
‘ಗುರುಗಳೊಬ್ಬರು ತಮ್ಮ ಮೂವರು ಶಿಷ್ಯರಿಗೆ ಕ್ರಮವಾಗಿ ಗುರುಮಂತ್ರವನ್ನು ನೀಡಿದರು. ಇದರಲ್ಲಿ ಕೇವಲ ಮೂರನೇ ಶಿಷ್ಯನ ಪ್ರಗತಿಯಾಯಿತು; ಏಕೆಂದರೆ ಅವನು ಗುರುಗಳು ಹೇಳಿದ ಸಾಧನೆಯನ್ನು ಶ್ರದ್ಧೆಯಿಂದ ಮಾಡಿದನು. ಇದರಿಂದ ತಿಳಿದು ಬಂದಿದ್ದೇನೆಂದರೆ, ‘ಗುರುಗಳು ಮೊದಲು ಯಾರಿಗೆ ಗುರುಮಂತ್ರ ವನ್ನು ನೀಡಿದರು ?’ ಎಂಬುದರ ಮೇಲೆ ಆಧ್ಯಾತ್ಮಿಕ ಪ್ರಗತಿ ಅವಲಂಬಿತವಾಗಿಲ್ಲ, ಬದಲಾಗಿ ‘ಶಿಷ್ಯನು ಸಾಧನೆಯನ್ನು ಹೇಗೆ ಮಾಡುತ್ತಾನೆ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ.’
ಸಕಾಮ ಸಾಧನೆ ಮಾಡುವ ಭಕ್ತ ಮತ್ತು ಅವನಿಂದ ಸಾಧನೆ ಮಾಡಿಸುವ ಗುರು !
‘ಒಬ್ಬ ಸಕಾಮ ಭಕ್ತ ಸ್ವಲ್ಪ ಸಾಧನೆ ಮಾಡಿದ ನಂತರ ಗುರುಗಳಿಗೆ, ‘ನನ್ನ ಅಡಚಣೆಗಳು ಇನ್ನೂ ದೂರವಾಗುತ್ತಿಲ್ಲ ಎಂದು ಹೇಳುತ್ತಾನೆ. ಆ ಗುರುಗಳು ಸಾಧಕನ ಆಧ್ಯಾತ್ಮಿಕ ಉನ್ನತಿಗಾಗಿ ಮಾರ್ಗದರ್ಶನ ನೀಡುತ್ತಾ, ‘ನಿನ್ನ ಸಾಧನೆಯನ್ನು ಹೆಚ್ಚಿಸು, ಆಗ ನಿನ್ನ ಅಡಚಣೆಗಳು ದೂರವಾಗುತ್ತವೆ ಮತ್ತು ನಿನ್ನ ಸಾಧನೆಯಲ್ಲಿ ಪ್ರಗತಿಯಾಗುತ್ತದೆ’ ಎಂದು ಮಾತ್ರ ಹೇಳುತ್ತಾರೆ. ‘ಅಡಚಣೆಗಳು’ ಮಾಯೆಗೆ ಸಂಬಂಧಿಸಿರುವುದರಿಂದ ಗುರುಗಳು ಅವುಗಳ ಪರಿಹಾರದ ಮಾರ್ಗದರ್ಶನ ನೀಡುವುದಿಲ್ಲ.’
ಮರವು ಸಮೃದ್ಧವಾಗಿ ಬೆಳೆಯಲು ಬೇರುಗಳಿಗೆ ನೀರುಣಿಸುತ್ತೇವೆ, ಹಾಗೆಯೇ ವ್ಯಕ್ತಿತ್ವ ಸುಧಾರಿಸಲು ಅಂರ್ತಮನಸ್ಸಿಗೆ ಸೂಚನೆ ನೀಡಿ !
‘ಹೇಗೆ ನಾವು ಮರದ ಎಲೆಗಳು ಚೆನ್ನಾಗಿ ಕಾಣುತ್ತವೆ ಎಂದು ಅವುಗಳಿಗೆ ನೀರು ಹಾಕದೆ, ಮರದ ಬೇರುಗಳಿಗೆ ನೀರುಣಿಸುತ್ತೇವೆ. ಅದೇ ರೀತಿ ತನ್ನ ವ್ಯಕ್ತಿತ್ವದಲ್ಲಿ ಬದಲಾವಣೆ ತರಲು ಕೇವಲ ಬಾಹ್ಯ ಮನಸ್ಸು ಮತ್ತು ಬುದ್ಧಿಗೆ ಹೇಳದೆ, ಅಂರ್ತಮನಸ್ಸಿಗೆ ಸೂಚನೆ ನೀಡುವುದು ಅವಶ್ಯಕವಾಗುತ್ತದೆ. ಅಂರ್ತಮನಸ್ಸಿಗೆ ಸೂಚನೆ ನೀಡುವ ಪದ್ಧತಿ ಸನಾತನ ಹೇಳುವ ‘ಸ್ವಭಾವದೋಷ ನಿರ್ಮೂಲನೆ ಮತ್ತು ಅಹಂ ನಿರ್ಮೂಲನೆ ಪ್ರಕ್ರಿಯೆಯಲ್ಲಿ ಕಲಿಸಲಾಗುತ್ತದೆ.’
ಜ್ಞಾನಯೋಗಿ ಮತ್ತು ಕರ್ಮಯೋಗಿ ಸಾಧಕರೇ, ಶೀಘ್ರ ಆಧ್ಯಾತ್ಮಿಕ ಪ್ರಗತಿಗಾಗಿ ಪ್ರಾರ್ಥನೆಯನ್ನು ಸೇರಿಸಿ !
ಜ್ಞಾನಯೋಗ ಮತ್ತು ಕರ್ಮಯೋಗದ ಸಾಧನಾ ಮಾರ್ಗ ಗಳಲ್ಲಿ ಸಾಧನೆ ಮಾಡುವಾಗ ಅಹಂ ನಿರ್ಮೂಲನೆಗೆ ಸ್ವತಃ ತುಂಬಾ ಹೆಚ್ಚು ಪ್ರಯತ್ನಿಸುವುದು ಅವಶ್ಯಕವಾಗಿರುತ್ತದೆ; ಆದರೆ ಸಾಮಾನ್ಯ ಸಾಧಕನಿಗೆ ಅದನ್ನು ಮಾಡುವುದು ಸಾಧ್ಯವಾಗುವುದಿಲ್ಲ. ಆದ್ದರಿಂದ ಈ ಮಾರ್ಗಗಳ ಪ್ರಕಾರ ಸಾಧನೆ ಮಾಡುವವರ ಆಧ್ಯಾತ್ಮಿಕ ಪ್ರಗತಿಯ ಪ್ರಮಾಣ ಕಡಿಮೆ ಇರುತ್ತದೆ. ಅದಕ್ಕೆ ಹೋಲಿಸಿದರೆ ಭಕ್ತಿಯೋಗದಲ್ಲಿ ಅಹಂ ನಿರ್ಮೂಲನೆ ಸಹಜ ವಾಗಿ ಆಗುತ್ತದೆ, ಅದಕ್ಕಾಗಿಯೇ ಸಮಾಜದಲ್ಲಿ ಜ್ಞಾನಯೋಗಿ ಅಥವಾ ಕರ್ಮಯೋಗಿ ಸಂತರಿಗಿಂತ ಭಕ್ತಿಯೋಗಿ ಸಂತರು ಹೆಚ್ಚಿನ ಪ್ರಮಾಣದಲ್ಲಿ ಕಂಡುಬರುತ್ತಾರೆ. ಕರ್ಮಯೋಗಿ ಮತ್ತು ಜ್ಞಾನಯೋಗಿ ಸಾಧಕರೇ, ಈ ಅಂಶವನ್ನು ಗಮನ ದಲ್ಲಿಟ್ಟುಕೊಂಡು ಅಹಂ ಕಡಿಮೆಯಾಗಿ ಆಧ್ಯಾತ್ಮಿಕ ಪ್ರಗತಿ ಬೇಗ ಆಗಲು ನಿಮ್ಮ ಸಾಧನೆಗೆ ಭಕ್ತಿಯೋಗದಲ್ಲಿ ಹೇಳಿದಂತೆ ಭಾವಪೂರ್ಣ ಪ್ರಾರ್ಥನೆಯನ್ನು ಸೇರಿಸಿ !
– ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ
ದೈವಿ ಯುವ ಸಾಧಕಿಯರ ಪ್ರಬುದ್ಧ ವಿಚಾರಗಳಿಗೆ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ನೀಡಿದ ಅಮೂಲ್ಯ ಮಾರ್ಗದರ್ಶನ !
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ’ದ ಮಾಧ್ಯಮದಿಂದ ಕಲಾವಿದರಿಗೆ ಕಲೆಯ ಕಡೆಗೆ ಸಾಧನೆ ಎಂದು ನೋಡಲು ನೀಡಿದ ಮಾರ್ಗದರ್ಶನ !
ಸಾಧಕರಲ್ಲಿ ಆಂತರಿಕ ಬದಲಾವಣೆಯನ್ನು ತರುವ ಪೂ. ರಮಾನಂದ ಗೌಡ !
‘ತಮ್ಮ ಶಾರೀರಿಕ ಸ್ಥಿತಿಯನ್ನು ಪೂರ್ಣ ಸ್ವೀಕರಿಸುವುದು’, ಭಗವತ್ಪ್ರಾಪ್ತಿಯ ಮೊದಲ ಮೆಟ್ಟಿಲಾಗಿದೆ !
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಹೆಚ್ಚಿದ ನಿದ್ರೆ, ಅಂದರೆ ದೇವರು ಅವರ ನಿರ್ವಿಚಾರ ಸ್ಥಿತಿಯನ್ನು ಹೆಚ್ಚಿಸಲು ಮಾಡಿದ ಉಪಾಯಯೋಜನೆಯಾಗಿದೆ !
ಸಾಧನೆಯಿಂದ ಸಾಧಕರಲ್ಲಿ ಚೈತನ್ಯ ಮತ್ತು ದೈವೀ ಗುಣಗಳು ಹೆಚ್ಚಳವಾಗುವುದು ಹಾಗೂ ಸಮಾಜದ ವ್ಯಕ್ತಿಗಳು ಸಾಧಕರ ಕಡೆಗೆ ಆಕರ್ಷಿತರಾಗುವುದು