ಪ.ಬಂಗಾಳ: ಭಾಜಪದ ಮುಸ್ಲಿಂ ನಾಯಕನ ನೇಣು ಬಿಗಿದ ಶವ ಪತ್ತೆ

ಕೋಲ್ಕತ್ತಾ (ಪ.ಬಂಗಾಳ) – ಪಶ್ಚಿಮ ಬಂಗಾಳದ ಹೂಗ್ಲಿ ಜಿಲ್ಲೆಯ ಗೋಗಾಟ್‌ನ ಸಾನಬಂದಿ ಪ್ರದೇಶದಲ್ಲಿ ವಾಸಿಸುವ ಬಿಜೆಪಿ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಶೇಖ್ ಬಾಕಿಬುಲ್ಲಾ ಅವರ ಮನೆಯ ಅಂಗಳದಲ್ಲಿ ಅವರ ಮೃತದೇಹವು ಕೈಗಳನ್ನು ಕಟ್ಟಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಘಟನೆಯ ಮಾಹಿತಿ ತಿಳಿದ ಕೂಡಲೇ ಪೊಲೀಸರು ಸ್ಥಳಕ್ಕೆ ತಲುಪಿ ಶವವನ್ನು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಶೇಖ್ ಅವರ ಕುಟುಂಬವು ಇದು ಕೊಲೆ ಎಂದು ಹೇಳಿದೆ. ಬಿಜೆಪಿ ಕೂಡ ಈ ಕೊಲೆಯ ಬಗ್ಗೆ ಸೂಕ್ತ ತನಿಖೆ ನಡೆಸುವಂತೆ ಆಗ್ರಹಿಸಿದೆ.

ಸಂಪಾದಕೀಯ ನಿಲುವು

ಕಳೆದ ಕೆಲವು ವರ್ಷಗಳಿಂದ ಪಶ್ಚಿಮ ಬಂಗಾಳದಲ್ಲಿ ಇದೇ ರೀತಿ ಹಲವು ಬಿಜೆಪಿ ನಾಯಕರು, ಪದಾಧಿಕಾರಿಗಳು ಮತ್ತು ಕಾರ್ಯಕರ್ತರ ಶವಗಳು ಪತ್ತೆಯಾಗಿವೆ. ಆದರೆ, ಈ ಪೈಕಿ ಒಂದೇ ಒಂದು ಪ್ರಕರಣದ ತನಿಖೆ ನಡೆಸಿ, ಅಪರಾಧಿಗಳನ್ನು ಬಂಧಿಸಿ ಶಿಕ್ಷೆ ಆಗಿರುವುದು ಕೇಳಿಬಂದಿಲ್ಲ. ಇದನ್ನು ಗಮನಿಸುತ್ತಿದ್ದರೆ ತೃಣಮೂಲ ಸರಕಾರವನ್ನು ವಿಸರ್ಜಿಸುವುದು ಆವಶ್ಯಕವಾಗಿದೆ!