
‘ಶ್ರೀ ಗುರುಗಳೇ ಅಜ್ಞಾನವನ್ನು ದೂರ ಗೊಳಿಸುವ ‘ಬ್ರಹ್ಮ’ ಸ್ವರೂಪರಾಗಿದ್ದಾರೆ.’ಗುರುಗಳ ಮಾರ್ಗದರ್ಶನವನ್ನು ಭಕ್ತರು, ಸಾಧಕರು ಅಥವಾ ಶಿಷ್ಯರು ಆಚರಣೆಯಲ್ಲಿ ತಂದರೆ, ಅವರ ಸಾಧನೆಯನ್ನು ಶ್ರೀ ಗುರುಗಳೇ ಮಾಡಿಸಿ ಕೊಳ್ಳುತ್ತಾರೆ. ಗುರುಗಳು ಅವನಿಗೆ ಅನುಭೂತಿ ಮತ್ತು ಪ್ರತ್ಯಕ್ಷ ಸ್ವರೂಪದ ಜ್ಞಾನವನ್ನು ನೀಡಿ ಅವನ ಅಜ್ಞಾನವನ್ನು ದೂರ ಮಾಡುತ್ತಾರೆ. ಶ್ರೀ ಗುರುಗಳ ಸಂಪೂರ್ಣ ಗಮನವು ಭಕ್ತರು, ಸಾಧಕರು ಅಥವಾ ಶಿಷ್ಯರ ಆಧ್ಯಾತ್ಮಿಕ ಉನ್ನತಿಯ ಕಡೆಗೆ ಕೇಂದ್ರಿಕೃತವಾಗಿರುತ್ತದೆ. ಗುರುಕೃಪೆಯ ಮೂಲಕ ಜೀವವು ಶಿವನೊಂದಿಗೆ ಸಂಪರ್ಕಕ್ಕೆ ಬಂದಿರುತ್ತದೆ ಮತ್ತು ಕಾಲಕ್ರಮೇಣ ಅದು ಶಿವನೊಂದಿಗೆ ಸೇರಿಕೊಳ್ಳುತ್ತವೆ. (ಜೀವವು ಶಿವನೊಂದಿಗೆ ಸೇರಿಕೊಳ್ಳುತ್ತದೆ’, ಎಂದರೆ ಜೀವವು ಸಂಪೂರ್ಣ ಶರಣಾಗತಿಯನ್ನು ಸ್ವೀಕರಿಸಿದಾಗ ಅದರ ಅಸ್ತಿತ್ವವು ಲಯವಾಗಿ ಅದು ಗುರುಗಳೊಂದಿಗೆ ಒಂದಾಗುತ್ತದೆ,) ‘ಶಿಷ್ಯನ ಆಧ್ಯಾತ್ಮಿಕ ಪ್ರಗತಿಯಾಗಲಿ’, ಎಂದು ಗುರುಗಳ ಸಂಕಲ್ಪವಾದಾಗ, ಅವನ ನಿಜವಾದ ಪ್ರಗತಿಯಾಗುತ್ತದೆ. ಇದನ್ನೇ ‘ಗುರುಕೃಪೆ’ ಎನ್ನುತ್ತಾರೆ. ಈ ಎಲ್ಲಾ ಅಂಶಗಳನ್ನು ಗುರುಗೀತೆಯಲ್ಲಿ ಸ್ಪಷ್ಟಪಡಿಸಲಾಗಿದೆ.
(ಉಲ್ಲೇಖ : ಸನಾತನದ ಗ್ರಂಥ : ಗುರು-ಶಿಷ್ಯ)’ಗುರುಗಳ ಸಂಕಲ್ಪದಿಂದ ಶಿಷ್ಯನ ಆಧ್ಯಾತ್ಮಿಕ ಪ್ರಗತಿಯಾಗುವುದೇ’, ಗುರುಕೃಪೆ !
|| ಶ್ರೀ ರಾಜಮಾತಂಗಿ ಮಹಾಯಾಗ ||
ಶ್ರೀ ಸೋಮನಾಥ ದೇವಸ್ಥಾನದ ಶಿಖರದ ಮೇಲೆ ಶ್ರೀಚಿತ್ಶಕ್ತಿ (ಸೌ.) ಅಂಜಲಿ ಗಾಡಗೀಳರವರು ಪೂಜಿಸಿದ ಧರ್ಮಧ್ವಜದ ಆರೋಹಣ !
ಸೋಮನಾಥ ಜ್ಯೋತಿರ್ಲಿಂಗದ ದಿವ್ಯ ಅಂಶಗಳು ಸನಾತನ ಸಂಸ್ಥೆಗೆ ಪ್ರಾಪ್ತವಾಗುವ ವರೆಗಿನ ದಿವ್ಯ ಪ್ರಯಾಣ !
ಯಜ್ಞಸಂಸ್ಕೃತಿಯನ್ನು ಪುನರುಜ್ಜೀವನಗೊಳಿಸುವ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ !
ಮಹಾಕವಿ ಕಾಳಿದಾಸರು ಮಾಡಿರುವ ರಾಜಮಾತಂಗೀ ದೇವಿಯ ವರ್ಣನೆ
ಶ್ರೀ ರಾಜಮಾತಂಗಿ ಮಹಾಯಜ್ಞ !