ್ಟಿಯಿಂದ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆಯವರು ೨೦೦೭ ರಲ್ಲಿ ಹೇಳಿದ ಒಂದು ಅಂಶವು ನನಗೆ ನೆನಪಾಯಿತು. ೨೦೦೭ ರಲ್ಲಿ ಮುಂಬಯಿಯಲ್ಲಿ ಮೊದಲ ಬಾರಿಗೆ ಹಿಂದೂ ಜನಜಾಗೃತಿ ಸಭೆಯನ್ನು ಆಯೋಜಿಸಲಾಗಿತ್ತು. ಸಭೆಯ ಆಯೋಜನೆಗಾಗಿ ‘ಕೆಲವು ಲಕ್ಷ ರೂಪಾಯಿಗಳು ಖರ್ಚಾಗಬಹುದು’, ಎಂದು ಗಮನಕ್ಕೆ ಬಂದಿತು, ಅದಕ್ಕಾಗಿ ಬಹಳ ಸಾಧಕರ ಆವಶ್ಯಕತೆಯೂ ಇತ್ತು; ಆದರೆ ಆ ರೀತಿಯ ಆಯೋಜನಾ ಕೌಶಲ್ಯ ಸಾಧಕರಲ್ಲಿ ಇರಲಿಲ್ಲ. ಈ ಕುರಿತು ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರಿಗೆ, ”ಈ ಸಭೆಗಾಗಿ ತುಂಬಾ ಖರ್ಚು ಇರಲಿದೆ. ಸಾಧಕರಿಗೂ ಅಷ್ಟೊಂದು ಅನುಭವವಿಲ್ಲ. ಆದ್ದರಿಂದ ಹೇಗೆ ಮಾಡಬೇಕು ?’’ ಎಂದು ಕೇಳಿದೆವು. ಆಗ ಅವರು, ‘ಹಾಸಿಗೆ ಇದ್ದಷ್ಟು ಕಾಲು ಚಾಚು’ ಎಂಬ ಒಂದು ಗಾದೆಮಾತಿದೆ. ಆದರೆ ನಿಮಗೆ ಕಾಲು ಚಾಚಲು ಎಷ್ಟು ಹಾಸಿಗೆಯ ಆವಶ್ಯಕತೆ ಇದೆಯೋ, ಅಷ್ಟು ಹಾಸಿಗೆ ನಿಮಗೆ ಭಗವಂತನಿಂದ ದೊರಕಲಿದೆ. ಆದ್ದರಿಂದ ಕಾಳಜಿ ಮಾಡಬೇಡಿ”, ಎಂದರು. ನಂತರದ ಪ್ರತಿಯೊಂದು ಸಭೆಯಲ್ಲಿ ನಾನು ಈ ಅನುಭೂತಿಯನ್ನು ಪಡೆದೆನು.

೩. ಇಲ್ಲಿಯವರೆಗಿನ ಎಲ್ಲ ಹಿಂದೂ ಜನಜಾಗೃತಿ ಸಭೆಗಳು ನಿರ್ವಿಘ್ನವಾಗಿ ನೆರವೇರುವುದು

ಹಿಂದೂ ಜನಜಾಗೃತಿ ಸಭೆಗಳಿಗಾಗಿ ಎಂದಿಗೂ ಹಣದ ಕೊರತೆಯಾಗಲಿಲ್ಲ. ಸಮಾಜದಿಂದ ಅಗತ್ಯವಿದ್ದಷ್ಟು ಅರ್ಪಣೆ ಸಿಗುತ್ತಿತ್ತು. ಸೇವೆಗಾಗಿ ಸಾಧಕರ ಸಂಖ್ಯೆ ಕಡಿಮೆ ಬಿದ್ದಾಗ, ಉತ್ತರ ಭಾರತ ಮತ್ತು ದಕ್ಷಿಣ ಭಾರತದ ಸಾಧಕರ ಸಂಬಂಧಿಕರು, ಹಾಗೆಯೇ ಧರ್ಮಾಭಿಮಾನಿಗಳೂ ಸಹಾಯ ಮಾಡುತ್ತಿದ್ದರು. ಆದ್ದರಿಂದ ಎಲ್ಲ ಸಭೆಗಳು ನಿರ್ವಿಘ್ನವಾಗಿ ನೆರವೇರಿದವು.

೪. ಸಮಾಜದ ಜನರು ಸ್ವಯಂಪ್ರೇರಿತರಾಗಿ ನೀಡಿದ ಅರ್ಪಣೆ ಮತ್ತು ನಿಪುಣತನದಿಂದ ಜವಾಬ್ದಾರಿಯನ್ನು ನಿಭಾಯಿಸಿದ ಸಾಧಕರು ಇದರಿಂದಾಗಿ ಶಂಖನಾದ ಮಹೋತ್ಸವವೂ ಸಹಜವಾಗಿ ನೆರವೇರುವುದು

ಹಿಂದೂ ಧರ್ಮಜಾಗೃತಿ ಸಭೆಗಳ ತುಲನೆಯಲ್ಲಿ ಸನಾತನ ರಾಷ್ಟ್ರ ಶಂಖನಾದ ಮಹೋತ್ಸವಕ್ಕೆ ತುಂಬಾ ದೊಡ್ಡ ಪ್ರಮಾಣದಲ್ಲಿ ಆರ್ಥಿಕ ಸಹಾಯದ ಆವಶ್ಯಕತೆ ಇತ್ತು; ಆದರೆ ಭಗವಂತನ ಕೃಪೆಯಿಂದ ಸಮಾಜದವರೂ ಸ್ವಯಂಪ್ರೇರಿತರಾಗಿ ಅರ್ಪಣೆ ನೀಡಿದರು. ಸಾಧಕರೂ ಅನೇಕ ಜವಾಬ್ದಾರಿಗಳನ್ನು ನಿಪುಣತನದಿಂದ ನಿರ್ವಹಿಸಿದ ಕಾರಣ ಇಷ್ಟು ದೊಡ್ಡ ಕಾರ್ಯಕ್ರಮವು ಸಹಜವಾಗಿ ಜರುಗಿತು. ಮೇಲಿನ ಉದಾಹರಣೆಯಿಂದ ‘ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ೨೦೦೭ ರಲ್ಲಿ ಹೇಳಿದ ವಾಕ್ಯವು ಬ್ರಹ್ಮವಾಕ್ಯವೇ ಆಗಿತ್ತು’, ಎಂಬುದು ಗಮನಕ್ಕೆ ಬಂತು.

– (ಸದ್ಗುರು) ರಾಜೇಂದ್ರ ಶಿಂದೆ, ಸನಾತನ ಆಶ್ರಮ, ದೇವದ, ಪನವೇಲ. (೨೭.೫.೨೦೨೫)