
(ಬುರ್ಖಾ ಎಂದರೆ ಇಡೀ ದೇಹವನ್ನು ಮುಚ್ಚುವ ಉಡುಪು)
ಅಸ್ತಾನಾ – ಕಝಾಕಿಸ್ತಾನ್‌ನಲ್ಲಿ ಇತ್ತೀಚೆಗೆ ಅಂಗೀಕರಿಸಿದ ಹೊಸ ಕಾನೂನಿನ ಪ್ರಕಾರ, ಮಹಿಳೆಯರು ಸಾರ್ವಜನಿಕ ಸ್ಥಳಗಳಲ್ಲಿ ಬುರ್ಖಾ ಅಥವಾ ಮುಖವನ್ನು ಮುಚ್ಚುವ ಬಟ್ಟೆಗಳನ್ನು ಧರಿಸುವಂತಿಲ್ಲ. ಕಝಾಕಿಸ್ತಾನದ ಅಧ್ಯಕ್ಷ ಕಾಸಿಮ್-ಜೋಮಾರ್ಟ್ ಟೊಕಾಯೆವ್ ಇತ್ತೀಚೆಗೆ ಈ ಕಾನೂನಿಗೆ ಸಹಿ ಹಾಕಿದ್ದಾರೆ. ಈ ಕಾನೂನು ಸಾರ್ವಜನಿಕ ಸ್ಥಳಗಳಲ್ಲಿ ಯಾರಾದರೂ ಮುಖವನ್ನು ಮುಚ್ಚುವುದನ್ನು ನಿಷೇಧಿಸುತ್ತದೆ. ಈ ದೇಶದ ಶೇಕಡ 70 ರಷ್ಟು ಜನರು ಇಸ್ಲಾಂ ಧರ್ಮವನ್ನು ಅನುಸರಿಸುತ್ತಿದ್ದರೂ, ಅಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.
1. ಕಝಾಕಿಸ್ತಾನದ ಅಧ್ಯಕ್ಷ ಟೊಕಾಯೆವ್ ಅವರು, ಮುಖವನ್ನು ಮರೆಮಾಡುವ ಬಟ್ಟೆಗಳನ್ನು ಧರಿಸುವ ಬದಲು ರಾಷ್ಟ್ರೀಯ ಶೈಲಿಯ ಉಡುಪುಗಳನ್ನು ಧರಿಸುವುದು ಉತ್ತಮ ಎಂದು ಹೇಳಿದ್ದಾರೆ. ಟೊಕಾಯೆವ್ ಅವರು ದೇಶದ ಜಾತ್ಯತೀತ ಸ್ವರೂಪವನ್ನು ಕಾಪಾಡುವ ಬಗ್ಗೆಯೂ ಒತ್ತು ನೀಡಿದ್ದಾರೆ.
2. ಈ ಹಿಂದೆ 2023 ರಲ್ಲಿ ಕಝಾಕಿಸ್ತಾನ ಸರಕಾರವು ಒಂದು ಪ್ರಮುಖ ನಿರ್ಧಾರವನ್ನು ತೆಗೆದುಕೊಂಡಿತ್ತು ಮತ್ತು ಶಾಲೆಗಳಲ್ಲಿ ಹಿಜಾಬ್ (ಮುಸ್ಲಿಂ ಮಹಿಳೆಯರ ತಲೆ ಮತ್ತು ಕುತ್ತಿಗೆಯನ್ನು ಮುಚ್ಚುವ ಉಡುಪು) ಮತ್ತು ನಿಕಾಬ್ (ಮುಖವನ್ನು ಮುಚ್ಚುವ ಬಲೆಯುಳ್ಳ ಉಡುಪು)ಗಳ ಮೇಲೆ ನಿಷೇಧ ಹೇರಿತ್ತು.
ಮಧ್ಯಏಷ್ಯಾದ ಅನೇಕ ಮುಸ್ಲಿಂ ದೇಶಗಳಿಂದ ಬುರ್ಖಾ ನಿಷೇಧ!ಮಧ್ಯಏಷ್ಯಾ ದೇಶಗಳು ಇತ್ತೀಚಿನ ದಿನಗಳಲ್ಲಿ ಬುರ್ಖಾ ನಿಷೇಧಿಸುವ ಕಾನೂನುಗಳನ್ನು ಜಾರಿಗೆ ತಂದಿವೆ. ಕಿರ್ಗಿಸ್ತಾನದಲ್ಲಿ ಬುರ್ಖಾ ಧರಿಸುವುದನ್ನು ನಿಷೇಧಿಸಲಾಗಿದೆ. ಉಜ್ಬೇಕಿಸ್ತಾನದಲ್ಲಿ ಬುರ್ಖಾ ಧರಿಸುವ ಮಹಿಳೆಯರಿಗೆ ದಂಡ ವಿಧಿಸಲು ವ್ಯವಸ್ಥೆ ಇದೆ. ತಜಕಿಸ್ತಾನದ ಅಧ್ಯಕ್ಷ ಎಮೋಮಾಲಿ ರಖ್ಮೋನ್ ಅವರು ಸಾರ್ವಜನಿಕ ಸ್ಥಳಗಳಲ್ಲಿ ಮುಖವನ್ನು ಮುಚ್ಚುವ ಬಟ್ಟೆಗಳನ್ನು ಧರಿಸುವುದನ್ನು ನಿಷೇಧಿಸಿದ್ದಾರೆ. |
ಸಂಪಾದಕೀಯ ನಿಲುವುಭಾರತದಲ್ಲಿ ಇದನ್ನು ಜಾರಿಗೆ ತರಲು ಪ್ರಯತ್ನಿಸಿದರೆ, ಮಾತಾಂಧ ಮುಸಲ್ಮಾನರಿಂದ ಹಿಡಿದು ಅವರನ್ನು ಓಲೈಸುವ ಕಾಂಗ್ರೆಸ್ ವರೆಗೆ ಎಲ್ಲರೂ ಆಕಾಶ-ಪಾತಾಳ ಒಂದು ಮಾಡುತ್ತಾರೆ! |
India-Nepal Border Dispute : ನೇಪಾಳದೊಂದಿಗಿನ ಗಡಿ ವಿವಾದದಲ್ಲಿ ಮೂರನೇ ಪಕ್ಷದ ಅಗತ್ಯವಿಲ್ಲ! – ಭಾರತ
Trump Tariff : ಭಾರತ ಸೇರಿದಂತೆ ಹಲವು ದೇಶಗಳ ಮೇಲೆ ಶೇ. ೧೨.೫% ರಷ್ಟು ಹೆಚ್ಚುವರಿ ಆಮದು ಸುಂಕ ವಿಧಿಸಲಿರುವ ಟ್ರಂಪ್
Japan Illegal Mosque : ಜಪಾನ್ : ಪಾಕಿಸ್ತಾನ ನಿರ್ಮಿಸಿದ ಅಕ್ರಮ ಮಸೀದಿ ಧ್ವಂಸ !
ಫ್ರಾನ್ಸ್ ಸರಕಾರವು ಇನ್ನು ಮುಂದೆ ‘ಶೂನ್ಯ ಸಹಿಷ್ಣುತೆ’ಯ ನೀತಿಯನ್ನು ಅಳವಡಿಸಿಕೊಳ್ಳಲಿ !
ಬಾಂಗ್ಲಾದೇಶದ ವಿರೋಧದಿಂದಾಗಿ ನುಸುಳುಕೋರರನ್ನು ಗಡಿಯಿಂದ ಹಿಂತಿರುಗಿಸುವುದು ಕಷ್ಟವಾಗುತ್ತಿದೆ !
ಟೆಕ್ಸಾಸ್ (ಅಮೆರಿಕ) ನಲ್ಲಿ ಭಾರತದ ರಾಷ್ಟ್ರಧ್ವಜ ಹರಿದ ಅಮೆರಿಕನ್ ಯುವಕ