ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಆಧ್ಯಾತ್ಮಿಕ ಮಟ್ಟಕ್ಕನುಸಾರ ಅವರ ಆಯಾ ಸಮಯದಲ್ಲಿನ ಛಾಯಾಚಿತ್ರಗಳಿಂದ ಮಾಡಿದ ಅವರ ಸಾಧನೆಯಲ್ಲಿನ ಘಟಕಗಳ ಅಭ್ಯಾಸ !

26/35 ನೆಯ ಸಂಚಿಕೆಯಲ್ಲಿ ಪ್ರಕಟಿಸಿದ ಲೇಖನದಲ್ಲಿ ನಾವು ೧೯೮೩ ರಿಂದ ೧೯೯೫ ಈ ಅವಧಿಯಲ್ಲಿ ಮಾಡಿದ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆಯವರ ಸಾಧನೆಯ ಘಟಕಗಳ ಅಭ್ಯಾಸವನ್ನು ತಿಳಿದುಕೊಂಡೆವು. ಆಧ್ಯಾತ್ಮಿಕ ಮಟ್ಟಕ್ಕನುಸಾರ ಅವರ ಆಯಾ ಸಮಯದ ಛಾಯಾಚಿತ್ರಗಳಿಂದ ಅವರ ಸಾಧನೆಯ ಘಟಕಗಳ ಅಭ್ಯಾಸ ಮಾಡಲಾಗಿದೆ. ಈ ವಾರ ನೀಡಿದ ಲೇಖನದಲ್ಲಿ ೧೯೯೯ ರಿಂದ ೨೦೨೨ ಈ ಅವಧಿಯಲ್ಲಿ ಮಾಡಿದ ಅವರ ಸಾಧನೆಯ ಘಟಕಗಳ ಅಭ್ಯಾಸವನ್ನು ಮಂಡಿಸಿದ್ದು ೧೯೯೯, ೨೦೧೦ ಮತ್ತು ೨೦೨೨ ರಲ್ಲಿನ ಅವರ ಛಾಯಾಚಿತ್ರಗಳನ್ನು ಕೊಡಲಾಗಿದೆ. (ಚಿತ್ರಗಳನ್ನು ಸಾಲಿನಲ್ಲಿ ನೋಡಬಹುದು.)

೩ ಆ. ಶೇ. ೮೪ ಆಧ್ಯಾತ್ಮಿಕ ಮಟ್ಟ (೧೯೯೯) ರಿಂದ ‘ಸಚ್ಚಿದಾನಂದ ಪರಬ್ರಹ್ಮ’ (೨೦೨೨) ಈ ಬಿರುದಿನ ವರೆಗಿನ ಪ್ರವಾಸ

೩ ಆ ೧. ೧೯೯೯ ರಲ್ಲಿ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಆಧ್ಯಾತ್ಮಿಕ ಮಟ್ಟ ಶೇ. ೮೪ ಇರುವುದೆಂದರೆ, ಅವರು ‘ಸದ್ಗುರು’ ಪದವಿಯಲ್ಲಿ ವಿರಾಜಮಾನರಾಗಿರುವುದು : ‘ಸದ್ಗುರು’ ಈ ಪದವಿಯ ವೈಶಿಷ್ಟ್ಯವೆಂದರೆ ಆನಂದದ ಪ್ರಮಾಣ ಶೇ. ೪೦ ರಷ್ಟು ಆಗುವುದು ! ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಈ ಆಧ್ಯಾತ್ಮಿಕ ಮಟ್ಟಕ್ಕೆ ತಲುಪಿದಾಗ ಅವರಲ್ಲಿನ ಆನಂದದ ಪ್ರಮಾಣ ಶೇ. ೪೦ ರಷ್ಟಾಯಿತು ಹಾಗೂ ಅವರಲ್ಲಿನ ಸಾಧನೆಯ ತಳಮಳ, ತ್ಯಾಗ, ಪ್ರೀತಿ ಮತ್ತು ವ್ಯಾಪಕತೆಯ ಪ್ರಮಾಣವೂ ಶೇ. ೪೦ ರಷ್ಟಾಯಿತು. ಈ ಮಟ್ಟದಲ್ಲಿ ಅವರಲ್ಲಿನ ಮಾಯೆಯಲ್ಲಿನ ಪ್ರಭಾವ ಶೇ. ೦ ಆಯಿತು. ೧೯೯೫ ರಲ್ಲಿ ಶೇ. ೭೯ ರಷ್ಟು ಆಧ್ಯಾತ್ಮಿಕ ಮಟ್ಟದಲ್ಲಿದ್ದ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ೧೯೯೯ ರಲ್ಲಿ ಶೇ. ೮೪ ಆಧ್ಯಾತ್ಮಿಕ ಮಟ್ಟವನ್ನು ತಲಪುವ ಕಾರಣವೆಂದರೆ, ಅವರು ಆರಂಭಿಸಿದ ವ್ಯಾಪಕ ಅಧ್ಯಾತ್ಮಪ್ರಸಾರದ ಕಾರ್ಯ ! ಈ ಕಾರ್ಯದ ಬಗ್ಗೆ ಮುಂದೆ ವಿವರಿಸಲಾಗಿದೆ ಹಾಗೂ ಈ ಕಾರ್ಯವನ್ನು ನೆರವೇರಿಸಲು ಪ.ಪೂ. ಭಕ್ತರಾಜ ಮಹಾರಾಜರು ಅವರನ್ನು ಮೊದಲೆ ಹೇಗೆ ಸಿದ್ಧಪಡಿಸಿದ್ದಾರೆ, ಎಂಬುದನ್ನು ಇಲ್ಲಿ ವಿವರಿಸಲಾಗಿದೆ.

೩ ಆ ೧ ಅ. ಆರಂಭಿಸಿದ್ದ ವ್ಯಾಪಕ ಅಧ್ಯಾತ್ಮ ಪ್ರಸಾರದ ಕಾರ್ಯ

೧. ೨೩ ಮಾರ್ಚ್ ೧೯೯೯ ರಂದು ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ‘ಸನಾತನ ಸಂಸ್ಥೆ’ಯನ್ನು ಸ್ಥಾಪಿಸಿದರು.
೨. ೧೯೯೬ ರಿಂದ ೧೯೯೮ ಈ ಅವಧಿಯಲ್ಲಿ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಮಹಾರಾಷ್ಟ್ರ ಮತ್ತು ಗೋವಾ ರಾಜ್ಯಗಳಲ್ಲಿ ಅಲ್ಲಲ್ಲಿ ಹಾಗೂ ಕರ್ನಾಟಕದಲ್ಲಿ ಮರಾಠಿ ಭಾಷೆಯ ಜನರಿರುವ ಪ್ರದೇಶಗಳಲ್ಲಿ ಬಹಿರಂಗ ಸಭೆಗಳನ್ನು ನಡೆಸಿದರು. ಅದರಲ್ಲಿ ಅವರು ಜನರಿಗೆ ಸಾಧನೆ ಮಾಡುವುದರ ಮಹತ್ವವನ್ನು ಹೇಳಿದರು ಹಾಗೂ ಜನರಲ್ಲಿ ಧರ್ಮಾಭಿಮಾನವನ್ನು ಜಾಗೃತಗೊಳಿಸಿದರು. ಸಭೆಯ ನಂತರ ಅವರು ಸಾಧನೆ ಮಾಡಲು ಉತ್ಸುಕರಾಗಿರುವ ಜಿಜ್ಞಾಸುಗಳೊಂದಿಗೆ ಸಂವಾದ ಮಾಡುತ್ತಿದ್ದರು ಹಾಗೂ ಅವರ ಮನಸ್ಸಿನಲ್ಲಿದ್ದ ಸಂದೇಹಗಳನ್ನು ನಿವಾರಿಸುತ್ತಿದ್ದರು. ಮುಖ್ಯವೆಂದರೆ, ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರಲ್ಲಿದ್ದ ‘ಪ್ರೀತಿ’ ಎಂಬ ಗುಣದಿಂದ ಜಿಜ್ಞಾಸುಗಳು ಆತ್ಮೀಯರಾಗುತ್ತಿದ್ದರು. ಇದರಿಂದ ಅನೇಕ ಜನರು ಅವರೊಂದಿಗೆ ಶಾಶ್ವತವಾಗಿ ಜೋಡಿಸಲ್ಪಟ್ಟರು ಹಾಗೂ ಸಾಧನೆಯನ್ನು ಮಾಡಲು ಆರಂಭಿಸಿದರು. ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ವಾಣಿಯಲ್ಲಿನ ಚೈತನ್ಯದ ಪ್ರಭಾವ ಜನರ ಮೇಲಾಗುತ್ತಿತ್ತು. ಪ್ರತಿ ವಾರ ಸಾಧಕರಿಂದ ಜಿಜ್ಞಾಸುಗಳಿಗಾಗಿ ಸತ್ಸಂಗ ನಡೆಸಲಾಗುತ್ತಿತ್ತು. ಈ ರೀತಿ ಜಿಜ್ಞಾಸುಗಳ ಸಾಧನೆ ಆರಂಭವಾಯಿತು ಹಾಗೂ ಸನಾತನ ಸಂಸ್ಥೆಯ ಸಾಧಕರ ಕುಟುಂಬ ದೊಡ್ಡದಾಗುತ್ತಾ ಹೋಯಿತು.

ಸದ್ಗುರು ಡಾ. ಮುಕುಲ ಗಾಡಗೀಳ

೩. ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಅಧ್ಯಾತ್ಮಪ್ರಸಾರ ಇನ್ನೂ ಪ್ರಭಾವಶಾಲಿಯಾಗಬೇಕೆಂದು ೧೯೯೮ ರಲ್ಲಿ ‘ಸಾಪ್ತಾಹಿಕ ಸನಾತನ ಪ್ರಭಾತ’ ಮತ್ತು ೧೯೯೯ ರಲ್ಲಿ ‘ದೈನಿಕ ಸನಾತನ ಪ್ರಭಾತ’ವನ್ನು ಆರಂಭಿಸಿದರು. ಇದರಲ್ಲಿ ಅವರು ಅಧ್ಯಾತ್ಮವನ್ನು ಕೃತಿಯಲ್ಲಿ ತರುವ ಬಗ್ಗೆ ಲೇಖನಗಳನ್ನು ಪ್ರಕಟಿಸಲು ಆರಂಭಿಸಿದರು ಹಾಗೆಯೇ ಅವರು ರಾಷ್ಟ್ರ ಮತ್ತು ಧರ್ಮದ ವಿಷಯಗಳ ವಾರ್ತೆಗಳನ್ನು ಪ್ರಕಟಿಸಿ ‘ಅವುಗಳಿಂದ ಜನರು ಯಾವ ದೃಷ್ಟಿಕೋನ ಇಡಬೇಕು ?’, ಎಂಬುದನ್ನು ಕಲಿಸಲು ಆರಂಭಿಸಿದರು. ಈ ರೀತಿ ಅವರು ಸನಾತನ ಪ್ರಭಾತದಿಂದ ಜನಮತ ನಿರ್ಮಾಣವಾಗಲು ಮತ್ತು ಅವರು ಸಾಧನೆಗಾಗಿ ಪ್ರವೃತ್ತರಾಗಲು ಜನರಿಗೆ ಏನು ಆವಶ್ಯಕವಿದೆಯೋ, ಅದನ್ನೇ ನೀಡಿದರು.

೪. ಅಧ್ಯಾತ್ಮಪ್ರಸಾರ, ಧರ್ಮಜಾಗೃತಿ ಹಾಗೂ ರಾಷ್ಟ್ರಜಾಗೃತಿ ಮಾಡುವಾಗ ರಾಮರಾಜ್ಯದ, ಅಂದರೆ ಅವರು ಹಿಂದೂ ರಾಷ್ಟ್ರದ ಸ್ಥಾಪನೆಯ ಧ್ಯೇಯವನ್ನಿಟ್ಟುಕೊಂಡರು ಹಾಗೂ ಎಲ್ಲರಿಗೂ ಅದನ್ನು ಹೇಳಿದರು.

೩ ಆ ೧ ಆ. ಎಲ್ಲವೂ ಒಳಗಿನಿಂದಲೆ ತಿಳಿಯುವುದು ಹಾಗೂ ಅಧ್ಯಾತ್ಮದಲ್ಲಿನ ಅಧಿಕಾರಿಯಾಗುವ ಹಾಗೆ ಪ.ಪೂ. ಭಕ್ತರಾಜ ಮಹಾರಾಜರು ಸಿದ್ಧಪಡಿಸಿದ್ದರು : ೧೭ ನವೆಂಬರ ೧೯೯೫ ರಂದು ಪ.ಪೂ. ಭಕ್ತರಾಜ ಮಹಾರಾಜರು ದೇಹತ್ಯಾಗ ಮಾಡಿದರು. ಆದರೂ ಪ.ಪೂ. ಡಾ. ಆಠವಲೆಯವರ ಮುಂದಿನ ಅಧ್ಯಾತ್ಮದ ಪ್ರಯಾಣ ಶೀಘ್ರಗತಿಯಲ್ಲಿ ಆಗುವ ಕಾರಣವೆಂದರೆ ಪ.ಪೂ. ಭಕ್ತರಾಜ ಮಹಾರಾಜರು ನೀಡಿದ ಈ ಮುಂದಿನ ಬೋಧನೆ !

೧. ‘ಕಂಡದ್ದು ಕರ್ತವ್ಯ ಹಾಗೂ ಘಟಿಸಿದ್ದೆ ಕರ್ಮ’, ಇಂತಹ ವೃತ್ತಿಯನ್ನಿಟ್ಟುಕೊಳ್ಳಬೇಕು.
೨. ಶಿಷ್ಯನಿಗೆ ಗುರುಗಳೆ ಒಳಗಿಂದ ಸ್ಫೂರ್ತಿ ನೀಡುತ್ತಾರೆ ಅಥವಾ ಹೇಳುತ್ತಾರೆ, ಎಂಬುದನ್ನು ಪ.ಪೂ. ಭಕ್ತರಾಜ ಮಹಾರಾಜರು ಪ್ರತ್ಯಕ್ಷ ಪ್ರಸಂಗಗಳಿಂದ ಕಲಿಸಿದ್ದರು,
೩. ಶಿಷ್ಯನಲ್ಲಿ ‘ನಾನು ಕೇವಲ ಒಂದು ಮಾಧ್ಯಮವಾಗಿದ್ದೇನೆ. ನನ್ನಿಂದ ಗುರುಗಳೇ ಕಲಿಸುವರು’, ಎನ್ನುವ ಭಾವ ನಿರಂತರ ಇರಬೇಕು.
೪. ‘ಗುರುಗಳಿಗೆ ಎಲ್ಲವನ್ನೂ ಅರ್ಪಣೆ ಮಾಡಿದ ನಂತರ ಮನಸ್ಸಿನಲ್ಲಿ ಬರುವ ವಿಚಾರ ನನ್ನದಾಗಿದೆ’, ಎಂದು ಅನಿಸಿದರೂ ಉಪಯೋಗವಿಲ್ಲ.
೫. ಪ.ಪೂ. ಡಾ. ಆಠವಲೆಯವರಿಗೆ ಧ್ಯಾನದಲ್ಲಿ ಪ್ರಶ್ನೆಗಳಿಗೆ ಉತ್ತರ ಸಿಗುತ್ತಿದ್ದವು. ಒಮ್ಮೆ ಪ.ಪೂ. ಭಕ್ತರಾಜ ಮಹಾರಾಜರು ಹೇಳಿದರು, ”ದ್ವೈತದಲ್ಲಿ ಏಕೆ ಇರುತ್ತೀರಿ ? ಪ್ರಶ್ನೆ ಕೇಳುವವರು ಹಾಗೂ ಉತ್ತರ ನೀಡುವವರು ಹೀಗೇಕೆ ‘ನಿಮ್ಮ ಉತ್ತರ ನಿಮಗೇ ತಿಳಿಯುತ್ತದೆ’. ಆದ್ದರಿಂದ ಈಗ ಧ್ಯಾನದಲ್ಲಿ ಪ್ರಶ್ನೆ ಕೇಳದೆ ಏನನಿಸುತ್ತದೆ, ಎಂಬುದನ್ನು ಹೇಳಿ.’’ (ಗುರುಗಳು ಅದ್ವೈತದ ಕಡೆಗೆ ಹೋಗಲು ಕಲಿಸಿದರು.) ಈ ರೀತಿ ಪ.ಪೂ. ಭಕ್ತರಾಜ ಮಹಾರಾಜರು ಪ.ಪೂ. ಡಾ. ಆಠವಲೆಯವರಿಗೆ ‘ಗುರು ಅಂತರ್ಯಾಮಿಯೇ ಆಗಿದ್ದಾರೆ’, ಎಂಬುದನ್ನು ತಿಳಿಸಿ ಅಧ್ಯಾತ್ಮದಲ್ಲಿನ ಅಧಿಕಾರಿಯನ್ನಾಗಿ ಮಾಡಿದರು.

೩ ಆ ೨. ೨೦೧೦ ರಲ್ಲಿ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಯವರ ಆಧ್ಯಾತ್ಮಿಕ ಮಟ್ಟ ಶೇ. ೯೧ ಆಗುವುದು, ಅಂದರೆ ಅವರು ‘ಪರಾತ್ಪರ ಗುರು’ ಪದವಿಯಲ್ಲಿ ವಿರಾಜಮಾನರಾಗುವುದು : ‘ಪರಾತ್ಪರ ಗುರು’ ಈ ಪದವಿಯ ವೈಶಿಷ್ಟ್ಯವೆಂದರೆ, ಶಾಂತಿ ! ಅದೇ ರೀತಿ ಸರ್ವಜ್ಞತೆ, ಸರ್ವಶಕ್ತಿಮಾನತೆ ಹಾಗೂ ಸರ್ವವ್ಯಾಪಕತೆ ಗುಣಗಳೂ ಅವುಗಳ ಜೊತೆಗೆ ಬಂದಿರುತ್ತವೆ. ಇದರಿಂದಾಗಿ ೨೦೧೦ ರಲ್ಲಿ ಈ ಪದವಿಗೆ ತಲುಪಿದ ನಂತರ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರಲ್ಲಿ ‘ವ್ಯಾಪಕತೆ’ ಈ ಗುಣ ಶೇ. ೫೦ ರಷ್ಟು ಅಂದರೆ ಅತೀ ಹೆಚ್ಚು ಪ್ರಮಾಣದಲ್ಲಿ ನಿರ್ಮಾಣವಾಯಿತು, ಅಲ್ಲದೇ ಇತರ ಗುಣಗಳೂ ಶೇ. ೪೦ ರಿಂದ ೪೫ ರಷ್ಟಾಯಿತು. ಕಳೆದ ೧೧ ವರ್ಷಗಳಲ್ಲಿ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಕಾರ್ಯ ಇನ್ನೂ ಹೆಚ್ಚು ವ್ಯಾಪಕ ಹಾಗೂ ಜಗತ್ತಿನಾದ್ಯಂತ ಆರಂಭವಾಗಿತ್ತು. ಅಂದರೆ ಅವರಲ್ಲಿ ಅವತಾರಿ ತತ್ತ್ವ ಕಾರ್ಯನಿರತ ವಾಯಿತು. ಅವರ ಕೃಪಾಶೀರ್ವಾದದಿಂದ ಸಮಾಜೋದ್ಧಾರದ ವಿವಿಧ ಸಮಷ್ಟಿ ಕಾರ್ಯಗಳು ಆರಂಭವಾದವು, ಹಾಗೆಯೇ ಸಾಧಕರ ಸಾಧನೆಯಲ್ಲಿ ಉನ್ನತಿಯಾಗುವುದು ಕಂಡುಬಂದಿತು. ಈ ಕಾರ್ಯಗಳು ಈ ಮುಂದಿನ ಮಾಧ್ಯಮಗಳಿಂದ ಆದವು.

ಅ. ಅಧ್ಯಾತ್ಮ, ಹಾಗೆಯೇ ರಾಷ್ಟ್ರ ಮತ್ತು ಧರ್ಮದ ವಿಷಯದಲ್ಲಿನ ಗ್ರಂಥಗಳ ಸಂಕಲನ. (ಏಪ್ರಿಲ್‌ ೨೦೨೫ ರ ವರೆಗೆ ಒಟ್ಟು ೩೬೬ ಗ್ರಂಥಗಳ ನಿರ್ಮಾಣವಾಗಿವೆ. ಈ ಗ್ರಂಥಗಳು ಭಾರತೀಯ ಹಾಗೂ ವಿದೇಶಿ ಹೀಗೆ ಒಟ್ಟು ೧೩ ಭಾಷೆಗಳಲ್ಲಿ ೧ ಕೋಟಿ ೬೧ ಸಾವಿರ ಪ್ರತಿಗಳು ಪ್ರಕಾಶನವಾಗಿವೆ.) ೫೦೦೦ ಕ್ಕಿಂತಲೂ ಹೆಚ್ಚು ಗ್ರಂಥಗಳ ಪ್ರಕಾಶನವಾಗುವಷ್ಟು ಲೇಖನಗಳ ಸಂಗ್ರಹ ಇರುವುದರಿಂದ ಗ್ರಂಥನಿರ್ಮಾಣದ ಕಾರ್ಯ ಮುಂದುವರಿದಿದೆ.

ಆ. ಶೀಘ್ರ ಈಶ್ವರಪ್ರಾಪ್ತಿ ಮಾಡಿಕೊಡುವ ‘ಗುರುಕೃಪಾಯೋಗ’ ಈ ಸಾಧನಾಮಾರ್ಗದಿಂದ ಅನೇಕ ಸಾಧಕರ ಉಲ್ಲೇಖನೀಯ ಆಧ್ಯಾತ್ಮಿಕ ಉನ್ನತಿಯಾಗುತ್ತಿದೆ. (೧೦.೪.೨೦೨೫ ರ ವರೆಗೆ ಸನಾತನದ ೧೩೧ ಸಾಧಕರು ಸಂತರಾಗಿದ್ದು ೧ ಸಾವಿರದ ೫೩ ಸಾಧಕರು ಸಂತರಾಗುವ ಮಾರ್ಗದಲ್ಲಿದ್ದಾರೆ !)

ಇ. ೨೦೦೦ ದಿಂದ ೨೦೦೨ ಈ ಅವಧಿಯಲ್ಲಿ ರಾಷ್ಟ್ರ ಹಾಗೂ ಧರ್ಮ ರಕ್ಷಣೆಗಾಗಿ ಮಹಾರಾಷ್ಟ್ರ, ಗೋವಾ ಮತ್ತು ಕರ್ನಾಟಕ ದಲ್ಲಿನ ೧೧೦ ಕ್ಕಿಂತಲೂ ಹೆಚ್ಚು ಸಂತರನ್ನು ಭೇಟಿ ಮಾಡಲಾಯಿತು. ಕೆಲವೊಂದು ಕಡೆ ಸಂತಸಭೆ, ಸರ್ವಸಂಪ್ರದಾಯ ಸತ್ಸಂಗ, ಸರ್ವಧರ್ಮಸಭೆ ಇತ್ಯಾದಿಗಳನ್ನು ಆಯೋಜಿಸಲಾಯಿತು.
ಈ. ಧರ್ಮಶಿಕ್ಷಣ ನೀಡುವ ೩೭೦ ಧ್ವನಿಚಿತ್ರ-ಸಿಡಿಗಳು ಹಾಗೆಯೇ ಹಿಂದೂ ಧರ್ಮ, ಸಂಸ್ಕೃತಿ, ಸಂತರು, ಆಧ್ಯಾತ್ಮಿಕ ಸ್ಥಳಗಳು ಇತ್ಯಾದಿಗಳ ಮಹಾತ್ಮೆಯನ್ನು ವಿವರಿಸುವ ಸಾವಿರಾರು ಕಿರುವಿಡಿಯೋಗಳನ್ನು ನಿರ್ಮಾಣ ಮಾಡಲಾಯಿತು.

ಉ. ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಪ್ರೇರಣೆಯಿಂದ ಸ್ಥಾಪನೆಯಾಗಿರುವ ಸಂಘಟನೆಗಳು ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ಹಿಂದೂಗಳಿಗೆ ಧರ್ಮಶಿಕ್ಷಣ ನೀಡುವುದು, ರಾಷ್ಟ್ರವ್ಯಾಪಿ ಹಿಂದೂಸಂಘಟನೆ ಮಾಡುವುದು ಇತ್ಯಾದಿಗಳಿಗಾಗಿ ಕಾರ್ಯನಿರತವಾಗಿರುವ ‘ಹಿಂದೂ ಜನಜಾಗೃತಿ ಸಮಿತಿ’ (ಸ್ಥಾಪನೆ : ೭.೧೦.೨೦೦೨)

ಊ. ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಸಾಧಕರಿಗೆ ರಾಷ್ಟ್ರ ಹಾಗೂ ಧರ್ಮ ಕಾರ್ಯದ ಅಂತರ್ಗತ ವಿವಿಧ ಸೇವೆ ಗಳನ್ನು ಉಪಲಬ್ಧ ಮಾಡಿಕೊಟ್ಟರು, ಆ ಸೇವೆಗಳನ್ನು ಸಾಧಕರಿಗೆ ಕಲಿಸಿದರು, ಅದೇ ರೀತಿ ಸಾಧಕರಿಂದ ಸೇವೆಯಲ್ಲಾಗುವ ತಪ್ಪು ಗಳನ್ನು ಅವರಿಗೆ ಸಂದರ್ಭಾನುಸಾರ ಹೇಳಿ ಅವುಗಳಿಗೆ ಯೋಗ್ಯ ದೃಷ್ಟಿಕೋನವನ್ನೂ ನೀಡಿದರು. ಈ ರೀತಿ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಸಮಷ್ಟಿ ಕಾರ್ಯ ಮಾಡುವ ಸಂತರನ್ನು ಮತ್ತು ನೂರಾರು ಸಾಧಕರನ್ನು ಸಿದ್ಧಪಡಿಸಿದರು. ಇವರೆಲ್ಲರೂ ಇಂದು ಗುರುಗಳ ಕಾರ್ಯವನ್ನು ಸಕ್ಷಮವಾಗಿ ಮುಂದೆ ಒಯ್ಯುತ್ತಿದ್ದಾರೆ.

೩ ಆ ೩. ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಆಧ್ಯಾತ್ಮಿಕ ಮಟ್ಟ ೨೦೧೬ ರಲ್ಲಿ ಶೇ. ೯೩ ರಷ್ಟಿತ್ತು ಹಾಗೂ ಅನಂತರ ೨೦೨೧ ರಲ್ಲಿ ಅದು ಶೇ. ೯೪ ಆಗುವುದು.

೩ ಆ ೩ ಅ. ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಆಧ್ಯಾತ್ಮಿಕ ಮಟ್ಟ ೨೦೧೦ ರಿಂದ ೨೦೨೧ ಈ ಕಾಲಾವಧಿಯಲ್ಲಿ ಕೇವಲ ಶೇ. ೩ ರಷ್ಟೆ ಹೆಚ್ಚಾಗಲು ಮುಖ್ಯ ಕಾರಣ ಕೆಟ್ಟ ಶಕ್ತಿಗಳ ಆಕ್ರಮಣವಾಗಿರುವುದು : ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ೨೦೧೦ ರಲ್ಲಿ ಶೇ. ೯೧ ರಷ್ಟಿದ್ದ ಆಧ್ಯಾತ್ಮಿಕ ಮಟ್ಟ ಮುಂದಿನ ೬ ವರ್ಷಗಳಲ್ಲಿ (೨೦೧೬ ರಲ್ಲಿ) ಕೇವಲ ಶೇ. ೨ ರಷ್ಟೆ ಹೆಚ್ಚಾಗಿ ಅದು ಶೇ. ೯೩ ಆಯಿತು, ಮುಂದೆ ೨೦೧೬ ರಿಂದ ೨೦೨೧ ಈ ಅವಧಿಯಲ್ಲಿ ಅದು ಕೇವಲ ಶೇ. ೧ ರಷ್ಟೆ ಹೆಚ್ಚಾಗಿ ಶೇ. ೯೪ ಆಯಿತು. ಇದರಿಂದ ‘ಪರಾತ್ಪರ ಗುರುಪದವಿಗೆ ಬಂದನಂತರ ಮುಂದೆ ಆಧ್ಯಾತ್ಮಿಕ ಉನ್ನತಿ ಯಾಗಲು ಎಷ್ಟು ಕಠಿಣವಿದೆ ಎಂಬುದು ಗಮನಕ್ಕೆ ಬರುತ್ತದೆ.ಇದಕ್ಕೆ ಎರಡು ಕಾರಣಗಳಿವೆ. ಒಂದನೆಯ ಕಾರಣವೆಂದರೆ, ಅದು ಈಶ್ವರನೊಂದಿಗೆ ಏಕರೂಪವಾಗುವ ಹಂತವಾಗಿರುವುದರಿಂದ ಅದನ್ನು ಸಾಧಿಸುವುದು ತುಂಬಾ ಕಷ್ಟವಾಗಿದೆ. ಈಶ್ವರನೊಂದಿಗೆ ಏಕರೂಪವಾಗಲು ಸರ್ವಗುಣಸಂಪನ್ನವಾಗಿರಬೇಕು ಹಾಗೂ ಇಡೀ ಜಗತ್ತಿನ ಕಾಳಜಿ ವಹಿಸುವ ಕ್ಷಮತೆಯಿರಬೇಕು. ಎರಡನೆಯ ಕಾರಣ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರಲ್ಲಿ ‘ರಾಮರಾಜ್ಯ ಸ್ಥಾಪನೆ ಮಾಡುವ ಧ್ಯೇಯ’ವಿದ್ದ ಕಾರಣ ಸಪ್ತಪಾತಾಳದ ಬಲಾಢ್ಯ ಕೆಟ್ಟ ಶಕ್ತಿಗಳನ್ನು ವಿರೋಧಿಸುವುದು ಹಾಗೂ ಅವುಗಳ ಆಕ್ರಮಣವನ್ನು ಸಹಿಸಿ ಮುಂದೆ ಹೋಗುವುದು. ಈ ಸೂಕ್ಷ್ಮದ ಯುದ್ಧದಿಂದಾಗಿಯೂ ಆಧ್ಯಾತ್ಮಿಕ ಪ್ರಗತಿಯ ವೇಗ ಕಡಿಮೆಯಾಗುತ್ತದೆ. ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರಿಗೆ ಈ ಎರಡನೇಯ ಕಾರಣ ಹೆಚ್ಚು ಅನ್ವಯವಾಗುತ್ತದೆ, ಎಂಬುದು ಅವರ ಮೇಲಿನ ಕೆಟ್ಟ ಶಕ್ತಿಗಳ ಆಕ್ರಮಣದಿಂದ ತಿಳಿಯುತ್ತದೆ.

೩ ಆ ೩ ಆ. ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ತ್ಯಾಗ, ಆನಂದ, ಪ್ರೀತಿ ಮತ್ತು ವ್ಯಾಪಕತೆ ಇತ್ಯಾದಿ ಗುಣಗಳು ಶೇ. ೫೦ ರಷ್ಟು, ಅಂದರೆ ಸರ್ವೋಚ್ಚ ಸ್ತರವನ್ನು ತಲುಪಿದವು : ಕೆಟ್ಟ ಶಕ್ತಿಗಳ ಆಕ್ರಮಣಗಳನ್ನು ಸಹಿಸಿಕೊಂಡು ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಜಗತ್ತಿನಾದ್ಯಂತ ಅಧ್ಯಾತ್ಮ ಪ್ರಸಾರ ಮಾಡುವುದನ್ನು ಮುಂದುವರಿಸಿರುವುದರಿಂದ ಜಗತ್ತಿನಲ್ಲಿನ ಅನೇಕ ಜನರು ಸಾಧನೆಯಲ್ಲಿ ನಿರತರಾಗಿದ್ದಾರೆ, ಅದೇ ರೀತಿ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಪ್ರಯತ್ನದಿಂದ ರಾಮರಾಜ್ಯ ಅಂದರೆ, ಹಿಂದೂ ರಾಷ್ಟ್ರ ಸ್ಥಾಪನೆ ಮಾಡುವ ಘೋಷಣೆ ಈಗ ಹಿಂದುತ್ವನಿಷ್ಠ ಸಂಸ್ಥೆಗಳು ಮತ್ತು ಅನೇಕ ಜನರು ಬಹಿರಂಗವಾಗಿ ಮಾಡುತ್ತಿದ್ದಾರೆ. ಈಗ ಇದರ ಬಗ್ಗೆ ಚಳುವಳಿ ಆರಂಭವಾಗಿದೆ. ಈ ಸಮಷ್ಟಿ ಕಾರ್ಯದಿಂದ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಆಧ್ಯಾತ್ಮಿಕ ಮಟ್ಟ ೨೦೨೧ ರಲ್ಲಿ ಶೇ. ೯೪ ರಷ್ಟು ಆಯಿತು. ಈ ಮಟ್ಟದಲ್ಲಿ ಅವರಲ್ಲಿನ ತ್ಯಾಗ, ಆನಂದ, ಪ್ರೀತಿ ಮತ್ತು ವ್ಯಾಪಕತೆ ಈ ಗುಣಗಳು ಶೇ. ೫೦ ರಷ್ಟು ಅಂದರೆ ಸರ್ವೋಚ್ಚ ಸ್ತರಕ್ಕೆ ತಲುಪಿದವು ಹಾಗೂ ಇನ್ನಿತರ ಗುಣಗಳೂ ಆ ಸರ್ವೋಚ್ಚ ಸ್ತರದ ಸಮೀಪ ತಲುಪಿವೆ.

೩ ಆ ೩ ಇ. ೨೦೧೦ ರಿಂದ ೨೦೨೧ ರ ವರೆಗೆ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಕೃಪೆಯಿಂದ ಆಗಿರುವ ಕೆಲವು ವೈಶಿಷ್ಟ್ಯಪೂರ್ಣ ಸಮಷ್ಟಿ ಕಾರ್ಯಗಳು

೧. ಕೆಟ್ಟ ಶಕ್ತಿಗಳ ಸಂದರ್ಭದಲ್ಲಿನ ಸಂಶೋಧನೆ ಮತ್ತು ಶಾರೀರಿಕ, ಮಾನಸಿಕ ಹಾಗೆಯೇ ಕೆಟ್ಟ ಶಕ್ತಿಗಳ ತೊಂದರೆಯಲ್ಲಿನ ಉಪಾಯಪದ್ಧತಿಗಳ ವಿಷಯದಲ್ಲಿ ಸಂಶೋಧನೆ

೨. ‘ಈಶ್ವರಪ್ರಾಪ್ತಿಗಾಗಿ ಕಲೆ, ಈ ವಿಷಯದ ಮಾರ್ಗದರ್ಶನ ಹಾಗೂ ಸಂಗೀತ, ನೃತ್ಯ ಇತ್ಯಾದಿ ಕಲೆಗಳನ್ನು ಸಾತ್ತ್ವಿಕವಾಗಿ ಪ್ರಸ್ತುತಪಡಿಸುವ ವಿಷಯದಲ್ಲಿ ಸಂಶೋಧನೆ

೩. ಹಿಂದೂಗಳ ಧಾರ್ಮಿಕ ಕೃತಿಗಳು ಹಾಗೂ ಸೂಕ್ಷ್ಮ ಪಂಚಮಹಾಭೂತಗಳಿಂದ ಘಟಿಸುವ ಬುದ್ಧಿಅಗಮ್ಯ ಘಟನೆಗಳ ವೈಜ್ಞಾನಿಕ ಉಪಕರಣಗಳು (ಉದಾ. ‘ಯುನಿವರ್ಸಲ್‌ ಔರಾ ಸ್ಕ್ಯಾನರ್‌’) ಹಾಗೂ ತಂತ್ರಜ್ಞಾನದ (ಉದಾ. ‘ಪಾಲಿಕಾಂಟ್ರಾಸ್ಟ್ ಇಂಟರ್‌ಫೆರೆನ್ಸ್ ಫೊಟೋಗ್ರಾಫಿ’) ಮೂಲಕ ಸಂಶೋಧನೆ

೪. ೧೦ ಏಪ್ರಿಲ್‌ ೨೦೨೫ ರ ವರೆಗೆ ಇಬ್ಬರು ಬಾಲಕ-ಸಂತರು ಹಾಗೂ ಶೇ. ೬೦ ಮಟ್ಟಕ್ಕಿಂತ ಹೆಚ್ಚು ಆಧ್ಯಾತ್ಮಿಕ ಮಟ್ಟವಿರುವ ೨೧೪ ಮತ್ತು ಇತರ ೯೬೪ ದೈವೀ ಬಾಲಕರನ್ನು (‘ಸ್ವರ್ಗ’ ಮತ್ತು ‘ಮಹರ್ಲೋಕ’ ಈ ಉಚ್ಚ ಲೋಕ ಗಳಿಂದ ಪೃಥ್ವಿಯಲ್ಲಿ ಜನಿಸಿದ ಮಕ್ಕಳು) ಸಮಾಜಕ್ಕೆ ಪರಿಚಯಿಸಿಕೊಡಲಾಗಿದೆ. ದೈವೀ ಬಾಲಕರ ವಿಷಯದಲ್ಲಿ ಸಂಶೋಧನೆಯೂ ನಡೆಯುತ್ತಿದೆ.

೫. ಸರ್ವವ್ಯಾಪಿ ಅಧ್ಯಾತ್ಮಶಾಸ್ತ್ರದ ಹಾಗೂ ಈಶ್ವರಪ್ರಾಪ್ತಿಯ ಶಿಕ್ಷಣ ನೀಡುವ ವಿದ್ಯಾಪೀಠವನ್ನು ಜಗತ್ತಿಗೆ ನೀಡಲು ಹಾಗೂ ಜಗತ್ತಿನಾದ್ಯಂತ ಅಧ್ಯಾತ್ಮ ಪ್ರಸಾರಕ್ಕಾಗಿ ೨೨.೩.೨೦೧೪ ರಂದು ‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ’ವನ್ನು ಸ್ಥಾಪನೆ ಮಾಡಿದರು. ಸದ್ಯ ಇದರ ವತಿಯಿಂದ ಆಧ್ಯಾತ್ಮಿಕ ಕಾರ್ಯಾಗಾರಗಳ ಆಯೋಜನೆ, ಚಿತ್ರಕಲೆ, ಸಂಗೀತ ಇತ್ಯಾದಿಗಳ ಈಶ್ವರಪ್ರಾಪ್ತಿಯ ದೃಷ್ಟಿಯಿಂದ ಶಿಕ್ಷಣ ನೀಡುವುದು ಇತ್ಯಾದಿ ಕಾರ್ಯ ನಡೆಯುತ್ತಿದೆ.

೬. ‘ದೇಶಭಕ್ತ ಹಾಗೂ ಹಿಂದುತ್ವನಿಷ್ಠರ ಸಂಘಟನೆಗಳಿಂದಲೇ ಹಿಂದೂ ರಾಷ್ಟ್ರ-ಸ್ಥಾಪನೆಯ ಕಾರ್ಯವಾಗಬಹುದು. ಅದಕ್ಕಾಗಿ ಭಾರತದಾದ್ಯಂತದ ರಾಷ್ಟ್ರಪ್ರೇಮಿಗಳು ಹಾಗೂ ಹಿಂದುತ್ವನಿಷ್ಠ ಸಂಘಟನೆಗಳನ್ನು ಒಟ್ಟುಗೂಡಿಸುವ ವ್ಯಾಸಪೀಠವಿರ ಬೇಕು’, ಎನ್ನುವ ವಿಚಾರವನ್ನು ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಮೊಟ್ಟಮೊದಲು ಮಂಡಿಸಿದರು. ಈ ವಿಚಾರದಿಂದ ಪ್ರೇರಣೆ ಪಡೆದು ‘ಸನಾತನ ಸಂಸ್ಥೆ’ ಮತ್ತು ‘ಹಿಂದೂ ಜನಜಾಗೃತಿ ಸಮಿತಿ’ ಕೂಡಿಕೊಂಡು ೨೦೧೨ ರಿಂದ ಪ್ರತಿವರ್ಷ ಗೋವಾದಲ್ಲಿ ‘ಅಖಿಲ ಭಾರತೀಯ ಹಿಂದೂ ಅಧಿವೇಶನ’ (ಈಗ ಅದು ‘ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವ’) ಹಾಗೂ ಬೇರೆ ಕಡೆಗಳಲ್ಲಿ ರಾಜ್ಯಸ್ತರದ ಮತ್ತು ಜಿಲ್ಲಾಸ್ತರದ ಹಿಂದೂ ಅಧಿವೇಶನಗಳನ್ನು ಆಯೋಜಿಸಲಾಗುತ್ತಿದೆ.

೭. ‘ಸದ್ಯ ಜಗತ್ತಿನಾದ್ಯಂತ ನೈಸರ್ಗಿಕ ಆಪತ್ತುಗಳು ಬರುತ್ತಿವೆ ಹಾಗೂ ಭವಿಷ್ಯದಲ್ಲಿ ಅವು ಇನ್ನೂ ಹೆಚ್ಚಾಗುವವು. ಕೊರೋನಾ ಮಹಾಮಾರಿಯನ್ನು ಸಂಪೂರ್ಣ ಜಗತ್ತೇ ಎದುರಿಸಬೇಕಾಯಿತು. ಜಗತ್ತಿನ ಕೆಲವು ದೇಶಗಳು ಪರಸ್ಪರ ಹೋರಾಡುತ್ತಿವೆ. ಅದರಿಂದ ಮೂರನೇ ಮಹಾಯುದ್ಧದ ಸಂಕೇತವೂ ಕಾಣಿಸುತ್ತಿದೆ. ‘ಮುಂಬರುವ ಮೂರನೇ ಮಹಾಯುದ್ಧದಲ್ಲಿ ಕೋಟಿಗಟ್ಟಲೆ ಜನರು ಸಾವನ್ನಪ್ಪುವರು’, ಎಂಬುದು ಕೆಲವು ಸಂತರ ಭವಿಷ್ಯವಾಣಿಯಾಗಿದೆ. ಮುಂಬರುವ ಮೂರನೇ ಮಹಾಯುದ್ಧದ ಕಾಲದಲ್ಲಿ ವೈದ್ಯರು, ಔಷಧ ಇತ್ಯಾದಿ ಉಪಲಬ್ಧವಿಲ್ಲದಿರುವಾಗ ಪ್ರತಿಯೊಬ್ಬರೂ ತಾವೆ ತಮ್ಮ ಉಪಚಾರ ಮಾಡಿಕೊಳ್ಳಬೇಕು.

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ವಿವಿಧ ಉಪಚಾರಪದ್ಧತಿಯ ವಿಷಯದಲ್ಲಿ ‘ಭವಿಷ್ಯದ ಆಪತ್ಕಾಲದಲ್ಲಿನ ಸಂಜೀವನಿ’ ಈ ಗ್ರಂಥಮಾಲಿಕೆಯನ್ನು ಸಂಕಲನ ಮಾಡಲು ಆರಂಭಿಸಿದರು. ಈ ಗ್ರಂಥಮಾಲಿಕೆಯಲ್ಲಿ ೨೫ ಗ್ರಂಥಗಳು ಪ್ರಕಾಶಿತವಾಗಿವೆ. ಈ ಗ್ರಂಥಗಳ ಆಧಾರದ ಲೇಖನಗಳು ‘ಸನಾತನ ಪ್ರಭಾತ’ ನಿಯತಕಾಲಿಕೆಗಳಿಂದ ಪ್ರಕಟಿಸಲಾಗುತ್ತಿದ್ದು ಅದನ್ನು ಸ್ಚಿಟಿಚಿಣಚಿಟಿ.ಒಡಿಗ್ ಈ ಜಾಲತಾಣದಲ್ಲಿ ಇಡಲಾಗುತ್ತದೆ.
ಇಷ್ಟು ವ್ಯಾಪಕ ಸ್ತರದಲ್ಲಿ ಹಾಗೂ ಎಲ್ಲ ಅಂಗಗಳಿಂದ ವಿಚಾರ ಮಾಡುವ, ಎಲ್ಲ ಸ್ತರದಲ್ಲಿ ಕಾರ್ಯ ಮಾಡುವ, ಎಲ್ಲರನ್ನೂ ಸಮಷ್ಟಿ ಕಾರ್ಯದಲ್ಲಿ ಸಮಾವೇಶಗೊಳಿಸಿಕೊಳ್ಳುವಂತಹ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಏಕಮೇವಾದ್ವಿತೀಯರಾಗಿದ್ದಾರೆ !

೩ ಆ ೪. ೨೦೨೨ ರಲ್ಲಿ ಸಪ್ತರ್ಷಿಗಳು ‘ಸಚ್ಚಿದಾನಂದ ಪರಬ್ರಹ್ಮ’ ಈ ಬಿರುದನ್ನು ನೀಡಿದರು : ‘ಎಲ್ಲಿ ದಿವ್ಯತ್ವ ಇರುತ್ತದೆಯೋ, ಅಲ್ಲಿ ಅನುಭವ ಇರುತ್ತದೆ’, ಈ ಸಿದ್ಧಾಂತಕ್ಕನುಸಾರ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಆಧ್ಯಾತ್ಮಿಕ ಗುಣವೈಶಿಷ್ಟ್ಯಗಳು ಅವರಲ್ಲಿನ ದೈವೀಕತೆಯ ಅನುಭವವನ್ನು ನೀಡುತ್ತವೆ. ಸಪ್ತರ್ಷಿ ಜೀವನಾಡಿಪಟ್ಟಿ-ವಾಚನದಿಂದ ಸಪ್ತರ್ಷಿಗಳೂ ಅನೇಕ ಬಾರಿ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರನ್ನು ಪ್ರಶಂಸಿಸಿದ್ದಾರೆ.

೩ ಆ ೪ ಅ. ನಾಡಿಭವಿಷ್ಯದಲ್ಲಿ ಸಪ್ತರ್ಷಿಗಳು ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರನ್ನು ಪ್ರಶಂಸೆ ಮಾಡುವುದು : ನಾಡಿಭವಿಷ್ಯವು ಒಂದು ಪ್ರಗಲ್ಭ ಜ್ಯೋತಿಷ್ಯಶಾಸ್ತ್ರವಾಗಿದೆ. ಶ್ರೇಷ್ಠಮಟ್ಟದ ಮಹರ್ಷಿಗಳು ಸಾವಿರಾರು ವರ್ಷಗಳ ಹಿಂದೆ ನಾಡಿಪಟ್ಟಿಗಳಲ್ಲಿ ಲೇಖನ ಮಾಡಿಟ್ಟಿದ್ದಾರೆ. ಆ ಲೇಖನವನ್ನು ತಿಳಿದುಕೊಂಡು ತಮಿಳುನಾಡಿನ ಪೂ. ಡಾ. ಓಂ ಉಲಗನಾಥನ್, ಶ್ರೀ. ಸೆಲ್ವಮ್‌ ಗುರೂಜಿ ಮುಂತಾದ ನಾಡಿಪಟ್ಟಿ ವಾಚಕರು ವಿವಿಧ ಘಟನೆಗಳ ಭವಿಷ್ಯ ಹಾಗೂ ಕೆಲವು ಧಾರ್ಮಿಕ ವಿಧಿಗಳನ್ನು ಹೇಳುತ್ತಾರೆ.

ಮೇ ೨೦೧೫ ರಲ್ಲಿ ಪೂ. ಡಾ. ಓಂ ಉಲಗನಾಥನ್‌ ಇವರು ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರಿಗಾಗಿ ಜೀವನಾಡಿಪಟ್ಟಿ-ವಾಚನ ಮಾಡಿದರು. ಅಂದಿನಿಂದ ಇಂದಿನ ವರೆಗೆ (ಮೇ ೨೦೨೪ ರ ವರೆಗೆ) ಸುಮಾರು ೩೦೦ ಬಾರಿ ವಿವಿಧ ನಾಡಿಪಟ್ಟಿವಾಚಕರು ಸನಾತನ ಸಂಸ್ಥೆಗಾಗಿ ನಾಡಿಭವಿಷ್ಯದ ಕಥನವನ್ನು ಮಾಡಿದ್ದಾರೆ. ಅವುಗಳಲ್ಲಿ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಏಕೈಕ ಗುರುಗಳು ಹಿಂದೂ ರಾಷ್ಟ್ರ ಸ್ಥಾಪನೆಗಾಗಿ ಕಾರ್ಯನಿರತರಾಗಿದ್ದಾರೆ’, ಎಂದು ಅನೇಕ ಬಾರಿ ಹೇಳಿದ್ದಾರೆ. ಅದೇ ರೀತಿ ನಾಡಿಭವಿಷ್ಯದಲ್ಲಿ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಗುಣವೈಶಿಷ್ಟ್ಯಗಳು, ಅವರ ಅವತಾರತ್ವ, ಅವರ ಕಾರ್ಯ ಇತ್ಯಾದಿಗಳ ಮಾಹಿತಿ ಬಂದಿದೆ. ‘ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಬಗ್ಗೆ ಸಪ್ತರ್ಷಿಗಳು ಏನು ಹೇಳುತ್ತಾರೆ ?’, ಎನ್ನುವುದರ ಕೆಲವು ಉದಾಹರಣೆಗಳು ನೀಡಲಾಗಿದೆ.

೧. ‘ಪರಾತ್ಪರ ಗುರು ಡಾ. ಆಠವಲೆಯವರು ‘ಸನಾತನ ಧರ್ಮ’ಸ್ವರೂಪ ಆಗಿದ್ದಾರೆ. ‘ಸನಾತನ ಧರ್ಮ’ದ ಉತ್ಪತ್ತಿಯು ಪರಮಪೂಜ್ಯ ಗುರುದೇವರಿಂದಲೆ (ಪರಾತ್ಪರ ಗುರು ಡಾಕ್ಟರರಿಂದ) ಆಗಿದೆ.’ (ಸಪ್ತರ್ಷಿ ಜೀವನಾಡಿಪಟ್ಟಿ ವಾಚನದಿಂದ, ೨೪.೫.೨೦೧೭)

೨. ‘ಮಹರ್ಷಿ ವ್ಯಾಸರು ವೇದಗಳ ಮಹತ್ವವನ್ನು ಜಗತ್ತಿನ ಮುಂದೆ ತಂದರು. ಅದೇ ಕಾರ್ಯವನ್ನು ಪರಾತ್ಪರ ಗುರು ಡಾಕ್ಟರ್‌ ಆಠವಲೆಯವರು ಮಾಡುತ್ತಿದ್ದಾರೆ. ಅವರಿಗೆ ಮಹರ್ಷಿ ವ್ಯಾಸರ ಆಶೀರ್ವಾದವಿದೆ.’ (ಸಪ್ತರ್ಷಿ ಜೀವನಾಡಿಪಟ್ಟಿ ವಾಚನದ ಮೂಲಕ (೧೫.೬.೨೦೧೬)

೩. ‘ರಾಜಾ ಭಗೀರಥನು ಹೇಗೆ ‘ಭಗೀರಥ ಪ್ರಯತ್ನ’ ಮಾಡಿ ಗಂಗೆಯನ್ನು ಭೂಮಿಯ ಮೇಲೆ ತಂದನೊ, ಹಾಗೆಯೆ ಪರಮ ಪೂಜ್ಯ ಗುರುದೇವರು ಮಾಡಿದ ‘ಭಗೀರಥ ಪ್ರಯತ್ನ’ದಿಂದ ‘ಹಿಂದೂ ರಾಷ್ಟ್ರ (ಸನಾತನ ಧರ್ಮ ರಾಜ್ಯ)’ ಬಂದೇ ಬರುವುದು.’ (ಸಪ್ತರ್ಷಿ ಜೀವನಾಡಿಪಟ್ಟಿ ವಾಚನ ಕ್ರ. ೭೫, ಚಂದೀಗಡ, ೧೫.೬.೨೦೧೬)

೪. ‘ಪ.ಪೂ. ಡಾಕ್ಟರರ (ಪರಾತ್ಪರ ಗುರು ಡಾ. ಆಠವಲೆಯವರ) ದೇಹ ಇದ್ದರೆ ಮಾತ್ರ ‘ಹಿಂದೂ ರಾಷ್ಟ್ರ’ ಬರಲು ಸಾಧ್ಯ. ಅವರ ದೇಹ ಮತ್ತು ‘ಹಿಂದೂ ರಾಷ್ಟ್ರ’ ಇವು ಬೇರೆ ಬೇರೆ ಅಲ್ಲ !’ (ಸಪ್ತರ್ಷಿ ಜೀವನಾಡಿ ಪಟ್ಟಿ ವಾಚನದ ಮೂಲಕ, ೨೮.೫.೨೦೧೭)

೫. ‘ಪರಮ ಗುರುಜೀಯವರ (ಪರಾತ್ಪರ ಗುರು ಡಾ. ಆಠವಲೆ ಯವರ) ಜನ್ಮಕುಂಡಲಿ ಮತ್ತು ರಾಷ್ಟ್ರದ ಕುಂಡಲಿಯಲ್ಲಿ ಸ್ವಲ್ಪವೂ ವ್ಯತ್ಯಾಸವಿಲ್ಲ.’ (ಸಪ್ತರ್ಷಿ ಜೀವನಾಡಿ ಪಟ್ಟಿಯ ಮೂಲಕ, ೨೮.೫.೨೦೧೭)

೩ ಆ ೪ ಆ. ಸಪ್ತರ್ಷಿಗಳು ಪರಾತ್ಪರ ಗುರು ಡಾ. ಆಠವಲೆಯವರನ್ನು ‘ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಬಾಳಾಜಿ ಆಠವಲೆ’, ಎಂದು ಸಂಬೋಧಿಸಲು ಹೇಳುವುದು : ೧೩.೭.೨೦೨೨ ರಿಂದ ‘ಸಪ್ತರ್ಷಿ ಜೀವನಾಡಿಪಟ್ಟಿ’ಯ ವಾಚನದ ಮೂಲಕ ಸಪ್ತರ್ಷಿಗಳು ಆಜ್ಞೆ ಮಾಡಿರುವ ಹಾಗೆ ಪರಾತ್ಪರ ಗುರು ಡಾ. ಆಠವಲೆಯವರನ್ನು ‘ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಬಾಳಾಜಿ ಆಠವಲೆ’, ಎಂದು ಸಂಬೋಧಿಸಲಾಗುತ್ತದೆ. ‘ಸಚ್ಚಿದಾನಂದ ಪರಬ್ರಹ್ಮ’ ಈ ಬಿರುದಿನ ಮೂಲಕ ‘ಪರಾತ್ಪರ ಗುರು ಡಾ. ಆಠವಲೆಯವರಲ್ಲಿನ ಈಶ್ವರೀ ತತ್ತ್ವದಿಂದ ಎಲ್ಲರಿಗೂ ಲಾಭವಾಗಬೇಕು’, ಎಂಬುದು ಸಪ್ತರ್ಷಿಗಳ ಈ ಆಜ್ಞೆಯ ಹಿಂದಿನ ಉದ್ದೇಶವಾಗಿದೆ. ಸಪ್ತರ್ಷಿಗಳು ಹೇಳಿರುವುದು ಎಷ್ಟು ಯೋಗ್ಯವಾಗಿದೆ, ಎಂಬುದನ್ನು ಕೋಷ್ಟಕ ದಲ್ಲಿ ಪರಾತ್ಪರ ಗುರು ಡಾ. ಆಠವಲೆಯವರು ೨೦೨೨ ರಲ್ಲಿ ‘ಸಚ್ಚಿದಾನಂದ ಪರಬ್ರಹ್ಮ’ ಈ ಸ್ಥಿತಿಗೆ ತಲುಪಿದಾಗ ಅವರಲ್ಲಿನ ಸಾಧನೆಯಲ್ಲಿನ ಘಟಕಗಳ ಶೇಖಡಾವಾರು ಪ್ರಮಾಣದಿಂದ ಅರಿವಾಗುತ್ತದೆ. ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಸಾಧನೆಯಲ್ಲಿನ ಪ್ರತಿಯೊಂದು ಘಟಕವೂ ಈಗ ಶೇ. ೫೦ ರಷ್ಟು ಅಂದರೆ ಅತೀ ಹೆಚ್ಚು ಪ್ರಮಾಣದಲ್ಲಿದೆ. ಅದರಲ್ಲಿನ ಉಳಿದ ಶೇ. ೫೦ ರಷ್ಟು ಭಾಗವು ನಿರ್ಗುಣದ್ದಾಗಿದೆ. ಇದರ ಅರ್ಥವೇನೆಂದರೆ, ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಈಗ ‘ಸಗುಣ-ನಿರ್ಗುಣದಲ್ಲಿ ವ್ಯತ್ಯಾಸ ಉಳಿದಿಲ್ಲ’ ಎಂಬ ಸ್ಥಿತಿಯಲ್ಲಿದ್ದಾರೆ.

೪. ಸಾರಾಂಶ : ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ವಿಷಯದಲ್ಲಿ ನೀಡಿರುವ ೨ ಕೋಷ್ಟಕಗಳಿಂದ ಮುಂದಿನ ವಿಷಯಗಳು ತಿಳಿಯುತ್ತವೆ

ಅ. ಯಾವುದೇ ಜೀವದ ಆಧ್ಯಾತ್ಮಿಕ ಉನ್ನತಿಯಾಗುತ್ತಾ ಹೋದಂತೆ ಅದರ ಬಾಹ್ಯ ರೂಪದಿಂದ ಸಾಮಾನ್ಯ ವ್ಯಕ್ತಿಗೆ ಅವನಲ್ಲಿನ ವ್ಯತ್ಯಾಸ ಅರಿವಾಗಲಿಕ್ಕಿಲ್ಲ; ಆದರೆ ಸೂಕ್ಷ್ಮಜ್ಞಾನವಿರುವವರಿಗೆ ಅವನಲ್ಲಿನ ಬದಲಾವಣೆ ಅರಿವಾಗುತ್ತದೆ. ಉನ್ನತಿಯಾಗುತ್ತಿರುವ ಜೀವದ ಸೌಂದರ್ಯ, ಮೃದುತ್ವ, ಚೈತನ್ಯ, ಆನಂದ ಇತ್ಯಾದಿ ಘಟಕಗಳ ಅರಿವಾಗುತ್ತವೆ.

ಆ. ಈ ಬಾಹ್ಯ ಲಕ್ಷಣಗಳ ಹೊರತು ಉನ್ನತಿಯಾಗುತ್ತಿರುವ ಜೀವದ ಗುಣವೈಶಿಷ್ಟ್ಯಗಳೂ ವೃದ್ಧಿಯಾಗುತ್ತಾ ಹೋಗುತ್ತವೆ.

ಇ. ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ವಿಷಯದಲ್ಲಿ ಮಾಡಿದ ಅಭ್ಯಾಸದಿಂದ ಪ್ರತಿಯೊಂದು ಆಧ್ಯಾತ್ಮಿಕ ಮಟ್ಟದಲ್ಲಿ ಆ ಘಟಕ (ಉದಾ. ಭಾವ, ಅಂತರ್ಮನಸ್ಸಿನ ಸಾಧನೆ, ಸಾಧನೆಯ ತಳಮಳ, ತ್ಯಾಗ ಇತ್ಯಾದಿ) ಸುಮಾರು ಎಷ್ಟು ಶೇಕಡಾ ಇರಬಹುದು, ಎಂಬುದನ್ನು ನಾವು ಅನುಮಾನಿಸಬಹುದು, ಉದಾ. ಶೇ. ೬೦ ರ ಮಟ್ಟದಲ್ಲಿ ಶೇ. ೧೫ ರಿಂದ ೨೦ ರಷ್ಟು, ಶೇ. ೭೦ ರ ಮಟ್ಟದಲ್ಲಿ ಶೇ. ೨೫ ರಿಂದ ೩೦ ರಷ್ಟು, ಶೇ. ೮೦ ರ ಮಟ್ಟದಲ್ಲಿ ಶೇ. ೩೦ ರಿಂದ ೩೫ ರಷ್ಟು, ಶೇ. ೯೦ ರ ಮಟ್ಟದಲ್ಲಿ ಶೇ. ೪೦ ರಿಂದ ೪೫ ರಷ್ಟು ಇತ್ಯಾದಿ. ಅದೇ ರೀತಿ ಆ ಜೀವದಲ್ಲಿನ ಅಹಂನ ಪ್ರಮಾಣವೂ ಹೇಗೆ ಕಡಿಮೆಯಾಗುತ್ತಾ ಹೋಗುತ್ತದೆ.

ಈ. ಆ ಜೀವದ ಸಮಷ್ಟಿ ಕಾರ್ಯ ಎಷ್ಟು ವ್ಯಾಪಕವೊ, ಅಷ್ಟು ಪ್ರಮಾಣದಲ್ಲಿ ಅದರ ಉನ್ನತಿಯಾಗುತ್ತದೆ, ಎಂಬುದೂ ಅರಿವಾಗುತ್ತದೆ.

೪. ಕೃತಜ್ಞತೆ

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರಂತಹ ಅವತಾರಿ ಜೀವದ ಬಗ್ಗೆ ನನಗೆ ಅವರ ಛಾಯಾಚಿತ್ರಗಳಿಂದ ಅಭ್ಯಾಸ ಮಾಡಲು ಸಾಧ್ಯವಾಯಿತು, ಅದಕ್ಕಾಗಿ ನಾನು ಶ್ರೀಗುರುಚರಣಗಳಿಗೆ ಕೋಟಿ ಕೋಟಿ ಕೃತಜ್ಞತೆಯನ್ನು ಸಲ್ಲಿಸುತ್ತೇನೆ.’ (ಮುಕ್ತಾಯ)

– (ಸದ್ಗುರು) ಡಾ. ಮುಕುಲ ಗಾಡಗೀಳ, ಪಿ.ಎಚ್‌.ಡಿ., ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ, ಗೋವಾ. (೨೧.೫.೨೦೨೪)