ಟ್ರಂಪ್ ಕದನವಿರಾಮ ಘೋಷಿಸಿದ ನಂತರವೂ ಇರಾನ್ ನಿಂದ ಇಸ್ರೇಲ್ ಮೇಲೆ ದಾಳಿ, ಇಸ್ರೇಲ್ ನ ಪ್ರತಿದಾಳಿ

ವಾಷಿಂಗ್ಟನ್ (ಅಮೇರಿಕಾ) – ಇರಾನ್ ಮತ್ತು ಇಸ್ರೇಲ್ ಯುದ್ಧದಲ್ಲಿ ಅಮೇರಿಕಾ ಪ್ರವೇಶಿಸಿದ ನಂತರ ವಿಶ್ವದಲ್ಲಿ ಮೂರನೇ ಮಹಾಯುದ್ಧದ ಸಾಧ್ಯತೆ ಸೃಷ್ಟಿಯಾಗಿದ್ದಾಗ, ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇದ್ದಕ್ಕಿದ್ದಂತೆ ಕದನವಿರಾಮವನ್ನು ಘೋಷಿಸಿದರು. ಇದನ್ನು ಮೊದಲು ಇರಾನ್ ನಿರಾಕರಿಸಿತು; ಆದರೆ ನಂತರ ಅದು ಕದನವಿರಾಮಕ್ಕೆ ಒಪ್ಪಿಗೆ ನೀಡಿತು. ಅದಕ್ಕೂ ಮೊದಲು ಇರಾನ್, ಕತಾರ್ ಮತ್ತು ಇರಾಕ್ ದೇಶದಲ್ಲಿರುವ ಅಮೇರಿಕಾದ ವಾಯುಪಡೆಯ ನೆಲೆಗಳ ಮೇಲೆ ಕ್ಷಿಪಣಿ ದಾಳಿ ನಡೆಸಿತ್ತು. ಹಾಗೆಯೇ, ಕದನವಿರಾಮ ಘೋಷಿಸಿದ ನಂತರವೂ ಇರಾನ್ ಇಸ್ರೇಲ್ ಮೇಲೆ ಕ್ಷಿಪಣಿಗಳನ್ನು ಉಡಾಯಿಸಿತು. ಈ ದಾಳಿಯಲ್ಲಿ 3 ಜನರು ಸಾವನ್ನಪ್ಪಿದರು. ಕಳೆದ ಕೆಲವು ದಿನಗಳಿಂದ ಇಸ್ರೇಲ್-ಇರಾನ್ ನಡುವೆ ಯುದ್ಧ ನಡೆಯುತ್ತಿದ್ದು ಇದರಿಂದ ಎರಡೂ ದೇಶಗಳಿಗೆ ಹಾನಿಯಾಗಿವೆ. ಇರಾನಿನಲ್ಲಿ ಸಾವಿರಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಈ ನಡುವೆ ಅಮೇರಿಕಾ ಕೂಡ ಯುದ್ಧಕ್ಕೆ ಧುಮುಕಿ ಇರಾನಿನ 3 ಪರಮಾಣು ಕೇಂದ್ರಗಳನ್ನು ಗುರಿಯಾಗಿಸಿಕೊಂಡು ನಾಶಪಡಿಸಿತು.
Israel-Iran Conflict : A 12-day-long conflict between Iran and Israel ends in a dramatic ceasefire, but not without chaos, defiance, and high-level interventions.
Here’s what really happened 🧵(1/15) pic.twitter.com/DqbDnAsT6K
— Sanatan Prabhat (@SanatanPrabhat) June 24, 2025
ಕದನವಿರಾಮ ಉಲ್ಲಂಘಿಸಿದ ಇರಾನ್-ಇಸ್ರೇಲ್ ಮೇಲೆ ಟ್ರಂಪ್ ಕೆಂಡಾಮಂಡಲಟ್ರಂಪ್ ಕದನ ವಿರಾಮ ಘೋಷಿಸಿದ ನಂತರ ಇರಾನ್-ಇಸ್ರೇಲ್ ನಿಂದ ದಾಳಿಗಳು ನಡೆದಾಗ ಟ್ರಂಪ್ ಕೋಪ ವ್ಯಕ್ತಪಡಿಸಿದರು. ಅವರು, “ಇರಾನ್ ಕದನ ವಿರಾಮವನ್ನು ಉಲ್ಲಂಘಿಸಿದೆ; ಆದರೆ ಇಸ್ರೇಲ್ ಕೂಡ ಹಾಗೆಯೇ ಮಾಡಿದೆ. ನನಗೆ ಇಸ್ರೇಲ್ ಮೇಲೆ ಸಂತೋಷವಿಲ್ಲ” ಎಂದರು. ಟ್ರಂಪ್ ಅವರ ಕೋಪದ ನಂತರವೂ ಇಸ್ರೇಲ್ ಇರಾನ್ ಮೇಲೆ ಆಕ್ರಮಣ ಮಾಡಿದಾಗ, ಟ್ರಂಪ್ ಮತ್ತೆ ಪೋಸ್ಟ್ ಮಾಡಿ, “ಇಸ್ರೇಲ್ ಇರಾನ್ ಮೇಲೆ ಆಕ್ರಮಣ ಮಾಡುವುದಿಲ್ಲ. ಎಲ್ಲಾ ವಿಮಾನಗಳು ಮನೆಗೆ ಹಿಂತಿರುಗುತ್ತವೆ ಮತ್ತು ಇರಾನ್‌ನೊಂದಿಗೆ ಸ್ನೇಹ ಸಂಬಂಧಗಳನ್ನು ಸ್ಥಾಪಿಸುತ್ತವೆ. ಯಾರಿಗೂ ಹಾನಿಯಾಗುವುದಿಲ್ಲ, ಕದನ ವಿರಾಮ ಜಾರಿಯಲ್ಲಿದೆ!”, ಎಂದು ಹೇಳಿದರು. ಇದಾದ ಸ್ವಲ್ಪ ಸಮಯದ ನಂತರ, ಟ್ರಂಪ್ ಇನ್ನೊಂದು ಪೋಸ್ಟ್‌ನಲ್ಲಿ, ಇರಾನ್ ತನ್ನ ಪರಮಾಣು ಸೌಲಭ್ಯಗಳನ್ನು ಮತ್ತೆ ಎಂದಿಗೂ ಸಿದ್ಧಪಡಿಸುವುದಿಲ್ಲ!, ಎಂದು ಬರೆದರು. |
ಇರಾನಿನ ಸರಕಾರಿ ಚಾನೆಲ್ ‘ಐ.ಆರ್.ಐ.ಎನ್.’ ಕದನವಿರಾಮ ಜಾರಿಯಾಗಿದೆ ಎಂದು ಘೋಷಿಸಿದೆ. ಜೂನ್ 23 ರಂದು ಕತಾರ್ ನಲ್ಲಿರುವ ಅಮೇರಿಕಾದ ಸೇನಾ ನೆಲೆಯ ಮೇಲೆ ಇರಾನ್ ದಾಳಿ ನಡೆಸಿದ ನಂತರ, ಈ ಕದನವಿರಾಮವನ್ನು ಇಸ್ರೇಲ್ ಒಪ್ಪಿಕೊಳ್ಳಬೇಕಾಯಿತು ಎಂದು ಇರಾನಿನ ಸರಕಾರಿ ಸುದ್ದಿವಾಹಿನಿ ಹೇಳಿಕೊಂಡಿದೆ.
(14/15)
🗣️ Iran clarified:
“The base was far from civilian areas. No threat to Qatari people. We are committed to historic friendship with Qatar.”— Sanatan Prabhat (@SanatanPrabhat) June 24, 2025
ಯುದ್ಧದಿಂದ ಏನು ಸಾಧಿಸಲಾಯಿತು?
ಇರಾನ್ ಬಳಿ ಪರಮಾಣು ಶಸ್ತ್ರಾಸ್ತ್ರಗಳಿದ್ದು, ಅದು ಅವುಗಳನ್ನು ಇಸ್ರೇಲ್ ಮೇಲೆ ಉಡಾಯಿಸಬಹುದು. 12 ದಿನಗಳಲ್ಲಿ ಇಸ್ರೇಲ್ ಗೆ ಇರಾನಿನ ಪರಮಾಣು ಕೇಂದ್ರಗಳನ್ನು ಶಸ್ತ್ರಾಸ್ತ್ರ ಸಾಮರ್ಥ್ಯದ ಕೊರತೆಯಿಂದ ನಾಶಪಡಿಸಲು ಸಾಧ್ಯವಾಗಲಿಲ್ಲ. ಅದಕ್ಕಾಗಿ ಅಮೇರಿಕಾದ ಸಹಾಯವನ್ನು ಪಡೆಯಬೇಕಾಯಿತು ಮತ್ತು ಅಮೇರಿಕಾ ಇರಾನಿನ 3 ಪರಮಾಣು ಕೇಂದ್ರಗಳನ್ನು ನಾಶಪಡಿಸಿತು; ಆದರೆ ವಾಸ್ತವವಾಗಿ ಅವು ನಾಶವಾಗಿ ಭವಿಷ್ಯದಲ್ಲಿ ಇರಾನ್ ಅಣುಬಾಂಬ್ ತಯಾರಿಸಲು ಸಾಧ್ಯವಿಲ್ಲ ಎನ್ನುವುದು ಸ್ಪಷ್ಟವಾಗಿಲ್ಲ. ದಾಳಿಗೂ ಮುನ್ನವೇ 400 ಕಿಲೋ ಯುರೇನಿಯಂ (ಅಣುಬಾಂಬ್ ತಯಾರಿಕೆಗೆ ಅಗತ್ಯವಾದ ರಸಾಯನಿಕ) ಪರಮಾಣು ಕೇಂದ್ರದಿಂದ ಅಜ್ಞಾತ ಸ್ಥಳಕ್ಕೆ ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ ಎಂದು ಹೇಳಲಾಗುತ್ತಿದೆ. ಇದರಿಂದ ‘ಈ ಯುದ್ಧದಿಂದ ಇಸ್ರೇಲ್ ಮತ್ತು ಅಮೇರಿಕಾ ಏನು ಸಾಧಿಸಿವೆ?’ ಎಂಬ ಪ್ರಶ್ನೆ ಉದ್ಭವಿಸುತ್ತದೆ. |
…ಆದರೆ ಈ ಯುದ್ಧವು ಇಡೀ ಮಧ್ಯಪ್ರಾಚ್ಯವನ್ನು ನಾಶಪಡಿಸಬಹುದಿತ್ತು! – ಟ್ರಂಪ್

ಕದನವಿರಾಮವನ್ನು ಘೋಷಿಸುವಾಗ ಡೊನಾಲ್ಡ್ ಟ್ರಂಪ್ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿ, “ಎಲ್ಲರಿಗೂ ಅಭಿನಂದನೆಗಳು! ಇಸ್ರೇಲ್ ಮತ್ತು ಇರಾನ್ 12 ಗಂಟೆಗಳ ಕಾಲ ಸಂಪೂರ್ಣ ಕದನವಿರಾಮಕ್ಕೆ ಒಪ್ಪಿಕೊಂಡಿವೆ ಮತ್ತು ಈ ಸಮಯದಲ್ಲಿ ಎರಡೂ ದೇಶಗಳು ತಮ್ಮ ಅಂತಿಮ ಕಾರ್ಯಾಚರಣೆಗಳನ್ನು ಪೂರ್ಣಗೊಳಿಸುತ್ತವೆ. ಅದರ ನಂತರ ಈ ಯುದ್ಧವು ಅಧಿಕೃತವಾಗಿ ಕೊನೆಗೊಂಡಿದೆ ಎಂದು ಪರಿಗಣಿಸಲಾಗುತ್ತದೆ. 24ನೇ ಗಂಟೆಯಲ್ಲಿ, 12 ದಿನಗಳ ಯುದ್ಧದ ಅಂತ್ಯವನ್ನು ನಾವು ಕಾಣುತ್ತೇವೆ. ಕದನವಿರಾಮದ ಪ್ರತಿಯೊಂದು ಹಂತದಲ್ಲಿಯೂ ಎರಡೂ ದೇಶಗಳು ಶಾಂತವಾಗಿರುತ್ತವೆ. ಎಲ್ಲವೂ ಯೋಜನೆಯಂತೆ ನಡೆದರೆ (ಮತ್ತು ಹಾಗೆ ಆಗುತ್ತದೆ ಎಂದು ನನಗೆ ಖಚಿತವಾಗಿದೆ), ನಾನು ಇಸ್ರೇಲ್ ಮತ್ತು ಇರಾನ್ ಎರಡೂ ದೇಶಗಳನ್ನು ಹೃತ್ಪೂರ್ವಕವಾಗಿ ಅಭಿನಂದಿಸುತ್ತೇನೆ. ಅವರು ಸಂಯಮ, ಧೈರ್ಯ ಮತ್ತು ದೂರದೃಷ್ಟಿಯನ್ನು ಪ್ರದರ್ಶಿಸಿ ’12 ದಿನಗಳ ಯುದ್ಧ’ವನ್ನು ಕೊನೆಗೊಳಿಸಿದ್ದಾರೆ. ಇದು ವರ್ಷಗಳ ಕಾಲ ನಡೆಯಬಹುದಾದ ಮತ್ತು ಇಡೀ ಮಧ್ಯಪ್ರಾಚ್ಯವನ್ನು ನಾಶಪಡಿಸಬಹುದಾದ ಯುದ್ಧವಾಗಿತ್ತು; ಆದರೆ ಹಾಗೆ ಆಗಲಿಲ್ಲ ಮತ್ತು ಎಂದಿಗೂ ಆಗುವುದಿಲ್ಲ!” ಎಂದರು.
ಇರಾನ್ ವಿರುದ್ಧ ಪ್ರಾರಂಭಿಸಿದ ಯುದ್ಧದ ಎಲ್ಲಾ ಉದ್ದೇಶಗಳು ಪೂರ್ಣಗೊಂಡಿವೆ! – ನೆತನ್ಯಾಹು
ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು, “ಇಸ್ರೇಲ್ ಕದನವಿರಾಮ ಪ್ರಸ್ತಾವವನ್ನು ಸ್ವೀಕರಿಸಿದೆ ಮತ್ತು ಇರಾನ್ ವಿರುದ್ಧ ಪ್ರಾರಂಭಿಸಿದ ಯುದ್ಧದ ಎಲ್ಲಾ ಉದ್ದೇಶಗಳು ಪೂರ್ಣಗೊಂಡಿವೆ” ಎಂದು ಹೇಳಿದರು.

ಕತಾರ್ ಮೇಲೆ ದಾಳಿ ಮಾಡಿದ ಇರಾನ್
ಅಮೇರಿಕಾ ಇರಾನಿನ ಪರಮಾಣು ಕೇಂದ್ರಗಳ ಮೇಲೆ ದಾಳಿ ಮಾಡಿದ ಪ್ರತ್ಯುತ್ತರವಾಗಿ, ಇರಾನ್ ಜೂನ್ 23 ರ ರಾತ್ರಿ ಕತಾರ್ ಮತ್ತು ಇರಾಕ್ ನಲ್ಲಿರುವ ಅಮೇರಿಕಾದ ವಾಯುಪಡೆಯ ನೆಲೆಗಳ ಮೇಲೆ ಕ್ಷಿಪಣಿಗಳ ಮೂಲಕ ದಾಳಿ ನಡೆಸಿತು. ಇರಾನ್ ಒಟ್ಟು 19 ಕ್ಷಿಪಣಿಗಳನ್ನು ಉಡಾಯಿಸಿತು; ಆದರೆ ಅವುಗಳಲ್ಲಿ 18 ಗಾಳಿಯಲ್ಲಿಯೇ ನಾಶವಾದವು.
ಈ ದಾಳಿಯನ್ನು ಸೌದಿ ಅರೇಬಿಯಾ ಕಟುವಾದ ಶಬ್ದಗಳಿಂದ ಖಂಡಿಸಿತು. ಸೌದಿ ಅರೇಬಿಯಾ, “ಇರಾನಿನ ಈ ದಾಳಿಯು ಅಂತರರಾಷ್ಟ್ರೀಯ ಕಾನೂನು ಮತ್ತು ನೆರೆಯ ದೇಶಗಳೊಂದಿಗಿನ ಸಂಬಂಧಗಳ ಉಲ್ಲಂಘನೆಯಾಗಿದೆ. ಇದು ಬೇಜವಾಬ್ದಾರಿ ಹೆಜ್ಜೆಯಾಗಿದ್ದು, ಯಾವುದೇ ಪರಿಸ್ಥಿತಿಯಲ್ಲಿ ಇದನ್ನು ಸಮರ್ಥಿಸಲು ಸಾಧ್ಯವಿಲ್ಲ” ಎಂದು ಟೀಕಿಸಿದೆ.
ಇರಾನಿನ ಸ್ಪಷ್ಟೀಕರಣ
ಇರಾನಿನ ‘ಸುಪ್ರೀಂ ನ್ಯಾಷನಲ್ ಸೆಕ್ಯುರಿಟಿ ಕೌನ್ಸಿಲ್’ ಕತಾರ್ ನಲ್ಲಿರುವ ಅಮೇರಿಕಾದ ‘ಅಲ್-ಉದಿದ್’ ವಾಯುಪಡೆಯ ನೆಲೆಯ ಮೇಲಿನ ದಾಳಿಯ ಬಗ್ಗೆ ಸ್ಪಷ್ಟೀಕರಣ ನೀಡುತ್ತಾ, “ಈ ವಾಯುಪಡೆ ನೆಲೆ ಕತಾರ್ ನ ನಾಗರಿಕ ವಸತಿ ಪ್ರದೇಶದಿಂದ ದೂರದಲ್ಲಿದೆ. ಈ ಕ್ರಮವು ನಮ್ಮ ಮಿತ್ರ ಮತ್ತು ಸಹೋದರ ಕತಾರ್ ಮತ್ತು ಅಲ್ಲಿನ ಜನರಿಗೆ ಯಾವುದೇ ಅಪಾಯವನ್ನುಂಟು ಮಾಡುವುದಿಲ್ಲ. ಇರಾನ್ ಕತಾರ್ ನೊಂದಿಗೆ ಐತಿಹಾಸಿಕ ಸಂಬಂಧಗಳನ್ನು ಕಾಪಾಡಿಕೊಳ್ಳಲು ಬದ್ಧವಾಗಿದೆ” ಎಂದು ವಿವರಿಸಿದೆ.

ಖಮೇನಿ ಅವರನ್ನು ಕೊಲ್ಲಲು ಕದನವಿರಾಮವೇ?
ಇರಾನ್ ಮತ್ತು ಇಸ್ರೇಲ್ ನಡುವೆ ಕದನವಿರಾಮ ಘೋಷಿಸಿದ ನಂತರವೂ ಇರಾನಿನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಬಂಕರ್ ನಿಂದ ಹೊರಬಂದಿಲ್ಲ. ಕದನವಿರಾಮದ ಹೆಸರಿನಲ್ಲಿ ಇಸ್ರೇಲ್ ನನ್ನನ್ನು ಕೊಲ್ಲಬಹುದು ಎಂದು ಖಮೇನಿಗೆ ಇನ್ನೂ ಭಯ ಇದೆ. ಖಮೇನಿ ತಮ್ಮ ಕುಟುಂಬದೊಂದಿಗೆ ಬಂಕರ್ ನಲ್ಲಿ ಅಡಗಿಕೊಂಡಿದ್ದಾರೆ. ಎರಡೂ ದೇಶಗಳು ಕದನವಿರಾಮಕ್ಕೆ ಒಪ್ಪಿಕೊಂಡಾಗಿನಿಂದ ಖಮೇನಿ ಅವರ ಯಾವುದೇ ಹೇಳಿಕೆ ಹೊರಬಂದಿಲ್ಲ. ಅವರನ್ನು ಕೊಲ್ಲುವ ಇಸ್ರೇಲ್ ಬೆದರಿಕೆಯನ್ನು ಖಮೇನಿ ಗಂಭೀರವಾಗಿ ಪರಿಗಣಿಸುತ್ತಿದ್ದಾರೆ. ಅವರಿಗೆ ಡೊನಾಲ್ಡ್ ಟ್ರಂಪ್ ಮೇಲೆ ಯಾವುದೇ ವಿಶ್ವಾಸವಿಲ್ಲ. ಆದ್ದರಿಂದಲೇ ಖಮೇನಿ ಹೊರಬರುವ ಅಪಾಯವನ್ನು ತೆಗೆದುಕೊಳ್ಳುತ್ತಿಲ್ಲ ಎಂದು ಹೇಳಲಾಗುತ್ತಿದೆ.
ಸಂಪಾದಕೀಯ ನಿಲುವುಟ್ರಂಪ್ ಕದನವಿರಾಮ ಘೋಷಿಸಿದ ನಂತರ ಈ ಯುದ್ಧ ಎಷ್ಟು ದಿನ ನಿಲ್ಲುತ್ತದೆ ಎಂದು ಯಾರೂ ಖಚಿತವಾಗಿ ಹೇಳಲು ಸಾಧ್ಯವಿಲ್ಲ. ಟ್ರಂಪ್ ಭಾರತ-ಪಾಕ್ ನಡುವಿನ ಯುದ್ಧದ ಬಗ್ಗೆ ಇದೇ ರೀತಿಯ ಘೋಷಣೆ ಮಾಡಿದ್ದರು. ಪಾಕ್ ಭಾರತದ ಮೇಲೆ ಮತ್ತೆ ದಾಳಿ ನಡೆದರೆ ಯುದ್ಧ ಪ್ರಾರಂಭವಾಗಬಹುದು ಎಂಬ ಸ್ಥಿತಿ ಇದೆ! |

ಭಾರತದ ಮೇಲೆ ಒತ್ತಡ ಹೇರುವುದು ಜಾಗತಿಕ ಸ್ಥಿರತೆಗೆ ಅತ್ಯಂತ ಅಪಾಯಕಾರಿ!
ನಮ್ಮ ಸೈನಿಕರ ಮೈ ಮುಟ್ಟಿದರೂ ಯುದ್ಧ ಭುಗಿಲೇಳುವುದು!
‘ಒಂದು ಬಲಿಷ್ಠ ಪಾಕಿಸ್ತಾನ ಅಮೆರಿಕದ ಹಿತಾಸಕ್ತಿಗೆ ಅತ್ಯಂತ ಅಗತ್ಯ!'(ವಂತೆ) – ಅಮೆರಿಕ
ಪ್ರಧಾನಿ ಮೋದಿ ನನಗೆ ತುಂಬಾ ಇಷ್ಟ, ಅವರು ನನ್ನ ಒಳ್ಳೆಯ ಸ್ನೇಹಿತ ! : Donald Trump
ಭಾರತವು ಬಲವಂತವಾಗಿ ನುಸುಳುಕೋರರನ್ನು ಬಾಂಗ್ಲಾದೇಶಕ್ಕೆ ತಳ್ಳುತ್ತಿದೆ ! – ಬಾಂಗ್ಲಾದೇಶದ ಆರೋಪ : Bangladesh Allegation
ಅಮೆರಿಕದ ಸಂಸತ್ತಿನಲ್ಲಿ ಇರಾನ್ ವಿರುದ್ಧದ ಯುದ್ಧ ನಿಲ್ಲಿಸುವ ಪ್ರಸ್ತಾವನೆ ಅಂಗೀಕಾರ