
‘ಭಾರತೀಯ ಸಂಸ್ಕ್ರತಿಯಲ್ಲಿ ಶ್ರೀಗುರು ಮತ್ತು ಶ್ರೀ ಗುರುಗಳ ಪರಂಪರೆಗೆ ಅಪಾರ ಮಹತ್ವವಿದೆ. ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆರೂಪಿ ಗುರುಗಳ ಮಹತ್ವವನ್ನು ಎಷ್ಟು ವರ್ಣಿಸಿದರೂ ಅದು ಅಲ್ಪವೇ ಆಗಿದೆ. ಆದರೂ ನನ್ನ ಅಲ್ಪಬುದ್ಧಿಗೆ ಏನು ತಿಳಿದಿದೆಯೋ ಅದನ್ನು ನಾನು ಶ್ರೀ ಗುರುಚರಣಗಳಲ್ಲಿ ಅರ್ಪಿಸುತ್ತಿದ್ದೇನೆ. ೨೬/೪೦ ನೇ ಸಂಚಿಕೆಯಲ್ಲಿ ಈ ಲೇಖನದ ಕೆಲವು ಭಾಗವನ್ನು ನೋಡಿದ್ದೇವೆ. ಈ ವಾರದ ಸಂಚಿಕೆಯಲ್ಲಿ ಅದರ ಮುಂದಿನ ಭಾಗವನ್ನು ನೋಡೋಣ.
೪. ದೀಕ್ಷಾಗುರು
ಶಕ್ತಿಪಾತಯೋಗಕ್ಕನುಸಾರ ಸಾಧನೆ ಮಾಡುವ ಜೀವಕ್ಕೆ ಶ್ರೀ ಗುರುಗಳಿಂದ ದೀಕ್ಷೆ ಸಿಗುವಾಗ, ಅವನ ಸುಪ್ತಾವಸ್ಥೆಯಲ್ಲಿರುವ ಕುಂಡಲಿನಿ ಶಕ್ತಿಯು ಜಾಗೃತ ವಾಗುತ್ತದೆ. ಈ ರೀತಿ ಶಿಷ್ಯನಿಗೆ ಶಕ್ತಿಪಾತಯೋಗದ ದೀಕ್ಷೆ ನೀಡುವ ಶ್ರೀ ಗುರುಗಳಿಗೆ ‘ದೀಕ್ಷಾಗುರು’ ಎನ್ನುತ್ತಾರೆ. ಉದಾಹರಣೆಗೆ, ಆದಿಗುರು ಶಂಕರಾಚಾರ್ಯರು ‘ಗಿರಿ’ ಎಂಬ ಮೂಢಮತಿ ವ್ಯಕ್ತಿಗೆ ದೀಕ್ಷೆ ನೀಡಿ, ಅವನನ್ನು ಶಿಷ್ಯನಾಗಿ ಸ್ವೀಕರಿಸಿದರು. ದೀಕ್ಷೆ ನೀಡಿದ್ದರಿಂದ ಅವನ ಕುಂಡಲಿನಿ ಶಕ್ತಿ ಜಾಗೃತವಾಗಿ ಅವನಿಗೆ ಆತ್ಮಜ್ಞಾನದ ಪ್ರಾಪ್ತಿಯಾಯಿತು. ಆಗ ಅವರು ಒಂದು ಭಾವಪೂರ್ಣ ಅಷ್ಟಕವನ್ನು ರಚಿಸಿದರು. ಆದಿಗುರು ಶಂಕರಾಚಾರ್ಯರು ಈ ಅಷ್ಟಕವನ್ನು ಕೇಳಿದಾಗ, ಅವರು ಗಿರಿಯ ಮೇಲೆ ಪ್ರಸನ್ನರಾದರು ಮತ್ತು ‘ಗಿರಿ’ಯನ್ನು ‘ತೋಟಕಾಚಾರ್ಯ’ ಎಂದು ಹೆಸರಿಸಿದರು.ಆ ಅಷ್ಟಕವು ‘ತೋಟಕಾಷ್ಠಕ’ ಎಂದು ಪ್ರಸಿದ್ಧವಾಯಿತು.
೫. ಗುಣಗುರು
ಸೃಷ್ಟಿಯ ಚರಾಚರದಲ್ಲಿರುವ ಪ್ರತಿಯೊಂದು ಜೀವದಿಂದ ನಾವು ಏನನ್ನಾದರೂ ಕಲಿಯಬಹುದು. ಪ್ರತಿಯೊಂದು ಜೀವದಲ್ಲಿರುವ ಗುಣ ಅಥವಾ ಅವಗುಣವನ್ನು ಗುರುತಿಸಿ ಅದರಿಂದ ಜ್ಞಾನವನ್ನು ಪಡೆಯುವುದಕ್ಕೆ ‘ಚರಾಚರದಲ್ಲಿರುವ ಪ್ರತಿಯೊಂದು ಜೀವದಿಂದ ಕಲಿಯುವುದು’ ಎಂದು ಹೇಳಲಾಗುತ್ತದೆ. ಆದ್ದರಿಂದ ಪ್ರತಿಯೊಂದು ಜೀವವೂ ಇನ್ನೊಂದಕ್ಕೆ ‘ಗುಣಗುರು’ ಆಗಿರುತ್ತದೆ. ಉದಾಹರಣೆಗೆ, ಭಗವಾನ್ ದತ್ತಾತ್ರೇಯರು ಸ್ವತಃ ಗುರುಗಳಾಗಿದ್ದರೂ, ಅವರು ಕೀಟ-ಪತಂಗದಿಂದ ಹಿಡಿದು ಹೆಬ್ಬಾವಿನ ವರೆಗೆ ೪ ಗುರುಗಳು ಮತ್ತು ೨೪ ಉಪಗುರುಗಳನ್ನು ಮಾಡಿ ಗುಣ ಮತ್ತು ಅವಗುಣಗಳನ್ನು ಅರಿತು ಕಲಿತರು.
೬. ಅನುಭವಿಗುರು
ಯಾರ ಅನುಭವದಿಂದ ನಮಗೆ ಕಲಿಯಲು ಸಿಗುತ್ತದೆಯೋ, ಅವರನ್ನು ‘ಅನುಭವಿಗುರು’ ಎನ್ನುತ್ತಾರೆ. ಉದಾಹರಣೆಗೆ, ಮಹಾಭಾರತ ಯುದ್ಧದ ನಂತರ ಭಗವಾನ್ ಶ್ರೀಕೃಷ್ಣನು ಪಾಂಡವರೊಂದಿಗೆ ಶರಪಂಜರದಲ್ಲಿ ಮಲಗಿದ್ದ ಭೀಷ್ಮಾಚಾರ್ಯರ ದರ್ಶನಕ್ಕೆ ಕುರುಕ್ಷೇತ್ರಕ್ಕೆ ಬಂದಾಗ, ಅವರು ಯುಧಿಷ್ಠಿರನಿಗೆ ಭೀಷ್ಮಾಚಾರ್ಯರಿಂದ ಅನುಭವಗಳನ್ನು
ಕಲಿಯಲು ಹೇಳುತ್ತಾರೆ. ಆಗ ಭೀಷ್ಮಾಚಾರ್ಯರು ಶ್ರೀಕೃಷ್ಣನಿಗೆ, ‘‘ಭಗವಂತ, ನೀವು ಪರಮ ಜ್ಞಾನಿಯಾಗಿರುವಾಗ ಯುಧಿಷ್ಠಿರನಿಗೆ ನನ್ನಿಂದ ಕಲಿಯಲು ಏಕೆ ಹೇಳುತ್ತಿದ್ದೀರಿ ?’’
ಎಂದು ಕೇಳಿದಾಗ ಶ್ರೀಕೃಷ್ಣನು, ‘‘ನನ್ನ ಬಳಿ ಜ್ಞಾನವಿದೆ; ಆದರೆ ಅನುಭವವಿಲ್ಲ. ಆದ್ದರಿಂದ ನಾನು ಯುಧಿಷ್ಠಿರನಿಗೆ ಹಾಗೆ ಹೇಳಿದೆ’’ ಎನ್ನುತ್ತಾನೆ. ಆಗ ಭೀಷ್ಮಾಚಾರ್ಯರು ಯುಧಿಷ್ಠಿರನಿಗೆ ಸ್ವತಃ ರಾಜಧರ್ಮವನ್ನು ಪಾಲಿಸುವಾಗ ‘ಭೀಷ್ಮಪ್ರತಿಜ್ಞೆಯ ಕಾರಣದಿಂದ ಹಸ್ತಿನಾಪುರ ರಾಜ್ಯವನ್ನು ವಿಭಜಿಸಿದ್ದು, ದುರ್ಯೋಧನನ ಮಾತಿನಂತೆ ದುಃಶಾಸನ ನಿಂದ ಕುಲವಧು ದ್ರೌಪದಿಯ ವಸ್ತ್ರಹರಣವಾದಾಗ ಮೌನವಾಗಿದ್ದು, ಮಹಾಭಾರತ ಯುದ್ಧದಲ್ಲಿ ಅಧರ್ಮದ ಅಂದರೆ ಕೌರವರ ಪಕ್ಷ ವಹಿಸಿದ್ದು’ – ಇಂತಹ ತಮ್ಮಿಂದಾದ ಅಕ್ಷಮ್ಯ ತಪ್ಪುಗಳನ್ನು ಅಪರಾಧಭಾವದಿಂದ ಉಲ್ಲೇಖಿಸಿ, ‘ಯಾವುದೇ ರಾಜನು ಸರಿಯಾದ ರಾಜಧರ್ಮವನ್ನು ಹೇಗೆ ಪಾಲಿಸಬೇಕು’ ಎಂಬುದರ ಜ್ಞಾನವನ್ನು ನೀಡುತ್ತಾರೆ.
೭. ಉಪಾಯಗುರು
ಕೆಲವು ಗುರುಗಳು ತಮ್ಮ ಬಳಿ ಬರುವ ಪೀಡಿತರು ಮತ್ತು ದುಃಖಿತÀರಿಗೆ ಅವರ ಆದಿಭೌತಿಕ, ಆದಿ-ದೈವಿಕ ಮತ್ತು ಆಧ್ಯಾತ್ಮಿಕ ಸಮಸ್ಯೆಗಳಿಗೆ ಉಪಾಯಗಳನ್ನು ಹೇಳಿ ಅವರಿಗೆ ಮಾರ್ಗದರ್ಶನ ಮಾಡುತ್ತಾರೆ. ಸಮಾಜದಲ್ಲಿ ಅನೇಕ ಸಂತರು ‘ಉಪಾಯಗುರು’ಗಳಾಗಿ ಸಮಾಜದ ದುಃಖವನ್ನು ನಿವಾರಿಸುತ್ತಾರೆ. ದೇವತೆಗಳ ಮೇಲೆ ಅಸುರರಿಂದ ಸಂಕಟಗಳು ಬಂದಾಗ, ದೇವತೆಗಳು ‘ಶಿವ’ ಅಥವಾ ‘ವಿಷ್ಣು’ ವಿಗೆ ಶರಣಾದಾಗ ಶಿವ ಅಥವಾ ವಿಷ್ಣು ಅವರಿಗೆ ವಿವಿಧ ಉಪಾಯಗಳನ್ನು ಹೇಳಿ ಅವರ ಸಮಸ್ಯೆಯನ್ನು ಪರಿಹರಿಸುತ್ತಾರೆ. ಇಲ್ಲಿ ಶಿವ ಅಥವಾ ವಿಷ್ಣುವು ‘ಉಪಾಯಗುರು’ಗಳಾಗಿ ದೇವತೆಗಳಿಗೆ ಮಾರ್ಗದರ್ಶನ ಮಾಡುತ್ತಿರುತ್ತಾರೆ. ಉದಾಹರಣೆಗೆ, ಸನಾತನ ಸಂಸ್ಥೆಯಲ್ಲಿರುವ ಸದ್ಗುರು ಡಾ. ಮುಕುಲ ಗಾಡಗೀಳರು ಸಾಧಕರಿಗೆ ಆಗುವ ಶಾರೀರಿಕ, ಮಾನಸಿಕ, ಬೌದ್ಧಿಕ ಮತ್ತು ಆಧ್ಯಾತ್ಮಿಕ ಹೀಗೆ ವಿವಿಧ ರೀತಿಯ ತೊಂದರೆಗಳಿಗೆ ವಿವಿಧ ದೇವತೆಗಳ ಮತ್ತು ತತ್ತ್ವಗಳ ನಾಮಜಪ, ನ್ಯಾಸ ಮತ್ತು ಮುದ್ರೆಗಳನ್ನು ಕಂಡುಹಿಡಿದು ಉಪಾಯಗಳನ್ನು ಹೇಳುತ್ತಾರೆ.
೮. ಮಂತ್ರಗುರು
ಯಾವ ಗುರುಗಳು ಮಂತ್ರವನ್ನು ನೀಡಿ ಶಿಷ್ಯನ ಉದ್ಧಾರವನ್ನು ಮಾಡುತ್ತಾರೋ, ಅವರನ್ನು ‘ಮಂತ್ರಗುರು’ ಎಂದು ಕರೆಯುತ್ತಾರೆ.
ಉದಾ. ೧. ಶಿವನು ಬಾಲ ಮಾರ್ಕಂಡೇಯನಿಗೆ ‘ಮಹಾಮೃತ್ಯುಂಜಯ’ ಮಹಾಮಂತ್ರವನ್ನು ನೀಡುವುದು : ಬಾಲ ಮಾರ್ಕಂಡೇಯನ ಪ್ರಾರಬ್ಧದಲ್ಲಿ ಅಪಮೃತ್ಯುಯೋಗವಿತ್ತು. ಆದ್ದರಿಂದ ೧೬ ವರ್ಷದ ಬಾಲ ಮಾರ್ಕಂಡೇಯನ ಮೃತ್ಯು ಸಮೀಪಿಸಿದಾಗ, ಅವನು ನಿರಂತರ ಶಿವನ ಆರಾಧನೆಯನ್ನು ಪ್ರಾರಂಭಿಸಿದನು. ಆಗ ಶಿವನ ಕೃಪೆಯಿಂದ ಅವನಿಗೆ ಮಹಾಮೃತ್ಯುಂಜಯ ಎಂಬ ಮಹಾಮಂತ್ರದ ಜ್ಞಾನವಾಯಿತು. ಅನಂತರ ಬಾಲ ಮಾಕರ್ಂಡೇಯನು ಅರಣ್ಯಕ್ಕೆ ಹೋಗಿ ಮಹಾಮೃತ್ಯುಂಜಯ ಮಂತ್ರವನ್ನು ನಿರಂತರವಾಗಿ ಜಪಿಸಿದನು. ಆದ್ದರಿಂದ ಯಮನು ಅವನ ಪ್ರಾಣವನ್ನು ಹರಣ ಮಾಡಲು ಬಂದಾಗ, ಅರಣ್ಯದಲ್ಲಿ ಸಾಕ್ಷಾತ್ ಶಿವನು ಪ್ರಕಟನಾದನು ಮತ್ತು ಅವನು ಬಾಲ ಮಾರ್ಕಂಡೇಯನನ್ನು ರಕ್ಷಿಸಿ, ಅವನಿಗೆ ಏಳು ಕಲ್ಪಗಳ ವರೆಗೆ ಚಿರಂಜೀವಿಯಾಗುವ ವರವನ್ನು ನೀಡಿದನು. ಶಿವನ ಕೃಪೆಯಿಂದಲೇ ಮಾರ್ಕಂಡೇಯ ಋಷಿ ಅಮರರಾದರು ಮತ್ತು ಮಾರ್ಕಂಡೇಯ ಪುರಾಣ ಹಾಗೂ ದೇವಿಯ ‘ಸಪ್ತಶತಿ’ ಎಂಬ ಗ್ರಂಥಗಳನ್ನು ರಚಿಸಿದರು.
ಉದಾ. ೨. ಮಹರ್ಷಿ ದುರ್ವಾಸರು ಕುಂತಿಗೆ ದೇವತೆಗಳನ್ನು ವಶಪಡಿಸಿಕೊಳ್ಳುವ ವಶೀಕರಣ ಮಂತ್ರವನ್ನು ನೀಡುವುದು: ಕುಂತಿಯು ಮನಃಪೂರ್ವಕವಾಗಿ ದುರ್ವಾಸ ಋಷಿಗಳ ಸೇವೆಯನ್ನು ಮಾಡಿದ್ದರಿಂದ, ದುರ್ವಾಸ ಋಷಿಗಳು ಅವಳಿಗೆ ‘ವಶೀಕರಣದ’ ವಿವಿಧ ಮಂತ್ರಗಳನ್ನು ನೀಡಿದ್ದರು. ಈ ಮಂತ್ರಗಳನ್ನು ಪ್ರಯೋಗಿಸಿ ದಾಗ ಕುಂತಿಯು ಯಮಧರ್ಮನಿಂದ ಯುಧಿಷ್ಠಿರನನ್ನು, ಪವನದೇವತೆಯಿಂದ ಭೀಮನನ್ನು ಮತ್ತು ಇಂದ್ರನಿಂದ ಅರ್ಜುನನನ್ನು ಪುತ್ರನಾಗಿ ಪಡೆದಳು. ಹಾಗೆಯೇ ಅವಳು ಈ ಮಂತ್ರಗಳನ್ನು ತನ್ನ ಸವತಿ ಮಾದ್ರಿಗೂ ನೀಡಿದಳು. ಇದರಿಂದ ಮಾದ್ರಿಯು ‘ದಸ್ತ್ರ ಮತ್ತು ನಾಸತ್ಯ’ ಎಂಬ ಅಶ್ವಿನಿಕುಮಾರರಿಂದ ನಕುಲ ಮತ್ತು ಸಹದೇವ ಎಂಬ ಪುತ್ರರನ್ನುಪಡೆದಳು.
– ಸುಶ್ರೀ (ಕು.) ಮಧುರಾ ಭೋಸಲೆ (ಸೂಕ್ಷ್ಮದಿಂದ ಲಭಿಸಿದ ಜ್ಞಾನ), (ಆಧ್ಯಾತ್ಮಿಕ ಮಟ್ಟ ಶೇ.೬೫), ಸನಾತನ ಆಶ್ರಮ, ರಾಮನಾಥಿ, ಗೋವಾ. (೨೦.೦೪.೨೦೨೩) (ಮುಂದುವರಿಯುವುದು…)
ದೈವಿ ಯುವ ಸಾಧಕಿಯರ ಪ್ರಬುದ್ಧ ವಿಚಾರಗಳಿಗೆ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ನೀಡಿದ ಅಮೂಲ್ಯ ಮಾರ್ಗದರ್ಶನ !
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ’ದ ಮಾಧ್ಯಮದಿಂದ ಕಲಾವಿದರಿಗೆ ಕಲೆಯ ಕಡೆಗೆ ಸಾಧನೆ ಎಂದು ನೋಡಲು ನೀಡಿದ ಮಾರ್ಗದರ್ಶನ !
ಸಾಧಕರಲ್ಲಿ ಆಂತರಿಕ ಬದಲಾವಣೆಯನ್ನು ತರುವ ಪೂ. ರಮಾನಂದ ಗೌಡ !
‘ತಮ್ಮ ಶಾರೀರಿಕ ಸ್ಥಿತಿಯನ್ನು ಪೂರ್ಣ ಸ್ವೀಕರಿಸುವುದು’, ಭಗವತ್ಪ್ರಾಪ್ತಿಯ ಮೊದಲ ಮೆಟ್ಟಿಲಾಗಿದೆ !
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಹೆಚ್ಚಿದ ನಿದ್ರೆ, ಅಂದರೆ ದೇವರು ಅವರ ನಿರ್ವಿಚಾರ ಸ್ಥಿತಿಯನ್ನು ಹೆಚ್ಚಿಸಲು ಮಾಡಿದ ಉಪಾಯಯೋಜನೆಯಾಗಿದೆ !
ಸಾಧನೆಯಿಂದ ಸಾಧಕರಲ್ಲಿ ಚೈತನ್ಯ ಮತ್ತು ದೈವೀ ಗುಣಗಳು ಹೆಚ್ಚಳವಾಗುವುದು ಹಾಗೂ ಸಮಾಜದ ವ್ಯಕ್ತಿಗಳು ಸಾಧಕರ ಕಡೆಗೆ ಆಕರ್ಷಿತರಾಗುವುದು