ತಂಜಾವೂರಿನ ವೇದಪ್ರಚಾರರತ್ನ ವೇದಕುಲಪತಿ ಜಿ.ಕೆ. ಸೀತಾರಾಮನ್ ಗುರೂಜಿ ಇವರು ಮೂಲ ಸೋಮನಾಥ ಜ್ಯೋತಿರ್ಲಿಂಗದ ದಿವ್ಯ ಅಂಶಗಳ ಪೈಕಿ ೪ ದಿವ್ಯ ಅಂಶಗಳನ್ನು ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಧರ್ಮಸಂಸ್ಥಾಪನೆಯ ಕಾರ್ಯಕ್ಕಾಗಿ ಸಮರ್ಪಿಸಿದರು !

ಭಗವಾನ ಸೋಮನಾಥ ಮಹಾದೇವನ ಉದಯದ ಕಥೆ
‘ದಕ್ಷ ಪ್ರಜಾಪತಿಗೆ ಅಶ್ವಿನಿ ಸೇರಿದಂತೆ ೨೭ ಕನ್ಯೆಯರಿದ್ದರು. ಅವರ ವಿವಾಹವು ಅತ್ರಿ ಮತ್ತು ಅನಸೂಯಾ ಇವರ ಪುತ್ರ ಸೋಮನ (ಚಂದ್ರ) ಜೊತೆಗೆ ಆಯಿತು. ಆ ೨೭ ಕನ್ಯೆಯರಲ್ಲಿ ರೋಹಿಣಿ ಎಲ್ಲರಿಗಿಂತ ಸುಂದರಿಯಾಗಿದ್ದಳು. ಸೋಮನಿಗೆ ಅವಳ ಮೇಲೆ ವಿಶೇಷ ಪ್ರೀತಿಯಿತ್ತು. ಇದನ್ನು ಕಂಡು ಮತ್ಸರಪಟ್ಟ ಇತರ ಸಪತ್ನಿಯರು ಸೋಮನ ಬಗ್ಗೆ ತಮ್ಮ ತಂದೆಯಾದ ದಕ್ಷನಿಗೆ ದೂರು ನೀಡಿದರು. ದಕ್ಷನು ಸೋಮನಿಗೆ ತಿಳಿಹೇಳಲು ಪ್ರಯತ್ನಿಸಿದನು; ಆದರೆ ಅದರಿಂದ ಪ್ರಯೋಜನವಾಗಲಿಲ್ಲ. ಮೇಲಿಂದ ಮೇಲೆ ದೂರುಗಳನ್ನು ಕೇಳಿ ಕೋಪಗೊಂಡ ದಕ್ಷನು ಸೋಮನಿಗೆ ಕ್ಷಯರೋಗದ ಶಾಪವನ್ನು ನೀಡಿದನು. ಇದರ ಪರಿಣಾಮವಾಗಿ ಸೋಮನ ಆರೋಗ್ಯದ ಸ್ಥಿತಿಯು ಹದಗೆಡತೊಡಗಿತು. ಸಂಪೂರ್ಣ ಸೃಷ್ಟಿಯಲ್ಲಿ ಅದರ ದುಷ್ಪರಿಣಾಮಗಳು ಕಾಣಿಸತೊಡಗಿದವು. ಆದ್ದರಿಂದ ಎಲ್ಲ ದೇವತೆಗಳು ಸೋಮನನ್ನು ಶಾಪಮುಕ್ತಗೊಳಿಸುವಂತೆ ವಿನಂತಿಸಿದರು. ದಕ್ಷನು ಅವರ ವಿನಂತಿಯನ್ನು ತಿರಸ್ಕರಿಸಿ, ‘ಪ್ರಭಾಸ ಕ್ಷೇತ್ರದಲ್ಲಿ ಸರಸ್ವತಿ ನದಿಯು ಸಮುದ್ರವನ್ನು ಸೇರುವ ಸಂಗಮ ಸ್ಥಾನವಿದೆ. ಅಲ್ಲಿಗೆ ಹೋಗಿ ಸೋಮನು ಭಗವಾನ ಶಿವನ ಆರಾಧನೆ ಮತ್ತು ತಪಸ್ಸು ಮಾಡಬೇಕು ಎಂದು ಸೂಚಿಸಿದನು. ಅದರಂತೆ ಸೋಮನು ಪ್ರಭಾಸ ಕ್ಷೇತ್ರದಲ್ಲಿ ದೀರ್ಘಕಾಲ ಶಿವನ ಆರಾಧನೆ ಮಾಡಿದನು. ಅದರಿಂದ ಭಗವಾನ ಶಿವನು ಪ್ರಸನ್ನನಾದನು. ಅವನು ಸೋಮನಿಗೆ, ‘ಶುಕ್ಲ ಪಕ್ಷದಲ್ಲಿ ಸೋಮನ ವೃದ್ಧಿಯಾಗುವುದು ಮತ್ತು ಅವನು ಪ್ರಕಾಶಮಾನವಾಗಿ ಉಳಿಯುವನು, ಎಂಬ ವರವನ್ನು ನೀಡಿದನು. ಈ ರೀತಿಯಾಗಿ ಪ್ರಭಾಸ ಕ್ಷೇತ್ರದಲ್ಲಿ ಸೋಮನಿಗೆ ಅವನ ತೇಜಸ್ಸು (ಭಾಸ) ಪುನಃ ಪ್ರಾಪ್ತವಾಯಿತು. ಆದ್ದರಿಂದ ಆ ಸ್ಥಳವು ‘ಪ್ರಭಾಸ ಎಂದು ಪ್ರಸಿದ್ಧಿಯಾಯಿತು. ಈ ಸ್ಥಳದಲ್ಲಿ ಸೋಮನು ಒಂದು ದೇವಸ್ಥಾನವನ್ನು ನಿರ್ಮಿಸಿ ಜ್ಯೋತಿರ್ಮಯ ಲಿಂಗವನ್ನು ಸ್ಥಾಪಿಸಿದನು.
ಸನಾತನದ ಇತಿಹಾಸದಲ್ಲಿ ಸುವರ್ಣಾಕ್ಷರಗಳಲ್ಲಿ ಕೆತ್ತಲ್ಪಡುವ ಒಂದು ಅದ್ವಿತೀಯ ಕ್ಷಣ !

ಗೋವಾದ ರಾಮನಾಥಿಯಲ್ಲಿನ ಸನಾತನ ಸಂಸ್ಥೆಯ ಆಶ್ರಮಕ್ಕೆ ಸೋಮನಾಥ ಜ್ಯೋತಿರ್ಲಿಂಗದ ೪ ದಿವ್ಯ ಅಂಶಗಳ ಆಗಮನ !
ರಾಮನಾಥಿ (ಗೋವಾ) – ೪ ಮೇ ೨೦೨೬ ರ ಪವಿತ್ರ ದಿನದಂದು ಸೋಮನಾಥ ಜ್ಯೋತಿರ್ಲಿಂಗದ ೪ ದಿವ್ಯ ಅಂಶಗಳು ಗೋವಾದ, ರಾಮನಾಥಿಯಲ್ಲಿನ ಸನಾತನ ಸಂಸ್ಥೆಯ ಆಶ್ರಮಕ್ಕೆ ಆಗಮಿಸಿದವು. ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳ ಇವರು ತಂದಿದ್ದ ೪ ಶಿವಲಿಂಗಗಳನ್ನು ಸಾಧಕರು ಮಾಡಿದ ಭೋಲೇನಾಥನ ಜಯಘೋಷ ಮತ್ತು ವೇದಮಂತ್ರೋಚ್ಚಾರಗಳ ನಡುವೆ ಭಾವಪೂರ್ಣವಾಗಿ ಬರ ಮಾಡಿಕೊಳ್ಳಲಾಯಿತು. ಈ ಸಮಯದಲ್ಲಿ ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಇವರು ಶಿವಲಿಂಗಗಳ ಪೂಜೆಯನ್ನು ಮಾಡಿ ಆರತಿಯನ್ನು ಬೆಳಗಿದರು. ಇದರ ನಂತರ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರು ಸೋಮನಾಥ ಜ್ಯೋತಿರ್ಲಿಂಗದ ೪ ದಿವ್ಯ ಅಂಶಗಳನ್ನು ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಇವರಿಗೆ ಒಪ್ಪಿಸಿದರು. ಜ್ಯೋತಿರ್ಲಿಂಗಗಳ ಪೂಜೆಯಾದ ನಂತರ ಅವುಗಳಲ್ಲಿ ಚೈತನ್ಯ ಬಂದಿರುವುದು ಶ್ರೀಚಿತ್‌ಶಕ್ತಿ (ಸೌ.) ಗಾಡಗೀಳ ಇವರಿಗೆ ಅರಿವಾಯಿತು ಮತ್ತು ಆ ಸಮಯದಲ್ಲಿ ಬೇಸಿಗೆ ಇದ್ದರೂ ವಾತಾವರಣವು ಪ್ರತ್ಯಕ್ಷದಲ್ಲಿ ತಂಪಾಗಿರುವುದು ಅನುಭವಕ್ಕೆ ಬರುತ್ತಿತ್ತು. ಅನಂತರ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ತಮ್ಮ ನಿವಾಸದ ಕೋಣೆಯಲ್ಲೇ ಜ್ಯೋತಿರ್ಲಿಂಗದ ದಿವ್ಯ ಅಂಶಗಳ ದರ್ಶನ ಪಡೆದರು.
೧. ಮಹಮ್ಮದ್ ಗಝನಿಯು ತುಂಡರಿಸಿದ್ದ ಸೋಮನಾಥ ಜ್ಯೋತಿರ್ಲಿಂಗದ ಅಂಶಗಳನ್ನು ಶ್ರದ್ಧಾವಂತ ಅರ್ಚಕರು ೧ ಸಾವಿರ ವರ್ಷಗಳ ವರೆಗೆ ರಕ್ಷಿಸಿಕೊಂಡು ಬಂದಿರುವುದು

ಭಾರತದ ಪವಿತ್ರವಾದ ೧೨ ಜ್ಯೋತಿರ್ಲಿಂಗಗಳಲ್ಲಿ ಗುಜರಾತ್‌ನ ಸೋಮನಾಥ ಜ್ಯೋತಿರ್ಲಿಂಗವನ್ನು ಮೊದಲನೆಯ ಶಿವಲಿಂಗವೆಂದು ನಂಬಲಾಗುತ್ತದೆ. ಚಂದ್ರನಿಂದ ಸ್ಥಾಪಿಸಲ್ಪಟ್ಟ ಈ ದೈವೀ ಶಿವಲಿಂಗದ ವೈಶಿಷ್ಟ್ಯವೆಂದರೆ, ಅದು ಭೂಮಿಯಿಂದ ಸ್ವಲ್ಪ ಎತ್ತರದಲ್ಲಿ ಆಧಾರವಿಲ್ಲದೆ ಗಾಳಿಯಲ್ಲಿ ತೇಲುತ್ತಿತ್ತು. ಅದರಲ್ಲಿ ಪ್ರಚಂಡ ಸಕಾರಾತ್ಮಕ ಆಧ್ಯಾತ್ಮಿಕ ಶಕ್ತಿಯಿದ್ದು, ಶಿವಭಕ್ತರಿಗೆ ಅದರ ಲಾಭವಾಗುತ್ತಿತ್ತು. ವರ್ಷ ೧೦೨೬ ರಲ್ಲಿ ಕ್ರೂರ ಆಕ್ರಮಣಕಾರ ಮಹಮ್ಮದ್ ಗಝನಿಯು ಈ ಸೋಮನಾಥ ದೇವಸ್ಥಾನದ ಮೇಲೆ ಆಕ್ರಮಣ ಮಾಡಿದನು. ಅವನು ದೇವಸ್ಥಾನವನ್ನು ಧ್ವಂಸಗೊಳಿಸಿ ಅದರಲ್ಲಿದ್ದ ಶಿವಲಿಂಗವನ್ನು ತುಂಡುತುಂಡು ಮಾಡಿದನು. ಕೆಲವು ಶ್ರದ್ಧಾವಂತ ಅರ್ಚಕರು ಆ ಭಗ್ನಗೊಂಡ ಶಿವಲಿಂಗದ ಅವಶೇಷಗಳ ಕೆಲವು ಅಂಶಗಳನ್ನು ಅತ್ಯಂತ ರಹಸ್ಯವಾಗಿ ಸುರಕ್ಷಿತವಾಗಿಟ್ಟರು. ಶಿವಲಿಂಗದ ಆ ಭಗ್ನಾವಸ್ಥೆಯ ಈ ಅಂಶಗಳನ್ನು ತುಂಡುಗಳ ರೂಪದಲ್ಲಿ ನೋಡಲು ಅವರಿಂದ ಸಾಧ್ಯವಾಗುತ್ತಿರಲಿಲ್ಲ. ಆದ್ದರಿಂದ ಅವರು ಆ ಅಂಶಗಳಿಗೆ ಸಾಧಾರಣವಾಗಿ ಶಿವಪಿಂಡಿಯಂತೆ ಕಾಣುವ ಲಂಬಗೋಲಾಕಾರವನ್ನು ನೀಡಿದರು. ಇದೇ ಶ್ರದ್ಧಾವಂತ ಅರ್ಚಕರು ೧ ಸಾವಿರ ವರ್ಷಗಳವರೆಗೆ ಸಮಸ್ತ ಭಕ್ತರ ಶ್ರದ್ಧಾಸ್ಥಾನವಾಗಿದ್ದ ಈ ಶಿವಲಿಂಗದ ದಿವ್ಯ ಅಂಶಗಳನ್ನು ಒಂದು ಗುಪ್ತ ಸ್ಥಳದಲ್ಲಿ ಸುರಕ್ಷಿತವಾಗಿಟ್ಟರು. ಅವರು ಪ್ರಸಂಗ ಬಂದಾಗ ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ಅವುಗಳನ್ನು ರಕ್ಷಿಸಿದರು. ಮುಂದೆ ಅವರ ಪ್ರತಿಯೊಂದು ಪೀಳಿಗೆಯು ಅದನ್ನು ರಕ್ಷಿಸಿತು ಮತ್ತು ಈ ರಹಸ್ಯವನ್ನು ಸಹ ಹಾಗೆಯೆ ಉಳಿಸಿಕೊಂಡು ಬಂದಿತು.
೨. ಕಾಂಚಿ ಕಾಮಕೋಟಿ ಪೀಠದ ಜಗದ್ಗುರು ಶಂಕರಾಚಾರ್ಯ ಶ್ರೀ ಚಂದ್ರಶೇಖರೇಂದ್ರ ಸರಸ್ವತಿಯವರ ಮಾರ್ಗದರ್ಶನ
೧೯೨೪ ರಲ್ಲಿ ಕಾಂಚಿ ಕಾಮಕೋಟಿ ಪೀಠದ ಜಗದ್ಗುರು ಶಂಕರಾಚಾರ್ಯ ಶ್ರೀ ಚಂದ್ರಶೇಖರೇಂದ್ರ ಸರಸ್ವತಿ ಇವರು ಸೋಮನಾಥ ಜ್ಯೋತಿರ್ಲಿಂಗದ ದಿವ್ಯ ಅಂಶಗಳನ್ನು ಸಂರಕ್ಷಿಸುವ ಅರ್ಚಕರಿಗೆ, ‘ಈ ದಿವ್ಯ ಅಂಶಗಳನ್ನು ೧೦೦ ವರ್ಷಗಳ ವರೆಗೆ ಹೊರಗೆ (ಸಮಾಜಕ್ಕೆ) ತರಬೇಡಿ. ಯಾರಿಗೂ ಈ ಬಗ್ಗೆ ಹೇಳಬೇಡಿ, ಎಂದಿದ್ದರು. ಅನಂತರದ ಕಾಂಚಿ ಕಾಮಕೋಟಿ ಪೀಠದ ಜಗದ್ಗುರು ಶಂಕರಾಚಾರ್ಯ ಶ್ರೀ ಜಯೇಂದ್ರ ಸರಸ್ವತಿ ಇವರು, ‘ಪವಿತ್ರ ಜ್ಯೋತಿರ್ಲಿಂಗದ ಈ ಸಾಕಾರಗೊಂಡ ದೈವೀ ಅಂಶಗಳ ಬಗ್ಗೆ ಅಯೋಧ್ಯೆಯ ಶ್ರೀರಾಮಮಂದಿರವು ಸಾಕಾರಗೊಂಡ ನಂತರ ವಿಚಾರ ಮಾಡೋಣ, ಎಂದಿದ್ದರು.

೩. ಜಗದ್ಗುರು ಶಂಕರಾಚಾರ್ಯ ವಿಜಯೇಂದ್ರ ಸರಸ್ವತಿ ಇವರು ಶಿವಲಿಂಗದ ಅಂಶಗಳನ್ನು ಶ್ರೀ ಶ್ರೀ ರವಿಶಂಕರ ಇವರಿಗೆ ನೀಡಲು ಹೇಳುವುದು
ಈಗಿನ ಜಗದ್ಗುರು ಶಂಕರಾಚಾರ್ಯ ವಿಜಯೇಂದ್ರ ಸರಸ್ವತಿ ಇವರು ‘ಶಿವಲಿಂಗದ ಈ ಅಂಶಗಳನ್ನು ಗುರುದೇವ ಶ್ರೀ ಶ್ರೀ ರವಿಶಂಕರ (‘ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ ಸಂಸ್ಥಾಪಕರು) ಇವರ ಬಳಿ ನೀಡಿ, ಎಂದರು. ಅದರಂತೆ ಅಗ್ನಿಹೋತ್ರಿ ಶ್ರೀ. ಸೀತಾರಾಮನ್ ಗುರೂಜಿ ಇವರು ಈ ಜ್ಯೋತಿರ್ಲಿಂಗದ ಕೆಲವು ದೈವೀ ಅಂಶಗಳನ್ನು ಗುರುದೇವ ಶ್ರೀ ಶ್ರೀ ರವಿಶಂಕರ ಇವರಿಗೆ ನೀಡಿದರು. ಜಗದ್ಗುರು ಶಂಕರಾಚಾರ್ಯ ಶ್ರೀ ಚಂದ್ರಶೇಖರೇಂದ್ರ ಸರಸ್ವತಿ ಇವರ ಸಂಕಲ್ಪದಂತೆ ಸರಿಯಾಗಿ ೧೦೦ ವರ್ಷಗಳ ನಂತರ ಅವರು ಹೇಳಿದಂತೆಯೇ ನಡೆಯಿತು. ಜ್ಯೋತಿರ್ಲಿಂಗದ ಈ ಅಂಶಗಳಲ್ಲಿ ಅಪಾರ ಶಕ್ತಿ ಇರುವುದರಿಂದ, ಪರಿಸರದಲ್ಲೆಲ್ಲಾ ಅಯಸ್ಕಾಂತೀಯ ಕ್ಷೇತ್ರವು ಸೃಷ್ಟಿಯಾಗಿದೆ. ಶ್ರೀ ಶ್ರೀ ರವಿಶಂಕರ ಇವರು ೨೦೨೫ ರ ಮಹಾಶಿವರಾತ್ರಿಯಂದು ಜ್ಯೋತಿರ್ಲಿಂಗದ ದಿವ್ಯ ಅಂಶಗಳಿಗೆ ಅಭಿಷೇಕ ಮಾಡಿ ಭಕ್ತರಿಗೆ ದರ್ಶನ ಮಾಡಿಸಿದರು.
– ಶ್ರೀ. ವಿನಾಯಕ ಶಾನಭಾಗ, ಕಾಂಚಿಪುರಮ್, ಚೆನ್ನೈ.

ತಂಜಾವೂರಿನಿಂದ ಕಾಂಚಿಪುರಮ್‌ಗೆ ಶಿವಲಿಂಗವನ್ನು ಕೊಂಡೊಯ್ಯುವಾಗ ನಡೆದ ಕೆಲವು ಮಹತ್ವದ ಘಟನೆಗಳು
೧. ೨ ಏಪ್ರಿಲ್ ೨೦೨೬ ರ ಹನುಮ ಜಯಂತಿಯ ಹುಣ್ಣಿಮೆಯಂದು ವಾಹನದಲ್ಲಿ ಸೋಮನಾಥ ಜ್ಯೋತಿರ್ಲಿಂಗದ ದಿವ್ಯ ಅಂಶಗಳನ್ನು ಕೊಂಡೊಯ್ಯುವಾಗ ‘ಹುಣ್ಣಿಮೆಯ ಚಂದ್ರನು ಮೆಲ್ಲನೆ ವಾಹನದೊಳಗೆ ಇಣುಕಿ ನೋಡುತ್ತಿದ್ದಾನೆ, ಎಂಬಂತಹ ದೃಶ್ಯವು ಕಾಣಿಸುತ್ತಿತ್ತು.
೨. ಶಿವಲಿಂಗವನ್ನು ಕೊಂಡೊಯ್ಯುತ್ತಿದ್ದ ವಾಹನಕ್ಕೆ ದೊಡ್ಡ ಅಪಘಾತ ಆಗುವಷ್ಟರಲ್ಲಿ ಎಲ್ಲರೂ ಪಾರಾದರು. ಶ್ರೀಗುರುಗಳು ಮತ್ತು ಸೋಮನಾಥನು ನಮ್ಮನ್ನು ರಕ್ಷಿಸಿದರು.
೩. ಜ್ಯೋತಿರ್ಲಿಂಗದ ಅಂಶಗಳು ೧ ತಿಂಗಳ ಕಾಲ ಭೂಕೈಲಾಸ ಅಂದರೆ ಕಾಂಚಿಪುರಮ್‌ದಲ್ಲಿ ನೆಲೆಸಿದ್ದವು, ಶಿವನೇ ಸ್ವಸ್ಥಾನಕ್ಕೆ ಆಗಮಿಸಿದಂತೆ ಅನಿಸುತ್ತಿತ್ತು. – ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳ.
|| ಶ್ರೀ ರಾಜಮಾತಂಗಿ ಮಹಾಯಾಗ ||
ಶ್ರೀ ಸೋಮನಾಥ ದೇವಸ್ಥಾನದ ಶಿಖರದ ಮೇಲೆ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳರವರು ಪೂಜಿಸಿದ ಧರ್ಮಧ್ವಜದ ಆರೋಹಣ !
ಹಿಂದೂಗಳೇ, ಮೂರನೇ ಮಹಾಯುದ್ಧದ ದುಷ್ಪರಿಣಾಮಗಳನ್ನು ತಡೆಯಲು ಯಜ್ಞಸಂಸ್ಕೃತಿಯನ್ನು ಪುನರುತ್ಥಾನಗೊಳಿಸಿ !
ಸೋಮನಾಥ ಜ್ಯೋತಿರ್ಲಿಂಗದ ದಿವ್ಯ ಅಂಶಗಳು ಸನಾತನ ಸಂಸ್ಥೆಗೆ ಪ್ರಾಪ್ತವಾಗುವ ವರೆಗಿನ ದಿವ್ಯ ಪ್ರಯಾಣ !
ಭಾವಪೂರ್ಣ ಧಾರ್ಮಿಕ ವಿಧಿಗಳೊಂದಿಗೆ ಸಂಪನ್ನಗೊಂಡ ಶ್ರೀ ರಾಜಮಾತಂಗಿ ಮಹಾಯಜ್ಞ !