ಹಿಂದೂ ಜನಜಾಗೃತಿ ಸಮಿತಿಯಿಂದ ದೇಶಾದ್ಯಂತ ೬೫ ಕಡೆಗಳಲ್ಲಿ ಅದ್ದೂರಿಯಾಗಿ ಗುರುಪೂರ್ಣಿಮಾ ಮಹೋತ್ಸವ ಆಚರಣೆ !

ಕರ್ನಾಟಕದ ೨೩ ಕಡೆ ೮ ಸಾವಿರಕ್ಕೂ ಅಧಿಕ ರಾಷ್ಟ್ರನಿಷ್ಠರು, ಸಾಧಕರ ಉಪಸ್ಥಿತಿ !

ಬೆಂಗಳೂರು – ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಜುಲೈ ೧೦ ರಂದು ದೇಶಾದ್ಯಂತ ಕನ್ನಡ, ಮರಾಠಿ, ಹಿಂದಿ ಮತ್ತು ತೆಲುಗು ಭಾಷೆಗಳಲ್ಲಿ ೬೫ ಸ್ಥಳಗಳಲ್ಲಿ ‘ಗುರುಪೂರ್ಣಿಮಾ ಮಹೋತ್ಸವ’ವನ್ನು ಅತ್ಯಂತ ಉತ್ಸಾಹದಿಂದ ಆಚರಿಸಲಾಯಿತು. ಕರ್ನಾಟಕದಲ್ಲಿಯೂ ಬೆಂಗಳೂರು, ಮೈಸೂರು, ತುಮಕೂರು, ಹಾಸನ, ಶಿವಮೊಗ್ಗ, ದಾವಣಗೆರೆ, ಉಡುಪಿ, ಮಂಗಳೂರು, ಹುಬ್ಬಳ್ಳಿ, ಗದಗ, ವಿಜಯಪುರ, ರಾಯಚೂರು ಸೇರಿದಂತೆ ೨೩ ಕಡೆಗಳಲ್ಲಿ ಗುರುಪೂರ್ಣಿಮಾ ಮಹೋತ್ಸವ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.

ಈ ಸಂದರ್ಭದಲ್ಲಿ ಹಿಂದೂ ಜನಜಾಗೃತಿ ಸಮಿತಿಯ ಸಾಧಕರು ಮತ್ತು ಜಿಜ್ಞಾಸುಗಳು ಹೆಚ್ಚಿನ ಸಂಖ್ಯೆಯಲ್ಲಿ ಆಯಾ ಸ್ಥಳಗಳಲ್ಲಿ ಉಪಸ್ಥಿತರಿದ್ದರು. ಗುರುಪೂರ್ಣಿಮೆ ನಿಮಿತ್ತ ಹಿಂದೂ ಸಮಾಜವನ್ನು ಸಂಘಟಿಸುವ ಉದ್ದೇಶದಿಂದ ರಾಜ್ಯದಾದ್ಯಂತ ಈ ಮಹೋತ್ಸವವನ್ನು ಆಯೋಜಿಸಲಾಗಿತ್ತು.

ಸಂತರ ಸನ್ಮಾನ

ಗುರುಪೂರ್ಣಿಮೆಯಲ್ಲಿ ಕೆಲವು ವಕ್ತಾರರು ಮಂಡಿಸಿದ ಅಂಶಗಳು

ಹಿಂದೂಗಳು ಶಕ್ತಿಯ ಉಪಾಸನೆ ಮಾಡಬೇಕು ! – ಶ್ರೀ. ಪ್ರಮೋದ ಮುತಾಲಿಕ, ಅಧ್ಯಕ್ಷರು, ಶ್ರೀರಾಮಸೇನೆ

ಸದ್ಯ ಹಿಂದೂ ಧರ್ಮದ ಮೇಲೆ ವಿವಿಧ ರೀತಿಯ ಆಯಾಮಗಳಲ್ಲಿ ಆಕ್ರಮಣಗಳು ನಡೆಯುತ್ತಿದೆ. ಅದಕ್ಕಾಗಿ ಹಿಂದೂಗಳು ಶಕ್ತಿಯ ಉಪಾಸನೆಯನ್ನು ಮಾಡಬೇಕಾಗಿದೆ. ನಾವು ಬಾಹ್ಯ ಶತ್ರುಗಳನ್ನು ಸುಲಭವಾಗಿ ಎದುರಿಸಬಹುದು. ಆದರೆ ಆಂತರಿಕ ಶತ್ರುಗಳನ್ನು ಎದುರಿಸುವುದು ತುಂಬಾ ಕಠಿಣ. ಆದರೆ ಈ ಕಾರ್ಯವನ್ನು ಹಿಂದೂ ಸಂಘಟನೆಗಳಾದ ಹಿಂದೂ ಜನಜಾಗೃತಿ ಸಮಿತಿ, ಶ್ರೀರಾಮ ಸೇನೆ, ಬಜರಂಗದಳ ಈ ಸಂಘಟನೆಗಳು ಎದುರಿಸುತ್ತವೆ. ಈ ಎಲ್ಲ ಸಂಘಟನೆಗಳಿಗೆ ಸನಾತನ ಸಂಸ್ಥೆಯು ಗುರುವಿನ ಸ್ಥಾನದಲ್ಲಿದ್ದು ಮಾರ್ಗದರ್ಶನ ಪ್ರೇರಣೆ ಮಾಡುತ್ತಿದೆ.

ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ಹೋರಾಟವೃತ್ತಿ ಆವಶ್ಯಕ ! – ಶ್ರೀ. ಸಂತೋಷ ಕೆಂಚಾಂಬ, ರಾಷ್ಟ್ರ ಧರ್ಮ ಸಂಘಟನೆ !

ಭಾರತಕ್ಕೆ ಈಗ ಗುರುಗಳ ಮಾರ್ಗದರ್ಶನ ಅತ್ಯಂತ ಅಗತ್ಯವಿದೆ. ಮುಂಬರುವ ಆಪತ್ಕಾಲದಲ್ಲಿ ದೇಶಕ್ಕೆ ಹೋರಾಟವೃತ್ತಿಯ ಅವಶ್ಯಕತೆಯಿದೆ, ಹಿಂದೂ ಜನಜಾಗೃತಿ ಸಮಿತಿಯ ಪ್ರೇರಣಾಸ್ಥಾನ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಸಾಧನೆಯೊಂದಿಗೆ ನ್ಯಾಯಸಮ್ಮತ ಮಾರ್ಗದಿಂದ ಹಿಂದೂ ರಾಷ್ಟ್ರ ಸ್ಥಾಪಿಸಲು ಮಾರ್ಗದರ್ಶನ ಮಾಡುತ್ತಾರೆ. ನನಗೂ ಇದರಿಂದ ಪ್ರೇರಣೆ ಲಭಿಸಿದೆ.

ಗಮನಾರ್ಹ ಅಂಶಗಳು

1. ಮಂಗಳೂರಿನ ಗುರುಪೂರ್ಣಿಮೆ ಕಾರ್ಯಕ್ರಮದಲ್ಲಿ ಶಾಸಕರಾದ ವೇದವ್ಯಾಸ ಕಾಮತ್, ಕಾರವಾರದಲ್ಲಿ ಮಾಜಿ ಶಾಸಕರಾದ ಬಿ. ಗಂಗಾಧರ ಭಟ್, ಉಡುಪಿಯಲ್ಲಿ ಮಾಜಿ ಶಾಸಕರಾದ ಲಾಲಾಜಿ ಮೆಂಡನ್, ವಿಜಯಪುರದಲ್ಲಿ ವಿಧಾನಸಭಾ ಸದಸ್ಯರಾದ ಶ್ರೀ. ರಮೇಶ ಜಿಗಜಿನ್ನಿ ಉಪಸ್ಥಿತರಿದ್ದರು.

2. ಬೆಂಗಳೂರಿನ ಕಾರ್ಯಕ್ರಮಕ್ಕೆ ೫೦ ಕಿ.ಮೀ.ಅಂತರ ಇರುವ ಚಂದಾಪುರದಿಂದ ೫೦ ಜನರು ಬಸ್ ಮೂಲಕ ಕಾರ್ಯಕ್ರಮಕ್ಕೆ ಬಂದಿದ್ದರು.

3. ಹುಬ್ಬಳ್ಳಿಯ ಗುರುಪೂರ್ಣಿಮೆಗೆ ೪೦ ಕಿ.ಮೀ. ದೂರದ ನವಲಗುಂದದಿಂದ ಸುಮಾರು ೬೦ ಹಿಂದುತ್ವನಿಷ್ಠರು ಒಟ್ಟಾಗಿ ಬಸ್ ಮೂಲಕ ಕಾರ್ಯಕ್ರಮಕ್ಕೆ ಬಂದಿದ್ದರು.

4. ಓರ್ವ ಹಿಂದುತ್ವನಿಷ್ಠರು ಉಜಿರೆಯ ಗುರುಪೂರ್ಣಿಮೆಗೆ ಬಂದಿದ್ದರು, ಅವರಿಗೆ ಕಾರ್ಯಕ್ರಮದ ಸ್ಥಳದಲ್ಲಿ ಸಾಕ್ಷಾತ್ ಭಗವಾನ್ ಶ್ರೀಕೃಷ್ಣನ ದರ್ಶನವಾಯಿತು ಎಂದು ಅನುಭವ ವ್ಯಕ್ತಪಡಿಸಿದರು.