ಅಮೇರಿಕಾದ ‘ ಪೆಂಟಗಾನ್ ‘ ಸಮಿತಿಯ ವರದಿ !
(‘ಪೆಂಟಗಾನ್’ ಎಂದರೆ ಅಮೇರಿಕಾದ ರಕ್ಷಣಾ ಪಡೆಗಳ ಪ್ರಧಾನ ಕಛೇರಿ)

ವಾಷಿಂಗ್ಟನ್ (ಅಮೇರಿಕಾ) – ಇರಾನ್-ಇಸ್ರೇಲ್ ಯುದ್ಧ 12 ದಿನಗಳ ನಂತರ ಕೊನೆಗೊಂಡಿದ್ದರೂ, ಈ ಯುದ್ಧದಿಂದ ಅಮೇರಿಕಾ ಮತ್ತು ಇಸ್ರೇಲ್ ಬಯಸಿದ್ದು ಸಾಧಿಸಲು ಆಗಲಿಲ್ಲ ಎಂದು ಅಮೇರಿಕಾದ ರಕ್ಷಣಾ ಪಡೆಗಳ ಪ್ರಧಾನ ಕಛೇರಿಯಾದ ಪೆಂಟಗಾನ್‌ನ ಒಂದು ಸಮಿತಿ ಬಹಿರಂಗಪಡಿಸಿದೆ.
💣🇮🇷 Pentagon intel claims Iran moved uranium before U.S. strikes. 📰🔥
🗣️ “FAKE NEWS CNN & Failing NYT are trying to demean one of the most successful military strikes in history!” – Trump Slams Media Over Leaked Iran Strike Reports
🔥 “Iran’s nuclear sites are completely… pic.twitter.com/3pa8VW1vY6
— Sanatan Prabhat (@SanatanPrabhat) June 25, 2025
1. ಅಮೇರಿಕಾ ಈ ಯುದ್ಧಕ್ಕೆ ಧುಮುಕಿ ಇರಾನ್‌ನ 3 ಪರಮಾಣು ಕೇಂದ್ರಗಳ ಮೇಲೆ ವಾಯುದಾಳಿ ನಡೆಸಿತ್ತು. “ಈ ಕೇಂದ್ರಗಳನ್ನು ನಾಶಪಡಿಸಿ ಇರಾನ್‌ನ ಪರಮಾಣು ಕಾರ್ಯಕ್ರಮವನ್ನು ಸ್ಥಗಿತಗೊಳಿಸುವುದು” ಈ ದಾಳಿಗಳ ಹಿಂದಿನ ಉದ್ದೇಶವಾಗಿತ್ತು. ಈ ಕುರಿತು ಅಮೇರಿಕಾದ ‘ಡಿಫೆನ್ಸ್ ಇಂಟೆಲಿಜೆನ್ಸ್ ಏಜೆನ್ಸಿ’ ವರದಿಯನ್ನು ಸಲ್ಲಿಸಿದೆ. ಈ ಕೇಂದ್ರಗಳಿಗೆ ಎಷ್ಟು ಹಾನಿಯಾಗಿವೆ ಎಂಬುದನ್ನು ಪರಿಶೀಲಿಸಲು ಈ ವರದಿಯನ್ನು ಸಿದ್ಧಪಡಿಸಲಾಯಿತು. ಈ ವರದಿಯಲ್ಲಿ, ಅಮೇರಿಕಾದ ‘ಬಿ-2 ಬಾಂಬರ್’ ವಿಮಾನಗಳು ಹಾಕಿದ ಬಾಂಬ್‌ಗಳಿಂದ ಇರಾನ್‌ನ ಪರಮಾಣು ಕೇಂದ್ರಗಳ ಮೂಲಭೂತ ಅಂಶಗಳಿಗೆ ಯಾವುದೇ ಧಕ್ಕೆಯಾಗಿಲ್ಲ ಎಂದು ಹೇಳಲಾಗಿದೆ. ಈ ದಾಳಿಯಲ್ಲಿ ಆದ ಹಾನಿಯಿಂದಾಗಿ ಅಣು ಬಾಂಬ್ ತಯಾರಿ ಕಾರ್ಯಕ್ಕೆ ಕೆಲವು ತಿಂಗಳುಗಳಷ್ಟು ವಿಳಂಬವಾಗಿದೆ. ಈ ಹಾನಿಯಿಂದ ಚೇತರಿಸಿಕೊಳ್ಳಲು ಇರಾನ್‌ನ ಪರಮಾಣು ಕೇಂದ್ರಕ್ಕೆ ಈಗ ಕೆಲವು ತಿಂಗಳುಗಳು ಬೇಕಾಗಬಹುದು.
2. ಇನ್ನೊಂದೆಡೆ, ಅಮೇರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತೊಮ್ಮೆ ಇರಾನ್‌ನ ಪರಮಾಣು ಕೇಂದ್ರಗಳನ್ನು ನಾಶಪಡಿಸಲಾಗಿದೆ ಎಂದು ಹೇಳಿಕೊಂಡರು. ಇತಿಹಾಸದಲ್ಲಿನ ಅತ್ಯಂತ ಯಶಸ್ವಿ ಮಿಲಿಟರಿ ಕಾರ್ಯಾಚರಣೆಯನ್ನು ಅವಮಾನಿಸಲು ಮಾಧ್ಯಮ ಸಮೂಹಗಳು ಪ್ರಯತ್ನಿಸುತ್ತಿವೆ ಎಂದು ಟ್ರಂಪ್ ಟೀಕಿಸಿದರು. ಇರಾನ್‌ನಲ್ಲಿನ ಪರಮಾಣು ನೆಲೆಗಳು ಸಂಪೂರ್ಣವಾಗಿ ನಾಶವಾಗಿವೆ. ಆದ್ದರಿಂದ, ಈ ಬಗ್ಗೆ ಪ್ರಶ್ನೆಗಳನ್ನು ಎತ್ತುವ ಮಾಧ್ಯಮ ಸಮೂಹಗಳ ಮೇಲೆ ಅಮೇರಿಕಾದ ನಾಗರಿಕರಿಂದ ಟೀಕೆ ವ್ಯಕ್ತವಾಗುತ್ತಿದೆ.
Teesta River Project : ಭಾರತವನ್ನು ಬದಿಗೊತ್ತಿ ಚೀನಾಕ್ಕೆ ೯ ಸಾವಿರ ಕೋಟಿ ರೂಪಾಯಿಗಳ ತೀಸ್ತಾ ನದಿ ಯೋಜನೆ ಒಪ್ಪಿಸಿದ ಬಾಂಗ್ಲಾದೇಶ !
ಉಕ್ರೇನಿನಿಂದ ರಷ್ಯಾದ ೨೦ ನೌಕೆಗಳ ಮೇಲೆ ದಾಳಿ! : Russia Ukraine War
ರಷ್ಯಾದಿಂದ ತೈಲ ಖರೀದಿಸುವ ಭಾರತ ಸೇರಿದಂತೆ ೫ ದೇಶಗಳ ಮೇಲೆ ಶೇ. ೧೦೦ ರಷ್ಟು ಸುಂಕ ವಿಧಿಸಲಿರುವ ಅಮೆರಿಕಾ ! : Oil purchase from Russia
ಬಲೂಚಿಸ್ತಾನದ ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿರುವವರಿಗೆ ಇಸ್ರೇಲ್ ಸಂಸ್ಥೆಗಳು ಸಹಾಯ ಮಾಡುತ್ತಿವೆ
ಟ್ರಂಪ್ ಅವರಿಂದ ಹಾರ್ಮುಜ್ ಜಲಸಂಧಿಯ ಮೇಲಿನ ಶೇಕಡಾ ೨೦ ರಷ್ಟು ಸುಂಕ ಹಿಂಪಡೆ : Donald Trump
ಹಾರ್ಮುಜ್: ತೈಲ ನೌಕೆಯ ಮೇಲೆ ಇರಾನ್ ದಾಳಿ: ಓರ್ವ ಭಾರತೀಯ ಸಾವು