
ಭಾರತೀಯ ಸಂಸ್ಕ್ರತಿಯಲ್ಲಿ ಶ್ರೀ ಗುರು ಮತ್ತು ಶ್ರೀ ಗುರುಗಳ ಪರಂಪರೆಗೆ ಬಹಳ ಮಹತ್ವ ನೀಡಲಾಗಿದೆ. ‘ಗುರು’ ಎಂಬ ಶಬ್ದ ಕೇಳಿದಾಕ್ಷಣ ಮನಸ್ಸಿನಲ್ಲಿ ಗುರುರೂಪಿ ಪರಮೇಶ್ವರನ ಬಗ್ಗೆ ಗೌರವಭಾವ, ಕೃತಜ್ಞತಾಭಾವ ಮತ್ತು ಶರಣಾಗತ ಭಾವಗಳು ಜಾಗೃತಗೊಂಡು ಮನಸ್ಸು ಗುರುಭಕ್ತಿಯಿಂದ ತುಂಬಿ ಬರುತ್ತದೆ. ಇಂತಹ ‘ಶ್ರೀ ಗುರುಗಳ ಕೃಪಾಶೀರ್ವಾದಗಳು ಲಭಿಸಲಿ’ ಎಂದು ಸಾಧಕರು ಮತ್ತು ಶಿಷ್ಯರು ಬಯಸುತ್ತಾರೆ. ಅದಕ್ಕಾಗಿಯೇ ಸಂತ ಏಕನಾಥ ಮಹಾರಾಜರು ಶ್ರೀ ಗುರುಗಳ ಮಹತ್ವವನ್ನು ವಿವರಿಸುವಾಗ, ‘ಗುರು ಸಾಕ್ಷಾತ್ ಪರಮಾತ್ಮನೇ ಆಗಿದ್ದಾನೆ, ಇಂತಹ ದೃಢವಾದ ವಿಶ್ವಾಸ ಶಿಷ್ಯನಿಗೆ ಇರಬೇಕು’ ಎಂದು ಹೇಳಿದ್ದಾರೆ. ಹಾಗೆಯೇ ಶ್ರೀ. ಶಂಕರ ವೈದ್ಯ ಅವರು ‘ಗುರುವಿನ ಹೊರತು ಬೇರೆ ಆಧಾರವಿಲ್ಲ !’ ಎಂದು ಹೇಳಿದ್ದಾರೆ. ಇಂತಹ ಶ್ರೀ ಗುರುಗಳಿಗೆ ಕಾರ್ಯಾನುಮೇಯವಾಗಿ ಅಸಂಖ್ಯ ರೂಪಗಳಿದ್ದು, ಅವು ವಿಶ್ವಕಲ್ಯಾಣಕ್ಕಾಗಿ ಅವಿರತವಾಗಿ ಕಾರ್ಯನಿರತವಾಗಿರುತ್ತವೆ. ಗುರುತತ್ತ್ವ್ವವು ಅವತಾರಗಳು, ದೇವತೆಗಳು, ಋಷಿಮುನಿಗಳು ಮತ್ತು ಭಕ್ತರ ಮೂಲಕ ವಿವಿಧ ಸಂದರ್ಭಗಳಲ್ಲಿ ಕಾರ್ಯನಿರ್ವಹಿಸುತ್ತದೆ. ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆರೂಪಿ ಗುರುಗಳ ಮಹತ್ವವನ್ನು ಎಷ್ಟು ವರ್ಣಿಸಿದರೂ ಅದು ಕಡಿಮೆಯೇ ಆಗಿದೆ. ಆದರೂ ನನ್ನ ಅಲ್ಪಬುದ್ಧಿಗೆ ಏನು ತಿಳಿದಿದೆಯೋ ಅದನ್ನು ನಾನು ಲೇಖನ ರೂಪದಲ್ಲಿ ಬರೆದು ಭಕ್ತಿಭಾವದಿಂದ ಶ್ರೀ ಗುರುಚರಣಗಳಿಗೆ ಅರ್ಪಿಸುತ್ತಿದ್ದೇನೆ.
೧. ಗುರು
ಯಾವುದೇ ಜೀವವು ಶೇ. ೭೦ ರಷ್ಟು ಆಧ್ಯಾತ್ಮಿಕ ಮಟ್ಟವನ್ನು ತಲುಪಿದಾಗ, ಅವನು ‘ಸಂತ’ನಾಗುತ್ತಾನೆ. ಅವನ ಆಧ್ಯಾತ್ಮಿಕ ಮಟ್ಟವು ಶೇ. ೭೫ ಕ್ಕೆ ತಲುಪಿದಾಗ, ಅವನು ಗುರುಪದದಲ್ಲಿ ವಿರಾಜಮಾನನಾಗುತ್ತಾನೆ. ‘ಗುರುಪದ’ದಲ್ಲಿ ವಿರಾಜಮಾನನಾದ ನಂತರ ಆ ಜೀವವು ಇತರ ಜೀವಗಳಿಗೆ ಸಾಧನೆ ಮಾಡಿ ಮುಕ್ತಿ ಮತ್ತು ಮೋಕ್ಷವನ್ನು ಪಡೆಯಲು ಆಧ್ಯಾತ್ಮಿಕ ಸ್ತರದಲ್ಲಿ ಮಾರ್ಗದರ್ಶನ ಮಾಡುತ್ತದೆ. ಉದಾಹರಣೆಗೆ, ಗುರುದೇವ ರಾಮಕೃಷ್ಣ ಪರಮಹಂಸರು ಸ್ವಾಮಿ ವಿವೇಕಾನಂದರಿಗೆ ಆಧ್ಯಾತ್ಮಿಕ ಸ್ತರದಲ್ಲಿ ಮಾರ್ಗದರ್ಶನ ಮಾಡಿ ಅವರ ಆಧ್ಯಾತ್ಮಿಕ ಉನ್ನತಿಯನ್ನು ಮಾಡಿಸಿಕೊಂಡಿದ್ದರು.
೨. ಕುಲಗುರು
ಯಾವ ಗುರುಗಳು ಯಾವುದಾದರೊಂದು ಕುಲದ ಪೂರ್ಣ ಜವಾಬ್ದಾರಿಯನ್ನು ವಹಿಸಿ ಕೊಳ್ಳುತ್ತಾರೋ, ಅವರನ್ನು ‘ಕುಲಗುರು’ ಎನ್ನುತ್ತಾರೆ. ಕುಲಗುರುಗಳು ಕುಲದ ಪ್ರತಿಯೊಬ್ಬ ವ್ಯಕ್ತಿಯಿಂದಲೂ ಕುಲಾಚಾರ ಪಾಲಿಸುವಂತೆ ಮಾಡಿಸಿ, ಅವರಿಂದ ಧರ್ಮಾಚರಣೆ ಮಾಡಿಸಿಕೊಳ್ಳುತ್ತಾರೆ. ಕುಲಗುರುಗಳು ಸಂಪೂರ್ಣ ಕುಲದ ಐಹಿಕ ಮತ್ತು ಪಾರಮಾರ್ಥಿಕ ಉನ್ನತಿಯನ್ನು ಮಾಡಿಸಲು ಅವರಿಗೆ ಕಾಲಕಾಲಕ್ಕೆ ಮಾರ್ಗದರ್ಶನ ಮಾಡುತ್ತಿರುತ್ತಾರೆ. ಉದಾಹರಣೆಗೆ, ಗರ್ಗಮುನಿಗಳು ಯಾದವ ಕುಲದ ಮತ್ತು ಶಾಂಡಿಲ್ಯ ಋಷಿಗಳು ನಂದಕುಲದ ಕುಲಗುರುಗಳಾಗಿದ್ದರು. ಗರ್ಗಮುನಿಗಳು ಬಾಲಕೃಷ್ಣ, ಬಾಲಬಲರಾಮರಿಗೆ ನಾಮಕರಣ ಮಾಡಿದ್ದರು.
೩. ಯೋಗಗುರು
ಯಾವ ಗುರುಗಳು ತಮ್ಮ ಶಿμಯ್Àರಿಗೆ ಜ್ಞಾನಯೋಗ, ಭಕ್ತಿಯೋಗ, ಕರ್ಮಯೋಗ, ಧ್ಯಾನಯೋಗ, ಹಠಯೋಗ, ಶಕ್ತಿಪಾತಯೋಗ ಇತ್ಯಾದಿ ಯೋಗಮಾರ್ಗದಂತೆ ಸಾಧನೆ ಮಾಡಲು ಮಾರ್ಗದರ್ಶನ ಮಾಡುತ್ತಾರೋ, ಅವರನ್ನು ‘ಯೋಗಗುರು’ ಎನ್ನುತ್ತಾರೆ. ಉದಾಹರಣೆಗೆ, ಪತಂಜಲಿ ಋಷಿಗಳು ಯೋಗಸಾಧನೆ ಮಾಡಿ ತಮ್ಮ ಶಿμಯ್Àರಿಗೆ ಅವರ ಪ್ರಕೃತಿಗನುಸಾರವಾಗಿ ಶಕ್ತಿಪಾತಯೋಗ, ಜ್ಞಾನಯೋಗ ಇತ್ಯಾದಿ ಯೋಗಗಳನ್ನು ಕಲಿಸಿದರು. ಪತಂಜಲಿ ಋಷಿಗಳು ವಿವಿಧ ರೀತಿಯ ಯೋಗಾಸನಗಳನ್ನು ಕಂಡುಹಿಡಿದು ಅದರಿಂದ ‘ಅಷ್ಟಾಂಗ ಯೋಗ’ (ಯಮ, ನಿಯಮ, ಆಸನ, ಪ್ರಾಣಾಯಾಮ, ಪ್ರತ್ಯಾಹಾರ, ಧಾರಣಾ, ಧ್ಯಾನ ಮತ್ತು ಸಮಾಧಿ) ಕಲಿಸಿ ಹಠಯೋಗದಿಂದ ಈಶ್ವರಪ್ರಾಪ್ತಿ ಮಾಡುವ ಮಾರ್ಗವನ್ನು ತೋರಿಸಿದರು. ಕುರುಕ್ಷೇತ್ರದಲ್ಲಿ ಭಗವಾನ್ ಶ್ರೀಕೃಷ್ಣನು ಅರ್ಜುನನಿಗೆ ಅಷ್ಟಾಂಗ ಯೋಗದ ಅನುಸಾರ ಸಾಧನೆ ಮಾಡುವ ಬಗ್ಗೆಯೂ ಮಾರ್ಗದರ್ಶನ ಮಾಡಿದ್ದನು.
– ಸುಶ್ರೀ (ಕು.) ಮಧುರಾ ಭೋಸಲೆ (ಸೂಕ್ಷ್ಮದಿಂದ ಲಭಿಸಿದ ಜ್ಞಾನ), (ಆಧ್ಯಾತ್ಮಿಕ ಮಟ್ಟ ಶೇ. ೬೫)
ಮುಂದುವರಿದ ಭಾಗವನ್ನು ಓದಲು ಇಲ್ಲಿ ಕ್ಲಿಕ್ ಮಾಡಿ –
https://sanatanprabhat.org/kannada/147813.html
https://sanatanprabhat.org/kannada/148162.html