ಪುರಿ ಪೀಠದ ಶ್ರೀಮದ್ ಜಗದ್ಗುರು ಶಂಕರಾಚಾರ್ಯ ಸ್ವಾಮಿ ನಿಶ್ಚಲಾನಂದ ಸರಸ್ವತಿಯವರ ಮಾರ್ಗದರ್ಶನ

ನವದೆಹಲಿ – ಭಾರತದ ಅಭಿವೃದ್ಧಿಯಾಗಬೇಕು; ಆದರೆ ಅದು ಮಾನವಕುಲದ ಹಿತಕ್ಕಾಗಿರಬೇಕು. ಭಾರತದ ಅಭಿವೃದ್ಧಿ ಹಾದಿಯಲ್ಲಿ ‘ಭಾರತೀಯತ್ವವೇ ಸರ್ವೋಚ್ಚವಾಗಿರಬೇಕು’. ಜೀವನೋಪಾಯವು ಜೀವನಕ್ಕಾಗಿರಬೇಕು; ಆದರೆ ಜೀವನವು ಜೀವನೋಪಾಯವಾಗಬಾರದು ಎಂಬುದನ್ನು ಎಲ್ಲರೂ ನೆನಪಿನಲ್ಲಿಡಬೇಕು. ಕೇವಲ ಹೊಟ್ಟೆ ಮತ್ತು ಕುಟುಂಬಕ್ಕೆ ಸೀಮಿತವಾಗಬೇಡಿ, ದೇಶದ ಅಭಿವೃದ್ಧಿ ಹಾಗೂ ಧರ್ಮ ಮತ್ತು ಅಧ್ಯಾತ್ಮದ ಉನ್ನತಿಗೆ ಕೊಡುಗೆ ನೀಡಿ ಎಂದು ಪುರಿ ಪೀಠದ ಶ್ರೀಮದ್ ಜಗದ್ಗುರು ಶಂಕರಾಚಾರ್ಯ ಸ್ವಾಮಿ ನಿಶ್ಚಲಾನಂದ ಸರಸ್ವತಿಯವರು ಮಾರ್ಗದರ್ಶನ ಮಾಡಿದರು. ಅವರ 83ನೇ ಜಯಂತಿ ಮಹೋತ್ಸವವನ್ನು ಇತ್ತೀಚೆಗೆ ನವದೆಹಲಿಯಲ್ಲಿ ಆಚರಿಸಲಾಯಿತು. ಈ ಸಂದರ್ಭದಲ್ಲಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಅವರು ಮಾರ್ಗದರ್ಶನ ಮಾಡಿದರು.

ಶಂಕರಾಚಾರ್ಯರ ಮಂಗಳಕರ ಉಪಸ್ಥಿತಿಯಲ್ಲಿ ‘ರಾಷ್ಟ್ರೋತ್ಕರ್ಷ ದಿನ’ವನ್ನು ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ದೆಹಲಿಯ ಮುಖ್ಯಮಂತ್ರಿ ರೇಖಾ ಗುಪ್ತಾ, ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್, ಭಾಜಪ ಸಂಸದ ಸಂಬಿತ್ ಪಾತ್ರಾ, ಮಾಜಿ ಸಂಸದ ಡಾ. ಸುಬ್ರಮಣಿಯನ್ ಸ್ವಾಮಿ, ಪ್ರಸಿದ್ಧ ಕಥಾಕಾರ ದೇವಕಿನಂದನ ಠಾಕೂರ್ ಮುಂತಾದವರು ಉಪಸ್ಥಿತರಿದ್ದರು.

ಶಂಕರಾಚಾರ್ಯರು ಮುಂದೆ ಮಾತನಾಡಿ, ಯಾವುದೇ ಸಮಾಜದ ಅಭಿವೃದ್ಧಿಗಾಗಿ ಸರಕಾರವನ್ನೇ ಸಂಪೂರ್ಣವಾಗಿ ಅವಲಂಬಿಸುವುದು ಸರಿಯಲ್ಲ ಎಂದು ಹೇಳಿದರು. ಸನಾತನ ಧರ್ಮ ಉಳಿದರೆ, ಮಾನವರಿಗೆ ಕಲ್ಯಾಣವಾಗುತ್ತದೆ, ಜಗತ್ತಿನಲ್ಲಿ ಶಾಂತಿ ನೆಲೆಸುತ್ತದೆ, ಭಾರತ ಮತ್ತೆ ಜಾಗತಿಕ ನಾಯಕನಾಗುತ್ತದೆ. ಭಾರತದಲ್ಲಿ ನಿಷ್ಪಕ್ಷಪಾತ ಸನಾತನ ಧರ್ಮ ವ್ಯವಸ್ಥೆಯನ್ನು ಹೇಗೆ ಸ್ಥಾಪಿಸಬೇಕು ಎಂಬುದರ ಕುರಿತು ಎಲ್ಲರಲ್ಲಿ ಜಾಗೃತಿ ಮೂಡಿಸಬೇಕಾಗಿದೆ ಎಂದು ಅವರು ಹೇಳಿದರು.
ಶ್ರೀಮದ್ ಜಗದ್ಗುರು ಶಂಕರಾಚಾರ್ಯ ಸ್ವಾಮಿ ಶ್ರೀ ನಿಶ್ಚಲಾನಂದ ಸರಸ್ವತಿ ಜಿ ಮಹಾರಾಜ್ ಅವರ 83ನೇ ಪ್ರಕಟೋತ್ಸವ(ಸೌಜನ್ಯ – Govardhan Math, Puri) |
ಹಿಂದೂ ಜನಜಾಗೃತಿ ಸಮಿತಿಯ ಸದ್ಗುರು ಡಾ. ಚಾರುದತ್ತ ಪಿಂಗಳೆ ಅವರಿಗೂ ಸನ್ಮಾನ!![]() ಈ ಕಾರ್ಯಕ್ರಮದಲ್ಲಿ ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರೀಯ ಮಾರ್ಗದರ್ಶಕ ಸದ್ಗುರು ಡಾ. ಚಾರುದತ್ತ ಪಿಂಗಳೆ ಅವರೂ ಕೂಡ ಭಾಗವಹಿಸಿದ್ದರು. ಪೀಠ ಪರಿಷತ್ತಿನ ಹರಿಯಾಣ ಸಂಯೋಜಕ ಮತ್ತು ಕಾರ್ಯಕ್ರಮದ ಸಂಯೋಜಕ ಪ್ರವೀಣ್ ಗುಪ್ತಾ ಅವರು ಸದ್ಗುರು ಡಾ. ಪಿಂಗಳೆ ಅವರಿಗೆ ಸ್ಮರಣಿಕೆ ನೀಡಿ ಸನ್ಮಾನಿಸಿದರು. |

ಮಹಿಳೆಯ ಎದೆಗೆ ಸ್ಪರ್ಶಿಸುವುದು ಅತ್ಯಾಚಾರದ ಪ್ರಯತ್ನವಲ್ಲ! – ಉಚ್ಚ ನ್ಯಾಯಾಲಯ : Attempt to Rape
ಅಮರಕಂಟಕ (ಮಧ್ಯಪ್ರದೇಶ)ಇಲ್ಲಿನ ನರ್ಮದಾ ಉಗಮ ದೇವಸ್ಥಾನದ ಚಿನ್ನ ಮತ್ತು ಬೆಳ್ಳಿ ನಾಪತ್ತೆ! : Amarkantak Temple Donation Scam
ಬೆಂಗಳೂರಿನಲ್ಲಿ ದೇಶದ ಮೊದಲ ‘ಎಐ’ ವಿಶ್ವವಿದ್ಯಾಲಯ ಆರಂಭ ! : Karnataka AI University
ಗುಜರಾತ್ ನ ಪ್ರಸಿದ್ಧ ಶಕ್ತಿಪೀಠ ಅಂಬಾಜಿ ದೇವಸ್ಥಾನದಲ್ಲೂ ನೋಟು ಎಣಿಕೆಯ ಸಮಯದಲ್ಲಿ ೨ ತಿಂಗಳ ಹಿಂದೆ ಕಳ್ಳತನ ನಡೆದಿರುವುದು ಬಹಿರಂಗ ! : Ambaji Temple Donation Theft
ಸಮಾಜವಾದಿ ಪಕ್ಷದ ಅಧಿಕಾರಾವಧಿಯಲ್ಲಿ ‘ವಕ್ಫ್ ಮಂಡಳಿ’ಯ ಶತಕೋಟಿ ರೂಪಾಯಿಗಳ ಹಗರಣ! – ಮೌಲಾನಾ ಶಹಾಬುದ್ದೀನ ರಿಜ್ವಿ ಬರೇಲವಿ
“ನಾನು ಛತ್ರಪತಿ ಶಿವಾಜಿ ಮಹಾರಾಜರ ಅನುಯಾಯಿಯಾಗಿದ್ದು ರಣರಂಗ ಬಿಟ್ಟು ಓಡಿಹೋಗುವವನಲ್ಲ!”