(ಪೆಂಟಗನ್’ ಎಂದರೆ ಅಮೇರಿಕೆಯ ರಕ್ಷಣಾ ಇಲಾಖೆಯ ಮುಖ್ಯ ಕಚೇರಿ)
ನವದೆಹಲಿ – ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗಿರುವ ಸಮಸ್ಯೆ ಏನೆಂದರೆ, ಅವರಿಗೆ ಇತಿಹಾಸದ ಸಂಪೂರ್ಣ ಮಾಹಿತಿ ಇಲ್ಲ. ಅವರು ನೈತಿಕ ಸಮಾನತೆಯ ಕಡೆಗೆ ಒಲವು ತೋರುತ್ತಾರೆ ಮತ್ತು ಇತರ ದೇಶಗಳ ರಾಷ್ಟ್ರೀಯ ಸುರಕ್ಷತೆಯನ್ನು ತಮ್ಮ ನೋಬೆಲ್ ಶಾಂತಿ ಪ್ರಶಸ್ತಿಯನ್ನು ಗೆಲ್ಲುವ ಆಸೆಗಿಂತ ಕನಿಷ್ಠವಾದದ್ದು ಎಂದು ಪರಿಗಣಿಸುತ್ತಾರೆ, ಮತ್ತು ರಾಷ್ಟ್ರೀಯ ಸುರಕ್ಷತೆಯನ್ನು ಅಪಾಯಕ್ಕೆ ಸಿಲುಕಿಸುತ್ತಾರೆ ಎಂದು ಅಮೇರಿಕಾದ ‘ಪೆಂಟಗನ್’ನ ಮಾಜಿ ಅಧಿಕಾರಿ ಮೈಕಲ್ ರೂಬಿನ್ ಟೀಕಿಸಿದ್ದಾರೆ. ಅವರು ಎ.ಎನ್.ಐ. (ಏಷ್ಯನ್ ನ್ಯೂಸ್ ಇಂಟರ್ನ್ಯಾಷನಲ್) ಸುದ್ದಿ ಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಮಾತನಾಡುತ್ತಿದ್ದರು.
ಮೈಕಲ್ ರೂಬಿನ್ ಮಂಡಿಸಿದ ಅಂಶಗಳು:
1. …ಹಾಗಾದರೆ ಅನೇಕ ದೇಶಗಳಲ್ಲಿ ಸಂಘರ್ಷ ಉಲ್ಬಣಗೊಳ್ಳಲಿದೆ!
ಒಂದು ವೇಳೆ ಡೊನಾಲ್ಡ್ ಟ್ರಂಪ್ ಅವರು ನೈತಿಕ ಸಮಾನತೆಯನ್ನು ಬದಿಗಿಟ್ಟು, ಯಾರು ಸರಿ ಮತ್ತು ಯಾರು ತಪ್ಪು ಎಂಬುದನ್ನು ಸ್ಪಷ್ಟವಾಗಿ ಗುರುತಿಸದಿದ್ದರೆ, ಆ ಪ್ರದೇಶದಲ್ಲಿನ ಸಂಘರ್ಷ, ಅದು ಪಾಕಿಸ್ತಾನ ಮತ್ತು ಭಾರತದ ನಡುವೆ ಆಗಿರಲಿ ಅಥವಾ ಇಸ್ರೇಲ್ ಮತ್ತು ಇರಾನ್ ನಡುವಿನದಿರಲಿ, ಅದು ಇನ್ನಷ್ಟು ಕೆಟ್ಟದಾಗುತ್ತದೆ.
2. ಟ್ರಂಪ್ ಪಾಕಿಸ್ತಾನಕ್ಕೆ ಖಾಸಗಿಯಾಗಿ ಬೆದರಿಕೆ ಹಾಕುತ್ತಿದ್ದಾರೆಯೇ?
ಟ್ರಂಪ್ ಮತ್ತು ಪಾಕಿಸ್ತಾನದ ಫೀಲ್ಡ್ ಮಾರ್ಷಲ್ ಅಸೀಮ್ ಮುನೀರ್ ಅವರ ಭೇಟಿಯ ಬಗ್ಗೆ ರೂಬಿನ್ ಮಾತನಾಡಿ, ಟ್ರಂಪ್ ಕೇವಲ ರಾಜತಾಂತ್ರಿಕ ಶಿಷ್ಟಾಚಾರವನ್ನು ಬದಿಗಿಟ್ಟು ವಾಸ್ತವವನ್ನು ಮಂಡಿಸುತ್ತಿದ್ದಾರೆ ಎಂದರು. ಟ್ರಂಪ್ ಅಸೀಮ್ ಮುನೀರ್ ಅವರಿಗೆ, “ಅವರ ಕೃತ್ಯಗಳಿಂದ ಪಾಕಿಸ್ತಾನಕ್ಕೆ ಗುಪ್ತ ಪ್ರತಿಕ್ರಿಯೆಯ ಅಪಾಯವಿದ್ದು, ಅದನ್ನು ಅವರು ಸಹಿಸುವುದಿಲ್ಲ” ಎಂದು ಹೇಳಿದ್ದಾರೆಯೇ? ಟ್ರಂಪ್ ಪಾಕಿಸ್ತಾನಕ್ಕೆ ಖಾಸಗಿಯಾಗಿ ಬೆದರಿಕೆ ಹಾಕುತ್ತಿದ್ದಾರೆಯೇ, ಇದರಿಂದ ಅವರು ಸಾರ್ವಜನಿಕವಾಗಿ ತಮ್ಮ ಪ್ರತಿಷ್ಠೆಯನ್ನು ಉಳಿಸಿಕೊಳ್ಳಬಹುದು ಎಂದು ತಿಳಿದಿದ್ದಾರೆಯೇ?
3. ಪಾಕ್ ಭಯೋತ್ಪಾದನೆಗೆ ಬೆಂಬಲ ನೀಡುವುದನ್ನು ನಿಲ್ಲಿಸದಿದ್ದರೆ, ಅದಕ್ಕೆ ಬೆಲೆ ತೆರಬೇಕಾಗುತ್ತದೆ!
ಪಾಕಿಸ್ತಾನ ಈಗ ಸ್ವತಂತ್ರ ದೇಶವಾಗಿ ಉಳಿದಿಲ್ಲ, ಅದು ಚೀನಾದ ಕೈಗೊಂಬೆಯಾಗಿ ಕೆಲಸ ಮಾಡುತ್ತಿದೆ ಮತ್ತು ಪರ್ಷಿಯನ್ ಕೊಲ್ಲಿಯಿಂದ ತೈಲದ ಮುಕ್ತ ಹರಿವನ್ನು ಖಚಿತಪಡಿಸಿಕೊಳ್ಳುವುದು ಚೀನಾದ ಪ್ರಮುಖ ಉದ್ದೇಶವಾಗಿದೆ. ಪಾಕಿಸ್ತಾನ ಭಯೋತ್ಪಾದನೆಗೆ ಬೆಂಬಲ ನೀಡುವುದನ್ನು ನಿಲ್ಲಿಸಬೇಕು; ಏಕೆಂದರೆ ಅದರ ಈ ಕೃತ್ಯಗಳ ಬೆಲೆಯನ್ನು ತೆರಬೇಕಾಗುತ್ತದೆ.
4. ಭಾರತವು ಅಮೇರಿಕಾದ ಸಲಹೆಗಳನ್ನು ಕಡೆಗಣಿಸುವುದು ಅದರ ಹಿತಾಸಕ್ತಿಗೆ ಪೂರಕ!
ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಹಿಂದೆ ಮಾಡಿದಂತೆ, ಭಾರತವೂ ಕೆಲವೊಮ್ಮೆ ವಾಷಿಂಗ್ಟನ್ ನಿಂದ ಬರುವ ಸಲಹೆಗಳನ್ನು ಕಡೆಗಣಿಸಿ ತನ್ನ ರಾಷ್ಟ್ರೀಯ ಸುರಕ್ಷತಾ ಹಿತಾಸಕ್ತಿಗಳಿಗೆ ಆದ್ಯತೆ ನೀಡಬೇಕು.
5. ಮುನೀರ್ ಅಮೇರಿಕಾವನ್ನು ವಂಚಿಸಿದರೆ, ಅದು ಆತ್ಮಹತ್ಯೆ!
ಪಾಕಿಸ್ತಾನದ ನಿರರ್ಥಕ ವಿಷಯಗಳಿಗೆ ವಾಷಿಂಗ್ಟನ್ ನಲ್ಲಿ ಅಂತಹ ಉತ್ತಮ ಪ್ರತಿಸ್ಪಂದನೆಯೇನಿಲ್ಲ. ತಾವು ಅಮೇರಿಕಾವನ್ನು ವಂಚಿಸಬಹುದು ಎಂದು ಪಾಕಿಸ್ತಾನ ಭಾವಿಸಿದರೆ, ಅಸೀಮ್ ಮುನೀರ್ ಅವರ ಅಂತ್ಯ ಇರಾನಿನ ಸೇನಾಪಡೆಯ ಮುಖ್ಯಸ್ಥರಂತೆಯೇ ಆಗುತ್ತದೆ.
6. ಪಾಕಿಸ್ತಾನ ಚೀನಾದ ಕೈಗೊಂಬೆ!
ಪರ್ಷಿಯನ್ ಕೊಲ್ಲಿ ಮತ್ತು ಹಾರ್ಮುಜ್ ಜಲಸಂಧಿಯಿಂದ ಹೊರಬರುವ ತೈಲದಲ್ಲಿ ಸುಮಾರು ಶೇ.44% ರಷ್ಟು ತೈಲವು ಚೀನಾ ಮತ್ತು ಏಷ್ಯಾ ಖಂಡಕ್ಕೆ ಹೋಗುತ್ತದೆ. ಸಂಘರ್ಷದಿಂದ ತೈಲ ಪೂರೈಕೆಯಲ್ಲಿ ಅಡಚಣೆ ಮುಂದುವರಿದರೆ, ಅದರಿಂದ ಅಮೇರಿಕಾ ಅಥವಾ ಇರಾನ್ ಗಿಂತ ಹೆಚ್ಚಾಗಿ ಚೀನಾಕ್ಕೆ ದೊಡ್ಡ ಹಾನಿಯಾಗುತ್ತದೆ. ಪಾಕಿಸ್ತಾನ ಚೀನಾದ ಕೈಗೊಂಬೆಯಾಗಿದೆ ಮತ್ತು ಟ್ರಂಪ್ ಕೇವಲ ಮುನೀರ್ ಅವರಿಗೆ ಸಂದೇಶವನ್ನು ನೀಡಿದ್ದಾರೆ ಅಷ್ಟೇ ಅಲ್ಲ, ಮುನೀರ್ ಕೂಡ ಚೀನಾದಿಂದ ಕೆಲವು ಸಂದೇಶಗಳನ್ನು ಟ್ರಂಪ್ ಗೆ ತಲುಪಿಸಿರಬಹುದು ಎಂಬ ಸಾಧ್ಯತೆಯನ್ನು ತಳ್ಳಿಹಾಕಲಾಗುವುದಿಲ್ಲ.