ಹೊನ್ನಾವರದ ಖ್ಯಾತ ಜ್ಯೋತಿಷಿ ಸಂತೋಷ ಭಟ್ ಇವರು ‘ಸನಾತನ ರಾಷ್ಟ್ರ ಶಂಖನಾದ ಮಹೋತ್ಸವ’ದ ಬಗ್ಗೆ ನೀಡಿದ ಗೌರವೋದ್ಗಾರ !

ಹೊನ್ನಾವರದ ಖ್ಯಾತ ಜ್ಯೋತಿಷಿ ಶ್ರೀ. ಸಂತೋಷ ಭಟ್ ಗುರೂಜಿ ಯವರಿಗೆ ‘ಸನಾತನ ರಾಷ್ಟ್ರ ಶಂಖನಾದ ಮಹೋತ್ಸವ’ದ ಬಗ್ಗೆ ತಿಳಿದಾಗ, ಅವರು ಮಹೋತ್ಸವ ನಡೆಯುವ ಸ್ಥಳಕ್ಕೆ ಎರಡು ಬಾರಿ ಸ್ವಯಂಪ್ರೇರಿತರಾಗಿ ಭೇಟಿ ನೀಡಿದರು.

ಅವರ ವಿಶೇಷತೆಯೆಂದರೆ ಅವರಿಗೆ ಸೂಕ್ಷ್ಮದಲ್ಲಿ ಶ್ರೀಕೃಷ್ಣನು ಆಜ್ಞಾಪಿಸುತ್ತಾನೆ. ಅದರಂತೆ, ಅವರು ಮಹೋತ್ಸವಕ್ಕೆ ಮೊದಲೇ ಈ ಸ್ಥಳದಲ್ಲಿ ಶ್ರೀ ದುರ್ಗಾದೇವಿಯ ಶಕ್ತಿ ಕಾರ್ಯನಿರ್ವಹಿಸುತ್ತಿದೆ ಎಂದು ಹೇಳಿದ್ದರು. ಮಹೋತ್ಸವದಲ್ಲಿ ಧರ್ಮ ಮತ್ತು ರಾಷ್ಟ್ರಕ್ಕಾಗಿ ಕಾರ್ಯನಿರ್ವಹಿಸುತ್ತಿರುವ ೧೯ ಗಣ್ಯರಿಗೆ ‘ಸನಾತನ ಧರ್ಮಶ್ರೀ’ ಮತ್ತು ೪ ಗಣ್ಯರಿಗೆ ‘ಹಿಂದೂ ರಾಷ್ಟ್ರರತ್ನ’ ಪ್ರಶಸ್ತಿ ನೀಡಲಾಯಿತು. ಭಗವಾನ್ ಶ್ರೀಕೃಷ್ಣನು ಶ್ರೀ. ಸಂತೋಷ ಭಟ್ ಗುರೂಜಿಯವರಿಗೆ, ‘ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಅವರ ಕೈಯಿಂದ ಒಂದು ಪ್ರಶಸ್ತಿಯನ್ನು ಭಗವಾನ್ ಶ್ರೀಕೃಷ್ಣನ ಚರಣಗಳಿಗೆ ಅರ್ಪಿಸಬೇಕು ಮತ್ತು ಈ ಪ್ರಶಸ್ತಿಯನ್ನು ಅನೇಕ ವರ್ಷಗಳ ವರೆಗೆ ಸಂಗ್ರಹಿಸಿಡಬೇಕು’ ಎಂದು ತಿಳಿಸಿದ್ದನು. ಅದರಂತೆ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಅವರ ಹಸ್ತದಿಂದ ಸನಾತನ ರಾಷ್ಟ್ರ ಶಂಖನಾದ ಮಹೋತ್ಸವದ ವೇದಿಕೆಯಿಂದ ಶ್ರೀಕೃಷ್ಣನಿಗೆ ಪ್ರಶಸ್ತಿ ಅರ್ಪಿಸಲಾಯಿತು.
ಈರೋಡ್ (ತಮಿಳುನಾಡು) ನಲ್ಲಿರುವ ಕಸ್ತೂರಿ ರಂಗನಾಥ ದೇವಾಲಯದಲ್ಲಿ ಭಕ್ತಿಪೂರ್ವಕವಾಗಿ ನೆರವೇರಿದ ‘ಮಹಾಸುದರ್ಶನ ಯಾಗ’!
ದೈವಿ ಯುವ ಸಾಧಕಿಯರ ಪ್ರಬುದ್ಧ ವಿಚಾರಗಳಿಗೆ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ನೀಡಿದ ಅಮೂಲ್ಯ ಮಾರ್ಗದರ್ಶನ !
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ’ದ ಮಾಧ್ಯಮದಿಂದ ಕಲಾವಿದರಿಗೆ ಕಲೆಯ ಕಡೆಗೆ ಸಾಧನೆ ಎಂದು ನೋಡಲು ನೀಡಿದ ಮಾರ್ಗದರ್ಶನ !
ಸಾಧಕರಲ್ಲಿ ಆಂತರಿಕ ಬದಲಾವಣೆಯನ್ನು ತರುವ ಪೂ. ರಮಾನಂದ ಗೌಡ !
‘ತಮ್ಮ ಶಾರೀರಿಕ ಸ್ಥಿತಿಯನ್ನು ಪೂರ್ಣ ಸ್ವೀಕರಿಸುವುದು’, ಭಗವತ್ಪ್ರಾಪ್ತಿಯ ಮೊದಲ ಮೆಟ್ಟಿಲಾಗಿದೆ !
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಹೆಚ್ಚಿದ ನಿದ್ರೆ, ಅಂದರೆ ದೇವರು ಅವರ ನಿರ್ವಿಚಾರ ಸ್ಥಿತಿಯನ್ನು ಹೆಚ್ಚಿಸಲು ಮಾಡಿದ ಉಪಾಯಯೋಜನೆಯಾಗಿದೆ !