
ಅ. ಶ್ರೀ ಅನಂತಾನಂದ ಸಾಯೀಶ ಇವರು ದಿನಕರನಿಗೆ ಒಂದು ವಸ್ತುವನ್ನು ತರಲು ಒಂದು ರೂಪಾಯಿಯನ್ನು ಕೊಟ್ಟು ಐದು ರೂಪಾಯಿಗಳ ಲೆಕ್ಕ ಕೇಳುವುದು : ದಿನೂನಿಗೆ ಶ್ರೀ ಭಕ್ತರಾಜ ಮಹಾರಾಜರಾಗುವ ಮೊದಲು ಭಜನೆಯನ್ನು ಬರೆಯುವ ಜ್ಞಾನವು ಸ್ವಲ್ಪವೂ ಇರಲಿಲ್ಲ. ಅವರಿಗೆ ಆ ಜ್ಞಾನ ಮತ್ತು ಪ್ರೇರಣೆಯು ಅವರ ಗುರುಗಳಿಂದ (ಶ್ರೀ ಅನಂತಾನಂದ ಸಾಯೀಶ ಇವರಿಂದ) ದೊರಕಿತು. ಆ ಪ್ರೇರಣೆ ಉಂಟಾಗಲು ಕೆಲವೊಮ್ಮೆ ಸದ್ಗುರುಗಳು ವಾತಾವರಣವನ್ನು ಸಿದ್ಧಪಡಿಸುತ್ತಿದ್ದರು.

ಶ್ರೀ ಭಕ್ತರಾಜ ಅಂದರೆ ಸದ್ಗುರುಗಳ ದಿನೂ ! ಒಮ್ಮೆ ಶ್ರೀ ಗುರುಗಳು ದಿನುವಿಗೆ ಒಂದು ರೂಪಾಯಿ ಕೊಟ್ಟು ಪೇಟೆಯಿಂದ ಕೆಲವು ವಸ್ತುಗಳನ್ನು ತರಲು ಹೇಳಿದರು. ದಿನು ವಸ್ತುಗಳನ್ನು ತಂದು ಉಳಿದ ಹಣವನ್ನು ಸದ್ಗುರುಗಳ ಎದುರಿಗೆ ಇಟ್ಟನು. ಆಗ ಕೋಪದಿಂದ ಕೆಂಪಾಗಿ ಸದ್ಗುರುಗಳು, ”ಹಣ ಹೇಗೆ ಕಡಿಮೆ ಇದೆ ? ನಾನು ನಿನಗೆ ಐದು ರೂಪಾಯಿ ಕೊಟ್ಟಿದ್ದೆನು, ಉಳಿದ ಹಣದ ಲೆಕ್ಕಾಚಾರ ಎಲ್ಲಿದೆ ?’’ ಎಂದು ಕೇಳಿದರು.

ಆ. ಶ್ರೀ ಅನಂತಾನಂದ ಸಾಯೀಶ ಇವರ ಮೇಲಿನ ಶ್ರದ್ಧೆಯಿಂದ ದಿನೂಗೆ ‘ಅವರು ಸರಿಯಾಗಿಯೇ ಹೇಳುತ್ತಿದ್ದಾರೆ’ ಎಂದೆನಿಸದರೂ; ಅವರ ಮಾತಿನ ಅರ್ಥವು ತಿಳಿಯದೇ ಮನಸ್ಸಿನಲ್ಲಿಯೇ ಭಯವಾಗುವುದು : ಆಗ್ಲ ಅಲ್ಲಿದ್ದವರು, ”ಒಂದೇ ರೂಪಾಯಿಯನ್ನು ಕೊಟ್ಟಿದ್ದೀರಿ.’’ ಎಂದು ಹೇಳಿದರು. ಆಗ ಸದ್ಗುರುಗಳು, ”ಇವನ ಬಗ್ಗೆ ನಿಮಗೆ ಗೊತ್ತಿಲ್ಲ |’’ ಎಂದರು. ದಿನೂವಿಗೆ, ‘ಸದ್ಗುರುಗಳು ಹೇಳಿದ್ದು ನಿಜವಾಗಿದೆ’ ಎಂದು ಸಂಪೂರ್ಣ ವಿಶ್ವಾಸವಿತ್ತು; ಆದರೆ ಅದು ತಿಳಿಯದಿರುವುದರಿಂದ ಅವನಿಗೆ ಒಳಗಿನಿಂದ ಭಯವಾಗುತ್ತಿತ್ತು. ಅವನ ಮನಸ್ಸಿನಲ್ಲಿ, ‘ಸದ್ಗುರುಗಳಿಗೆ ೫ ರೂಪಾಯಿಗಳ ಲೆಕ್ಕವನ್ನು ಹೇಗೆ ಕೊಡಬೇಕು ?’ ಎಂದು ಸತತವಾಗಿ ವಿಚಾರ ಬರುತ್ತಿತ್ತು. ಮರುದಿನ ಶ್ರೀ. ದತ್ತಾ ದೇಶಪಾಂಡೆಯವರು ದಿನೂವಿನ ಜೊತೆ (ಶ್ರೀ ಭಕ್ತರಾಜ ಮಹಾರಾಜರಿಗೆ) ರಾಮ ಪಾರ್ಕಿನ ಹತ್ತಿರ ಏಕಾಂತದಲ್ಲಿ ಕುಳಿತಾಗ ಅವನಿಗೆ ಭಜನೆ ಬರೆಯುವ ಸ್ಫೂರ್ತಿಯಾಗಿ ಅವನು ಮರಾಠಿ ಭಜನೆಯನ್ನು ಬರೆದನು. ”ದಯೆಚ್ಯಾ ಸಾಗರ ನಾಥಾ | ಬುದ್ಧಿಚ್ಯಾ ದಾತಾ ಶಾಂತಿ ದ್ಯಾ ಹೃದಯಾ ||’’ (ಅರ್ಥ : ಕರುಣೆಯ ಸಾಗರ, ನಾಥಾ | ಬುದ್ಧಿಯ ದಾತ, ನನ್ನ ಹೃದಯಕ್ಕೆ ಶಾಂತಿ ನೀಡಿ.) ಇದರಲ್ಲಿ ಒಂದು ಸಾಲು ಹೀಗಿತ್ತು, ಪಂಚತತ್ತ್ವದ ದೇಹವನ್ನು ಅರ್ಪಿಸಿದೆ | ಅಹಂಕಾರದ ಗಾಳಿ ತುಂಬಿದೆ | ನೀವೇ ತಂದೆ-ತಾಯಿ ನಾಥನೇ | ನಮಿಸುವೆ ಶಿರದಿಂದ ಶಾಂತಿ ನೀಡಿ ಹೃದಯಕ್ಕೆ || – (ಭಜನೆ ಕ್ರಮಾಂಕ ೪೬, ದಯೆಚ್ಯಾ ಸಾಗರ ನಾಥಾ)
ಇ. ಸದ್ಗುರುಗಳ ಗಮನವು ದಿನುನನ್ನು ತತ್ತ್ವದೊಂದಿಗೆ ಏಕರೂಪ ಮಾಡುವುದರೆಡೆಗೆ ಇರುವುದು : ‘ಪಂಚತತ್ತ್ವದ ದೇಹವನ್ನು ಗುರು ಚರಣಕ್ಕೆ ಅರ್ಪಿಸಿದೆ’, ಎಂಬ ಅಹಂಕಾರವಿದ್ದುದರಿಂದ ಶ್ರೀ ಗುರುಗಳು ಈ ಪ್ರಸಂಗದಿಂದ ಈ ಭಜನೆಯನ್ನು ಬರೆಯುವ ಸ್ಫೂರ್ತಿ ಕೊಟ್ಟಿರಬಹುದು. ಈ ಭಜನೆಯನ್ನು ಸದ್ಗುರುಗಳೆದುರು ಹೇಳಿದಾಗ ಅವರು, ”ಹಿಸಾಬ ಮಿಲ್ ಗಯಾ |’’ (ಲೆಕ್ಕ ಸಿಕ್ಕಿತು) ಎಂದರು. ಈ ರೀತಿ ಸದ್ಗುರುಗಳ ದೃಷ್ಟಿಯು ದಿನೂವನ್ನು ತತ್ತ್ವದೊಂದಿಗೆ ಏಕರೂಪ ಮಾಡುವುದರ ಕಡೆಗೆ ಇರುತ್ತಿತ್ತು.
– ಶ್ರೀ. ವಸಂತ ಧಾಡಕರ
ಈರೋಡ್ (ತಮಿಳುನಾಡು) ನಲ್ಲಿರುವ ಕಸ್ತೂರಿ ರಂಗನಾಥ ದೇವಾಲಯದಲ್ಲಿ ಭಕ್ತಿಪೂರ್ವಕವಾಗಿ ನೆರವೇರಿದ ‘ಮಹಾಸುದರ್ಶನ ಯಾಗ’!
ದೈವಿ ಯುವ ಸಾಧಕಿಯರ ಪ್ರಬುದ್ಧ ವಿಚಾರಗಳಿಗೆ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ನೀಡಿದ ಅಮೂಲ್ಯ ಮಾರ್ಗದರ್ಶನ !
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ’ದ ಮಾಧ್ಯಮದಿಂದ ಕಲಾವಿದರಿಗೆ ಕಲೆಯ ಕಡೆಗೆ ಸಾಧನೆ ಎಂದು ನೋಡಲು ನೀಡಿದ ಮಾರ್ಗದರ್ಶನ !
ಸಾಧಕರಲ್ಲಿ ಆಂತರಿಕ ಬದಲಾವಣೆಯನ್ನು ತರುವ ಪೂ. ರಮಾನಂದ ಗೌಡ !
‘ತಮ್ಮ ಶಾರೀರಿಕ ಸ್ಥಿತಿಯನ್ನು ಪೂರ್ಣ ಸ್ವೀಕರಿಸುವುದು’, ಭಗವತ್ಪ್ರಾಪ್ತಿಯ ಮೊದಲ ಮೆಟ್ಟಿಲಾಗಿದೆ !
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಹೆಚ್ಚಿದ ನಿದ್ರೆ, ಅಂದರೆ ದೇವರು ಅವರ ನಿರ್ವಿಚಾರ ಸ್ಥಿತಿಯನ್ನು ಹೆಚ್ಚಿಸಲು ಮಾಡಿದ ಉಪಾಯಯೋಜನೆಯಾಗಿದೆ !