
‘ಜೀವಂತವಾಗಿರಲು ಅಥವಾ ಸಾಧನೆ ಮಾಡಲು ಮನುಷ್ಯನಿಗೆ ಪ್ರಾಣವಾಯು, ಸೂರ್ಯಕಿರಣ, ಆಹಾರ ಇತ್ಯಾದಿ ವಿವಿಧ ಘಟಕಗಳ ಅವಶ್ಯಕತೆಯಿರುತ್ತದೆ. ‘ಆಹಾರ’ ಈ ಒಂದೇ ಘಟಕದ ವಿಚಾರ ಮಾಡಿದರೂ, ಅದರ ವಿಷಯದಲ್ಲಿ ಎಷ್ಟು ವ್ಯಾಪಕವಾಗಿ ಕೃತಜ್ಞತಾಭಾವ ಇಡಬಹುದು, ಎಂಬುದನ್ನು ಮುಂದೆ ಕೊಡಲಾಗಿದೆ. ಆಹಾರದಂತೆಯೆ ಜೀವನದಲ್ಲಿನ ಪ್ರತಿಯೊಂದು ಘಟಕದ ವಿಷಯದಲ್ಲಿ ವ್ಯಾಪಕವಾಗಿ ಕೃತಜ್ಞತಾಭಾವವನ್ನಿಡಲು ಪ್ರಯತ್ನಿಸಿದರೆ, ಅಧ್ಯಾತ್ಮದಲ್ಲಿ ಶೀಘ್ರವಾಗಿ ಪ್ರಗತಿಯಾಗುತ್ತದೆ. ಇದರ ಕಾರಣವೆಂದರೆ, ಕೃತಜ್ಞತಾಭಾವದಿಂದ ಬೇಗನೆ ಶರಣಾಗತಿ ನಿರ್ಮಾಣವಾಗುತ್ತದೆ ಹಾಗೂ ಗುರು ಅಥವಾ ದೇವರು ದಯಾಮಯ ಆಗಿರುವುದರಿಂದ ಅವರು ಶರಣಾಗತರ ಮೇಲೆ ಬೇಗನೆ ಕೃಪೆ ಮಾಡುತ್ತಾರೆ.

೧. ಪಂಚ ಮಹಾಭೂತಗಳ ಬಗ್ಗೆ (ಪಂಚತತ್ತ್ವಗಳ ಬಗ್ಗೆ) ಕೃತಜ್ಞತೆ
ಪೃಥ್ವಿ / ಮಣ್ಣು (ಪೃಥ್ಬಿತತ್ತ್ವ), ಜಲ (ಆಪತತ್ತ್ವ), ಸೂರ್ಯ (ತೇಜತತ್ತ್ವ), ವಾಯು (ವಾಯುತತ್ತ್ವ) ಮತ್ತು ಆಕಾಶ (ಆಕಾಶತತ್ತ್ವ) ಇವುಗಳಿಂದ ಆಹಾರ ಉತ್ಪತ್ತಿಯಾಗುತ್ತದೆ.
೨. ಗುರು ಅಥವಾ ಈಶ್ವರನ ಬಗ್ಗೆ ಕೃತಜ್ಞತೆ
ಗುರು ಅಥವಾ ಈಶ್ವರ ಇವರ ಕೃಪೆಯಿಂದಲೇ ಭಾಗ್ಯದಲ್ಲಿ ಆಹಾರ ಸೇವನೆ ಮಾಡಲು ಸಾಧ್ಯವಾಗುತ್ತದೆ; ಇಲ್ಲದಿದ್ದರೆ ಪೃಥ್ವಿಯಲ್ಲಿರುವ ಅದೆಷ್ಟೊ ಜೀವಗಳು ಆಹಾರ-ನೀರಿಲ್ಲದೆ ಮರಣ ಹೊಂದಬಹುದು.
೩. ವನಸ್ಪತಿ ಅಥವಾ ಪ್ರಾಣಿಗಳ ಕುರಿತು ಕೃತಜ್ಞತೆ
ವನಸ್ಪತಿಗಳಿಂದ ಧಾನ್ಯ, ತರಕಾರಿ, ಹಣ್ಣುಗಳು ಇತ್ಯಾದಿಗಳು ಹಾಗೂ ಹಸು-ಎಮ್ಮೆಗಳಿಂದಾಗಿ ಹಾಲು, ತುಪ್ಪ ಇತ್ಯಾದಿ ಆಹಾರಗಳು ಸಿಗುತ್ತವೆ.
೪. ಸಮಾಜದ ಬಗ್ಗೆ ಕೃತಜ್ಞತೆ
ರೈತರು, ವ್ಯಾಪಾರಿಗಳು ಹಾಗೂ ತರಕಾರಿ ಮಾಡುವವರು ನಮ್ಮ ಆಹಾರಕ್ಕಾಗಿ ಬೇಕಾಗುವ ಅನ್ನಧಾನ್ಯ ಗಳನ್ನು ಪೂರೈಸುತ್ತಾರೆ.
೫. ಕುಟುಂಬದವರು ಅಥವಾ ಸಾಧಕರ ಕುರಿತು ಕೃತಜ್ಞತೆ
ಮನೆಯಲ್ಲಿ ಕುಟುಂಬದವರು ಮತ್ತು ಆಶ್ರಮದಲ್ಲಿ ಸಾಧಕರು ನಮಗೆ ಭೋಜನವನ್ನು ತಯಾರಿಸುತ್ತಾರೆ.
೬. ತನ್ನ ಶರೀರದ ಬಗ್ಗೆ ಕೃತಜ್ಞತೆ
ನಮ್ಮ ಶರೀರ ಆಹಾರವನ್ನು ಸೇವಿಸಿ ಸಕ್ಷಮವಾಗಿರುತ್ತದೆ; ಆದ್ದರಿಂದ ನಾವು ಸಾಧನೆ ಮಾಡಬಲ್ಲೆವು.
– (ಪೂ.) ಶ್ರೀ. ಸಂದೀಪ ಆಳಶಿ, ಸನಾತನ ಆಶ್ರಮ, ರಾಮನಾಥಿ ಗೋವಾ.
ಸೋಮನಾಥ ಜ್ಯೋತಿರ್ಲಿಂಗದ ದಿವ್ಯ ಅಂಶಗಳು ಸನಾತನ ಸಂಸ್ಥೆಗೆ ಪ್ರಾಪ್ತವಾಗುವ ವರೆಗಿನ ದಿವ್ಯ ಪ್ರಯಾಣ !
ಯಜ್ಞಸಂಸ್ಕೃತಿಯನ್ನು ಪುನರುಜ್ಜೀವನಗೊಳಿಸುವ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ !
ಯಜ್ಞಸಂಸ್ಕೃತಿಯ ಸಂವರ್ಧನೆ ಬಗ್ಗೆ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ದೃಷ್ಟಿಕೋನ !
ಹಿಂದೂ ರಾಷ್ಟ್ರದ ಸ್ಥಾಪನೆಗಾಗಿಯೇ ಯಜ್ಞಸಮಾರಂಭ ಮತ್ತು ಸಮಷ್ಟಿ ಧರ್ಮಪ್ರಸಾರ !
೧೨ ಜ್ಯೋತಿರ್ಲಿಂಗಗಳಲ್ಲಿ ಪ್ರಥಮವಾಗಿರುವ ಮೂಲ ಸೋಮನಾಥ ಜ್ಯೋತಿರ್ಲಿಂಗದ ದಿವ್ಯ ಅಂಶಗಳು ಸನಾತನ ಸಂಸ್ಥೆಗೆ ಸಮರ್ಪಣೆ !
ಯಜ್ಞಗಳನ್ನು ಆಯೋಜಿಸುವಲ್ಲಿ ಸಚ್ಚಿದಾನಂದ ಪರಬ್ರಹ್ಮ ಡಾಕ್ಟರರ ವ್ಯಾಪಕ ಉದ್ದೇಶ !