
`ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ (ಗುರುದೇವ) ಇವರ ಜನ್ಮೋತ್ಸವದ ನಿಮಿತ್ತ ಆಯೋಜಿಸಲಾಗಿದ್ದ `ಸನಾತನ ರಾಷ್ಟ್ರ ಶಂಖನಾದ ಮಹೋತ್ಸವ’ವು ಕೇವಲ ಸನಾತನ ಸಂಸ್ಥೆಗೆ ಸೀಮಿತವಾಗಿಲ್ಲ. ಅದರಲ್ಲಿ ಮಹಾನ ಸಂತರು, ಕೇಂದ್ರ ಸಚಿವರು, ಗೋವಾ ಸರಕಾರದ ಸಾಂಸ್ಕೃತಿಕ ವಿಭಾಗ, ಗೋವಾದ ಮುಖ್ಯಮಂತ್ರಿಗಳು ಸೇರಿದಂತೆ ವಿವಿಧ ಕ್ಷೇತ್ರದ ಗಣ್ಯರು ಉಪಸ್ಥಿತರಿದ್ದರು. ಭಾರತದಾದ್ಯಂತದ ಸನಾತನ ಸಂಸ್ಥೆಯ ಸಾಧಕರ ಸಹಿತ, ಫೋಂಡಾ ನಗರದ ಪ್ರತಿಯೊಬ್ಬ ನಾಗರಿಕನಿಗೂ ಇದರ ಆಮಂತ್ರಣ ಇತ್ತು. ಮಹಾರಾಷ್ಟ್ರ, ಕರ್ನಾಟಕದ ಭಕ್ತರೂ ಉಪಸ್ಥಿತರಿದ್ದರು. ಇದರಿಂದಾಗಿ ಇದು ಒಂದು `ಲೋಕೋತ್ಸವ’ವೇ ಆಯಿತು.
ಸನಾತನ ಸಂಸ್ಥೆಯ ಸ್ಥಾಪನೆಯ ಉದ್ದೇಶ

ಅಧ್ಯಾತ್ಮಪ್ರಸಾರ ಮಾಡುವ ಚಿಕ್ಕ ಸಂಸ್ಥೆಯಾದ ಸನಾತನ ಸಂಸ್ಥೆಯ ಒಂದು ಕಾರ್ಯಕ್ರಮವು ಲೋಕೋತ್ಸವವಾಗುವುದು, ಆಶ್ಚರ್ಯಕರ ಅಥವಾ ಪವಾಡವೇ ಎನ್ನಬೇಕು; ಆದರೆ ಇದರ ಹಿಂದಿನ ಕಾರಣವನ್ನು ಹುಡುಕಲು ಪ್ರಯತ್ನಿಸಿದಾಗ, ದೇವರು ಮುಂದಿನ ಪ್ರಸಂಗವನ್ನು ನೆನಪಿಸಿದರು. `1991 ರಲ್ಲಿ ಗುರುದೇವರು ತಮ್ಮ ಗುರು ಪ.ಪೂ. ಭಕ್ತರಾಜ ಮಹಾರಾಜರ ಆಶೀರ್ವಾದದಿಂದ `ಸನಾತನ ಭಾರತೀಯ ಸಂಸ್ಕೃತಿ ಸಂಸ್ಥೆ’ಯನ್ನು ಸ್ಥಾಪಿಸಿದ್ದರು. 1999 ರಲ್ಲಿ ಮುಂಬಯಿಯ ಮಾಟುಂಗಾದಲ್ಲಾದ ಸಾಧಕರ ಸಭೆಯಲ್ಲಿ ಗುರುದೇವರು, `ಇಂದಿನಿಂದ ಗುರುಗಳ ಆಶೀರ್ವಾದದಿಂದ ಸ್ಥಾಪನೆಯಾದ `ಸನಾತನ ಭಾರತೀಯ ಸಂಸ್ಕೃತಿ ಸಂಸ್ಥೆ’ಯ ಕಾರ್ಯವನ್ನು ನಾನು ಸ್ಥಗಿತಗೊಳಿಸುತ್ತಿದ್ದೇನೆ.

ಇನ್ನು ಮುಂದೆ ಅಧ್ಯಾತ್ಮ ಪ್ರಸಾರದ ಕಾರ್ಯವು `ಸನಾತನ ಸಂಸ್ಥೆ’ ಎಂಬ ಹೆಸರಿನಲ್ಲಿ ನಡೆಯುತ್ತದೆ. ಇದಕ್ಕೆ ಕಾರಣವೇನೆಂದರೆ, ಗುರುಗಳ ಸಂಸ್ಥೆಯ ಕಾರ್ಯವನ್ನು ಗುರುಗಳೇ ಮಾಡಿಸಿಕೊಳ್ಳುವುದರಿಂದ `ಸಂಸ್ಥೆಯ ಕಾರ್ಯವನ್ನು ನಾನು ಮಾಡುತ್ತೇನೆ’ ಎಂಬ ಅಲ್ಪ ವಿಚಾರವೂ ನನ್ನ ಮನಸ್ಸಿನಲ್ಲಿ ಉಳಿಯಬಾರದು. ಸಾಧನೆಯ ಮುಂದಿನ ಹಂತದ ವ್ಯಾಪಕತೆ ನನ್ನಲ್ಲಿ ಬರಲು ಅಂದರೆ, `ಕೇವಲ ಸನಾತನ ಸಂಸ್ಥೆ ಮಾತ್ರ ನನ್ನದು’ ಎಂದು ಅನಿಸದೆ, `ಈ ವಿಶ್ವವೇ ನನ್ನ ಮನೆ’ ಎಂಬ ಸ್ಥಿತಿ ತಲುಪಲು ಸಾಧ್ಯವಾಗಬೇಕು. ಎಲ್ಲ ಸಂಪ್ರದಾಯಗಳು ಮತ್ತು ಸಾಧಕರು ನನಗೆ ನನ್ನವರು ಅನಿಸಬೇಕು, ಇದಕ್ಕಾಗಿ ನಾನು ಸನಾತನ ಸಂಸ್ಥೆಯಲ್ಲಿ ಯಾವುದೇ ಪದವಿ ಹೊಂದದೆ `ಈ ಕಾರ್ಯವು ನನ್ನ ಗುರುಗಳದ್ದಾಗಿದೆ’ ಎಂಬ ಭಾವದಿಂದ ನಿರ್ವಹಿಸುತ್ತೇನೆ,’ ಎಂದರು. ಇದರಿಂದ `ಗುರುದೇವರು ಸನಾತನ
ಸಂಸ್ಥೆಯನ್ನು ಸ್ಥಾಪಿಸುವಾಗಲೇ ಅದರಿಂದ ದೂರ ಉಳಿಯಲು ಮತ್ತು ಯಾವುದೇ ಪದವಿಯಲ್ಲಿ ಸಿಲುಕದಿರಲು ಜಾಗ್ರತೆ ವಹಿಸಿದ್ದರು ಎಂದು ಗಮನಕ್ಕೆ ಬರುತ್ತದೆ. `ಸಂಸ್ಥೆಯ ಕಾರ್ಯದ ಚೌಕಟ್ಟಿನಿಂದ ಹೊರಬಂದು ಅಖಿಲ ಮನುಕುಲದ ಹಿತಕ್ಕಾಗಿ ಪ್ರಯತ್ನಿಸಬೇಕು’ ಎಂದು ಅವರು ಮೊದಲೇ ಅರಿತಿದ್ದರು. ಆದ್ದರಿಂದ, ಇಂದು ಗುರುದೇವರು ಎಲ್ಲ ಸಂಪ್ರದಾಯದವರನ್ನು ತಮ್ಮವರನ್ನಾಗಿ ಮಾಡಿಕೊಂಡಿರುವುದರಲ್ಲಿ ಆಶ್ಚರ್ಯವೇನು ? ಇಂದು ಪ್ರತಿಯೊಬ್ಬ ಸಾಧಕ ವೃತ್ತಿಯ ವ್ಯಕ್ತಿಗೂ ಅವರು `ಮೋಕ್ಷ ಗುರು’ಗಳಂತೆ ಕಾಣುತ್ತಾರೆ. ಪ್ರತಿಯೊಬ್ಬ ಹಿಂದೂವಿಗೆ ಅವರು `ರಾಷ್ಟ್ರಗುರು’ಗಳಂತೆ ಕಾಣುತ್ತಾರೆ. ಪ್ರತಿಯೊಬ್ಬ ಧರ್ಮಪ್ರೇಮಿಗೂ `ಧರ್ಮಗುರು’ಗಳಂತೆ ಕಾಣುತ್ತಾರೆ. ಇದೇ ಕಾರಣದಿಂದ ಈ ಕಾರ್ಯಕ್ರಮದಲ್ಲಿ ಜನಭಾಗಿತ್ವ ಹೆಚ್ಚಾಗಿದೆ, ಅಂದರೆ ಅವರು ಸಂತ ಜ್ಞಾನೇಶ್ವರರ ಉಕ್ತಿಗನುಗುಣವಾಗಿ `ಈ ವಿಶ್ವವೇ ನನ್ನ ಮನೆ’ ಎಂಬ ಸ್ಥಿತಿಯನ್ನು ಪಡೆದುಕೊಂಡಿದ್ದಾರೆ. – ಶ್ರೀ. ಸಾಗರ ನಿಂಬಾಳಕರ, ಸನಾತನ ಆಶ್ರಮ, ರಾಮನಾಥಿ, ಗೋವಾ. (25.4.2025)
ಈರೋಡ್ (ತಮಿಳುನಾಡು) ನಲ್ಲಿರುವ ಕಸ್ತೂರಿ ರಂಗನಾಥ ದೇವಾಲಯದಲ್ಲಿ ಭಕ್ತಿಪೂರ್ವಕವಾಗಿ ನೆರವೇರಿದ ‘ಮಹಾಸುದರ್ಶನ ಯಾಗ’!
ದೈವಿ ಯುವ ಸಾಧಕಿಯರ ಪ್ರಬುದ್ಧ ವಿಚಾರಗಳಿಗೆ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ನೀಡಿದ ಅಮೂಲ್ಯ ಮಾರ್ಗದರ್ಶನ !
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ’ದ ಮಾಧ್ಯಮದಿಂದ ಕಲಾವಿದರಿಗೆ ಕಲೆಯ ಕಡೆಗೆ ಸಾಧನೆ ಎಂದು ನೋಡಲು ನೀಡಿದ ಮಾರ್ಗದರ್ಶನ !
ಸಾಧಕರಲ್ಲಿ ಆಂತರಿಕ ಬದಲಾವಣೆಯನ್ನು ತರುವ ಪೂ. ರಮಾನಂದ ಗೌಡ !
‘ತಮ್ಮ ಶಾರೀರಿಕ ಸ್ಥಿತಿಯನ್ನು ಪೂರ್ಣ ಸ್ವೀಕರಿಸುವುದು’, ಭಗವತ್ಪ್ರಾಪ್ತಿಯ ಮೊದಲ ಮೆಟ್ಟಿಲಾಗಿದೆ !
ಅಪರಾಧವನ್ನು ತಡೆಗಟ್ಟಲು ಸಾಧನೆಯು ಅನಿವಾರ್ಯ !